ಬಿಎಂಟಿಸಿಯಲ್ಲೊಬ್ಬ ಧರ್ಮಾಂಧ ಡಿಪೋ ಮ್ಯಾನೇಜರ್.. ಅಯೋಧ್ಯೆ ತೀರ್ಪಿನ ಹಿನ್ನಲೆಯಲ್ಲಿ ಕಚೇರಿಯಲ್ಲೇ ಹೋಮಹವನ..

0
ಧರ್ಮಾಂದ ಡಿಪೋ ಮ್ಯಾನೇಜರ್ ಚಂದ್ರಶೇಖರ್
ಧರ್ಮಾಂದ ಡಿಪೋ ಮ್ಯಾನೇಜರ್ ಚಂದ್ರಶೇಖರ್

(ಕನ್ನಡ ಫ್ಲಾಶ್ ನ್ಯೂಸ್.ಕಾಂ ಬ್ಯೂರೋ) ಬೆಂಗಳೂರು: ಇಡೀ ದೇಶವೇ ಕೋಮುಸೌಹಾರ್ದತೆಯನ್ನು ಕಾಪಾಡಿಕೊಳ್ಳೊಕ್ಕೆ ಪ್ರಯತ್ನಿಸ್ತಿದ್ರೆ ಇಲ್ಲೋರ್ವ ಬಿಎಂಟಿಸಿ ಅಧಿಕಾರಿ ಕಿಡಿಗೇಡಿತನ ತೋರುವ ಮೂಲಕ ಧರ್ಮಾಂಧತೆಯನ್ನು ಪ್ರದರ್ಶಿಸಿದ್ದಾನೆ.

ಬೆಂಗಳೂರಿನಲ್ಲಿ ನಡೆದಿರುವ ಈ ಕೋಮುಪ್ರಚೋದನಾಕಾರಿ ಸಂಗತಿ ಈಗ ತೀವ್ರ ಚರ್ಚೆ-ಆಕ್ರೋಶಕ್ಕೆ ಕಾರಣವಾಗಿದೆ. ಅಂದ್ಹಾಗೆ ಆತ ಮಾಡಿದ ಕಿಡಿಗೇಡಿತನದ ಕೆಲಸ ನೋಡುದ್ರೆ ಎಂಥವ್ರಿಗೂ ಕೋಪ ಬರುತ್ತೆ.ಆಯೋಧ್ಯೆ ತೀರ್ಪು ಹೇಗೆ ಬಂದ್ರೂ ಅದನ್ನು ಸಮಚಿತ್ತದಿಂದ ಸ್ವೀಕರಿಸಲು ಇಡೀ ದೇಶವೇ ಸಂದೇಶ ನೀಡುತ್ತಿದ್ದರೇ,ಬಿಎಂಟಿಸಿ ಡಿಪೋ 34 ರ ಡಿಪೋ ಮ್ಯಾನೇಜರ್ ಚಂದ್ರಶೇಖರ್ ಎಂಬಾತ ಮಾತ್ರ ತೀರ್ಪು ಪ್ರತ್ಯೇಕ ಕೋಮಿನ ಪರವಾಗಿ ಬರಲಿ ಎಂದು ಹೋಮ ಹವನ ಮಾಡಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ಅಯೋಧ್ಯೆ ತೀರ್ಪು ಒಂದು ಕೋಮಿನ ಪರವಾಗಿ ಬರಲಿ ಎಂದು ಕುಟುಂಬ ಸಮೇತ ಡಿಪೋ ಆವರಣದಲ್ಲೇ ಕುಟುಂಬ ಸಮೇತ ಹೋಮ ಹವನ ನಡೆಸಿದ ಚಂದ್ರಶೇಖರ್
ಅಯೋಧ್ಯೆ ತೀರ್ಪು ಒಂದು ಕೋಮಿನ ಪರವಾಗಿ ಬರಲಿ ಎಂದು ಕುಟುಂಬ ಸಮೇತ ಡಿಪೋ ಆವರಣದಲ್ಲೇ ಕುಟುಂಬ ಸಮೇತ ಹೋಮ ಹವನ ನಡೆಸಿದ ಡಿಪೋ ಮ್ಯಾನೇಜರ್  ಚಂದ್ರಶೇಖರ್

 ಘಟಕ ಕಛೇರಿಯಲ್ಲಿ ಚಂದ್ರಶೇಖರ್ ತನ್ನ ಕುಟುಂಬ ಸಮೇತ ಹೋಮ ಹವನ ಮಾಡಿಸುತ್ತಿರುವ ಫೋಟೋಗಳು ಕನ್ನಡ ಫ್ಲಾಶ್ ನ್ಯೂಸ್ ಗೆ ಎಕ್ಸ್ ಕ್ಲ್ಯೂಸಿವ್ ಆಗಿ ಲಭ್ಯವಾಗಿದೆ.

ಅಷ್ಟೇ ಅಲ್ಲ,ಅದಕ್ಕಿಂತ ಅಕ್ಷಮ್ಯ ಎನ್ನುವಂಥ ಮತ್ತೊಂದು ಕೆಲಸವನ್ನು ಈ ಧರ್ಮಾಂದ ಚಂದ್ರಶೇಖರ್ ಮಾಡಿದ್ದಾನೆ.ಅದೇನ್ ಗೊತ್ತಾ,ಬಿಎಂಟಿಸಿ ಡಿಪೋ ಕಟ್ಟಡದ ಮೇಲೆ ಪ್ರತ್ಯೇಕ ಕೋಮಿನ ದ್ವಜ ಹಾರಿಸಿ ಅದರ ಪರವಾಗೇ ತೀರ್ಪು ಬರಲಿ ಎಂದು ಪೂಜೆ ಮಾಡಿದ್ದು.

ಆದ್ರೆ ಒಂದು ಸರ್ಕಾರಿ ಸ್ವಾಮ್ಯದ ಕಟ್ಟಡದಲ್ಲಿ ಒಂದು ಧರ್ಮದ ಬಾವುಟ ಹಾಕಬಾರದು ಎನ್ನುವ ನಿಯಮವಿದೆ.ಆದ್ರೆ ಧರ್ಮದ ಅಂಧಕಾರದಲ್ಲಿ ಮೈ ಮರೆತ ಚಂದ್ರಶೇಖರ್ ಬಾವುಟ ಹಾರಿಸಿ ತನ್ನನ್ನು ಸ್ವಾಭಿಮಾನಿ ಎಂದು ಪ್ರೂವ್ ಮಾಡಿಕೊಳ್ಳಲು ಯತ್ನಿಸಿ ಇದೀಗ ತೀವ್ರ ಆಕ್ರೋಶಕ್ಕೆ ತುತ್ತಾಗಿದ್ದಾನೆ.

ಡಿಪೋ ಕಚೇರಿ ಮೇಲೆ ಪ್ರತ್ಯೇಕ ಕೋಮಿನ ದ್ವಜ ಹಾರಿಸಿರುವ ಚಂದ್ರಶೇಖರ್
ಡಿಪೋ ಕಚೇರಿ ಮೇಲೆ ಪ್ರತ್ಯೇಕ ಕೋಮಿನ ದ್ವಜ ಹಾರಿಸಿರುವ ಚಂದ್ರಶೇಖರ್

ಕೋಮು ಸಾಮರಸ್ಯ ಕಾಪಾಡಿಕೊಳ್ಳಲು ಬಿಎಂಟಿಸಿ ಆಡಳಿತ ಮಂಡಳಿ ಯತ್ನಿಸುತ್ತಿರುವಾಗ  ಈ ಚಂದ್ರಶೇಖರ್ ಎನ್ನುವ ಮತಿಹೀನ ಪ್ರತ್ಯೇಕ ಕೋಮಿನ ದ್ವಜ ಹಾರಿಸಿದ್ದಲ್ಲದೇ ಕುಟುಂಬ ಸಮೇತ ಡಿಪೋ ಕಚೇರಿಯಲ್ಲೇ ಹೋಮ ಹವನ ಮಾಡಿಸಿರುವುದು ಎಲ್ಲಾ ರೀತಿಯಲ್ಲೂ ಖಂಡನೆಗೆ ಗುರಿಯಾಗಿದೆ.

ಸಾಮರಸ್ಯ ದೂರ ಮಾಡಿ ಧರ್ಮಾಂಧ ಭಾವನೆ ಮೂಡಿಸಲು ಯತ್ನಿಸಿರುವ ಚಂದ್ರಶೇಖರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕಿದೆ.ಇಲ್ಲದಿದ್ದಲ್ಲಿ ಸಮಾಜಕ್ಕೆ ಬೇರೆ ರೀತಿಯದೇ ಸಂದೇಶ ರವಾನೆಯಾಗುತ್ತೆ.

 

Spread the love
Leave A Reply

Your email address will not be published.

Flash News