ಬಿಬಿಎಂಪಿ ಕಲ್ಯಾಣ ಇಲಾಖೆಯ ಮ್ಯಾಜಿಕ್: ಇಲ್ಲಿ ಸಾಫ್ಟ್ ವೇರ್ ಎಂಜಿನಿಯರ್ರೂ ಫಲಾನುಭವಿ..ವಿಕಲಚೇತನರು ಐಷಾರಾಮಿ ಬೈಕ್ ಗಳ ಮಾಲೀಕರು…

0

(ಕನ್ನಡ ಫ್ಲಾಶ್ ನ್ಯೂಸ್.ಕಾಂ ಬ್ಯೂರೋ)

 ಬೆಂಗಳೂರು:ಇಲ್ಲಿ ಸಾಫ್ಟ್ ವೇರ್ ಎಂಜಿನಿಯರ್ರೂ ಫಲಾನುಭವಿ..ಮತ್ತೊಬ್ಬನಿಗೆ ತ್ರಿಚಕ್ರ ವಾಹನ ವಾಹನ ಮಂಜೂರಾಗಿರುವುದೇ ಗೊತ್ತಿಲ್ಲ,ಅದನ್ನು ಮತ್ತೊಬ್ಬ ಬೇನಾಮಿಯೊಬ್ಬ ಬಳಸುತ್ತಿದ್ದಾನೆ.ಇನ್ನು ಕೆಲವರು ಡ್ಯೂಕ್..ಯಮಹಾ ದಂಥ ಫ್ಯಾಷನೇಟ್ ವಾಹನಗಳ ಮಾಲೀಕರು.. ಇನ್ನೋರ್ವ ಅಂಗವಿಕಲನೇ ಅಲ್ಲ,ಅವನಿಗೂ ವಾಹನ ಸಿಕ್ಕಿದೆ.ಮತ್ತಷ್ಟು ಜನಕ್ಕೆ ವಾಹನಗಳು ಇಲ್ಲದಿದ್ದರೂ ದಾಖಲೆಗಳಲ್ಲಿ ಮಾತ್ರ ಮಂಜೂರಾಗಿವೆ… ಇದು ಬಿಬಿಎಂಪಿ ಕಲ್ಯಾಣ ಇಲಾಖೆಯಲ್ಲಿ ಲೂಟಿಕೋರ ಅಧಿಕಾರಿಗಳಿಂದಾಗಿರುವ ಬ್ಲಾಕ್  ಮ್ಯಾಜಿಕ್.. 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕಲ್ಯಾಣ ವಿಭಾಗದಲ್ಲಿ ಭಾರೀ ಗೋಲ್ಮಾಲ್ ನಡೆದೋಗಿದೆ.ವಿಕಲಚೇತನರಿಗೆ ಸಿಗ್ಬೇಕಾದ ವಾಹನಗಳ ಸೌಲಭ್ಯವನ್ನು ಭ್ರಷ್ಟ-ನಾಲಾಯಕ್-ಧನದಾಹಿ ಅಧಿಕಾರಿಗಳು ಲೂಟ್ ಮಾಡಿ ಅನರ್ಹರ ಪಾಲಾಗುವಂತೆ ಮಾಡಿದ್ದಾರೆ.ಇದರಿಂದಾಗಿ ವಿಕಲಚೇತನರು ವಾಹನಗಳಿಗಾಗಿ ನಿತ್ಯವೂ ತಡಕಾಡುತ್ತಿದ್ದರೆ,ವಿಕಲಚೇತನರೇ ಅಲ್ಲದವ್ರು ಅಧಿಕಾರಿಗಳ ಪವಾಡದಿಂದಾಗಿ ವಾಹನಗಳನ್ನು ಪಡೆದು ಅದರ ಬ್ಯಾಲೆನ್ಸಿವ್ ವೀಲ್ ಗಳನ್ನು ತೆಗೆದು ಝಾಮ್ ಝೂಮ್ ಆಗಿ ಅಡ್ಡಾಡುತ್ತಿದ್ದಾರೆ.

ಬಡವರು…ದೀನದಲಿತರು..ಶೋಷಣೆಗೆ ಒಳಗಾದವರಿಗೆ ಸರ್ಕಾರಿ ಸೌಲಭ್ಯಗಳು ಸಿಗ್ಬೇಕೆಂದು ಸರ್ಕಾರ ಮಾಡಿದ ಕಲ್ಯಾಣ ಯೋಜನೆಗಳು ಬಿಬಿಎಂಪಿ ಮಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಮಿಸ್ಯೂಸ್ ಆಗ್ತಿದೆ ಎನ್ನೋದು ಎಲ್ಲರಿಗೂ ಗೊತ್ತಿರುವುದೇ.ಅಂಥವುಗಳ ಸಾಲಿಗೆ ಸೇರುವ ರೀತಿಯಲ್ಲಿ ಮತ್ತೊಂದು ಹಗರಣ ತ್ರಿಚಕ್ರ ವಾಹನಗಳ ಹಂಚಿಕೆಯಲ್ಲಿ ನಡೆದಿರುವುದು ದಾಖಲೆಗಳ ಮೂಲಕ ಬಹಿರಂಗವಾಗಿದೆ.

ಪಶ್ಚಿಮ ವಲಯದ ಕಲ್ಯಾಣಾಧಿಕಾರಿ ಲಲಿತ,ವಿಜಯರಾಜ್ ಅರಸ್.ಚಂದ್ರು,ರಾಮಣ್ಣ ಎನ್ನುವ ಖದೀಮರು ಸೇರಿಕೊಂಡು ಅಂಗವಿಕಲರ ವಾಹನಗಳನ್ನು ಅಂಗವಿಕಲರೇ ಅಲ್ಲದವರಿಗೆ ಹಂಚಿಕೆ ಮಾಡಿ 3 ಕೋಟಿಗೂ ಅಧಿಕ ಗೋಲ್ಮಾಲ್ ನಡೆಸಿದ್ದಾರೆ ಎನ್ನಲಾಗಿದೆ.2016-17,2017-18 ಹಾಗೂ 2018-19ರ ಸಾಲಿನಲ್ಲಿ ಹಂಚಿಕೆಯಾದ ವಾಹನಗಳ ದಾಖಲೆಗಳನ್ನು ಆರ್ ಟಿಐ ನಲ್ಲಿ ಪಡೆದು ಅವಲೋಕಿಸಿದಾಗ ವ್ಯಾಪಕ ಗೋಲ್ಮಾಲ್ ನಡೆದಿರುವುದು ಪತ್ತೆಯಾಗಿದೆ.ವೆಹಿಕಲ್ ವಿತರಣೆಯ ಗುತ್ತಿಗೆ ಪಡೆದ ಸಂಸ್ಥೆಗಳೊಂದಿಗೆ ಪರ್ಸಂಟೇಜ್ ವ್ಯವಹಾರಕ್ಕೆ ಶಾಮೀಲಾಗಿ ಕೋಟ್ಯಾಂತರ ಕಿಕ್ ಬ್ಯಾಕ್ ಪಡೆದಿರುವ ಆರೋಪವೂ ಲಲಿತ,ವಿಜಯರಾಜ್ ಅರಸ್.ಚಂದ್ರು,ರಾಮಣ್ಣ  ಅವರ ವಿರುದ್ಧ ಕೇಳಿಬಂದಿದೆ.

ನಕಲಿ ವೈದ್ಯಕೀಯ ಪ್ರಮಾಣ ಪತ್ರ ನಕಲಿ ಆಧಾರ್ ಕಾರ್ಡ್,ನಕಲಿ ವೋಟರ್ ಐಡಿ ಹಾಗೂ ನಕಲಿ ಭಾವಚಿತ್ರಗಳನ್ನು ಅರ್ಜಿಯಲ್ಲಿ ನಮೂದಿಸಿ ಅನರ್ಹರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿ ಹಣವನ್ನು ಲೂಟ್ ಮಾಡಿದ್ದಾರೆನ್ನಲಾಗಿರುವ ಕಲ್ಯಾಣ ಇಲಾಖೆಯ ಅಧಿಕಾರಿ-ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದ್ರೂ ಪಶ್ಚಿಮ ವಿಭಾಗದ ಜಂಟಿ ಆಯುಕ್ತರಾಗಲಿ ಅಥ್ವಾ ಕಲ್ಯಾಣ ಇಲಾಖೆ ಬರುವ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯಾಗಲಿ ಕ್ರಮಕ್ಕೆ ಮುಂದಾಗಿಲ್ಲ.ಬಹುಷಃ ಇವರ ನಿರ್ಲಕ್ಷ್ಯ ಗಮನಿಸಿದ್ರೆ ಇವರೂ ಕೂಡ ಕಿಕ್ ಬ್ಯಾಕ್ ಪಡೆದು ಅಕ್ರಮವನ್ನು ಮುಚ್ಚಾಕುವ ಪ್ರಯತ್ನ ಮಾಡುತ್ತಿದ್ದಾರಾ ಎನ್ನುವ ಅನುಮಾನ ಕಾಡುತ್ತೆ.

ವಿತರಣೆಯಾಗಿರುವ ವಾಹನಗಳ ಫಲಾನುವಿಗಳು..ವಾಹನದ ಮಾದರಿ..ರಿಜಿಸ್ಟ್ರೇಷನ್ ನಂಬರ್..ಅಟೆಸ್ಟ್ ಮಾಡಲಾಗಿರುವ ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿಗಳಿಗೆ ಒಂದಕ್ಕೊಂದು ಲಿಂಕೇ ಸಿಗ್ತಿಲ್ಲ.ವೈದ್ಯಾಧಿಕಾರಿಗಳಿಗೆ ಹಣ ಕೊಟ್ಟು ದೃಢೀಕರಣ ಪತ್ರಗಳನ್ನು ಮಾಡಿಸಿ ವಾಹನಗಳನ್ನು ವಿತರಿಸಲಾಗಿದೆ.

ನಿಯಮ ಗಾಳಿಗೆ ತೂರಿದ ಅಧಿಕಾರಿಗಳು:

ಶೇ.75 ರಷ್ಟು ಅಂಗವೈಕಲ್ಯ ಇದ್ದವರಿಗೆ ಮಾತ್ರ ವಾಹನಗಳನ್ನು ನೀಡ್ಬೇಕೆನ್ನುವ ಕಂಡೀಷನ್ ಇದ್ದರೂ ಲಲಿತ,ವಿಜಯರಾಜ್ ಅರಸ್.ಚಂದ್ರು,ರಾಮಣ್ಣ ಎನ್ನುವ ಬೃಹಸ್ಪತಿಗಳು ಶೇಕಡಾ 10,15ರಷ್ಟು ಅಂಗವೈಕಲ್ಯ ಇರುವವರಿಗೂ ಶೇಕಡಾ 75ರಷ್ಟು ಅಂಗವೈಕಲ್ಯ ಇದೆ ಎಂದು ನಕಲಿ ದಾಖಲೆ ಸೃಷ್ಟಿಸಿ ವಾಹನಗಳನ್ನು ಕಿಕ್ ಬ್ಯಾಕ್ ಬೇಸ್ ಮೇಲೆ ಹಂಚಿಕೆ ಮಾಡಿ,ತಮ್ಮ ಜೋಳಿಗೆ ತುಂಬಿಸಿಕೊಂಡಿದ್ದಾರೆ.ಅರ್ಹರು ವಾಹನಗಳು ಸಿಗದೆ ಇಂದಿಗೂ  ತಬರನಂತೆ  ಅಲೆಯುತ್ತಿದ್ದಾರೆ.

ಅಂಗವಿಕಲರಿಗೆ ಸಿಗ್ಬೇಕಾದ ಸವಲತ್ತುಗಳನ್ನು ಲೂಟ್ ಮಾಡಿ ಅವರನ್ನು ಬರಿಗೈಯಾಗುವಂತೆ ಮಾಡಿರುವ ಕಲ್ಯಾಣ ಇಲಾಖೆ ಅಧಿಕಾರಿ ಸಿಬ್ಬಂದಿ ವಿರುದ್ಧ ಭಾರತೀಯ ದಂಡಸಂಹಿತೆ  420,403,463,465,468 ಸೆಕ್ಷನ್ ಗಳ ಅನ್ವಯ ಕಠಿಣ ಕ್ರಮ ಕೈಗೊಂಡು ಈ ಕ್ಷಣದಿಂದ್ಲೇ ಅವರನ್ನು ಅಮಾನತುಗೊಳಿಸಬೇಕೆನ್ನುವ ಮಾತುಗಳು ಕೇಳಿಬರುತ್ತಿವೆ.ಇಷ್ಟೆಲ್ಲಾ ಸಾಕ್ಷ್ಯಗಳು ಸಿಕ್ಕ ಮೇಲೂ ಪಶ್ಚಿಮ ವಲಯ  ಜಂಟಿ ಆಯುಕ್ತ ರು ಕ್ರಮ ಕೈಗೊಳ್ಳುತ್ತಾರೋ ಕಾದು ನೋಡ್ಬೇಕಿದೆ.

ಅಕ್ರಮಗಳ  ಕೆಲವು ಸ್ಯಾಂಪಲ್ಸ್:

ಸ್ಯಾಂಪಲ್ -1: ಜಗದೀಶ್ ಸನ್ ಆಫ್ ಅಂಕಯ್ಯ ಎನ್ನುವವರಿಗೆ ಮಂಜೂರು ಮಾಡಿದ್ದೇವೆನ್ನಲಾಗಿರುವ ವಾಹನವನ್ನು ಬೇರೆಯವರಿಗೆ ಮಾರಿಕೊಳ್ಳಲಾಗಿದೆ.ಈ ವಾಹನವನ್ನು ಬಿಬಿಎಂಪಿಯ ನೌಕರರೊಬ್ಬರು ಬಳಸಿಕೊಳ್ಳುತ್ತಿದ್ದಾರೆ.ಜಗದೀಶ್ ಅವರಿಗೆ ತನಗೊಂದು ಅಂಥಾ ವೆಹಿಕಲ್ ಮಂಜೂರಾಗಿದೆ ಎನ್ನುವುದೇ ಗೊತ್ತಿಲ್ಲ.ಪಾಪ ಆತ ಶಾಸಕ ಗೋಪಾಲಯ್ಯ ಅವರನ್ನು ಕಾಡಿ ಬೇಡಿ ಪಡೆದ ವಾಹನವನ್ನು ಬಳಸುತ್ತಿದ್ದಾನೆ..

ಸ್ಯಾಂಪಲ್ -2:  ರಾಜೇಶ್ ಸನ್ ಆಫ್ ಮುನಿಬೈಲಪ್ಪ ಎನ್ನುವ ಅಂಗವೈಕಲ್ಯನೇ ಅಲ್ಲದ ವ್ಯಕ್ತಿಯೋರ್ವ ತ್ರಿಚಕ್ರ ವಾಹನದಲ್ಲಿ ಅಡ್ಡಾಡುತ್ತಿದ್ದಾನೆ.

ಸ್ಯಾಂಪಲ್ -3: ಕೃಷ್ಣ ಸನ್ ಆಫ್ ಗೋವಿಂದಯ್ಯ ಸಂತೋಷ್ ಸನ್ ಆಫ್ ಸುಬ್ಬರಾಜ್ ಎನ್ನುವ ಫಲಾನುಭವಿಗಳು ನಕಲಿಯಾಗಿದ್ದು ಅವರು ಆಧಾರ್ ನಲ್ಲಿ ನೀಡಿರುವ ವಿಳಾಸದಲ್ಲಿ ವಾಸವಾಗಿಯೇ ಇಲ್ಲ.

ಸ್ಯಾಂಪಲ್ -4: ಇನ್ನೂ ಸಾಫ್ಟ್ ವೇರ್ ಎಂಜಿನಿಯರ್ ಗೂ ತ್ರಿಚಕ್ರ ವಾಹನ ವಿತರಣೆ ಮಾಡಿರುತ್ತಾರೆ.

 

 

 

Spread the love
Leave A Reply

Your email address will not be published.

Flash News