ಸ್ವಯಂನಿವೃತ್ತಿಗೆ ಕೆಎಸ್ ಆರ್ ಟಿಸಿ ನೌಕರರಿಗೆ ಬಂಪರ್ ಅಫರ್ !

0

(ಕನ್ನಡ ಫ್ಲಾಶ್ ನ್ಯೂಸ್.ಕಾಂ ಬ್ಯೂರೋ)

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಕಾಡುತ್ತಿರುವ ಖಾಸಗೀಕರಣದ ಭೂತವನ್ನು ವೀಳ್ಯ ಕೊಟ್ಟು ಆಹ್ವಾನಿಸಿಕೊಳ್ಳುತ್ತಿದೆ ಆಡಳಿತ ಮಂಡಳಿ.ಇದಕ್ಕೆ ಪುಷ್ಟೀಕರಿಸುವ ರೀತಿಯಲ್ಲಿ ಈಗಾಗ್ಲೇ ಸಾಕಷ್ಟು ಬೆಳವಣಿಗೆ ನಡೆಯುತ್ತಿದೆ.ಬಿಎಂಟಿಸಿಯನ್ನು ಎಲೆಕ್ಟ್ರಿಕ್ ಬಸ್ ಗಳ ಖರೀದಿಗೆ ಅವಕಾಶ ನೀಡುವ ಮೂಲಕ ಖಾಸಗೀಕರಣ ಮಾಡ್ಲಿಕ್ಕೆ ಸರ್ಕಾರ ಮುಂದಾಗಿದ್ರೆ,ಎಲ್ಲಾ ನೌಕರರಿಗೆ ಸ್ವಯಂನಿವೃತ್ತಿಗೆ ಬಲವಂತಪಡಿಸುವ ಮೂಲಕ ಕೆಎಸ್ ಆರ್ ಟಿಸಿ ನೌಕರರನ್ನು ನಿರುದ್ಯೋಗಿಗಳನ್ನಾಗಿ ಮಾಡಲು ಹೊರಟಿದೆ.

ಸ್ವಯಂನಿವೃತ್ತಿ ಸಂಬಂಧಿಸಿದಂತೆ ರಸ್ತೆ ಸಾರಿಗೆ ನಿಗಮದ ಸುತ್ತೋಲೆ
ಸ್ವಯಂನಿವೃತ್ತಿ ಸಂಬಂಧಿಸಿದಂತೆ ರಸ್ತೆ ಸಾರಿಗೆ ನಿಗಮದ ಸುತ್ತೋಲೆ

ವಯಸ್ಸಿನ ನೆವ ಇಟ್ಕೊಂಡು,ಅಂಗವಿಕಲರ ಅಸಮರ್ಥತೆಯನ್ನು ನೆವವಾಗಿಟ್ಟುಕೊಂಡು ಇದೀಗ ಕೆಎಸ್ ಆರ್ ಟಿಸಿ ಬಹುತೇಕ ನೌಕರರಿಗೆ ಬಲವಂತದ ನಿವೃತ್ತಿಗೆ ಒತ್ತಾಯಿಸುತ್ತಿದೆ.ಇದಕ್ಕೆ ಪೂರಕವಾಗಿ ಸ್ವಯಂನಿವೃತ್ತಿಯ ಆಫರನ್ನು ಕೂಡ ನೀಡಿದೆ.
ನೌಕರರು ಬಲವಂತವಾಗಿ ಸ್ವಯಂನಿವೃತ್ತಿ ಪಡೆದುಕೊಳ್ಳುವಂತೆ ಮಾಡಲು  ಕೆಎಸ್ ಆರ್ ಟಿಸಿ  ಮತ್ತೊಂದು ರೀತಿಯ ಸರ್ಕಸ್ ಮಾಡಲು ಆಡಳಿತಮಂಡಳಿ ಮುಂದಾಗಿದೆ.ಇದಕ್ಕಾಗಿ ಪ್ರಸ್ತುತ ಚಾಲನೆಯಲ್ಲಿರುವ ಸ್ವಯಂ ನಿವೃತ್ತಿ ಯೋಜನೆಯನ್ನೇ ಅತ್ಯಾಕರ್ಷಣೀಯಗೊಳಿಸಿಬಿಟ್ಟಿದೆ.
ಶೇಕಡಾ 40 ರಷ್ಟು ಅಂಗವೈಕಲ್ಯ ಹೊಂದಿದ್ದವರು ಒಂದ್ವೇಳೆ ಸ್ವಯಂನಿವೃತ್ತಿ ಪಡೆಯಬೇಕೆಂದು ಬಯಸಿದ್ದಲ್ಲಿ,ಅವರ ನಿವೃತ್ತಿಗೆ ಇನ್ನೂ ಒಂದು ವರ್ಷ ಬಾಕಿ ಇದ್ದರೆ (ಕನಿಷ್ಠ 10 ವರ್ಷ ನಿಗಮದಲ್ಲಿ ಸೇವೆ ಸಲ್ಲಿಸಿದ ನೌಕರರು) ಹೆಚ್ಚುವರಿ ಆರ್ಥಿಕ ನೆರವಿನ ರೂಪದಲ್ಲಿ 2 ಲಕ್ಷ ಸಿಗಲಿದೆ. ಅದೇ ಮೊತ್ತದ ನೆರವು ದೈಹಿಕ ಅಶಕ್ತತೆ ಹಾಗೂ ರೋಗಗಳಿಂದ ಬಳಲುತ್ತಿದ್ದವರಿಗೂ ಸಿಗಲಿದೆ.ನಿವೃತ್ತಿಗೆ 2 ವರ್ಷ ಬಾಕಿ ಇದ್ದ ಅಂಗವಿಕಲರಿಗೆ 4 ಲಕ್ಷ ಹೆಚ್ಚುವರಿ ಆರ್ಥಿಕ ನೆರವು ಸಿಕ್ರೆ,ರೋಗ ಅಥ್ವಾ ದೈಹಿಕ ತೊಂದ್ರೆಗಳಿಗೆ ತುತ್ತಾದ ನೌಕರರಿಗೆ 3 ಲಕ್ಷ ನೆರವು ಸಿಗಲಿದೆ.

ಇನ್ನು ನಿವೃತ್ತಿಗೆ 3 ವರ್ಷ ಬಾಕಿ ಇರುವ 10 ವರ್ಷ ಸೇವಾವಧಿ ಪೂರೈಸಿರುವ ಅಂಗವಿಕಲರಿಗೆ 6 ಲಕ್ಷ ನೆರವು ಸಿಗಲಿದೆ.ಅದೇ ಅನುಭವ ಹೊಂದಿರುವ ಅಸಮರ್ಥ ನೌಕರರಿಗೆ 4 ಲಕ್ಷ ಹೆಚ್ಚುವರಿ ಆರ್ಥಿಕ ನೆರವು ಸಿಗಲಿದೆ. ಅದೇ ರೀತಿ ನಾಲ್ಕು ವರ್ಷ ಬಾಕಿ ಇರುವ ಅಂಗವಿಕಲರಿಗೆ 8 ಲಕ್ಷ ,ದೈಹಿಕ ಅಸಮರ್ಥರಿಗೆ 5 ಲಕ್ಷ ಹೆಚ್ಚುವರಿ ನೆರವು ಸಿಗಲಿದೆ.ಜೊತೆಗೆ ನಿವೃತ್ತಿಗೆ ಐದು ವರ್ಷ ಬಾಕಿ ಇರುವ ಅಂಗವಿಕಲ ನೌಕರರಿಗೆ 10 ಲಕ್ಷ ಹಾಗೂ ದೈಹಿಕ ಅಸಮರ್ಥರಿಗೆ 6 ಲಕ್ಷ ಹೆಚ್ಚುವರಿ ಆರ್ಥಿಕ ನೆರವು ನೀಡುವ ಬಂಪರ್ ಆಫರನ್ನು ಕೆಎಸ್ ಆರ್ ಟಿಸಿ ನೀಡಿದೆ.ಆದ್ರೆ ಕೆಎಸ್ ಆರ್ ಟಿಸಿಯ ಈ ನಿವೃತ್ತಿಯ ಬಂಪರ್ ಆಫರ್ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ.ಇಷ್ಟು ವರ್ಷ ಇಲ್ಲದ ಈ ಪ್ರಪೋಸಲನ್ನು ಆಕರ್ಷಣೀಯಗೊಳಿಸಿ ಹೆಚ್ಚುವರಿ ಮೊತ್ತದ ಹಣದ ಪ್ರಮಾಣವನ್ನು ಹೆಚ್ಚು ಮಾಡಿರುವುದರ ಹಿಂದೆ ನೌಕರರನ್ನು ಬಲವಂತವಾಗಿ ಕೆಲಸ ಬಿಡಿಸಿ ಮನೆಗೆ ಕೂರಿಸುವ ದುರಾಲೋಚನೆ ಇದ್ದಂತಿದೆ ಎನ್ನುವ ಮಾತು ಕೇಳಿಬರ್ತಿದೆ.ಅದೇನೇ ಆಗಲಿ,ಸಾರ್ವಜನಿಕವಾಗಿ ಚರ್ಚೆಯಾಗದೆ ಈ ರೀತಿಯ ನಿರ್ಧಾರವೊಂದನ್ನು ಆಡಳಿತ ಮಂಡಳಿ ತೆಗೆದುಕೊಳ್ಳುವುದು ಎಷ್ಟು ಸರಿ..ಇದರ ಬಗ್ಗೆ ಸಾರಿಗೆ ಸಚಿವರು ಸ್ಪಷ್ಟನೆ ನೀಡಲೇಬೇಕಿದೆ.ನೌಕರರ ಆತಂಕವನ್ನು ದೂರ ಮಾಡಲೇಬೇಕಿದೆ.

 

Spread the love
Leave A Reply

Your email address will not be published.

Flash News