ಟಿಡಿಆರ್ ಕಿಂಗ್ ಪಿನ್ ಕೃಷ್ಣಲಾಲ್ ಬಂಧನ

0

(ಕನ್ನಡ ಫ್ಲಾಶ್ ನ್ಯೂಸ್.ಕಾಂ ಬ್ಯೂರೋ)

ಬೆಂಗಳೂರು: ಬಹುಕೋಟಿ ಟಿಡಿಆರ್ ಅವ್ಯವಹಾರ ಪ್ರಕರಣದ ಕಿಂಗ್ ಪಿನ್ ಕೃಷ್ಣಾಲಾಲ್ ಕೊನೆಗೂ ಬಂಧನವಾಗಿದ್ದಾನೆ.ಟಿಡಿಆರ್ ಹಗರಣದ ಮುಖ್ಯ ರೂವಾರಿಯಾಗಿ ತಲೆಮರೆಸಿಕೊಂಡಿದ್ದ ಬಿಡಿಎ ಎಂಜಿನಿಯರ್ ಕೃಷ್ಣಾಲಾಲ್ ತಲೆ ಮರೆಸಿಕೊಂಡಿದ್ದನು.ಆತನ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ಕೊನೆಗೂ ಆರು ತಿಂಗಳ ನಿರಂತರ ಪರಿಶ್ರಮದ ನಂತ್ರ ಆತನನ್ನು ಬಂಧಿಸಿ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಟಿಡಿಆರ್ ಕಿಂಗ್ ಪಿನ್ ಕೃಷ್ಣಲಾಲ್
ಟಿಡಿಆರ್ ಕಿಂಗ್ ಪಿನ್ ಕೃಷ್ಣಲಾಲ್

ಬಿಬಿಎಂಪಿ ಮಹದೇವಪುರ ವಲಯದ ಸಹಾಯಕ ಅಭಿಯಂತರನಾಗಿದ್ದ ಕೃಷ್ಣಲಾಲ್ ಬಿಡಿಎಗೆ ಬಂದ್ಮೇಲೆ ಅಲ್ಲಿಯೂ ಟಿಡಿಆರ್ ಹಗರಣ ವ್ಯವಸ್ಥಿತವಾಗಿ ಮುಂದುವರೆದುಕೊಂಡು ಹೋಗಲು ಕಾರಣವಾಗಿದ್ದ.ಮಾಜಿ ಡಿಸಿಎಂ ಪರಮೇಶ್ವರ್ ಅವರ ಕೃಪಕಟಾಕ್ಷದಿಂದ ಬಿಬಿಎಂಪಿಯಿಂದ, ಬಿಡಿಎ ಗೆ ಬಂದಿದ್ದ ಕೃಷ್ಣಾಲಾಲ್ ಅನೇಕ ರಾಜಕಾರಣಿಗಳಿಗೆ ಸಹಾಯ ಮಾಡುವ ಮೂಲಕ ಅವರ ಆತ್ಮೀಯತೆ ಗಳಿಸಿದ್ದ.ಆತನಿಂದ ಪ್ರಯೋಜನ ಪಡೆದುಕೊಂಡ ರಾಜಕಾರಣಿಗಳು ಆತನ ಕೈಯಿಂದ ಸಾಕಷ್ಟು ಹಗರಣ ಮಾಡಿಸಿ ಲಾಭ ಪಡೆದುಕೊಂಡಿದ್ರು.

ಆದ್ರೆ ಎಲ್ಲಿಯೂ ತೆರೆಗೆ ಬರದೇ ಮರೆಯಲ್ಲೇ ಎಲ್ಲವನ್ನು ನಿಯಂತ್ರಿಸುತ್ತಿದ್ದುದ್ದರಿಂದ ಕೃಷ್ಣಾಲಾಲ್ ಮಾತ್ರ ಪರಮಭ್ರಷ್ಟ ಎಂದು ಬಿಂಬಿತನಾಗಿದ್ದ. ಟಿಡಿಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ತನಿಖೆ ವೇಳೆ,ಹಗರಣಕ್ಕೆ ಸಂಬಂಧಿಸಿದಂತೆ 47 ಕಡತಗಳು ಮಿಸ್ ಆಗಿದ್ದು ಅವುಗಳ ಪತ್ತೆ ಈವರೆಗೂ ನಡೆದಿಲ್ಲ.ಆದ್ರೆ 6 ತಿಂಗಳಿಂದ ತಲೆಮರೆಸಿಕೊಂಡಿದ್ದ ಕೃಷ್ಣಾಲಾಲ್ ನನ್ನು ಎಸಿಬಿ ಪೊಲೀಸರು ಬಂಧಿಸಿರುವುದರಿಂದ ಅನೇಕ ರಾಜಕಾರಣಿಗಳ ಮುಖವಾಡ ಕಳಚೋ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ.ಅದೇನೇ ಆಗಲಿ,ಕೃಷ್ಣಾಲಾಲ್ ನ ಬಾಯಿಯಿಂದ ಸತ್ಯ ಕಕ್ಕಿಸಿ ಅದರಿಂದೆ ಇರುವ ಕಳ್ಳರನ್ನು ಹಿಡಿದು ಅವರ ಹೆಡೆಮುರಿ ಕಟ್ಟಬೇಕಿದೆ.

 

Spread the love
Leave A Reply

Your email address will not be published.

Flash News