ಅಧಿಕಾರದ ಅಸೆಗೆ ಬಿಜೆಪಿ ನಂಬಿ ಕೆಟ್ರಾ ಶಂಕರ್..

0

(ಕನ್ನಡ ಫ್ಲಾಶ್ ನ್ಯೂಸ್.ಕಾಂ ಪೊಲಿಟಿಕಲ್ ಬ್ಯೂರೋ)
ಬೆಂಗಳೂರು/ಹಾವೇರಿ/ರಾಣೆಬೆನ್ನೂರು:ಮಾಜಿ ಸಚಿವ ,ಅನರ್ಹ ಶಾಸಕ ಶಂಕರ್ ಪರಿಸ್ತಿತಿ ನೋಡಿದಾಗ ಹೀಗೆ ಅನ್ನಿಸೋದೇ ಇರೊಲ್ಲ.ಕಷ್ಟಪಡದೆ ಅನಾಯಾಸವಾಗಿ ಅಧಿಕಾರ ಸಿಕ್ರೆ ಅದರ ಅಮಲಿನಲ್ಲಿ ವ್ಯಕ್ತಿ ಏನೆಲ್ಲಾ ಯಡವಟ್ಟು ಮಾಡಿಕೊಳ್ತಾನೆ ಎನ್ನುವುದಕ್ಕೆ ಶಂಕರ್ ದುರಂತ ಉದಾಹರಣೆ ಎನ್ನಬಹುದೇನೋ..

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಗೆದ್ದ ಶಂಕರ್ ಆಮೇಲೆ ಏನೆಲ್ಲಾ ಮಾಡಿಕೊಂಡ್ರು ಎನ್ನೋದು ಇತಿಹಾಸ ಗಮನಿಸಿದಾಗ ಗೊತ್ತಾಗುತ್ತೆ. ಬಿಬಿಎಂಪಿಯ ಮಾಜಿ ಉಪಮಹಾಪೌರ ಎನ್ನೋದನ್ನು ಬಿಟ್ರೆ ರಾಜಕೀಯವಾಗಿ ದೊಡ್ಡ ಹುದ್ದೆಯನ್ನು ಅನುಭವಿಸಿದವರೇ ಅಲ್ಲ ಶಂಕರ್.ಅಂತದ್ದರಲ್ಲಿ ಕ್ಷೇತ್ರದ ಜನರ ಆಶೀರ್ವಾದದಿಂದ ಗೆದ್ದು ಶಾಸಕರೂ ಆದ ಶಂಕರ್ ಆಮೇಲೆ ಕ್ಷೇತ್ರದ ಜನರನ್ನೇ ಮರೆತು ಅಧಿಕಾರಕ್ಕಾಗಿ ಹಾವು ಏಣಿ ಆಟವನ್ನು ಆರಂಭಿಸಿ,ಅಧಿಕಾರವನ್ನೂ ಅನುಭವಿಸಿ ನಂತ್ರ ಮಾಡಿದ ತಪ್ಪಿಗೆ ಅನರ್ಹವಾದುದೆಲ್ಲಾ ರಾಜ್ಯದ ಜನರಿಗೆ ಗೊತ್ತಿದೆ.

ಎಲ್ಲಾ ಅನರ್ಹ ಶಾಸಕರಿಗೆ ಬಹುತೇಕ ಅವರು ಪ್ರತಿನಿಧಿಸ್ತಿದ್ದ ಕ್ಷೇತ್ರಗಳಿಂದ್ಲೇ ಬಿಜೆಪಿಯಿಂದ ಟಿಕೆಟ್ ಸಿಕ್ಕಿದೆ.ಆದ್ರೆ ಶಂಕರ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.ಇದಕ್ಕೆ ಕಾರಣ ಏನು ಎನ್ನುವುದನ್ನು ಈವರೆಗೂ ಯಡಿಯೂರಪ್ಪ ಸ್ಙಷ್ಟಪಡಿಸಿಲ್ಲ.ಬಹುಷಃ ಶಂಕರ್ ಅವರಿಗೆ ಟಿಕೆಟ್ ಕೊಟ್ರೆ ಗೆಲುವು ಕಷ್ಟ ಎನ್ನುವ ವರದಿಯೇನಾದ್ರೂ ಸಿಕ್ಕಿರಬಹುದೋ ಏನೋ ಗೊತ್ತಿಲ್ಲ,ಹಾಗಾಗಿ ಶಂಕರ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.ಆದ್ರೆ ಎಮ್ಮೆಲ್ಸಿ ಮಾಡಿ ಸಚಿವರನ್ನಾಗಿಸುವ ಭರವಸೆಯನ್ನು ಬಿಜೆಪಿ ಕೊಟ್ಟಿದೆ.ಆದ್ರೆ ಸಧ್ಯದ ಸ್ತಿತಿ ನೋಡಿದ್ರೆ ಈ ಭರವಸೆ ಈಡೇರೋದು ಕಷ್ಟವೇ.

ಈ ನಡುವೆ ಟಿಕೆಟ್ ಗಿಟ್ಟಿಸ್ಲೇಬೇಕೆಂದು ಶಂಕರ್ ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ.ತಾನಲ್ಲ ತನ್ನ ಹೆಂಡತಿಯಿಂದ ಮಾತ್ನಾಡಿಸಿದ್ರೆ ಏನಾದ್ರೂ ಆಗ್ಬೋದೆಂದು ಆ ನಿಟ್ಟಿನಲ್ಲು ಪ್ರಯತ್ನ ಮಾಡಿದ್ರು.ಆದ್ರೆ ಅದು ಫಲ ನೀಡಿಲ್ಲ.ಟಿಕೆಟ್ ಕೊಡೊಕ್ಕಾಗೊಲ್ಲ ಎನ್ನುವುದನ್ನು ನೇರವಾಗಿ ಹೇಳಲು ಇಚ್ಛಿಸದೆ ಪರೋಕ್ಷವಾಗಿ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ವರಿಷ್ಠರು ಟಿಕೆಟ್ ಯಾರಿಗೆ ನೀಡಬೇಕೆನ್ನುವುದರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಸಮಿತಿ ರಚಿಸಲಾಗಿದೆ.

ನನ್ನದೇನೂ ತಪ್ಪಿಲ್ಲ..ನಾನು ಅನರ್ಹನಲ್ಲ,ನನಗೆ ಕಾನೂನಾತ್ಮಕ ವಿಷಯದಲ್ಲಿ ಸಹಾಯ ಮಾಡುವಂತೆ ಶಂಕರ್,ಸಿಎಂ ಯಡಿಯೂರಪ್ಪ ಅವರನ್ನು ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ಕೇಳಿಕೊಂಡ ಪರಿ..
ನನ್ನದೇನೂ ತಪ್ಪಿಲ್ಲ..ನಾನು ಅನರ್ಹನಲ್ಲ,ನನಗೆ ಕಾನೂನಾತ್ಮಕ ವಿಷಯದಲ್ಲಿ ಸಹಾಯ ಮಾಡುವಂತೆ ಶಂಕರ್,ಸಿಎಂ ಯಡಿಯೂರಪ್ಪ ಅವರನ್ನು ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ಕೇಳಿಕೊಂಡ ಪರಿ..

ಆ ಕ್ಷೇತ್ರದಲ್ಲಿ ಗೆಲ್ಲಲು ಯಾರು ಸೂಕ್ತ ಎನ್ನುವುದನ್ನು ಸಮಿತಿಯೇ ಅಂತಿಮಗೊಳಿಸಲಿದೆ.ಆ ಸಮಿತಿ ಕೊಡುವ ವರದಿ ಮೇಲೆ ಟಿಕೆಟ್ ಫೈನಲ್ ಮಾಡಲಾಗುವುದು ಎನ್ನುವ ಮೂಲಕ ಶಂಕರ್ ಅವರ ಬಗ್ಗೆ ಪಕ್ಷಕ್ಕೆ ಬಹುತೇಕ ಒಲವಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ.ಬಿಜೆಪಿಯನ್ನು ನಂಬಿಕೊಂಡು ಮಾಡಬಾರದ್ದನ್ನೆಲ್ಲಾ ಮಾಡಿದ ಶಂಕರ್ ಇದೀಗ ಬಿಜೆಪಿಯಿಂದ್ಲೇ ತಿರಸ್ಕ್ರತರಾದಂತಾಗಿದೆ.ಟಿಕೆಟ್ ಡೌಟ್ ಆಗಿರೋದ್ರಿಂದ ಪಕ್ಷೇತರರಾಗಿ ಮತ್ತೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.ಆದ್ರೆ ಸ್ಪರ್ದೆ ಅಂದುಕೊಂಡಷ್ಟು ಸುಲಭವಾಗಿಲ್ಲ.ಏಕೆಂದ್ರೆ ಗೆದ್ದ ಮೇಲೆ ಅಧಿಕಾರದ ಆಸೆಗೆ ಮತದಾರರ ಅಭಿಪ್ರಾಯವನ್ನು ಧಿಕ್ಕರಿಸಿದ್ದರ ಬಗ್ಗೆ ಕ್ಷೇತ್ರದಲ್ಲಿ ವ್ಯಾಪಕ ಆಕ್ತೋಶ ಅವರ ಮೇಲಿದೆ.

ಅಭಿವೃದ್ದಿಗೆ ಅನುದಾನ ತರೋದನ್ನು ಬಿಟ್ಟು ಈವಯ್ಯ ಅಧಿಕಾರ ಹಾಗೂ ಅದರ ಹಿಂದಿನ ಹಣದ ಆಸೆಗೆ ಜೋತುಬಿದ್ದ,ಈತನಿಗೆ ಮತ್ತೆ ಮಣೆ ಹಾಕಿದ್ರೆ ನಮ್ಮ ತಲೆ ಮೇಲೆ ನಾವೇ ಚಪ್ಪಡಿ ಕಲ್ಲನ್ನು ಎಳ್ಕೊಂಡಂಗೆ ಎನ್ನುವ ಮನಸ್ತಿತಿ ಮತದಾರರಲ್ಲಿದೆಯಂತೆ. ಇಷ್ಟೊಂದು ವಿರೋಧಿ ಅಲೆಯನ್ನು ಎದುರಿಸಿ ಶಂಕರ್ ಗೆಲ್ಲೋದು ಕಷ್ಟ.ಹಾಗಾಗಿ ಬಿಜೆಪಿಯಿಂದ ಅಭ್ಯರ್ಥಿಯಾಗಿರುವ ಸಚಿವ ಕೆ.ಎಸ್ ಈಶ್ವರಪ್ಪ ಅವರ ಪುತ್ರ ಹಾಗು ಜಿಲ್ಲಾ ಪಂಚಾಯತ್ ಸದಸ್ಯ ಕೆ.ಇ ಕಾಂತೇಶ್ ಗೆಲುವಿಗೆ ಟೊಂಕಕಟ್ಟಿ ನಿಂತು ಕೆಲಸ ಮಾಡ್ದೆ ವಿಧಿಯಿಲ್ಲ ಎನ್ನುವಂತಾಗಿದೆ.

ಅಧಿಕಾರಕ್ಕಾಗಿ ಕ್ಷೇತ್ರ,ಅದರ ಅಭಿವೃದ್ಧಿ ಹಾಗೂ ಮತದಾರರ ಹಿತವನ್ನು ಕಡೆಗಣಿಸಿದ್ರೆ ಏನಾಗುತ್ತೆ ಎನ್ನುವುದಕ್ಕೆ ಅತ್ತ ಟಿಕೆಟ್ ಇಲ್ಲದೆ ಸ್ಪರ್ಧಿಸಲಿಕ್ಕೂ ಆಗದೆ,ಅಧಿಕಾರ ಇಲ್ಲದೆ ಸುಮ್ಮನೆ ಕೂರಲಿಕ್ಕೂ ಆಗದೆ ವಿಲ ವಿಲ ಒದ್ದಾಡುತ್ತಿರುವ ಶಂಕರ್ ಸ್ಥಿತಿನೇ ದುರಂತ ನಿದರ್ಶನವಾಗುತ್ತೆ.ಇವರನ್ನು ನೋಡಿ,ಇತರರು ಪಾಠ ಕಲೀಬೇಕಿದೆ.
 
ನನ್ನದೇನೂ ತಪ್ಪಿಲ್ಲ..ನಾನು ಅನರ್ಹನಲ್ಲ,ನನಗೆ ಕಾನೂನಾತ್ಮಕ ವಿಷಯದಲ್ಲಿ ಸಹಾಯ ಮಾಡುವಂತೆ ಶಂಕರ್,ಸಿಎಂ ಯಡಿಯೂರಪ್ಪ ಅವರನ್ನು ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ಕೇಳಿಕೊಂಡ ಪರಿ..

Spread the love
Leave A Reply

Your email address will not be published.

Flash News