ಶಿವಾಜಿನಗರದಲ್ಲಿ ನಿಜಕ್ಕೂ ಕಮಲ ಅರಳುತ್ತಾ..ಚುನಾವಣಾ ಲೆಕ್ಕಾಚಾರ ಬದ್ಲಿಸ್ತಾರಾ ಸರವಣ-ಕಟ್ಟಾ ಫ್ಯಾಮಿಲಿ ಸರವಣ ಬೆನ್ನಿಗೆ ನಿಲ್ತಾರಾ..

0

(ಕನ್ನಡ ಫ್ಲಾಶ್ ನ್ಯೂಸ್.ಕಾಂ ಪೊಲಿಟಿಕಲ್ ಬ್ಯುರೋ)
ಬೆಂಗಳೂರು:ಅಚ್ಚರಿಯ ಅಭ್ಯರ್ಥಿಯಾಗಿ ಮಾಜಿ ಕಾರ್ಪೊರೇಟರ್ ಸರವಣ ಶಿವಾಜಿನಗರದಿಂದ ಬಿಜೆಪಿ ಟಿಕೆಟ್ ಗಿಟ್ಟಿಸಿದ್ದಾರೆ.ಕೊನೇ ಕ್ಷಣದವರೆಗೂ ಹಲವರ ಹೆಸರುಗಳು ಕೇಳಿಬರುತ್ತಿದ್ದರೂ ಅಂತಿಮವಾಗಿ ಹೈಕಮಾಂಡ್ ಸರವಣ ಅವರಿಗೆ ಮಣೆ ಹಾಕಿದೆ.ಈ ಮೂಲಕ ಕಟ್ಟಾ ಸುಬ್ರಮಣ್ಯ ನಾಯ್ದು ಅವರ ಮಗ ಕಟ್ಟಾಜಗದೀಶ್ ಹಾಗೂ ರೋಷನ್ ಬೇಗ್ ಟಿಕೆಟ್ ಗಿಟ್ಟಿಸುವ ಆಸೆಗೆ ಶಾಶ್ವತವಾಗಿ ಬ್ರೇಕ್ ಹಾಕಿದೆ.

ಸರವಣ
ಬಿಜೆಪಿ ಅಭ್ಯರ್ಥಿ ಸರವಣ

ಹೇಳಿ ಕೇಳಿ ಶಿವಾಜಿನಗರ ಮುಸ್ಲಿಂ ಹಾಗೂ ತಮಿಳರ ಬಾಹುಳ್ಯದ ಕ್ಷೇತ್ರ.ಮುಸ್ಲಿಂ ಸಮುದಾಯವನ್ನು ಓಲೈಸ್ತಾ ಬಂದಿದ್ದರಿಂದ ರೋಷನ್ ಬೇಗ್ ಹಲವು ಅವಧಿಯಿಂದ ಏಕಮೇವಾ ಚಕ್ರಾಧಿಪತಿಯಾಗಿ ಕ್ಷೇತ್ರವನ್ನು ಆಳ್ತಿದ್ರು.ಆದ್ರೆ ಈಗ ಚಿತ್ರಣ ಬದ್ಲಾಗಿದೆ.ರೋಷನ್ ಬೇಗ್ ಬಿಜೆಪಿಯನ್ನು ನಂಬ್ಕೊಂಡು ಕೈ ನಾಯಕರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದರಿಂದ ಕೈ ಪಕ್ಷದಿಂದಲೂ ಅನರ್ಹರಾದ್ರು.ಬಿಜೆಪಿ ಮನೆ ಬಾಗಿಲನ್ನು ಬಂದ್ ಮಾಡಿಸಿಕೊಂಡ್ರು.ಹಾಗಾಗಿ ರೋಷನ್ ಬೇಗ್ ಮುಂದೆ ಪಕ್ಷೇತರರಾಗಿ ಸ್ಪರ್ಧಿಸುವುದನ್ನು ಬಿಟ್ಟರೆ ಬೇರೆ ಆಪ್ಷನ್ನೇ ಇಲ್ಲವಾಗಿದೆ.ಇದಕ್ಕಾಗಿ ಅವರು ಸಿದ್ಧತೆಯನ್ನೂ ಮಾಡಿಕೊಂಡಿದ್ದಾರೆ.

ಇನ್ನು ಸರವಣ ಕೊನೇ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯೊಕ್ಕೆ ಗ್ರೀನ್ ಸಿಗ್ನಲ್ ಪಡೆದಿದ್ದಾರೆ.ಕಾರ್ಪೊರೇಟರ್ ಆಗಿರುವ ಜನ ಸಂಪರ್ಕ ಸಾಧಿಸಿರುವ ಸರವಣ ಅವರ ಪತ್ನಿ ಮಮತಾ ಹಾಲಿ ಹಲಸೂರು ವಾರ್ಡ್ ನ ಸದಸ್ಯೆ ಕೂಡ.ಸರವಣ ಅವರ ವಾರ್ಡ್ ಇರೋದು ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಾದ್ರೂ ಕಳೆದ ಬಾರಿಯೇ ಶಿವಾಜಿನಗರ ಟಿಕೆಟ್ ಪಡೆಯುವ ಪ್ರಯತ್ನದ ಬೆನ್ನಲ್ಲೇ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವ ಕೆಲಸವನ್ನೂ ಮಾಡಿದ್ದರು.ಟಿಕೆಟ್ ಸಿಗದಿದ್ರೂ ತಲೆ ಕೆಡಿಸಿಕೊಳ್ಳದೆ ಭವಿಷ್ಯದ ದೃಷ್ಟಿಯಿಂದ ಸಂಘಟನೆಯನ್ನು ಮುಂದುವರೆಸಿದ್ದರು.

ಮುಸ್ಲಿಮ್ ಬಾಹುಳ್ಯದ ಕ್ಷೇತ್ರದಲ್ಲಿ ಸರವಣ ಸ್ಪರ್ಧೆ ಅನಾಯಾಸವೇ ಎನ್ನುವ ಪ್ರಶ್ನೆ ಈಗಾಗ್ಲೇ ಸೃಷ್ಟಿಯಾಗಿದೆ.ಕ್ಷೇತ್ರದ ಚಿತ್ರಣ ಹಾಗು ಅಲ್ಲಿರುವ ಮತದಾರರ ಹಿನ್ನಲೆಯನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ಗೆಲುವು ಎಷ್ಟು ಅನಾಯಾಸ ಎನಿಸುತ್ತೋ ಅತಿಯಾದ ಆತ್ಮವಿಶ್ವಾಸ ಇಟ್ಕೊಂಡು ಸುಮ್ಮನಿದ್ರೆ ಸೋಲು ಕಟ್ಟಿಟ್ಟಬುತ್ತಿ ಎನ್ನುವುದು ಸ್ಪಷ್ಟವಾಗುತ್ತೆ. ಮುಸ್ಲಿಂರು ಹೆಚ್ಚಿರುವ ಶಿವಾಜಿನಗರದಲ್ಲಿ ತಮಿಳರ ಸಂಖ್ಯೆಯೂ ಅಷ್ಟೇ ನಿರ್ಣಾಯಕವಾಗಿದೆ.ಅವರು ಮನಸು ಮಾಡಿದ್ರೆ ಇಡೀ ಚಿತ್ರಣವನ್ನೇ ಬದ್ಲಿಸಿಬಿಡಬಹುದು.ಇದು ಈ ಹಿಂದೆ ಸಾಬೀತು ಕೂಡ ಆಗಿದೆ.ಅದೇ ಸ್ಟ್ಯಾಟರ್ಜಿಯನ್ನು ಇಟ್ಕೊಂಡು ಕೆಲಸ ಮಾಡಿದ್ದೇ ಆದಲ್ಲಿ ಸರವಣ ಗೆಲುವು ಸಾಧ್ಯವಾಗ್ಬೋದು.

ಮೂಲತಃ ತಮಿಳು ಸಮುದಾಯಕ್ಕೆ ಸೇರಿರುವ ಸರವಣ ಅವರಿಗೆ ಟಿಕೆಟ್ ಕೊಡ್ಲಿಕ್ಕೆ ಇದು ಕೂಡ ಒಂದ್ ಕಾರಣ.ಮುಸ್ಲಿಂ ಸಮುದಾಯದಿಂದ ರೋಷನ್ ಬೇಗ್ ಪಕ್ಷೇತರರಾಗಿ ಸ್ಪರ್ಧಿಸಿದ್ರೆ ಕಾಂಗ್ರೆಸ್ ಹಾಗು ಜೆಡಿಎಸ್ ಕೂಡ ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನೇ ನಿಲ್ಲಿಸುತ್ವೆ.ಹಾಗಾಗಿದ್ದೇ ಆದಲ್ಲಿ ಮುಸ್ಲಿಂ ಸಮುದಾಯದ ಮತಗಳು ಮೂವರಲ್ಲಿ ಹಂಚಿ ಹೋಗ್ಬೋದು.ಅದು ನಿರೀಕ್ಷೆಯಂತಾದ್ರೆ ಸರವಣ ಗೆಲ್ಲುವ ಮೂಲಕ ಬಿಜೆಪಿ ಮತ್ತೊಮ್ಮೆ ಇತಿಹಾಸ ನಿರ್ಮಿಸುವ ಮೂಲಕ ಗತವೈಭವ ಮರುಕಳಿಸಿಕೊಡ್ಬೋದು.ಆದ್ರೆ ಬಿಜೆಪಿಗೂ ಅಂದುಕೊಂಡಷ್ಟು ಎಲ್ಲವೂ ಅನಾಯಾಸವಾಗಿಲ್ಲ.

ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು
ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು

ಟಿಕೆಟ್ ವಂಚಿತ ಕಟ್ಟಾ ಜಗದೀಶ್ ನಾಯ್ಡು

ಸರವಣ ಅಭ್ಯರ್ಥಿಯಾಗಿರುವುದು ಮತ್ತೋರ್ವ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ದು ಅವರ ಪುತ್ರ ಕಟ್ಟಾ ಜಗದೀಶ್ ಗೆ ತೀವ್ರ ಅಸಮಾಧಾನ ಮೂಡಿಸಿದೆ.ಕಳೆದ ಬಾರಿ ತಾನೇ ಸ್ಪರ್ಧಿಸಿ ಸೋತಿದ್ದ ಸುಬ್ರಮಣ್ಯ ನಾಯ್ದು ಈ ಬಾರಿ ಮಗ ಮಾಜಿ ಕಾರ್ಪೊರೇಟರ್ ಕಟ್ಟಾ ಜಗದೀಶ್ ಅವರನ್ನು ಲಾಂಚ್ ಮಾಡುವ ಆಲೋಚನೆಯಲ್ಲಿದ್ದರು ನಾಯ್ಡು.ಇದಕ್ಕಾಗಿ ಅತ್ಯಾಪ್ತ ಸಿಎಂ ಯಡಿಯೂರಪ್ಪ ಅವರ ಮೂಲಕವೂ ಲಾಬಿ ಮಾಡಿದ್ರು.ಆದ್ರೆ ಯಡಿಯೂರಪ್ಪರಿಗೆ ಏನನ್ನಿಸ್ತೋ ಏನೋ ಗೊತ್ತಿಲ್ಲ,ಕೊನೇ ಕ್ಷಣದಲ್ಲಿ ಜಗದೀಶ್ ಹೆಸ್ರು ಬದ್ಲಿಸಿ ಸರವಣ ಅವರಿಗೆ ಟಿಕೆಟ್ ನೀಡಿದ್ದಾರೆ.

ನಂಬಿಸಿ ಮೋಸ ಮಾಡಿದ್ರಲ್ಲ ಎನ್ನೋ ಸಿಟ್ಟಿನಿಂದ ಕಟ್ಟಾ ಫ್ಯಾಮಿಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ರೆ ಮಾತ್ರ ಸರವಣ ಗೆಲ್ಲೋ ಅವಕಾಶವನ್ನು ಕಳ್ಕೋಬೋದು.ಆದ್ರೆ ಹೈಕಮಾಂಡ್ ಆಯಾ ಕ್ಷೇತ್ರದ ನಾಯಕರಿಗೆ ಈಗಾಗ್ಲೇ ಗೆಲುವಿನ ಹೊಣೆಗಾರಿಕೆ ಜತೆ ಸಂಘಟನೆಯ ಜವಾಬ್ದಾರಿಯನ್ನು ನೀಡಿರುವುದರಿಂದ ಕಟ್ಟಾ ಸುಬ್ರಮಣ್ಯ ನಾಯ್ದು ಎಲ್ಲಾ ಅಸಹನೆ-ಅಸಮಾಧಾನ-ಬೇಸರವನ್ನು ಮೂಲೆಗೆ ಬಿಸಾಕಿ ಸರವಣ ಅವರ ಗೆಲುವಿಗೆ ದುಡಿಯಲೇಬೇಕಾದ ಅನಿವಾರ್ಯತೆ ಎದುರಾಗಿದೆ.  ಅದೇನೇ ಆಗಲಿ ನಿರ್ಮಲ್ ಕುಮಾರ್ ಸುರಾನಾ,ಕಟ್ಟಾ ಸುಬ್ರಮಣ್ಯ ನಾಯ್ದು ಅವರಂಥವ್ರು ಮನಸು ಮಾಡಿದ್ರೆ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲೂ ಗೆದ್ದು ತೋರಿಸ್ಬೋದೆನ್ನುವುದನ್ನು ಪ್ರೂವ್ ಮಾಡಿದ್ದ ಇತಿಹಾಸವನ್ನು ಸರವಣ ಮರುಕಳಿಸಿಕೊಡುವ ಉಮೇದಿನಲ್ಲಿದ್ದಾರೆ.ಅದನ್ನು ಸಾಧ್ಯವಾಗಿಸುವುದು ಬಿಡುವುದು ಮುಖಂಡರು ಹಾಗೂ ಕಾರ್ಯಕರ್ತರ ಸಂಘಟನೆ ಹಾಗು ಕಾರ್ಯವೈಖರಿಯನ್ನು ಅವಲಂಭಿಸಿದೆ.

Spread the love
Leave A Reply

Your email address will not be published.

Flash News