“ಲತಾ ಮಂಗೇಶ್ಕರ್ ಆರೋಗ್ಯವಾಗಿದ್ದಾರೆ..ಸುಳ್ ಸುದ್ದಿ ಹಬ್ಬಿಸಬೇಡಿ”

0

ಮುಂಬೈ:ಭಾರತ ಚಿತ್ರರಂಗದ ಅಭಿಜಾತ ಹಾಡುಗಾರ್ತಿ..ಗಾನ ಕೋಗಿಲೆ ಡಾ.ಲತಾ ಮಂಗೇಶ್ಕರ್ ಅವರ ಆರೋಗ್ಯದ ಬಗ್ಗೆ ಎದ್ದಿರುವ ಊಹಾಪೋಹಕ್ಕೆ ಕುಟುಂಬದ ಮೂಲಗಳು ತೀವ್ರ ಬೇಸರ ವ್ಯಕ್ತಪಡಿಸಿ ಸ್ಪಷ್ಟನೆ ನೀಡಿದೆ.ಲತಾ ಮಂಗೇಶ್ಕರ್ ಅಸ್ತಂಗತರಾಗಿದ್ದಾರೆನ್ನುವ ರೀತಿಯ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.ಆದ್ರೆ ಅದೆಲ್ಲಾ ಸತ್ತಕ್ಕೆ ದೂರವಾದಂತವು.ಅವರು ಆರೋಗ್ಯವಾಗಿದ್ದಾರೆ.ಆರೋಗ್ಯದಲ್ಲಿ ಸ್ವಲ್ಪ ಏರುಪೇರುಗಳಾಗಿರುವುದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.ಅವರ ದೇಹಸ್ಥಿತಿ ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದೆ.ಈ ರೀತಿಯ ಊಹಾಪೋಹಗಳನ್ನು ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
90 ವರ್ಷ ವಯಸ್ಸಿನ ಲತಾ ಮಂಗೇಶ್ಕರ್ ವಯೋಸಹಜ ಸಮಸ್ಯೆಯಿಂದ ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಅವರು ಹಾಡುಗಾರ್ತಿಯಾಗಿರುವುದರಿಂದ ಶ್ವಾಸಕೋಶಗಳು ಅತ್ಯದ್ಭುತ ರೀತಿಯಲ್ಲಿ ನಮ್ಮ ಚಿಕಿತ್ಸೆಗೆ ಸ್ಪಂದಿಸುತ್ತಿವೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಉಸಿರಾಟದ ಸಮಸ್ಯೆ ಶೀಘ್ರವೇ ಸರಿಯಾಗಿ ಅವರು ಮನೆಗೆ ಮರಳಲಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಅಂದ್ಹಾಗೆ ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಹಾಡಿರುವ ಲತಾ 2004ರಲ್ಲಿ ತೆರೆ ಕಂಡು ಸೂಪರ್ ಹಿಟ್ ಆದ “ವೀರ್ ಝರಾ”ಚಿತ್ರದಲ್ಲಿ ಕೊನೆಯದಾಗಿ ಹಾಡಿದ್ದಾರೆ.1942ರಲ್ಲಿ ಹಾಡಲು ಪ್ರಾರಂಭಿಸಿದ ಲತಾ.ಮಧುಬಾಲಾರಿಂದ ಹಿಡಿದು ಈವರೆಗಿನ ಕಾಜಲ್ ರಂಥ ಹೊಸ ತಲೆಮಾರಿನ ನಾಯಕಿರಿಗೂ ಹಾಡಿದ್ದಾರೆ.ಅವರ ಆರೋಗ್ಯಸ್ಥಿತಿಯ ಬಗ್ಗೆ ಯಾವುದೇ ರೀತಿಯ ಅನುಮಾನ ಬೇಡ ಎಂದು ಲತಾ ಕುಟುಂಬಸ್ಥರು ಮನವಿ ಮಾಡಿದ್ದಾರೆ.
#Kannadanews #Cinema #Bollywood #Latamangeshkar #supersinger #Veerzara #Madhubaala #Kajol

Spread the love
Leave A Reply

Your email address will not be published.

Flash News