ಕೆ.ಆರ್ ಪುರಂ ಬಿಜೆಪಿ ಅಭ್ಯರ್ಥಿಯಾಗಿ ಭೈರತಿ‌ಬಸವರಾಜ್ ನಾಮಪತ್ರ ಸಲ್ಲಿಕೆ

0

ಬೆಂಗಳೂರು/ಕೆ.ಆರ್ ಪುರಂ:ಬೆಂಗಳೂರಿನ ಪ್ರತಿಷ್ಟಿತ ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಬೈ ಎಲೆಕ್ಷನ್ ನಲ್ಲಿ ಬಿಜೆಪಿ‌ ಅಭ್ಯರ್ಥಿಯಾಗಿ ಕೈ ಪಕ್ಷದ ಅನರ್ಹ ಶಾಸಕ ಭೈರತಿ ಬಸವರಾಜ್ ನಾಮಪತ್ರ ಸಲ್ಲಿಸಿದರು. ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಭೈರತಿ ಬಸವರಾಜ್ ಗೆ ಸಚಿವರಾದ ವಿ. ಸೋಮಣ್ಣ, ಅರವಿಂದ್ ಲಿಂಬಾವಳಿ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಸಾಥ್ ಕೊಟ್ಟರು.

ನಮಗೆ ಗೆಲುವು ಕೇಕ್ ವಾಕ್ ಇದ್ದಂತೆ :
ಇನ್ನು ಕೆ.ಆರ್.ಪುರಂ ಬಿಜೆಪಿಗೆ ಕೇಕ್ ವಾಕ್ ಇದ್ದಂತೆ ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರಬಲ ಇಲ್ಲ. ಜೆಡಿಎಸ್ ಅಸ್ತಿತ್ವ ಇಲ್ಲ.ಕಾಂಗ್ರೆಸ್ ನಾರಾಯಣಸ್ವಾಮಿಗೆ ಕಾರ್ಯಕರ್ತರನ್ನ ಹುಡುಕೋದು ದೊಡ್ಡ ಟಾಸ್ಕ್.ಭೈರತಿ ಬಸವರಾಜ್ ಹಿಂದಿನಿಂದಲೂ ಅಭಿವೃದ್ಧಿ ಕೆಲಸ ಮಾಡಿಕೊಂಡು ಬರ್ತಿದ್ದಾರೆ.50 ಸಾವಿರಕ್ಕೂ ಹೆಚ್ಚು ಲೀಡ್ ನಲ್ಲಿ ಬಸವರಾಜ್ ಗೆಲ್ತಾರೆ.ಬಿಜೆಪಿ ಸರ್ಕಾರದ ಮೇಲೆ ಜನರ ಆಶೀರ್ವಾದ ಇದೆ.ಅಭಿವೃದ್ಧಿ ಅಂದ್ರೆ ಬಸವರಾಜ್, ಬಸವರಾಜ್ ಅಂದ್ರೆ ಅಭಿವೃದ್ಧಿ.ನಮ್ಮ ಮನೆ ದೇವರು ಆಂಜನೇಯ ಆಶೀರ್ವಾದ ಮಾಡ್ತಾರೆ.ಕುಮಾರಸ್ವಾಮಿ, ಸಿದ್ದರಾಮಯ್ಯಗೆ ನಾವು ಗೆಲ್ಲಲ್ಲ ಅಂತ ಕಾನ್ಫಿಡೆನ್ಸ್ ಕಳೆದು ಹೋಗಿದೆ.ಸರ್ಕಾರ ಇದ್ದಾಗ ದಿನಾ ಗಲಾಟೆ ಆಗ್ತಿತ್ತು. ಕುಮಾರಸ್ವಾಮಿ ವಿಷಕಂಠ ಅಂತ ಹೇಳ್ತಾನೆ ಇದ್ದರು. ಸ್ಲೋ‌ ಪಾಯ್ಸನ್ ಕುಡಿಸುತ್ತಿದ್ದರು ಅಂತ ಕುಮಾರಸ್ವಾಮಿ ಹೇಳಿದ್ರು. ಸಿದ್ದರಾಮಯ್ಯ ರೆಸಾರ್ಟ್ ನಲ್ಲಿ ಕುಳಿತು‌ ಸರ್ಕಾರ ಬೀಳಿಸೋಕೆ ಪ್ಲ್ಯಾನ್ ಮಾಡ್ತಿದ್ದರು. ಬೆಂಗಳೂರು ಅಭಿವೃದ್ಧಿಗಾಗಿ ಎಲ್ಲರೂ ಬಿಜೆಪಿ ಸೇರಿದ್ದಾರೆ.ಕಮಲಕ್ಕೆ ಜನ ಮತ ನೀಡಿ ಗೆಲ್ಲಿಸುತ್ತಾರೆ ಎಂದ್ರು.

ಈ ಚುನಾವಣೆ ನಮ್ಮ ಪ್ರತಿಷ್ಟೆ: ಇದೇ ವೇಳೆ ಮಾತನಾಡಿದ ಅಭ್ಯರ್ಥಿ ಭೈರತಿ ಬಸವರಾಜ್, ಈ ಚುನಾವಣೆಯನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದೇನೆ.
ಜನರ ಜೊತೆ ಇದ್ದವನು ನಾನು. ನಾನು ಎಲ್ಲಿ ಓಡಿ ಹೋಗಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಧೈರ್ಯ ಮಾಡಿ ರಾಜೀನಾಮೆ ಕೊಟ್ಟೆ. ಯಡಿಯೂರಪ್ಪ ಸರ್ಕಾರ ಅಭಿವೃದ್ಧಿ ಮಾಡ್ತಿದ್ದಾರೆ. ನನ್ನ ಕ್ಷೇತ್ರದ ಅಭಿವೃದ್ಧಿ ನನಗೆ ಮುಖ್ಯ. ಭೈರತಿ ಬಸವರಾಜ್ ಯಾರು ಅನ್ನೋದನ್ನ ಡಿಸೆಂಬರ್ 5 ಕ್ಕೆ ಜನ ತೀರ್ಮಾನ ಮಾಡ್ತಾರೆ. ಸಿದ್ದರಾಮಯ್ಯ ಅಲ್ಲ ಯಾರೇ ಬರಲಿ ನಾನು ಗೆಲ್ತೀನಿ.ನಾನು ನಂದೀಶ್ ರೆಡ್ಡಿ ಜೋಡೆತ್ತು ತರ ಕೆಲಸ ಮಾಡ್ತೀವಿ.ಗೆಲುವು ನಮ್ಮದೆ‌ ಎಂದ್ರು.

ಬಿಜೆಪಿ ಹೇಳಿದೆ ಗೆಲ್ಲಿಸುತ್ತೇವಷ್ಟೇ..
ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ನಂದೀಶ್ ರೆಡ್ಡಿ,ಪಕ್ಷದ ವರಿಷ್ಠರು ಆದೇಶ ನೀಡಿದ್ದಾರೆ.ಹಾಗಾಗಿ‌ ಭೈರತಿ ಬಸವರಾಜ್ ನಮ್ಮ‌ ಅಭ್ಯರ್ಥಿ.ಬಿಜೆಪಿ ಅರಳಿಸೋದು ನಮ್ಮ ಗುರಿ.ನನಗೆ ಯಾವುದೇ ಅಸಮಾಧಾನ ಇಲ್ಲ.ನನ್ನ ಚುನಾವಣೆಗಿಂತ ಹೆಚ್ಚು ಕೆಲಸ ಮಾಡ್ತೀನಿ.ಯಾರಿಗೂ ಅನುಮಾನ ಬೇಡ.
ಕೆ.ಆರ್.ಪುರಂನಲ್ಲಿ ಕಮಲ ಅರಳಿಸಿ,.ಅಭಿವೃದ್ಧಿ ಪಡಿಸುವುದಷ್ಟೇ ಮಾತ್ರ ನಮ್ಮ ಗುರಿ ಎಂದ್ರು.

ನಂದೀಶ್ ರೆಡ್ಡಿ ಹೊತ್ತು ಕುಣಿಸಿದ ಕಾರ್ಯಕರ್ತರು: ಇದೇ ವೇಳೆ ಮಾಜಿ ಶಾಸಕ ನಂದೀಶ್ ರೆಡ್ಡಿಯನ್ನೂ ಕಾರ್ಯಕರ್ತರು ಹೊತ್ತು‌ ಕುಣಿದಾಡಿದರು.
ನಂದೀಶ್ ರೆಡ್ಡಿ, ಕಳೆದ ಬಾರಿ ವಿಧಾನಸಭೆಯ ಬಿಜೆಪಿ ಪರಾಜಿತ ಅಭ್ಯರ್ಥಿ.ಅವರ ತ್ಯಾಗದಿಂದ ಭೈರತಿಗೆ ಅವಕಾಶ ಸಿಕ್ಕಿದ್ದೆನ್ನುವುದನ್ನು ಮರೆಯಲಾಗದು.

 

 

Spread the love
Leave A Reply

Your email address will not be published.

Flash News