ಯಶವಂತಪುರ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಕೋಟ್ಯಾಧೀಶ-32 ಕೋಟಿ ಸಾಲಗಾರ

0

 

ಬೆಂಗಳೂರು/ಯಶವಂತಪುರ: ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಬೈ ಎಲೆಕ್ಷನ್ ನಲ್ಲಿ  ಜೆಡಿಎಸ್ ನಿಂದ ಅದೃಷ್ಟಪರೀಕ್ಷೆಗೆ ಮುಂದಾಗಿರುವ  ಅಭ್ಯರ್ಥಿ ಜವರಾಯಿ ಗೌಡ 59.30 ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ.ಹಾಗೆಯೇ 32 ಕೋಟಿ ಸಾಲನೂ ಅವರ ಹೆಗಲ ಮೇಲಿದೆ.

ಅಂದ್ಹಾಗೆ ಜವರಾಯಿಗೌಡ ಅವರು  15.93 ಕೋಟಿ ರೂ. ಚರಾಸ್ತಿ ಒಡೆಯ. ಹಾಗೆಯೇ 44.37 ಕೋಟಿ ರೂ.‌ ಸ್ಥಿರಾಸ್ತಿ ಹೊಂದಿದ್ದಾರೆ.ಇನ್ನು ಅವರ ಪತ್ನಿ ಹಾಗೂ ಮಾಜಿ ಕಾರ್ಪೊರೇಟರ್ ಗಾಯತ್ರಿ 8.33 ಕೋಟಿ ರೂ.ಒಡತಿಯಾಗಿದ್ದಾರೆ. ಅವರ ಹೆಸರಿನಲ್ಲಿ 85.56 ಕೋಟಿ ರೂ. ಸ್ಥಿರಾಸ್ತಿಯಿದೆ.

ಅದರ ಜತೆಗೆ ಜವರಾಯಿ ಗೌಡ 32 ಕೋಟಿ ರೂ ಸಾಲಗಾರರೂ ಹೌದು.ಪತ್ನಿ ಹೆಸರಲ್ಲಿ ಒಟ್ಟು 28.18 ಕೋಟಿ ರೂ. ಸಾಲ ಇದೆ ಎಂದು ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಘೋಷಿಸಿಕೊಂಡಿದ್ದಾರೆ.ಕಳೆದ ಚುನಾವಣೆಯಲ್ಲಿ ಕೂದಲೆಳೆ ಅಂತರದಲ್ಲಿ ಸೋಮಶೇಖರ್ ಎದುರು ಜವರಾಯಿಗೌಡ ಸೋಲು ಕಂಡಿದ್ದರು.

 

 

Spread the love
Leave A Reply

Your email address will not be published.

Flash News