ಸುಪ್ರಿಂಕೋರ್ಟ್ ಗೆ ಹೊಸ ಸಾರಥಿ: ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಅರವಿಂದ್ ಬೊಬ್ಡೆ ಅಧಿಕಾರ ಸ್ವೀಕಾರ

0

ನವದೆಹಲಿ:ಸುಪ್ರಿಂ ಕೋರ್ಟ್ ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಎಸ್ ಎ ಬೊಬ್ಡೆ ನೇಮಕಗೊಂಡಿದ್ದಾರೆ.ಶರದ್ ಅವರವಿಂದ್ ಬೊಬ್ಡೆ ಸುಪ್ರಿಂ ಕೋರ್ಟ್ ನ   47ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಬೊಬ್ಡೆ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.ಈಗಾಗ್ಲೇ ನ್ಯಾಯಾಂಗದ ಅನೇಕ ಮಹತ್ವದ ಸ್ಥಾನಗಳಲ್ಲಿ ಕೆಲಸ ಮಾಡಿರುವ ಬೊಬ್ಡೆ ಅವರು ಐತಿಹಾಸಿಕ ತೀರ್ಪುಗಳಿಗೂ ಕಾರಣರಾಗಿದ್ದಾರೆ.ಅವರ ಕಾನೂನು ಪಾಂಡಿತ್ಯ,ಜೇಷ್ಠತೆ ಹಾಗೂ ಅನುಭವವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಬೊಬ್ಡೆ ಅವರನ್ನು ಸುಪ್ರಿಂ ಕೋರ್ಟ್ ನ 47ನೇ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿದೆ.ಬೊಬ್ಡೆ ಅವರ ಮುಂದೆ ಅನೇಕ ಐತಿಹಾಸಿಕ ಹಾಗೂ ನಿರ್ಣಾಯಕ ಎನ್ನುವಂಥ ಪ್ರಕರಣಗಳು ವಿಚಾರಣೆಗೆ ಬರಲಿದ್ದು ಸ್ಥಿತಪ್ರಜ್ಞೆಯಿಂದ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಅಂದ್ಹಾಗೆ ಅಯೋಧ್ಯೆ ರಾಮಮಂದಿರ ತೀರ್ಪಿನಂಥ ಐತಿಹಾಸಿಕ ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನಿವೃತ್ತಿಯಿಂದ ಮಹತ್ವದ ಸ್ಥಾನವನ್ನು ತುಂಬಿರುವ 63 ವರ್ಷ ವಯಸ್ಸಿನ ಬೊಬ್ಡೆ ಅವರು ಅಯೋಧ್ಯೆ ತೀರ್ಪು ನೀಡಿದ ನ್ಯಾಯಾಧೀಶರ ಪೀಠದಲ್ಲಿಯೂ ಇದ್ದರು.ಬೊಬ್ಡೆ ಅವರ ಮುಂದೆ ಹಲವು ಸವಾಲುಗಳು ಕೂಡ ಇವೆ.ಅದರಲ್ಲಿ ಪ್ರಮುಖವಾಗಿ ದೇಶಾದ್ಯಂತ ಕೋರ್ಟ್ ಗಳಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆ ತುಂಬುವಂಥ ಅತ್ಯಂತ ಕಠಿಣ ಸವಾಲಿದೆ.ನ್ಯಾಯಾಂಗದ ಬಗ್ಗೆ ಜನರಲ್ಲಿ ಕಳೆದೋಗುತ್ತಿರುವ ನಂಬಿಕೆಯನ್ನು ಮತ್ತೆ ಎತ್ತಿಹಿಡಿಯುವಲ್ಲಿ ಇಡೀ ವ್ಯವಸ್ಥೆಗೆ ಸಾಣೆ ಹಿಡಿಯುವ ಗುರುತರ ಹೊಣೆಗಾರಿಕೆ ಇದೆ.

ಮಧ್ಯ ಪ್ರದೇಶ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ  ಅರವಿಂದ್ ಬೊಬ್ಡೆ  ಮೂಲತಃ ಮಹಾರಾಷ್ಟ್ರದವರು.ಅವರ ಕುಟುಂಬದ ಹಿನ್ನಲೆ ಸಂಪೂರ್ಣ ನ್ಯಾಯಾಧೀಶರದ್ದು. 1965 ರಲ್ಲಿ ಜನಿಸಿದ ಬೊಬ್ಡೆ ನಾಗ್ಪುರದ ಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಅನೇಕ ಕಾಲೇಜುಗಳಲ್ಲಿ ಉಪನ್ಯಾಸಕರಾಗಿಯೂ ಕೆಲಸ ಮಾಡುತ್ತಾರೆ.ಮುಂಬೈ ಹೈಕೋರ್ಟ್ ನಲ್ಲಿ ತಮ್ಮ ವಕೀಲವೃತ್ತಿ ಆರಂಭಿಸ್ತಾರೆ.1998ರಲ್ಲಿ ಸುಪ್ರಿಂ ಕೋರ್ಟ್ ನ  ಹಿರಿಯ ವಕೀಲರಾಗಿ ಮುಂಭಡ್ತಿ ಪಡೆಯುತ್ತಾರೆ.

20004 ಮಾರ್ಚ್ ನಲ್ಲಿ ಮುಂಬೈ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಪದೋನ್ನತಿ ಹೊಂದಿ 2012ರಲ್ಲಿ ಮಧ್ಯಪ್ರದೇಶ ನ್ಯಾಯಮೂರ್ತಿಗಳಾಗಿ ನಿಯೋಜನೆಗೊಳ್ಳುತ್ತಾರೆ.2013ರಲ್ಲಿ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಳ್ಳುತ್ತಾರೆ.

ಬೊಬ್ಡೆ ಅವರು ಹತ್ತಲವು ಐತಿಹಾಸಿಕ ನ್ಯಾಯಾಂಗದ ತೀರ್ಪುಗಳು ಹೊರಬರುವುದಕ್ಕೆ ಕಾರಣರಾದವರು ಅವುಗಳಲ್ಲಿ ಕೆಲವು ಹೆಸರಿಸಬಹುದಾದ ತೀರ್ಪು ಗಳೆಂದ್ರೆ ಆಧಾರ್ ಕಾರ್ಡ್ ವಿಷಯದಲ್ಲಿ ಐತಿಹಾಸಿಕ ತೀರ್ಪು ಕೊಟ್ಟ ಮೂವರು ನ್ಯಾಯಮೂರ್ತಿಗಳ ಪೀಠದಲ್ಲಿ ಇವರಿದ್ದರು.ಮಾತೆ ಮಹಾದೇವಿ ಅವರು ಬಸವಣ್ಣನ ವಿಚಾರದಲ್ಲಿ ಕೋರ್ಟ್ ಮಟ್ಟದಲ್ಲಿ ತೆಗೆದುಕೊಂಡು ಹೋದ ಅತ್ಯಂತ ಧರ್ಮ ಸೂಕ್ಷ್ಮವಾದ ವಿಷಯವನ್ನು ಬಗೆಹರಿಸಿದ ಪೀಠದ ಭಾಗವಾಗಿದ್ದರು.ವಾಯುಮಾಲಿನ್ಯಕ್ಕೆ ಕಾರಣವಾಗುವ ಪಟಾಕಿಗಳನ್ನು ಬ್ಯಾನ್ ಮಾಡಬೇಕೆನ್ನುವ ತೀರ್ಪು ನೀಡಿದ ಮೂವರು ನ್ಯಾಯಮೂರ್ತಿಗಳ ಪೀಠದಲ್ಲಿಯೂ ಅರವಿಂದ್ ಬೊಬ್ಡೆ ಇದ್ದರೆನ್ನುವುದು ಗಮನಾರ್ಹ. 

Spread the love
Leave A Reply

Your email address will not be published.

Flash News