ಪ್ರಚಾರಕ್ಕೂ ಮುನ್ನ ಸಿದ್ದಗಂಗಾ ಮಠಕ್ಕೆ ಶರತ್ ಬಚ್ಚೇಗೌಡ ಭೇಟಿ

0

ಬೆಂಗಳೂರು/ಹೊಸಕೋಟೆ/ತುಮಕೂರು:ಬಿಜೆಪಿ ಪಕ್ಷದ ತೀವ್ರ ವಿರೋಧದ ನಡುವೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶರತ್ ಬಚ್ಚೇಗೌಡ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

ತುಂಬಾ ಒತ್ತಡದಲ್ಲಿದ್ದಂತೆ ಕಂಡರೂ ಅದನ್ನು ಬಹಿರಂಗವಾಗಿ ತೋರಿಸಿಕೊಳ್ಳದೆ ಸ್ಥಿತಪ್ರಜ್ಞರಂತೆ ಕಾಣಿಸಿಕೊಳ್ಳುತ್ತಿರುವ ಶರತ್ ಬಚ್ಚೇಗೌಡ ತಮ್ಮ ಪ್ರಚಾರ ಆರಂಭದ ಮುನ್ನ ಟೆಂಪಲ್ ರನ್ ಶುರು ಮಾಡಿದ್ದಾರೆ.

ಇದರ ಮೊದಲ ಭಾಗ ಎನ್ನುವಂತೆ ತುಮಕೂರಿನ‌ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು. ಲಿಂಗೈಕ್ಯ ದಾಸೋಹಿ ಶಿವಕುಮಾರ ಮಹಾ ಸ್ವಾಮೀಜಿಯ ಗದ್ದುಗೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ದಲಿಂಗಾ ಮಹಾ ಸ್ವಾಮೀಜೀ ರವರ ಆಶೀವಾ೯ದ ಪಡೆದ ಶರತ್ ತಮ್ಮ ಗೆಲುವಿಗೆ ಆಶೀರ್ವದಿಸುವಂತೆ ಕೇಳಿಕೊಂಡರು.

#Kannadaflashnews #Kannadanews #Political #Karnatakabyelection2019 #Hosakote #SharatBachchegowda #tumkur #SiddagangaMut #SiddalingaseerBlessings

Spread the love
Leave A Reply

Your email address will not be published.

Flash News