“ಕಾರ್ ಕೊಳ್ಳಲಿಕ್ಕಾಗುತ್ತೆ..ಟ್ಯಾಕ್ಸ್ ಕಟ್ಟಕ್ಕೆ ಆಗೊಲ್ಲ‌ ಅಂದ್ರೇಗೆ..”

0

ಬೆಂಗಳೂರು: ಐಷಾರಾಮಿ‌ ಕಾರು ಖರೀದಿಸಿಯೂ ಟ್ಯಾಕ್ಸ್ ಕಟ್ಟದೆ ಕಳ್ಳಾಟ ಆಡ್ಕಂಡು ಓಡಾಡೋರಿಗೆ ಈ ಸ್ಟೋರಿ ಸರಿಯಾದ ಪಾಠ..ಏಕಂದ್ರೆ ಇಲ್ಲೋರ್ವ ಮಾಲೀಕ ಕಾರನ್ನು ಖರೀದಿಸಿ ಅದರ ರಿಜಿಸ್ಟ್ರೇಷನ್ ಗೆ ತಗಲೋ ಹಣ‌ ಕಟ್ಟಲಾಗದೆ ನಕಲಿ ನಂಬರ್ ಗಳನ್ನು ಹಾಕ್ಕೊಂಡು ಅಡ್ಡಾಡುವಾಗ ಆರ್ ಟಿಓ ದವರಿಗೆ ತಗ್ಲಾಕೊಂಡಿದ್ದಾನೆ.ಅದು ಒಂದಲ್ಲಾ ಎರಡಲ್ಲ ಬರೋಬ್ಬರಿ ಏಳು ವರ್ಷಗಳಿಂದ.

ರಾಜುಗೌಡ ಎಂಬಾತ ಎರಡು ದುಬಾರಿ ಮೊತ್ತದ ಬೆನ್ಜ್ ಕಾರುಗಳನ್ನು ಖರೀದಿಸಿದ್ದ.ರಿಜಿಸ್ಟ್ರೇಷನ್ ಗೆ ಆರ್ ಟಿಓ ದವ್ರು ಕೇಳಿದ ಮೊತ್ತಕ್ಕೆ ಬೆಚ್ಚಿದ್ದಾನೆ.ಅದನ್ನು ಕಾನೂನಾತ್ಮಕವಾಗಿ ಸರಿಪಡಿಸಿಕೊಂಡಿದಿದ್ರೆ ಸಮಸ್ಯೆ ಆಗ್ತನೇ ಇರ್ಲಿಲ್ಲ.

ಈ ಭೂಪ ಎಂಥಾ ಮನೆ ಹಾಳ್ ಐಡ್ಯಾ ಮಾಡಿದ್ದಾನೆ ಗೊತ್ತಾ..77 ಲಕ್ಷ ಬೆಲೆಬಾಳುವ ಎರಡು ಕಾರುಗಳಿಗೂ KA 05 MW 6201 ಎಂದು ನಕಲಿ ನಂಬರ್ ಪ್ಲೇಟ್ ಹಾಕಿ ಚಲಾಯಿಸುತ್ತಿದ್ದ. ಯಾರಿಗೂ ಅನುಮಾನ ಬಾರದಂತೆ ಕಳೆದ 7 ವರ್ಷಗಳಿಂದ ತೆರಿಗೆ ಕಟ್ಟದೆ ತಪ್ಪಿಸಿಕೊಂಡಿದ್ದ.

2013 ರಲ್ಲಿ ಡೌನ್ ಪೇಮೆಂಟ್ ಮೂಲಕ ಕಾರು ಖರೀದಿಸಿ ಟ್ಯಾಕ್ಸ್ ಕಟ್ಟಲು ಮನಸಾಗದೆ ನಕಲಿ ನಂಬರ್ ಪ್ಲೇಟ್ ಬಳಸಿದ್ದ ರಾಜು,77 ಲಕ್ಷ ಮೌಲ್ಯದ ಕಾರಿಗೆ 16 ಲಕ್ಷ ರೋಡ್ ಟ್ಯಾಕ್ಸ್ ಕಟ್ಟಲಾಗದೆ ತೆರಿಗೆ ವಂಚಿಸಿದ್ದ.

ಆದ್ರೆ ಕಳ್ಳ ಯಾವತ್ತಿದ್ರೂ ಸಿಕ್ಕ ಬೀಳಬೇಕು ಎನ್ನುವಂತೆ ಸಾರ್ವಜನಿಕರು ದೂರು ನೀಡಿದ ಹಿನ್ನಲೆಯಲ್ಲಿ,ಯಶವಂತಪುರ RTO ಅಧಿಕಾರಿಗಳು ಕಾರನ್ನು ವಶಕ್ಕೆ ಪಡೆದು ರಾಜು ಅವ್ರ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ.

#KannadaFlashNews #Kannadanews #Crime #RTO #DuplicateNumberPlate #LuxuriousBenzCars #TaxFraud #Raju #YeshavanthpuraRTO #Seize

Spread the love
Leave A Reply

Your email address will not be published.

Flash News