ನಾಳೆ ಆಕ್ಷನ್ ಪ್ರಿನ್ಸ್ ಧೃವಸರ್ಜಾ-ಪ್ರೇರಣಾ ಮದುವೆ

0

ಬೆಂಗಳೂರು: ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧೃವಸರ್ಜಾ ಹಾಗೂ ಬಾಲ್ಯದ ಗೆಳತಿ ಪ್ರೇರಣಾ ಮದುವೆ ಜೆ.ಪಿ ನಗರದ ನಟರಾಜ ಬಡಾವಣೆಯ ಸಂಸ್ಕೃತಿ ಬೃಂದಾವನ ಕನ್ವೆನ್ಸನ್ ಹಾಲ್ ನಲ್ಲಿ ನಡೆಯಲಿದೆ.ವೃಶ್ಚಿಕ ಲಗ್ನದಲ್ಲಿ ಬೆಳಗ್ಗೆ 7.15ಕ್ಕೆ ನಡೆಯಲಿರುವ ಮುಹೂರ್ತದಲ್ಲಿ ಧೃವಸರ್ಜಾ ತನ್ನ ದಶಕಗಳ ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳಿ ಪ್ರೇರಣಾ ಜತೆಗೆ ಜಂಟಿಯಾಗಲಿದ್ದಾರೆ.

ಮದುವೆ ಹಿನ್ನಲೆಯಲ್ಲಿ ಭರ್ಜರಿ ಹುಡುಗನ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.ಈಗಾಗ್ಲೇ ಅರಿಶಿಣ ಶಾಸ್ತ್ರ ಕೂಡ ಆರಂಭವಾಗಿದ್ದು ಚಿತ್ರರಂಗದ ಅನೇಕ ತಾರೆಯರು ಅರಿಶಿಣ ಮುಹೂರ್ತದಲ್ಲಿ ಪಾಲ್ಗೊಂಡು ವಧೂವರರಿಗೆ ಅರಿಶಿಣ ಹಚ್ಚುವ  ಮೂಲಕ  ಶುಭಾಷಯ ಕೋರುತ್ತಿದ್ದಾರೆ.

 

ಮದುವೆ ಸಮಾರಂಭದ ಸಂಪೂರ್ಣ ಉಸ್ತುವಾರಿಯನ್ನು ಅವರ ಗಾಡ್ ಫಾದರ್ ಹಾಗೂ ಸರ್ವವೂ ಆಗಿರುವ ಅರ್ಜುನ್ ಸರ್ಜಾ ನೋಡಿಕೊಳ್ಳುತ್ತಿದ್ದು ಇಡೀ ಸ್ಯಾಂಡಲ್ ವುಡ್  ನಾಳೆಯ ಸಮಾರಂಭದಲ್ಲಿ ಪಾಲ್ಗೊಳ್ಳಲಿದೆ.

 

 

Spread the love
Leave A Reply

Your email address will not be published.

Flash News