ಎಸ್ಟಿಎಸ್ ಗೆ ತಾಕತ್ತಿದ್ರೆ ನೇರ ಬಂದು ಆರೋಪ ಮಾಡ್ಲಿ;ಎಚ್ಡಿಕೆ ಗುಟುರು

0

ಬೆಂಗಳೂರು/ಯಶವಂಪುರ: ಮೈತ್ರಿ ಸರ್ಕಾರವಿದ್ದಾಗ ನಯಾಪೈಸೆ ಅನುದಾನ ಕೊಡ್ಲಿಕ್ಕೆ ಕ್ಷೇತ್ರಕ್ಕೆ ಎಂದು ಮಾಡ್ತಿರುವ ಆರೋಪದ ಬಗ್ಗೆ ಕೆಂಡಾಮಂಡಲವಾಗಿರುವ ಕುಮಾರಸ್ವಾಮಿ,ತಾಕತ್ತಿದ್ದರೆ ಆ ಮಾತನ್ನು ಸೋಮಶೇಖರ್ ನನ್ನ ಎದುರಿಗೆ ಹೇಳಲಿ ಎಂದು ಸವಾಲು ಹಾಕಿದ್ದಾರೆ.

ರಾಜ್ಯದ 15 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆಯ ಕಾವು ದಿನೇ ದಿನೇ ಏರುತ್ತಲೇ ಇದೆ.ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಯಶವಂತಪುರ ಕ್ಷೇತ್ರದಲ್ಲೂ ಮತಬೇಟೆ ಬಿರುಸಿನಿಂದ್ಲೇ ಸಾಗಿದೆ.ಈ ನಡುವೆ ಮೈತ್ರಿ ಸರ್ಕಾರದ ಅಳಿವಿಗೆ ಕಾರಣವಾದ ಅತೃಪ್ತರನ್ನು ಸೋಲಿಸ್ಲಿಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಣ ತೊಟ್ಟಂತೆ ಕಾರ್ಯತಂತ್ರ ರೂಪಿಸಿವೆ.ಈ ನಡುವೆ ಯಶವಂತಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೈ ಅನರ್ಹ ಶಾಸಕ ಎಸ್.ಟಿ ಸೋಮಶೇಖರ್ ಮಾಡುತ್ತಿರುವ ಆಪಾದನೆ  ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರನ್ನು ತೀವ್ರ ಆಕ್ರೋಶಕ್ಕೀಡುಮಾಡಿದೆ.ಮೈತ್ರಿ ಸರ್ಕಾರವಿದ್ದಾಗ ನಯಾಪೈಸೆ ಅನುದಾನ ಕೊಡ್ಲಿಕ್ಕೆ ಕ್ಷೇತ್ರಕ್ಕೆ ಎಂದು ಮಾಡ್ತಿರುವ ಆರೋಪದ ಬಗ್ಗೆ ಕೆಂಡಾಮಂಡಲವಾಗಿರುವ ಕುಮಾರಸ್ವಾಮಿ,ತಾಕತ್ತಿದ್ದರೆ ಆ ಮಾತನ್ನು ಸೋಮಶೇಖರ್ ನನ್ನ ಎದುರಿಗೆ ಹೇಳಲಿ ಎಂದು ಸವಾಲು ಹಾಕಿದ್ದಾರೆ.

ನಾನು ಸಿಎಂ ಆಗಿದ್ದಾಗ, ಹಣ ಬಿಡುಗಡೆ ಮಾಡಿಲ್ಲ ಅಂತ ಹೇಳ್ತಿರೋದು ಸರಿಯಲ್ಲ,ಅವರು ಜನರನ್ನ ದಿಕ್ಕು ತಪ್ಪಿಸೋ ಕೆಲ್ಸ ಮಾಡುತ್ತಿದ್ದಾರೆ.ಹಾಗಾದ್ರೆ ಯಶವಂತಪುರಕ್ಕೆ ಬಿಡುಗಡೆ ಮಾಡಿದ 404 ಕೋಟಿ ಅನುದಾನ ಯಾವುದು ಎನ್ನುವುದನ್ನು ಸೋಮಶೇಖರ್ ಸ್ಪಷ್ಟಪಡಿಸಲಿ,ಕೇವಲ ಬಾಯಿಚಪಲಕ್ಕೆ  ಆರೋಪ ಮಾಡೋದ್ ಒಳ್ಳೇದಲ್ಲ.ಮೊದಲು ಸೋಮಶೇಖರ್ ಹುಡುಗಾಟಿಕೆಯನ್ನ ಬಿಡಬೇಕು ಎಂದು ಕೆಂಡಕಾರಿದ್ದಾರೆ.

ಅದೇ ರೀತಿ ತಮ್ಮನ್ನು ಹೊಟೇಲ್ ಸಿಎಂ ಎಂದು ಕಟಕಿಯಾಡಿರುವ ಸೋಮಶೇಖರ್ ಮಾತಿಗೂ ಕುಮಾರಸ್ವಾಮಿ ಆಕ್ರೋಶಗೊಂಡಿದ್ದಾರೆ. ನಾನು 24 ಗಂಟೆ ಹೊಟೇಲ್ ನಲ್ಲಿ ಇದ್ದಿದ್ದೇ ಆಗಿದ್ದರೆ ರಾಜ್ಯದ ಅಭಿವೃದ್ಧಿ ಆಗ್ತಿತ್ತಾ, ಕೃಷ್ಣದಲ್ಲಿ ನಾನು ಎಲ್ಲರ ಶಾಸಕರಿಗೂ ಸಿಗ್ತಿದ್ನಲ್ಲ.ಸೋಮಶೇಖರ್ ಗೂ ಎಷ್ಟೋ ಬಾರಿ ಅಲ್ಲಿಯೇ ಸಿಕ್ಕಿದ್ದೆನಲ್ಲ.ತನ್ನ ವಿರುದ್ದ ಹೇಳಿಕೆ ಕೊಡುವ ಮೂಲಕ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸ್ಬೋದು ಎಂದು ಸೋಮಶೇಖರ್ ತಿಳ್ಕೊಂಡಿದ್ರೆ ಅದು ಮೂರ್ಖತನ. ಜನ ಮುಟ್ಟಿ ನೋಡಿಕೊಳ್ಳುವಂಥ ತೀರ್ಪು ನೀಡಲಿದ್ದಾರೆ ನೋಡಿ ಎಂದು ಸವಾಲು ಹಾಕಿದ್ದಾರೆ.

 

 

Spread the love
Leave A Reply

Your email address will not be published.

Flash News