ಪೊಲೀಸ್ರೇ ಬೈಕ್ ಕದ್ರಾ..?!

0

ಬೆಂಗಳೂರು:ಏನ್ರಿ… ವ್ಯವಸ್ಥೆ ಹೀಗಾದ್ರೆ ಹೇಗ್ರಿ..ಬೇಲಿನೇ ಎದ್ದು ಹೊಲ ಮೇಯ್ದರೆ ಹೇಗೆ..ರಕ್ಷಿಸಬೇಕಾದವ್ರೇ ಭಕ್ಷಕರಾದ್ರೆ ಹೇಗೆ..

ಬೆಂಗಳೂರಿನಲ್ಲಿ ನಡೆದಿರುವ ಈ ಅಘಾತಕಾರಿ ಘಟನೆ ಇಷ್ಟೆಲ್ಲಾ ಅನುಮಾನ ಸೃಷ್ಟಿಸಿದೆ.ಬೈಕ್ ಗಳು ಕಳ್ಳತನವಾಗ್ತಿರೋ ದೂರುಗಳು ವ್ಯಾಪಕವಾಗ್ತಿರುವ ಹಿನ್ನಲೆಯಲ್ಲಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ರಾತ್ರಿ ಗಸ್ತನ್ನು ಹೆಚ್ಚಿಸಿದ್ದಾರೆ.ಅಷ್ಟೇ ಅಲ್ಲ ನಿದ್ದೆಗೆಟ್ಟು ಬೆಂಗಳೂರನ್ನು ಸುತ್ತುವಂತೆಯೂ ಸೂಚಿಸಿದ್ದಾರೆ.

ಇಷ್ಟ್ ದಿನ ರಾತ್ರಿ ಗಸ್ತು ತಿರುಗೋ ಪೊಲೀಸ್ರು ನಮ್ ವೆಹಿಕಲ್ಸ್ ರಕ್ಷಿಸ್ತಾರೆ ಅಂದುಕೊಂಡಿದ್ದ ಬೆಂಗಳೂರಿಗೆ ಇಬ್ರು ನಾಲಾಯಕ್ ಪೊಲೀಸ್ರು ಮಾಡಿದ ಹೀನಕೃತ್ಯದಿಂದ ಶಾಕ್ ಆಗಿದೆ.ಅಷ್ಟೇ ಅಲ್ಲ. ಪೊಲೀಸ್ ವ್ಯವಸ್ಥೆ ಬಗ್ಗೇನೇ ನಂಬಿಕೆ ಕಳೆದು ಹೋಗುವಂತೆ ಮಾಡಿದೆ.

ರಾಜಾಜಿನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನ ಇಬ್ರು ನೈಟ್ ರೌಂಡ್ಸ್ ನಲ್ಲಿದ್ದ ಪೊಲೀಸ್ರೇ ಕಳವು ಮಾಡಿದ್ದಾರೆ.ಸಿಸಿಟಿವಿಯಲ್ಲಿ ಈ‌ ದೃಶ್ಯಗಳು ಸೆರೆಯಾಗಿವೆ.

ಕಾಂಪೌಂಡ್ ಒಳಗಿದ್ದ ಬೈಕನ್ನು ಇಬ್ಬರು ಪೊಲೀಸರು ಹೊರಗೆ ಕೊಂಡೊಯ್ಯುತ್ತಿರುವ ದೃಶ್ಯಗಳು ಸೆರೆಯಾಗಿದ್ದು ಬೈಕ್ ಮಾಲೀಕ, ಸಿಸಿಟಿವಿ ಪರಿಶೀಲನೆ ಮಾಡಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

ಅದಿಷ್ಟೇ ಆಗಿಲ್ಲ, ಈ ಚಾಲಾಕಿಗಳು,ಪೊಲೀಸ್ ಠಾಣೆಗೆ ದೂರು ಕೊಡಲು ಹೋದ ವೇಳೆ ಮಾಲೀಕನಿಂದ 300 ರೂಪಾಯಿ ಪಡೆದು ಬೈಕ್ ಬಿಟ್ಟು ಕಳಸಿದ್ರೆನ್ನಲಾಗಿದೆ.

ಆದ್ರೆ ಪೊಲೀಸ್ರು ಹೇಳೋದೇ ಬೇರೆ..ಕಳ್ಳತನ ಮಾಡಿರೋದನ್ನು ಒಪ್ಪಿಕೊಳ್ಳದ ಪೊಲೀಸರು ಇದಕ್ಕೆ ಬೇರೆಯದೆ ಕಾರಣ ಕೊಡ್ತಾರೆ.ಅವರ ಪ್ರಕಾರ, ನೈಟ್ ಬೀಟ್ ನಲ್ಲಿದ್ದ ವೇಳೆ ಬೈಕ್ ರಸ್ತೆ ಯಲ್ಲೇ ಇತ್ತಂತೆ ಹತ್ತಿರ ಹೋಗಿ ನೋಡಿದ ವೇಳೆ ಕೀ, ಬೈಕ್ ನಲ್ಲಿರೋದು ಬೆಳಕಿಗೆ ಬಂದಿದೆ. ಬುದ್ದಿ ಕಲಿಸಲು ಅದಕ್ಕೆ ಬೈಕ್ ತಗೊಂಡು ಹೋದ್ರಂತೆ.

ಆದ್ರೆ ಕಾಂಪೌಂಡ್ ಹೊರಗೆ ಇದ್ದ ಬೈಕನ್ನು‌ಹೀಗೆ ಕೊಂಡೊಯ್ದಿದ್ದರೆ ಸಮಸ್ಯೆ ಇರ್ತಿರಲಿಲ್ಲ.ಆದ್ರೆ ಕೊಂಡೊಯ್ದದ್ದು ಕಾಂಪೌಂಡ್ ಒಳಗೆ ನಿಲ್ಲಿಸಿದ್ದು ಅಲ್ವೇ ಎಂದು ಕೇಳಿದ್ರೆ ಅದಕ್ಕೆ ಉತ್ತರವೇ ಇಲ್ಲ. ಎನಿವೇ ಈ ಬಗ್ಗೆ ಪೊಲೀಸ್ ಕಮಿಷನರ್ ಭಾಸ್ಕರ ರಾವ್ ಒಂದು ತನಿಖೆ ನಡೆಸಿ‌ ಸತ್ಯಾಂಶ ಬಹಿರಂಗಗೊಳಿಸಬೇಕಿದೆ.

#KannadaFlashNews #KannadaNews #CRIME #BikeTheftByPolice #NightRounds #Raajaajinagar #policeCommissinor #BhaskarRao

Spread the love
Leave A Reply

Your email address will not be published.

Flash News