ಆಕ್ಷನ್ ಪ್ರಿನ್ಸ್ ವಿವಾಹಕ್ಕೆ ಸಾಕ್ಷಿಯಾದ ಸ್ಯಾಂಡಲ್ ವುಡ್

0

ಬೆಂಗಳೂರು: ಸ್ಯಾಂಡಲ್ ವುಡ್ ನ  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ತಮ್ಮ ಬಹುಕಾಲದ ಗೆಳತಿ ಪ್ರೇರಣಾ ಶಂಕರ್ ಜತೆ ವಿವಾಹ ಬಂಧನದಲ್ಲಿ ಒಂದಾಗಿದ್ದಾರೆ.ಜೆಪಿ ನಗರದ  ಸಂಸ್ಕ್ರತಿ ಕನ್ವೆನ್ಷನ್ ಹಾಲ್ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ  ಸಪ್ತಪದಿ ತುಳಿದ ಜೋಡಿಗೆ ಇಡೀ ಚಂದನವನವೇ ಶುಭ ಹಾರೈಸಿತು.ಚಿತ್ರರಂಗದ ಬಹುತೇಕ ತಾರೆಯರು ಸಮಾರಂಭದಲ್ಲಿ ಹಾಜರಿದ್ದು ನೂತನ ಜೋಡಿಯ ದಾಂಪತ್ಯ ಜೀವನ ಹಾಲು ಜೇನಿನಂತಿರಲಿ ಎಂದು ಮನಪೂರ್ತಿ ಹಾರೈಸಿದರು.

ಅಂದ್ಹಾಗೆ ಬಹುತೇಕ ಜನರಿಗೆ ಗೊತ್ತಿರಲಿಕ್ಕಿಲ್ಲ,ಪ್ರೇರಣಾ ಹಾಗೂ ಧ್ರುವ ಸರ್ಜಾ ಜೋಡಿಯ ಪ್ರೀತಿಗೆ 16 ವರ್ಷಗಳಷ್ಟು ಸುಧೀರ್ಘ ಇತಿಹಾಸವಿದೆ.ಬಾಲ್ಯದಿಂದ್ಲೂ ಪ್ರೇರಣಾ ಮೇಲೆ ಒಲವನ್ನು ಮೂಡಿಸಿಕೊಂಡು ಬಂದಿದ್ದ ಧ್ರುವ ಸರ್ಜಾ ಚಿತ್ರರಂಗದಲ್ಲಿ ಒಂದರ ಮೇಲೊಂದು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟು ಯಶಸ್ವಿ ನಟನಾಗಿ ಬೆಳುದ್ರೂ ಬಾಲ್ಯದ ಗೆಳತಿಯನ್ನು ಮರೆಯಲಿಲ್ಲ.ಬದಲಿಗೆ ಅವರಿಬ್ಬರ ಪ್ರೀತಿ ಮತ್ತಷ್ಟು ಗಟ್ಟಿಯಾಗುತ್ತಲೇ ಇತ್ತು.

ಮದುವೆ ನಡೆದ ದಿನದ ಸಂಜೆಯೇ ಆರತಕ್ಷತೆ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ, ರಾಧಿಕಾ ಪಂಡಿತ್ ಸೇರಿದಂತೆ ಹಲವು ತಾರೆಯರ ಮದುವೆ ಉಡುಪು ಸಿದ್ಧಪಡಿಸಿರುವ ಭಾರತದ ಹೆಸರಾಂತ ಡಿಸೈನರ್ ಸಬ್ಯಸಾಚಿ ಅವರ ಬಾಟಲ್ ಗ್ರೀನ್ ಲೆಹೆಂಗಾದಲ್ಲಿ ಪ್ರೇರಣಾ ಮಿಂಚುತ್ಥಿದ್ದರೆ, ಇಟಲಿಯಿಂದ ತರಿಸಲಾಗಿದ್ದ ಪರೇಶ್ ಲಾಂಬಾ ಡಿಸೈನಿಂಗ್ ಸೂಟ್ ಅನ್ನು ಧ್ರುವ ಸರ್ಜಾ ಧರಿಸಿದ್ದರು. ಇನ್ನು ನಿರೀಕ್ಷಿಸಿದಂತೆಯೇ ಹಲವಾರು ಸ್ಯಾಂಡಲ್ವುಡ್ ತಾರೆಯರು ರಿಸೆಪ್ಷನ್ನಲ್ಲಿ ಭಾಗಿಯಾಗಿದ್ರು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಶಿವರಾಜಕುಮಾರ್, ಕಿಚ್ಚ ಸುದೀಪ್ ,ಹಿರಿಯ ನಟಿ ಸಂಸದೆ ಸುಮಲತಾ ಅಂಬರೀಶ್, ರಾಕಿಂಗ್ ಸ್ಟಾರ್ ಯಶ್, ರಾಘವೇಂದ್ರ ರಾಜ್ ಕುಮಾರ್, ಗಣೇಶ್, ರಮೇಶ್ ಅರವಿಂದ್, ಶರಣ್, ಧನಂಜಯ, ಸೃಜನ್, ಶ್ರೀಮುರಳಿ, ಹಂಸಲೇಖ ದಂಪತಿ ಸೇರಿದಂತೆ ಕಂದಾಯ ಸಚಿವ ಆರ್.ಅಶೋಕ್, ಮಾಜಿ ಶಾಸಕ ಮುನಿರತ್ನ ಹಾಗೂ ಹಲವಾರು ಸೆಲೆಬ್ರಿಟಿಗಳು ಯುವಜೋಡಿಗೆ ಶುಭಹಾರೈಸಿದರು.

ಇನ್ನು ಇಂದು ಅಭಿಯಾನಿಗಳಿಗಾಗಿ ಸರ್ಜಾ ಫ್ಯಾಮಿಲಿ ಸಂಸ್ಕ್ರತಿ ಕನ್ವೆನ್ಷನ್ ಹಾಲ್ನಲ್ಲೇ ವಿಶೇಷ ಔತಣಕೂಟ ಏರ್ಪಡಿಸಿದೆ. ರಾಜ್ಯದ ನಾನಾ ಭಾಗಗಳಿಂದ ಸುಮಾರು 5 ಸಾವಿರಕ್ಕೂ ಹೆಚ್ಛು ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ.ಚಿತ್ರರಂಗದ ಗಣ್ಯರಿಗಷ್ಟೇ ಔತಣ ಕೂಟ ಏರ್ಪಡಿಸುವ ಸಂಪ್ರದಾಯವಿದ್ದ ಸ್ಯಾಂಡಲ್ ವುಡ್ ನಲ್ಲಿ ಇದೇ ಮೊದಲ ಬಾರಿಗೆ ಅಭಿಮಾನಿಗಳಗೂ ಔತಣ ಕೂಟ ಏರ್ಪಡಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ಧ್ರುವ ಸರ್ಜಾ ನಾಂದಿ ಹಾಡುತ್ತಿರುವುದು ವಿಶೇಷ.ತನ್ನ ಬೆಳವಣಿಗೆಗೆ ಕಾರಣವಾದ ಅಭಿಮಾನಿಗಳ ಋಣ ತೀರಿಸ್ಲಿಕ್ಕೆ ಇದೊಂದು ಅವಕಾಶ ಎನ್ನುವ ಮೂಲಕ ಧ್ರುವ ಸರ್ಜಾ ಸರಳತೆ ಪ್ರದರ್ಶಿಸಿದ್ದಾರೆ.ಇದು ಇತರರಿಗೆ ಮಾದರಿಯಾಗ್ಬೇಕು.

 

Spread the love
Leave A Reply

Your email address will not be published.

Flash News