ನೈಸ್ ವಿರುದ್ಧ ಹೋರಾಡಿದ್ದು ದೇವೇಗೌಡ್ರು ..ಉಳಿದೋರು ಕೇವಲ ಹಣಮಾಡಿದ್ರು..

0

ಬೆಂಗಳೂರು: ತಾವ್ ಮಾತ್ರ ಸಾಚಾ..ಉಳಿದೋರೆಲ್ಲಾ ಕಳ್ಳರು ಎನ್ನುವ ರೀತಿಯ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ.ಬಹುಕೋಟಿ ಮೊತ್ತದ ನೈಸ್ ಹಗರಣದಲ್ಲಿ ಉಳಿದೆಲ್ಲರು ಹಣ ತಿಂದು ತೇಗಿದ್ದಾರೆ.ಆದ್ರೆ ಹಣ ತಿನ್ನದೇ ಹೋರಾಟ ಮಾಡಿದವರು ಮಾತ್ರ ದೇವೆಗೌಡ್ರು ಎನ್ನುವ ಲಹರಿಯಲ್ಲಿ ಮಾತನ್ನಾಡಿದ್ದಾರೆ.

ನೈಸ್ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ಧವಾದ ವರದಿಯನ್ನು  ಸದನದಲ್ಲಿ ಮಂಡಿಸಲು ನಮ್ಮ ಸರ್ಕಾರವಿದ್ದಾಗ ನಾವ್ ರೆಡಿ ಇದ್ವು.ಆದ್ರೆ ಅದನ್ನು ಮಂಡಿಸಲು ವಿರೋಧ ವ್ಯಕ್ತಪಡಿಸಿದ್ದು ಕಾಂಗ್ರೆಸ್.ಇದಕ್ಕೆ ಕಾರಣವೇನು ಎನ್ನುವುದನ್ನು ರಾಜ್ಯದ ಜನತೆಯೇ ಊಹಿಸಲಿ ಎಂದು ಪ್ರಶ್ನಾರ್ಥಕ ಚಿಹ್ನೆಯೊಂದನ್ನು ಉಳಿಸಿಬಿಟ್ಟಿದ್ದಾರೆ ಕುಮಾರಸ್ವಾಮಿ.

 

ನೈಸ್ ವಿಷಯದಲ್ಲಿ ಹೋರಾಟ ಮಾಡಿದ್ದು ದೇವೇಗೌಡರು ಮಾತ್ರ.ಉಳಿದವರು ಎಲ್ಲಾ ಆ  ಮಹಾನುಭವ  ಖೇಣಿ ಬಳಿ ಹಣ ತಿಂದವರೇ.ಹಣ ತಿಂದು ರೈತರನ್ನು ಲೂಟಿ ಮಾಡಿದವನ ಪರವಾಗಿ ನಿಂತ್ರು.ಆದ್ರೆ  ನಮ್ಮ ಪಕ್ಷದ ಉದ್ದೇಶ ಆ ನೈಸ್ ಸಂಸ್ಥೆಗೆ ಕೊಟ್ಡಿದ್ದ ರಸ್ತೆ ಕಾಮಗಾರಿಯನ್ನು ರದ್ದು ಮಾಡಬೇಕು ಎಂಬುದಾಗಿತ್ತು.ಅಷ್ಟೇ ಅಲ್ಲ,ಸಂಪೂರ್ಣವಾಗಿ ಬೆಲೆಬಾಳುವ ಜಮೀನನ್ನು ರೈತರಿಗೆ ವಾಪಸು ಕೊಡಬೇಕು, ಇಲ್ಲ ಭೂಮಿಗೆ ಸರಿಯಾದ ಬೆಲೆ ಕೊಟ್ಟು, ಅಭಿವೃದ್ಧಿಗೆ ಬರ್ತಕ್ಕಂತ ಹೆಚ್ಚಿನ ಲಾಭವನ್ನು ಸರ್ಕಾರ ಉಪಯೋಗ ಮಾಡಬೇಕು ಎಂಬುದಾಗಿತ್ತು ಎಂದರು.

ಆದ್ರೆ  ನನ್ನ ಪರಿಸ್ಥಿತಿ, ಸ್ವತಂತ್ರವಾಗಿ ರಾಜ್ಯದಲ್ಲಿ ಸಿಎಂ ಆಗಿ ಕೆಲಸ ಮಾಡೋಕೆ ಆಗಿಲ್ಲ.ಬೇರೆ ಪಕ್ಷಗಳ ಹಂಗಿನಲ್ಲಿ ನಾನು ರಾಜಕೀಯ ಮಾಡಬೇಕಾದ ಪರಿಸ್ಥಿತಿ ಬಂತು.ಅದಕ್ಕಾಗಿ ಆ ವರದಿ ಮಂಡನೆ ಮಾಡೋಕೆ ಆಗಿಲ್ಲ.ವರದಿ ಮಂಡನೆಗೆ ಕಾಂಗ್ರೆಸ್ ಬಿಟ್ಟಿಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.ಕಾಂಗ್ರೆಸ್ಸೇ ಈ ರಾಜ್ಯದ ಅಭಿವೃದ್ಧಿಗೆ ಮಾರಕವಾದ ಪಕ್ಷ.ರಾಜ್ಯದ ಅಭಿವೃದ್ದಿಗಾಗಿ ನಾವು ಅನಿವಾರ್ಯವಾಗಿ ಅವರ ಜತೆ ಸೇರ್ಕಂಡು ಸರ್ಕಾರ ಮಾಡಬೇಕಾಗಿ ಬಂತು ಎನ್ನುವ ಮೂಲಕ ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣ ಮಾಡಿದ್ದಾರೆ.

 

 

 

Spread the love
Leave A Reply

Your email address will not be published.

Flash News