ಆಕ್ಸಿಡೆಂಟ್ ಅಯ್ತಲ್ಲ ಎಂದು ಕೈಚೆಲ್ಲಿದ್ರೆ…ಕಿರಿಯ ಐಪಿಎಸ್ ಆಗ್ತಿರಲಿಲ್ಲ..

0

ಗುಜರಾತ್: ಐಪಿಎಸ್..ಪ್ರತಿಯೋರ್ವನ ಡ್ರೀಮ್ ಇದು..ಯಾರಿಗೇ ಕೇಳ್ ನೋಡಿ ಮೊದ್ಲು ಹೇಳೋದೇ ಐಎಎಸ್ ಅಥ್ವಾ ಐಪಿಎಸ್..ಆದ್ರೆ ಅದು ಅಂದುಕೊಂಡಷ್ಟು ಸುಲಭ ಹೇಗಲ್ವೋ,ಶ್ರಮ ಹಾಕಿದ್ರೆ ಕಷ್ಟಸಾಧ್ಯವಾದ ಟಾಸ್ಕೂ ಅಲ್ಲ….ಇಂತದ್ದೇ ಒಂದು ಕಷ್ಟವನ್ನು ಎದುರಿಸಿ ದೇಶದ ಕಿರಿಯ ಐಪಿಎಸ್ ಎನಿಸಿಕೊಂಡಾತ ಹಸನ್ ಸಫೀನ್.

ಯೆಸ್.. ಹಸನ್ ಸಫಿನ್..ಇದೀಗ ದೇಶದ ಅತ್ಯಂತ ಕಿರಿಯ ಐಪಿಎಸ್ ಅಧಿಕಾರಿ ಎನಿಸಿಕೊಂಡಿದ್ದಾರೆ.ಅಂದ್ಹಾಗೆ ಐಪಿಎಸ್ ನಲ್ಲಿ ತೇರ್ಗಡೆಯಾದಾಗ ಅವರ ವಯಸ್ಸೆಷ್ಟು  ಗೊತ್ತಾ ಕೇವಲ 22.ಗುಜರಾತ್ ಕೆಡರ್ ನಲ್ಲಿ ಪಾಸಾದ ಹಸನ್ ಯುಪಿಎಸ್ ಸಿ ಪರೀಕ್ಷೆಯಲ್ಲಿ ದೇಶಕ್ಕೇ 570ನೇ ರ್ಯಾಂಕ್ ಪಡೆದು ಈ ಸಾಧನೆ ಮಾಡಿದ್ದಾರೆ.

ಗುಜರಾತ್ ನ ಪಾಲನ್ ಪುರ್ ಜಿಲ್ಲೆಯ ಕಾಂದೋರ್ ಎನ್ನುವ ಗ್ರಾಮದಲ್ಲಿ  ಹಸನ್ ಸಾಮಾನ್ಯ ವರ್ಗದ ಕುಟುಂಬದಲ್ಲಿ ಜನಿಸಿದ ಯುವಕ.ತಂದೆ ಎಲೆಕ್ಟ್ರೀಷಿಯನ್ ತಾಯಿ ಡೈಮಂಡ್ ಫ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡ್ತಿದ್ರು.ಕಷ್ಟ ತೀರ ಎನಿಸಿದಾಗ ಮದುವೆ ಮನೆಗಳಲ್ಲಿ ರೊಟ್ಟಿ ತಟ್ಟಿ ದುಡಿಯುತ್ತಿದ್ದಳು.

ಇಂಥ ಕಷ್ಟ ಕೋಟಲೆಗಳ ನಡುವೆ ಬಾಲ್ಯದಲ್ಲೇ ಐಪಿಎಸ್ ಆಗುವ ಕನಸು ಕಂಡಿದ್ದ.ಕನಸು ಕಾಣೋದಷ್ಟೇ ಅಲ್ಲ ಅದನ್ನು ಸಾಕಾರಗೊಳಿಸ್ಲಿಕ್ಕೆ ತನ್ನ ಬದುಕಿನ ಸಂತೋಷವನ್ನೆಲ್ಲಾ ಬಲಿಗೊ ಟ್ಟಾತ.ಇನ್ನೇನು ಎಲ್ಲವೂ ಸರಿಯಾಯ್ತು ಎನ್ನುವಷ್ಟರಲ್ಲೇ ಯುಪಿಎಸ್ ಸಿ ಎಕ್ಸಾಮ್ ಮೇನ್ಸ್ ಬರೆಯಲು ಸ್ಕೂಟಿ ಮೇಲೆ ಹೋಗ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಲಿಗ್ಮೆಂಟ್ ಗೆ ಭಾರೀ ಪೆಟ್ಟಾಗುತ್ತೆ.ಆಗ ಹಸನ್ ಗಿದ್ದ ಆಯ್ಕೆ ಎರಡೇ ಒಂದು ಎಕ್ಸಾಂ ಕೈ ಬಿಡ್ಬೇಕು.ಇಲ್ಲಾಂದ್ರೆ ನೋವಿನೊಳಗೂ ಎಕ್ಸಾಂ ಬರೆಯಬೇಕು.ಆಗ ಹಸನ್ ಆಯ್ಕೆ ಎರಡನೇದಾಯ್ತು.ಅದೇ ನೋವಿನ ನಡುವೆ ಎಕ್ಸಾಂ ಬರೆದ ಹಸನ್ ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಬರೆದು ರ್ಯಾಂಕ್ ಜೊತೆ ಪಾಸಾಗ್ತಾರೆ.

ಅಂದು ಗಾಯವಾಯ್ತೆಂದುಕೊಂಡು ಎಕ್ಸಾಂನ್ನು ಪೋಸ್ಟ್ ಪೋನ್ ಮಾಡಿದ್ದೇ ಆಗಿದ್ದರೆ ದೇಶದ ಅತೀ ಕಿರಿಯ ಐಪಿಎಸ್ ಅಧಿಕಾರಿ ಎನ್ನುವ ಸಾಧನೆ ಕೈ ತಪ್ಪಿ ಹೋಗ್ತಿತ್ತು.ಆದ್ರೆ ಕಷ್ಟಗಳ ಜತೆ ಕಾಂಪ್ರಮೈಸ್ ಮಾಡ್ಕೊಳ್ಳದನ್ನು ಬಿಟ್ಟು ಅದರ ವಿರುದ್ದ ತೊಡೆ ತಟ್ಟಿದ್ದೇ ಆದಲ್ಲಿ ಎಂತದ್ದೇ ಸಾಧನೆ ಸಾಧ್ಯ ಎನ್ನುವುದು ಹಸನ್ ಸಫಿನ್ ಜೀವನ ಸಿದ್ಧಾಂತ.

Spread the love
Leave A Reply

Your email address will not be published.

Flash News