ಹುಳಿಮಾವು ಕೋಡಿಗೆ ಕಾರಣನಾದ ಗುತ್ತಿಗೆದಾರ “ಉಪಮೇಯರ್” ಆಪ್ತನಾ!?

0

ಬೆಂಗಳೂರು: ಬೆಂಗಳೂರಿನ ಹುಳಿಮಾವು ಕರೆ ಕೋಡಿ ಸೃಷ್ಟಿಸಿದ ರಾದ್ದಾಂತಕ್ಕೆ ದಕ್ಷಿಣ ಬೆಂಗಳೂರಿನ ಒಂದಷ್ಟು ಪ್ರದೇಶ ಸಂಪೂರ್ಣ ಮುಳುಗಡೆಯಾಗಿ ಜನ ಗಂಜಿಕೇಂದ್ರಗಳಲ್ಲಿ ನೆಲೆ ಪಡೆದುಕೊಳ್ಳುವಂತಾಗಿದೆ.2 ಸಾವಿರಕ್ಕು ಹೆಚ್ಚು ಮನೆಗಳು ಜಲಾವೃತ್ತಗೊಂಡು,ಮನೆಯಲ್ಲಿದ್ದ ಕೋಟ್ಯಾಂತರ ಮೌಲ್ಯದ ಸಾಮಾನು ಸರಂಜಾಮುಗಳು ಕೊಚ್ಚಿ ಹೋಗಿ,ನೂರಾರು ವಾಹನಗಳು ಹಾಳಾಗೊಕ್ಕೆ ಕಾರಣವಾದ ಸಮಸ್ಯೆಯನ್ನು ಸೃಷ್ಟಿಸಿದವರ್ಯಾರು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.ಆದ್ರೆ ದುರಂತ ನೋಡಿ,ಈ ಕ್ಷಣದವರೆಗೂ ಕೋಡಿ ದುರಂತ ಸೃಷ್ಟಿಗೆ ಸ್ಪಷ್ಟ ಕಾರಣವೇ ಗೊತ್ತಾಗ್ತಿಲ್ಲ.

2016ರಲ್ಲಿ ಕೆರೆ ಹಸ್ತಾಂತರಿಸಿದ ಮೇಲೆ ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಕೈ ಚೆಲ್ಲುವ ಮೂಲಕ ಬಿಡಿಎ ಜವಾಬ್ದಾರಿಯಿಂದ ನುಣುಚಿಕೊಂಡಿತ್ತು. ಹಾಗಾಗಿ ಬಿಬಿಎಂಪಿ ಹಾಗೂ ಜಲಮಂಡಳಿಯ ನಡುವೆಯೇ ಇದಕ್ಕೆ ಕಾರಣ ಯಾರು ಎನ್ನುವ ಪ್ರಶ್ನೆ ಸುಳಿದಾಡತೊಡಗಿತ್ತು. ಬಿಬಿಎಂಪಿಯ ಕೆರೆ ವಿಭಾಗದ ಲಿಂಗೇಗೌಡ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡುವ ಮೂಲಕ ಜಲಮಂಡಳಿಯನ್ನು ಹೊಣೆ ಮಾಡಿದ್ದರು.ಅದರನ್ವಯ ಜಲಮಂಡಳಿಯ ಎಂಜಿನಿ ಯರ್ ಕಾರ್ತಿಕ್ ಎನ್ನುವವರ ಬಂಧನವಾಗಿದೆ.ಇದರಿಂದಾಗಿ ಜಲಮಂಡಳಿಯೇ ನೇರವಾಗಿ ಕೋಡಿ ಒಡೆಯಲಿಕ್ಕೆ ಕಾರಣ ಎಂದು ಒಪ್ಪಿಕೊಂಡಂತಾಯಿತು.

ಕೆರೆ ಅಭಿವೃದ್ಧಿ ಗುತ್ತಿಗೆದಾರ ಬಿಬಿಎಂಪಿ ಉಪಮೇಯರ್ ಮೋಹನ್ ರಾಜು ಆಪ್ತನಾ?
ಕೆರೆ ಅಭಿವೃದ್ಧಿ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರ ಬಿಬಿಎಂಪಿ ಉಪಮೇಯರ್ ಮೋಹನ್ ರಾಜು ಆಪ್ತನಾ?

ಲಿಂಗೇಗೌಡ ಅವರ ದೂರನ್ನು ಆಧರಿಸಿ ಪೊಲೀಸರು ಮಾಡಿದ ಎಫ್ ಐ ಆರ್ ನಲ್ಲಿ ಎಸ್ ಟಿಪಿ ಮಾಡ್ಲಿಕ್ಕೆ ಕೋಡಿ ಬಗೆದಿದ್ದರಿಂದ್ಲೇ ಸಮಸ್ಯೆಯಾಯ್ತು.ಇದರ ಉಸ್ತುವಾರಿ ಕಾರ್ತಿಕ್ ಎಂದು ಉಲ್ಲೆಖಿಸಲಾಗಿದೆ.ಆದ್ರೆ ವಾಸ್ತವವಾಗಿ ಸಮಸ್ಯೆ ಸೃಷ್ಟಿಗೆ ಅದು ಕಾರಣ ಅಲ್ವೇ ಅಲ್ಲ ಎನ್ನಲಾಗ್ತಿದೆ.ಹಾಗಾದ್ರೆ ನೈಜ ಕಾರಣವೇನು ಎನ್ನುವ ಪ್ರಶ್ನೆ ಗಿರಕಿ ಹೊಡೆಯುತ್ತಿರುವಾಗ್ಲೇ ಉಪಮೇಯರ್ ಮೋಹನ್ ರಾಜ್ ಅವ್ರ ಮೇಲೆ ಗುಮಾನಿ ಕೇಂದ್ರೀಕೃತವಾಗ್ತಿದೆ.

ಜಲಮಂಡಳಿ ಎಸ್ ಟಿಪಿ ನಿರ್ಮಾಣಕ್ಕೆ ಇಲ್ಲಿ ಕೆಲಸ ಮಾಡ್ತಿತ್ತು ಎನ್ನಲಾಗ್ತಿದ್ರೂ ಕೆರೆ ಅಭಿವೃದ್ಧಿಯ ಉಸ್ತುವಾರಿಗೂ ಒಬ್ಬ ಗುತ್ತಿಗೆದಾರ ನಿಯೋಜನೆಗೊಂಡಿದ್ದ ಎನ್ನುವ ಸ್ಪೋಟಕ ಮಾಹಿತಿ ಬಹಿರಂಗವಾಗ್ತಿದೆ.ಆ ಗುತ್ತಿಗೆದಾರನ ಹಿನ್ನಲೆ,ಮೂಲದ ಬಗ್ಗೆಯೂ ಗುಮಾನಿ ಕಾಡ್ತಿದೆ.ಕೆಲವು ಮೂಲಗಳ ಪ್ರಕಾರ ಆ ಗುತ್ತಿಗೆದಾರನೊಂದಿಗೆ ಉಪಮೇಯರ್ ಮೋಹನ್ ರಾಜ್ ಅವರಿಗೆ ಸಂಪರ್ಕ ಇತ್ತೆನ್ನಲಾಗಿದೆ.ಇನ್ ಫ್ಯಾಕ್ಟ್ ಗುತ್ತಿಗೆದಾರ ಉಪಮೇಯರ್ ಅವರ ಅತ್ಯಾಪ್ತ ಅಥವಾ ಬೆಂಬಲಿಗ ಎನ್ನಲಾಗ್ತಿದೆ.ಒಂದ್ ಹೆಜ್ಜೆ ಮುಂದ್ಹೋಗಿ ಹೇಳೋದಾದ್ರೆ ಆತನಿಗೆ ಈ ಗುತ್ತಿಗೆ ಕೊಡಿಸಿದ್ದೇ ಮೋಹನ್ ರಾಜ್ ಎನ್ನಲಾಗಿದೆ.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಹುತೇಕ ಕಾಮಗಾರಿಗಳು ಮೋಹನ್ ರಾಜ್ ಅವರ ಅಣತಿಯಿಲ್ಲದೆ ನಡೆಯೋದಿಲ್ಲ ಎನ್ನುವ ಮಾತಿದೆ.  ಈ ಕಾಮಗಾರಿ ನಡೆಯುತ್ತಿದ್ದುದು ಕೂಡ ಮೋಹನ್ ರಾಜ್ ಪ್ರತಿನಿಧಿಸುವ ಬೊಮ್ಮನಹಳ್ಳಿ ವಾರ್ಡ್ ಪಕ್ಕದ  ಅರಕೆರೆ ವಾರ್ಡ್ ವ್ಯಾಪ್ತಿಯಲ್ಲಿ.ಇಲ್ಲಿನ ಕಾಮಗಾರಿಯ ಗುತ್ತಿಗೆ ಕೊಡಿಸಿದ್ದು ಮೋಹನ್ ರಾಜ್ ಅವ್ರೇ ಎನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ.

ಕೋಡಿ ಒಡೆದ ಸಂದರ್ಭದಲ್ಲಿನ ಒಟ್ಟಾರೆ ವಿದ್ಯಾಮಾನವನ್ನೊಮ್ಮೆ ಗಮನಿಸಿ ನೋಡಿ,ಕೋಡಿ ಒಡೆಯುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ಸ್ಥಳೀಯ ಕಾರ್ಪೊರೇಟರ್ ಗಿಂತ ಮುಂಚೆ ಮೋಹನ್ ರಾಜ್ ಹಾಜರಿರುತ್ತಾರೆ.ತನ್ನ ವಾರ್ಡ್ ಎನ್ನುವುದಕ್ಕಿಂತ ಹೆಚ್ಚಿನ ಮುತುವರ್ಜಿ ವಹಿಸಿ ಮಾತನ್ನಾಡುತ್ತಾರೆ.ಇದಕ್ಕು ಬಿಬಿಎಂಪಿಗೂ ಸಂಬಂಧವೇ ಇಲ್ಲ ಎನ್ನು ತ್ತಾರೆ.ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಿಸ್ತಾರೆ.ಸ್ಥಳೀಯ ಕಾರ್ಪೊರೇಟರ್ ಗಿಂತ ಹೆಚ್ಚಿನ ಕಾಳಜಿಯನ್ನು ಯಾವತ್ತೂ ಇಲ್ಲದ ರೀತಿಯಲ್ಲಿ ಭಾನುವಾರ ತೋರಿಸಿದ್ದು ಏಕೆ..ಇದರ ಹಿಂದೆ ಗುತ್ತಿಗೆದಾರನನ್ನು ಕಾಪಾಡಿ,ಜಲಮಂಡಳಿಯನ್ನು ಅಪರಾಧ ಸ್ಥಾನದಲ್ಲಿ ನಿಲ್ಲಿಸುವುದು ಇದರ ಹಿಂದಿನ ದುರುದ್ದೇಶವಾಗಿತ್ತೇ ಎನ್ನುವ ಪ್ರಶ್ನೆಗಳು ಕಾಡ್ತಿವೆ.ಅದಿಷ್ಟೇ ಅಲ್ಲ,ಕೆಳ ಹಂತದ ಅಧಿಕಾರಿಗಳ ಹೇಳಿಕೆಯನ್ನು ಗಮನಿಸಿದಾಗ್ಲೂ ಇದೇ ಅನುಮಾನ ಕಾಡುತ್ತೆ.

ಇಷ್ಟೆಲ್ಲಾ ನಡೆಯುತ್ತಿದ್ದರೂ ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಎಲ್ಲಿಯೂ ಕಾಣಿಸಲೇ ಇಲ್ಲ.ಎಲ್ಲವನ್ನೂ ತನ್ನ ಮೆಚ್ಚಿನ ಕಾರ್ಪೊರೇಟರ್ ಮೋಹನ್ ರಾಜು ಅವರ ಮೂಲಕವೇ ಅಚ್ಚುಕಟ್ಟಾಗಿ ನಿರ್ವಹಿಸಿ,ನಿಭಾಯಿಸಿದ್ದಾರೆ.ಆದ್ರೆ ಜಲಮಂಡಳಿ ಎಂಜಿನಿಯರ್ ಕಾರ್ತಿಕ್ ಅವರನ್ನು ಬಂಧಿಸಿದಾಕ್ಷಣ ಎಲ್ಲವೂ ಮುಗಿದೋಗುವುದಿಲ್ಲ.ಇಷ್ಟಕ್ಕೆಲ್ಲಾ ಕಾರಣವಾದ ಆ ಗುತ್ತಿಗೆದಾರ ಯಾರೆನ್ನುವುದು ಪತ್ತೆಯಾಗ್ಬೇಕಿದೆ.ಆ ಗುತ್ತಿಗೆದಾರನನ್ನೇ ಗಾಯುಬ್ ಮಾಡಲಾಗಿದೆ.ಆತ ಸಿಕ್ಕರೆ ಮಾತ್ರ ಎಲ್ಲಾ ಪ್ರಶ್ನೆ-ಅನುಮಾನಕ್ಕೆ ತೆರೆ ಬೀಳ್ಬೋದು…..

 

 

Spread the love
Leave A Reply

Your email address will not be published.

Flash News