ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಹುಚ್ಚು ಹಿಡಿಸ್ತಿದ್ದ ನೈಜೇರಿಯನ್ ಪ್ರಜೆ ಅರೆಸ್ಟ್..

0

ಬೆಂಗಳೂರು: ಇವತ್ತು ಸೋಶಿಯಲ್ ಮೀಡಿಯಾ ತುಂಬಾನೇ ಎಫೆಕ್ಟಿವ್ ಆಗಿದೆ ಎನ್ನೋದೆಷ್ಟು ಸತ್ಯವೋ,ಅದು ಅನೇಕ ದುರುದ್ದೆಶಗಳಿಗೆ ಮಿಸ್ಯೂಸ್ ಆಗ್ತಿರೋದು ಅಷ್ಟೇ ವಿಪರ್ಯಾಸ ಕರ.ವಾಟ್ಸಪ್ ಮೂಲಕ ಕೇವಲ ಸಂದೇಶ ರವಾನೆ ಮಾಡಿಕೊಳ್ಳುತ್ತಿದ್ದವರು ಇವತ್ತು ಸಮಾಜಘಾತುಕ ಕೆಲಸಗಳಿಗೂ ಬಳಸಿಕೊಳ್ತಿದ್ದಾರೆ.ಬೆಂಗಳೂರಿನಲ್ಲಿ ನೈಜೇರಿಯಾ ಮೂಲದ ಕೆಲವು ದುಷ್ಕರ್ಮಿಗಳು ವಾಟ್ಸಪ್ ನ್ನು ಡ್ರಗ್ಸ್ ಮಾರಾಟ ಮಾಡಲು ಬಳಸುತ್ತಿದ್ದ ದೃಶ್ಯ ಬಂಧನದಿಂದಾಗಿ ಹೊರಬಿದ್ದಿದೆ.ನೈಹೀರಿಯಾ ಮೂಲದ ಒಬೈರಾ ವಿಕ್ಟರ್ ಸುತ್ತಮುತ್ತಲ ಕಾಲೇಜ್ ಗಳತ್ತ ತೆರಳಿ ವಿದ್ಯಾರ್ಥಿಗಳ ಸಂಪರ್ಕ ಬೆಳೆಸಿಕೊಂಡು ಅವರ ದೌರ್ಬಲ್ಯ ಅರಿತು ಡ್ರಗ್ಸ್ ಮಾರಾಟಕ್ಕೆ ಬಳಸಿಕೊಳ್ಳುತ್ತಿದ್ದನೆನ್ನಲಾಗಿದೆ. ವಿದ್ಯಾರ್ಥಿಗಳ ವಾಟ್ಸಪ್ ನಂಬರ್ ಪಡೆದು ಅವರಿಗೆ ಯಾವ್ ವಿಧದ ಡ್ರಗ್ಸ್ ಬೇಕೋ ಅದನ್ನು ಪೂರೈಸಿ ಅವರನ್ನು ಕೆಟ್ಟ ದಾರಿಗೆ ಎಳೆಯೋದಲ್ದೆ ಹಣ ಮಾಡಿಕೊಳ್ಳುತ್ತಿದ್ದ  ಒಬೈರಾ ವಿಕ್ಟರ್ ನನ್ನು ಸೂಕ್ತ ಮಾಹಿತಿ ಮೇರೆಗೆ ಜಯನಗರ ಪೊಲೀಸರು ಬಂಧಿಸಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

Spread the love
Leave A Reply

Your email address will not be published.

Flash News