ಕೆಪಿಎಲ್ ಬೆಟ್ಟಿಂಗ್:ಅಭಿಮನ್ಯು ಮಿಥುನ್ ಶಾಮೀಲು ಶಂಕೆ! -ನೋಟೀಸ್ ಜಾರಿ

0

ಬೆಂಗಳೂರು: ಉದಯೋನ್ಮುಖ ಕ್ರಿಕೆಟರ್ಸ್ ಗೆ ಏನಾಗಿದೆಯೊ ಗೊತ್ತಾಗ್ತಿಲ್ಲ..ಪುಡಿಗಾಸಿನ ಆಸೆಗೆ ತಮ್ಮ ಇಡೀ ಕ್ರಿಕೆಟ್ ಕರಿಯರನ್ನೇ ಹಾಳ್ ಮಾಡಿಕೊಳ್ಳೋ ದುಸ್ಸಾಹಸಕ್ಕೆ ಕೈ ಹಾಕ್ತಿದ್ದಾರೆ. ಇತ್ತೀಚೆಗೆ ಒಂದಷ್ಟು ಕ್ರಿಕೆಟರ್ಸ್ ಗಳನ್ನು ಖೆಡ್ಡಾಕ್ಕೆ ಬೀಳಿಸಿಕೊಂಡು ಅಯ್ಯಯ್ಯೋ ಎನಿಸಿದ್ದ ಸಿಸಿಬಿ ಇದೀಗ ಈ ಬೆಟ್ಟಿಂಗ್ ನೊಂದಿಗೆ ಲಿಂಕ್ ಇರುವ ಅನುಮಾನದ ಮೇರೆಗೆ ಮತ್ತೋರ್ವ ಕ್ರಿಕೆಟರನ್ನು ವಿಚಾರಣೆಗೆ ಬರುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿದೆ. ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ.ಅನೇಕರ ಹೆಸರುಗಳು ಹಗರಣದ ಜತೆ ಬೆಸೆದುಕೊಳ್ತಿದೆ.ಈಗ ಇದರ ಸಾಲಿಗೆ ಮತ್ತೊಂದು ಹೆಸರು ಸೇರ್ಪಡೆಯಾಗ್ತಿರೋದು ಇನ್ನ್ಯಾರು ಅಲ್ಲ,ಅಂತರಾಷ್ಟ್ರೀಯ ಖ್ಯಾತಿಯ ಕರ್ನಾಟಕದ ಆಟಗಾರ ಅಭಿಮನ್ಯು  ಮಿಥುನ್.

ಕೆಪಿಎಲ್ ನಲ್ಲಿ ಸ್ಟಾರ್ ಬೌಲರ್ ಆಗಿರುವ ಅಭಿಮನ್ಯು ಮಿಥುನ್ ಗೂ ಕೆಪಿಎಲ್ ಬೆಟ್ಟಿಂಗ್ ಗೂ ನಂಟಿದೆ ಎನ್ನುವ ಸಂಶಯದ ಹಿನ್ನಲೆಯಲ್ಲಿ ಸಿಸಿಬಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.ನಿಗಧಿತ ಅವಧಿಯಲ್ಲಿ ಯಾವುದೇ ಕಾರಣ ಅಥವಾ ನೆವ ಹೇಳದ ವಿಚಾರಣೆಗೆ ಹಾಜರಾಗಬೇಕೆಂದು ಕಟ್ಟಪ್ಪಣೆ ಮಾಡಿದೆ.

ರಾಜ್ಯದ ಪ್ರಮುಖ ವೇಗದ ಬೌಲರ್ ಆಗಿರುವ ಮಿಥುನ್ ಕೆಪಿಎಲ್ ನಲ್ಲಿ  ಶಿವಮೊಗ್ಗ ತಂಡವನ್ನು ಕೂಡ ಪ್ರತಿನಿಧಿಸಿದ್ದರು.ಕೆಲ ಮ್ಯಾಚ್ ಗಳಲ್ಲಿ ಕ್ಯಾಪ್ಟನ್ ಕೂಡ ಆಗಿದ್ದರು.ಆದ್ರೆ ಬೌಲಿಂಗ್ ವಿಷಯದಲ್ಲಿಬುಕ್ಕಿಗಳ ಜತೆಗೆ ಶಾಮೀಲಾಗಿ ಅಕ್ರಮ ಎಸಗಿರಬಹುದಾದ ಶಂಕೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಸಿಸಿಬಿ ಚಾಮರಾಜ ಪೇಟೆಯಲ್ಲಿರುವ ಕೇಂದ್ರ ಕಚೇರಿಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದು ಇಂದೇ ಮಿಥುನ್ ವಿಚಾರಣೆಗೆ ಬರುವ ಸಾಧ್ಯತೆಗಳಿವೆ.ಇನ್ನು ಯಾರ್ಯಾರಿಗೆ ಇದರ ಕಳಂಕ ತಟ್ಟಿಕೊಳ್ಳಲಿದೆಯೋ,ಸಿಸಿಬಿ ಖೆಡ್ಡಾಕ್ಕೆ ನಮಗೆ ಗೊತ್ತಿರೋ ಇನ್ನೆಷ್ಟು ಖ್ಯಾತನಾಮರ ಹೆಸರುಗಳು ಸೇರಿಕೊಳ್ಳಲಿವೆಯೋ ಎನ್ನುವ ಕುತೂಹಲ ಮೂಡಿಸಿದೆ.

Spread the love
Leave A Reply

Your email address will not be published.

Flash News