ಕೋಕಾ ಆಕ್ಟ್ ಪ್ರಶ್ನಿಸಿದ್ದ ಪಾತಕಿಗಳಾದ ಮುಲಾಮ,ರಾಮಗೆ ಸಿಸಿಬಿ ಬುಲಾವ್..

0

ಬೆಂಗಳೂರು: ಇಬ್ಬರು ಕುಖ್ಯಾತ ಪಾತಕಿಗಳೇ..ಫೀಲ್ಡ್ ನಲ್ಲಿ  ಒಬ್ಬರಿಗಿಂತ ಇನ್ನೊಬ್ಬರು ಕಾಂಪಿಟೇಷನ್ ಮೇಲೆ ಹೆಸರು ಮಾಡಿ ಪಾತಕ ಲೋಕದಲ್ಲಿ ಒಂದು ನಟೋರಿಟಿ ಕ್ರಿಯೇಟ್ ಮಾಡಿಕೊಂಡಿದ್ದರು.ಆದರೆ ಅವರ ನಡಮುರಿಯೊಕ್ಕೆ ಹಿಂದಿನ CCB ಕಮಿಷನರ್ ಅಲೋಕ್ ಕುಮಾರ್ ಇವರ ಮೇಲೆ ಹಾಕಿದ್ದು ಕೋಕಾ ಆಕ್ಟ್.ರೌಡಿಗಳು-ಪಾತಕಿಗಳ ಪಾಲಿಗೆ ಕಂಟಕವಾದ ಕೋಕಾ ಆಕ್ಟನ್ನು ಪ್ರಶ್ನಿಸಿ ಹಾಕಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಇಂದು ಅವರಿಬ್ಬರು ಸಿಸಿಬಿಗೆ ಹಾಜರಾಗ್ಬೇಕಿದೆ.

ಪಾತಕಿ ಮುಲಾಮ
ಪಾತಕಿ ಮುಲಾಮ
ಪಾತಕಿ ರಾಮ
ಪಾತಕಿ ರಾಮ

ಕೋಕಾ ಆಕ್ಟನ್ನು ಪ್ರಶ್ನಿಸಿದ್ದ ಆ ಇಬ್ಬರು ಪಾತಕಿಗಳು ಇನ್ನ್ಯಾರು ಅಲ್ಲ,ಕೊರಂಗುವಿಗೆ ಡಾಬಾದಲ್ಲಿ ಮುಗಿಸಲು ಹಾಕಿದ್ದ ನಟೋರಿಯಸ್ ರೌಡಿ ಮುಲಾಮ ಹಾಗೂ ಮತ್ತೋರ್ವ ಕೆಲ ತಿಂಗಳ ಹಿಂದೆ ಮರ್ಡರ್ ಆದ ಪಾತಕಿ ಲಕ್ಷ್ಮಣನ ಸಹೋದರ ರಾಮ.ಅವರಿಬ್ಬರ ಮೇಲೆ ಕೋಕಾ ಕಾಯ್ದೆಯನ್ನು ಜಾರಿ ಮಾಡಿ ಅಲೋಕ್ ಕುಮಾರ್ ಆದೇಶಿಸಿದ್ದರು.ಇವರಿಬ್ಬರು ಅದನ್ನೇ ಚಾಲೆಂಜ್ ಮಾಡಿ ಕೇಸ್ ಹಾಕಿದ್ದರು.

ರೌಡಿ ಕ್ಯಾಟ್ ಐಸ್ ರವಿ
ರೌಡಿ ಕ್ಯಾಟ್ ಐಸ್ ರವಿ

ಯಾರು ಈ ರಾಮ: ರಾಮನ ಮೇಲಿರುವ ಆರೋಪ:ರೌಡಿ ಲಕ್ಷ್ಮಣನ ಸಹೋದರ ರಾಮ ಪಾತಕ ಲೋಕದಲ್ಲಿ ಹತ್ತಲವು ಅಪರಾಧ ಚಟುವಟಿಕೆಗಳ ಮೂಲಕ ಕುಪ್ರಸಿದ್ದಿ ಪಡೆದಾತ.ಕೊಲೆ-ಸುಲಿಗೆ-ದರೋಡೆಯಂಥ ಪ್ರಕರಣಗಳಲ್ಲಿ ಭಾಗಿಯಾಗಿ ಸಣ್ಣ ವಯಸ್ಸಿನಲ್ಲೇ ಫೀಲ್ಡ್ ಮಾಡ್ಲಿಕ್ಕೆಶುರುವಿಟ್ಟುಕೊಂಡಾತ.ತಮ್ಮ ಲಕ್ಷ್ಮಣನ ಜತೆ ಸೇರ್ಕಂಡು ಮಾಡಿದ ಪಾತಕಗಳು ಒಂದೊಂದಲ್ಲ.ಯಾವಾಗ ಪೊಲೀಸರ ಕಾಟ ಜಾಸ್ತಿಯಾಯ್ತೋ ಸೈಲೆಂಟಾಗಿ ಮಚ್ಚು ಲಾಂಗನ್ನು ಕೆಳಗಿಟ್ಟು ತನ್ನ ಪಟಾಲಂ ಮೂಲಕ ರಿಯಲ್ ಎಸ್ಟೇಟ್ ದಂಧೆ ಶುರುವಿಟ್ಟುಕೊಂಡಿದ್ದ.ಲಿಟಿಗೇಷನ್ ಪ್ರಾಪರ್ಟಿಗೆ ಕೈ ಹಾಕಿ ಕೋಟಿಗಳಲ್ಲಿ ಹಣ ಮಾಡಿದ್ದರು.

ಕೊಲೆಯಾದ ಪಾತಕಿ ಲಕ್ಷ್ಮಣ
ರವಿಯಿಂದ  ಕೊಲೆಯಾದ ಪಾತಕಿ ಲಕ್ಷ್ಮಣ

ಆದರೆ ಅಣ್ಣ ತಮ್ಮನ ಕಾಟ ಹೆಚ್ಚಾಗಿ,ಇವರ ಬಗ್ಗೆ ದೂರುಗಳ ಜಾಸ್ತಿಯಾದ ಹಿನ್ನಲೆಯಲ್ಲಿ ಕಮಿಷನರ್ ಅಲೋಕ್ ಕುಮಾರ್ ಇವರ ವಿರುದ್ದ ಕೋಕಾ ಕಾಯ್ದೆ ಜಾರಿ ಮಾಡಿದ್ದರು.ಅವ್ರು ಕಮಕ್ ಕಿಮಿಕ್ ಎನ್ನದಂತೆ ಮಾಡಿದ್ದರು.ರಾಮನಿಗೆ ಪಾತಕ ಲೋಕದಲ್ಲಿ ದೊಡ್ಡ ಹೆಸರು ತಂದುಕೊಟ್ಟ ಹೆಸರು ಬಲರಾಮನ ಮರ್ಡರ್.ಮುಲಾಮನ ಗುರು ಬಲರಾಮನನ್ನು ಜೈಲಿನಲ್ಲೇ ಮುಗಿಸಿ ಹೆಸರು ಮಾಡಿದ್ರು.ಅಂದಿನಿಂದ ಮುಲಾಮ ಕೂಡ ರಾಮನ ಕೊಲೆಗಾಗಿ ಹೊಂಚಾಕುತ್ತಿದ್ದ.

ಈ ನಡುವೆ ತನ್ನ ಸಹೋದರ ಲಕ್ಷ್ಮಣನನ್ನು ಮುಗಿಸಿ ಹಾಕುವಲ್ಲಿ ಕ್ಯಾಟ್ ಐಸ್ ರವಿ ಪಾತ್ರ ವಿದ್ದುದನ್ನು ಕನ್ಫರ್ಮ್ ಮಾಡಿಕೊಂಡಿದ್ದ ರಾಮ,ಜೈಲು ಸೇರಿದ್ದ ಆತನನ್ನು ಮುಗಿಸಲು ಪ್ಲ್ಯಾನ್ ಮಾಡಿ ಫ್ಲಾಪ್ ಆಗಿದ್ದ.ಆದ್ರೂ ಜೈಲಿನಲ್ಲಿ ಮುಗಿಸಿ ಹಾಕಲು ಯತ್ನಿಸುತ್ತಿರುವಾಗ್ಲೇ ಮಾಹಿತಿ ಪಡೆದು ಆತನ ವಿರುದ್ದ ಕೋಕಾ ಆಕ್ಟ್ ಜಾರಿ ಮಾಡಿ ಕೈ ಕಾಲು ಕಟ್ಟಿಸಿ ಹಾಕಿದ್ರು ಅಲೋಕ್ ಕುಮಾರ್.

ಮುಲಾಮನ ಕಥೆ ಗೊತ್ತಾ:ಬೆಂಗಳೂರು ಪಾತಕ ಲೋಕದಲ್ಲಿ ಕೊರಂಗುವಿನಂಥ ಮುದಿ ರೌಡಿಗಳು ಕಂಪ್ಲೀಟ್ ಸ್ಕ್ರಾಪ್ ಆಗ್ತಿದ್ದಂಗೆ ಸಧ್ಯ ಫೀಲ್ಡ್ ಮಾಡ್ತಿರೋರಲ್ಲಿ ಮುಖ್ಯಸ್ಥನೇ ಈ ರೌಡಿ ಮುಲಾಮ.ಕೊರಂಗು ಮರ್ಡರ್ ಗೆ  ಸ್ಕೆಚ್ ಹಾಕಿದ್ದಾತನೇ ಈ ಮುಲಾಮ.ಆದ್ರೆ ಅವತ್ತು ಅವನ ಗ್ರಹಚಾರ ಚೆನ್ನಾಗಿತ್ತು.ಕೂದಲೆಳಯಲ್ಲಿ ಪಾರಾಗಿದ್ದ.ಅವತ್ತಿಂದ ಕುಖ್ಯಾತಿಗೆ ಬಂದಿದ್ದ ಮುಲಾಮ ಹೆಬ್ಬಟ್ಟು ಮಂಜ,ಸೈಲೆಂಟ್ ಸುನೀಲ್,ಒಂಟೆ ರೋಹಿತ್ ಅವರಂಥವ್ರನ್ನು ಜತೆಗಿಟ್ಟುಕೊಂಡು ಫೀಲ್ಡ್ ಮಾಡ್ತಿರುವಾತ. ಸಣ್ಣ ಪುಟ್ಟ ಅಪರಾಧ ಚಟುವಟಿಕೆಗಳಿಂದ ಫೀಲ್ಡ್ ಗೆ ಎಂಟ್ರಿಕೊಟ್ಟ ಕೊರಂಗು ನಂತ್ರ ಮಾಡಿದ ದೊಡ್ಡ ಪಾತಕಗಳಿಂದ ಹೆಸರು ಮಾಡ್ತಾನೆ.

ತನ್ನ ಗುರು ಬಲರಾಮನನ್ನು ಮರ್ಡರ್ ಮಾಡಿದ ಲಕ್ಷ್ಮಣನ ಸಹೋದರ ರಾಮನನ್ನು ಮುಗಿಸೊಕ್ಕೆ ಸ್ಕೆಚ್ ಹಾಕ್ತಿದ್ರೂ ಅದು ವಿಫಲವಾಗಿತ್ತು.ಈ ನಡುವೆ ಸೈಲೆಂಟಾಗಿ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿರುವ ಮುಲಾಮನ ವಿರುದ್ದ ಸಾಕಷ್ಟು ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ಕೋಕಾ ಆಕ್ಟ್ ಹಾಕಲಾಗಿತ್ತು.ಅಲೋಕ್ ಕುಮಾರ್ ಅವರ ವಿರುದ್ಧವೇ ಕಾನೂನು ಹೋರಾಟಕ್ಕಿಳಿದಿದ್ದ ಇವರಿಬ್ಬರು ಇವತ್ತು ಸಿಸಿಬಿ ಮುಂದೆ ಹಾಜರಾಗ್ಬೇಕಿದೆ.ಬಹುತೇಕ ಮುಲಾಮ ಹಾಗೂ ರಾಮನಿಗೆ ಮುಖಭಂಗವಾಗುವ ಸಾಧ್ಯತೆಗಳಿವೆ.

ಏನನ್ನುತ್ತೆ ಗೊತ್ತಾ ಕೋಕಾ ಆಕ್ಟ್: coca ಅಂದ್ರೆ ವ್ಯವಸ್ಥಿತ ಅಥವಾ ಪೂರ್ವ ನಿಯೋಜಿತ ಅಪರಾಧ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (control of organized crime act).ರೌಡಿಗಳ ಪಾಲಿಗೆ ಇದು ಮರಣಶಾಸನ.ಏನ್ ಬೇಕಾದ್ರೂ ಕೇಸ್ ಹಾಕಿದ್ರೂ ರೌಡಿಗಳು ಹೆದರೊಲ್ಲ.ಆದ್ರೆ ಕೋಕಾ ಆಕ್ಟ್ ಕೇಸ್ ಏನಾದ್ರೂ ಬಿದ್ರೆ ಮುಗೀತು.ಜನ್ಮ ಪೂರ್ತಿ ಜೈಲಿನಲ್ಲೇ ಕಳೆಯಬೇಕಾಗುತ್ತೆ.ಏಕೆಂದ್ರೆ ಕೋಕಾ ಆಕ್ಟ್ ನಡಿ ಪ್ರಕರಣ ದಾಖಲಿಸಿದರೆ ನಿರೀಕ್ಷಣಾ ಜಾಮೀನು ಸಿಗುವುದಿಲ್ಲ.

ಯಾವ ಕ್ಷಣದಲ್ಲಾದರೂ ತನಿಖಾಧಿಕಾರಿ ಬಂಧಿಸಿ ವಿಚಾರಣೆಗೊಳಪಡಿಸಬಹುದು.ಹೀಗಾಗಿ ರೌಡಿಗಳು ಹೆದರೋದೇ ಕೋಕಾ ಆಕ್ಟ್ ಗೆ.ರೌಡಿಗಳು ತುಂಬಾ ಎಗರಾಡುತ್ತಿದ್ದರೆ ಪೊಲೀಸ್ರು ಕಾನೂನು ಚೌಕಟ್ಟಿನಲ್ಲಿ ನಿರ್ಣಾಯಕ ಅಸ್ತ್ರವಾಗಿ ಪ್ರಯೋಗಿಸುವುದೇ ಈ  ಕೋಕಾ ಆಕ್ಟನ್ನು.ಅಷ್ಟೊಂದು ಪವರ್ ಫುಲ್ ಆದಂಥ ಆಕ್ಟ್ ಇದು. ಇದನ್ನು ಇವರಿಬ್ಬರ ಮೇಲೆ ಈ ಹಿಂದೆ ಸಿಸಿಬಿ ಹೆಚ್ಚವರಿ ಆಯುಕ್ತರಾಗಿದ್ದ ಸಮಯದಲ್ಲಿ ಅಲೋಕ್ ಕುಮಾರ್ ಪ್ರಯೋಗಿಸಿದ್ದರು.

Spread the love
Leave A Reply

Your email address will not be published.

Flash News