ಲಂಚ ಸ್ವೀಕಾರ ವೇಳೆ ಎಸಿಬಿ ಬಲೆಗೆ ಬಿದ್ದ ಭ್ರಷ್ಟೆ.

0

ಲಂಚ ಸ್ವೀಕಾರ ವೇಳೆ ಸಿಕ್ಕಬಿದ್ದ ಪರಮಭ್ರಷ್ಟ ಮ್ಯಾನೇಜರ್ ಸರೋಜಾದೇವಿ
ಲಂಚ ಸ್ವೀಕಾರ ವೇಳೆ ಎಸಿಬಿ ದಾಳಿಯಲ್ಲಿ  ಸಿಕ್ಕಬಿದ್ದ ಪರಮಭ್ರಷ್ಟ ಮ್ಯಾನೇಜರ್ ಸರೋಜಾದೇವಿ

ಬೆಂಗಳೂರು: ವಾಹನ ನೀಡಲು  ಲಂಚ ಸ್ವೀಕರಿಸುವ ವೇಳೆ ಅಧಿಕಾರಿಣಿಯೊಬ್ಬಳು ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮ್ಯಾನೇಜರ್ ಸರೋಜಾದೇವಿ ಎಸಿಬಿ ಬಲೆಗೆ ಸಿಕ್ಕಿಬಿದ್ದ ಅಧಿಕಾರಿಣಿಯಾಗಿದ್ದಾಳೆ.ನಿಗಮದಲ್ಲಿ ಜಿಲ್ಲಾ ವ್ಯವಸ್ಥಾಪಕರಾಗಿರುವ ಸರೋಜಾದೇವಿ ನಿಗಮದ ಯೋಜನೆಯೊಂದರ ಮಂಜೂರಾತಿ ಮಾಡಲು ಫಲಾನುಭವಿಯಿಂದ ಲಂಚ ಸ್ವೀಕರಿಸುವ ವೇಳೆ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ನಿಗಮದ ಐರಾವತ ಎಂಬ ಯೋಜನೆ ಅಡಿ ವಾಹನ ನೀಡಲು 35 ಸಾವಿರ ಹಣಕ್ಕೆ  ಬೇಡಿಕೆ ಇಟ್ಟಿದ್ದರು.ಈ ವಿಷಯವನ್ನು  ಹನುಮಂತ ಎನ್ನುವ ಮದ್ಯವರ್ತಿ ಎಸಿಬಿ ಗಮನಕ್ಕೆ ತಂದಿದ್ದಾರೆ.ಇದಕ್ಕೆ ಮುಹೂರ್ತ ಫಿಕ್ಸ್ ಮಾಡಿದ ಎಸಿಬಿ 25 ಸಾವಿರ ಹಣವನ್ನು ಕೊಡುವ ವೇಳೆ ಸರೋಜಾದೇವಿಯನ್ನು ರೆಡ್ ಹ್ಯಾಂಡಾಗಿ ಸೀಜ್ ಮಾಡಿ ವಶಕ್ಕೆ ಪಡೆದಿದ್ದಾರೆ. 

ಸರೋಜಾದೇವಿ ವಿರುದ್ದ  ಈ ಹಿಂದೆಯೂ ಸಾಕಷ್ಟು ಆರೋಪಗಳು ಕೇಳಿಬಂದಿದ್ವು.ಆದ್ರೆ ಲಂಚಗುಳಿತನ ವ್ಯಾಪಕವಾದ ಹಿನ್ನಲೆಯಲ್ಲಿ ಫಲಾನುಭವಿಗಳು ಸೇರಿಕೊಂಡು ಎಸಿಬಿಗೆ ದೂರು ಕೊಡಲು ನಿರ್ಧರಿಸಿ ಖೆಡ್ಡಾ ತೋಡಿಸಿದ್ದಾರೆ.ಇದರಿಂದ ಇತರೆ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿದಂತಾಗಿದೆ. 

Spread the love
Leave A Reply

Your email address will not be published.

Flash News