ಮಡಿವಾಳದ FSL ಕಚೇರಿಯ ನಿಗೂಢ ಸ್ಪೋಟ: ನಿಜವಾದ ಅಸಲಿಯತ್ತೇನು?

0

 

ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತೆ ಸ್ವಲ್ಪ ಕಂಪಿಸಿದೆ.ಇದಕ್ಕೆ ಕಾರಣ  ಮಡಿವಾಳದಲ್ಲಿರುವ ಎಫ್ ಎಸ್ಎಲ್ ಕಚೇರಿಯಲ್ಲಿ  ಸಂಭವಿಸಿರುವ  ಭೀಕರ ಸ್ಫೋಟ.ಡೊಟೋನೇಟರ್ ಗಳ ಪರಿಶೀಲನೆ ವೇಳೆ ಸಂಭವಿಸಿರುವ ಈ ಸ್ಪೋಟದಲ್ಲಿ ವಿಜ್ಞಾನಿಗಳು ಸೇರಿದಂತೆ ಸಿಬ್ಬಂದಿಗೆ ಗಾಯಗಳಾಗಿವೆ.ಸ್ಪೋಟದಿಂದ  ಲ್ಯಾಬ್ ಒಳಗೆ ಹತ್ತಿಕೊಂಡಿದ್ದ  ಬೆಂಕಿ ನಂದಿಸುವ ಕೆಲಸ ನಡೆದಿದ್ದು,  ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್   ಕಮಿಷನರ್ ಭಾಸ್ಕರ್ ರಾವ್ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ..

ಏನಾಯ್ತು…ಯಾರ್ಯಾರಿದ್ದರು:ರಾಯಚೂರಿನಿಂದ ಬಂದಿದ್ದ ಸ್ಪೋಟಕ ನಿಜವಾಗಲೂ ಏನು ಎನ್ನುವುದರ ಪತ್ತೆಯಲ್ಲಿ  ಹಿರಿಯ ವಿಜ್ಞಾನಿ  ಶ್ರೀನಾಥ್ ತೊಡಗಿದ್ದರು.ಅವರಿಗೆ ಇನ್ನುಳಿದಂತೆ ಪ್ರೋಬೆಷನರಿ ವಿಜ್ಞಾನಿಗಳಾದ ನವ್ಯ, ವಿಶ್ವನಾಥ್, ವಿಶ್ವನಾಥ್ ಸೇರಿದಂತೆ ಆರು ಜನರು ನೆರವು ನೀಡ್ತಿದ್ರು.ಟಿಎಟಿಪಿ ಕೆಮಿಕಲ್ ಎಂಬ ಊಹೆ ಮೇಲೆ ಪರೀಶೀಲನೆ ನಡೆಸುತ್ತಿದ್ದಾಗ್ಲೇ, ಸ್ಪೋಟ ಸಂಭವಿಸಿದೆ.

ಮಧ್ಯಾಹ್ನ 3 ಗಂಟೆಗೆ ಸಂಭವಿಸಿರುವ ಸ್ಪೋಟದಲ್ಲಿ ಗಾಯಗೊಂಡ 7 ಜನರಿಗೆ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.ನವ್ಯ,ವಿಶ್ವನಾಥ್, ಶ್ರೀನಾಥ್, ಆಂಥೋಣಿ ಪ್ರಭು ದಲಾಯತ್ ಹಾಜರಿದ್ದರು ಎನ್ನಲಾಗಿದೆ. ಕೆಮಿಕಲ್ ಸೇರಿಸುವಾಗ ಸಡನ್ ಸ್ಪೋಟ ಆಗಿದ್ದು ಸ್ಪೋಟದ ತೀವ್ರತೆಗೆ ಸಿನೀಯರ್ ಸೈಂಟಿಫಿಕ್ ಅಪೀಸರ್ ಶ್ರೀನಾಥ್ ಬೆರಳು ಕಟ್ ಡ್ಯಾಮೆಜ್ ಆಗಿದೆ.

ಇನ್ನುಳಿದಂತೆ  ಹೋಂ ಗಾರ್ಡ್ ಗಿರಿಜಮ್ಮ,ದಲಾಯತ್ ನೇತ್ರಾವತಿ‌ಗೆ ಪೆಟ್ಟಾಗಿದ್ದು, ವಿಜ್ಞಾನಿ‌ ನವ್ಯರಿಗೆ ಕಿವಿಗೆ ತೀವ್ರ ಪೆಟ್ಟಾಗಿ ಕಿವಿಕೇಳದಂತಾಗಿದೆ…ಹಿರಿಯ ವಿಜ್ಞಾನಿ ಶ್ರೀನಾಥ್ ಅವರಿಗೆ ಮೇಜರ್ ಇಂಜುರಿಯಾಗಿದೆ.ಇನ್ನುಳಿದ ವಿಜ್ಙಾನಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.ವಿಶ್ವನಾಥ್, ಆಂಥೋನಿ ಪ್ರಭು,ವಿಷ್ಣುವಲ್ಲಭ, ಬಸವಪ್ರಭು,ನೇತ್ರಾವತಿ, ಗಿರಿಜಮ್ಮ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ.

ಪ್ರಾಥಮಿಕ ಮಾಹಿತಿ ಏನನ್ನುತ್ತೆ: ಸ್ಥಳಕ್ಕೆ ಭೇಟಿ ನೀಡಿದ ಕಮಿಷನರ್ ಭಾಸ್ಕರ್ ರಾವ್, ಪ್ರಾಥಮಿಕ ತನಿಖೆಯಲ್ಲಿ ಟಿಎಟಿಪಿ ಎಂಬ ಹೈ ಎಕ್ಸ್ಪ್ಲೋಸಿವ್ ಸ್ಟೋಟ ಗೊಡಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು,ಇದುನಿಜಕ್ಕೂ ರಾಯಚೂರಿನಿಂದ ಬಂದಿದ್ದಾ ಅಥವಾ ಬೇರೆ ಯಾರಾದರೂ ದುರುದ್ದೇಶದಿಂದ ಕಳಿಹಿಸಿದ್ದಾರಾ ಎಂಬ ಬಗ್ಗೆ ತನಿಖೆ ನಡೆಸಲಾಗುವುದು.ಮುನ್ನೆಚ್ಚರಿಕಾ ಕ್ರಮವಾಗಿ ಘಟನಾ ಸ್ಥಳದಲ್ಲಿ ವಾಟರ್ ಸೋಲೆಬಲ್, ಮಿಥೇನ್ ಸೊಲೆಬಲ್ ನ್ನು  ಪೊಲೀಸರು ಹರಡಿಸಿದ್ದಾರೆ.

ಸ್ಪೋಟದ ಬಗ್ಗೆ ಶಂಕೆ: ಸ್ಪೋಟದ ಬಗ್ಗೆ ಸಾಕಷ್ಟು ಗುಮಾನಿ ವ್ಯಕ್ತವಾಗಿದೆ. ರಾಯಚೂರಿನಿಂದ ಸ್ಪೋಟಕ ವಸ್ತು ಕಳಿಸಲಾಗಿದೆ ಎಂದು ಹೇಳಲಾಗ್ತಿರೋ ವಸ್ತುವಿನ ಅಸಲೀಯತ್ತು ತಿಳಿಯುವ ಪ್ರಯತ್ನ ನಡೆಯುತ್ತಿದೆ.ಏಕೆಂದ್ರೆ ಈ ಹಿಂದೆ ಇಂತದ್ದೇ ಘಟನೆಯಲ್ಲಿ  ರಾಯಚೂರಿನಲ್ಲಿ ಇದೇ ಸ್ಪೋಟಕದಿಂದ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದ.ಆ ಕಾರಣಕ್ಕೆ ಈ ಸ್ಪೋಟದ ಬಗ್ಗೆ ಕೂಲಂಕುಷ ತನಿಖೆಗೆ ಪೊಲೀಸ್ ಇಲಾಖೆ ಮುಂದಾಗಿದ್ದು ಡಿಸಿಪಿಗೆ ಆದೇಶಿಸಲಾಗಿದೆ.

ಬಾಂಬ್ ಸ್ಕ್ವಾಡ್ ಆಗಮನ-ತಪಾಸಣೆ:ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.ಹಾಗಾಗಿ ಎಲ್ಲಾ ಆಯಾಮಗಳಲ್ಲೂ ಸಮಗ್ರ ತನಿಖೆಗೆ ಆದೇಶಿಸಲಾಗಿದೆ.ಈ ಹಿನ್ನಲೆಯಲ್ಲಿ, ಸದ್ಯ ಸ್ಥಳದಲ್ಲಿ ಪೊಲೀಸರಿಂದ ಭದ್ರತೆ ಕಲ್ಪಿಸಲಾಗಿದೆ.ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಬಂದು  ಫೂರ್ತಿ ಕಟ್ಟಡವನ್ನ ತಪಾಸಣೆ ಮಾಡಿದೆ. ಯಾವುದೆ ಸ್ಪೋಟಕ ಇಲ್ಲ ಎನ್ನೋದು ಸ್ಪಷ್ಟವಾದ ಮೇಲೇನೆ ಪೊಲೀಸರ ವಶಕ್ಕೆ ಕಟ್ಟಡ ನೀಡಲಾಗುತ್ತೆ ಎಂದು ಟೆಕ್ನಾಲಜೀಸ್‌ ಅಂಡ್‌ ಕ್ರೈಂ ಎಡಿಜಿಪಿ ಪರಶಿವಮೂರ್ತಿ ತಿಳಿಸಿದ್ದಾರೆ.

 

 

Spread the love
Leave A Reply

Your email address will not be published.

Flash News