ಭ್ರಷ್ಟರ ರಕ್ಷಣೆಗೆ ನಿಲ್ಲುವಂಥ “ದೌರ್ಬಲ್ಯ” ಏನ್ ನಿಮ್ದು ಕಮಿಷನರ್ ಡಾ.ಪ್ರಕಾಶ್ ಅವ್ರೇ!

0
ಬಿಡಿಎ ಕಮಿಷನರ್ ಡಾ.ಪ್ರಕಾಶ್
ಬಿಡಿಎ ಕಮಿಷನರ್ ಡಾ.ಪ್ರಕಾಶ್

ಬೆಂಗಳೂರು: ಇವರೇನ್   ಬಿಡಿಎ ಉಳಿಸ್ಲಿಕ್ಕಂಥ ಕೆಲಸ ಮಾಡೋ ಕಮಿಷನರ್ರಾ..ಅಥ್ವಾ ಭ್ರಷ್ಟರನ್ನು ರಕ್ಷಿಸೋ ಮೂಲಕ ಬಿಡಿಎನ್ನು ಬರ್ಬಾದ್ ಮಾಡಲಿಕ್ಕಂಥ ಬಂದಿರೋ ಅಧಿಕಾರಿನೋ ಗೊತ್ತಾಗ್ತಿಲ್ಲ.ಕಾರ್ನರ್ ಸೈಟ್ ಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಮೂಲಕ ಬಿಡಿಎಗೆ ಮಹಾ ದೋಖಾ ಮಾಡಿ,ನಷ್ಟಕ್ಕೆ ಕಾರಣವಾದವ್ರನ್ನು ಕತ್ತಿಡಿದು ತಳ್ಳೋದನ್ನು ಬಿಟ್ಟು ಅವರ ವಿರುದ್ಧ ಯಾವ್ದೇ ಕ್ರಮ ಕೈಗೊಳ್ಳದೆ ಸುಮ್ಮನಿರೋದನ್ನು ನೋಡಿದ್ರೆ ಭ್ರಷ್ಟ ಸಿಬ್ಬಂದಿಯ ಪಾಪದ ದುಡ್ಡಲ್ಲಿ ಇವರಿಗೂ ಪಾಲಿದ್ದಂತೆ ಕಾಣುತ್ತೆ.
ಡಾ.ಪ್ರಕಾಶ್.ಈ ಐಎಎಸ್ ಅಧಿಕಾರಿಯನ್ನು ಅದ್ಯಾವ ಹೊತ್ತಲ್ಲಿ ಬಿಡಿಎ ಕಮಿಷನರ್ ಆಗಿ ನಿಯೋಜನೆ ಮಾಡ್ತೋ ಗೊತ್ತಿಲ್ಲ ಸರ್ಕಾರ ಬಂದಾಕ್ಷಣದಿಂದ್ಲೇ ಚಕ್ಕಳಮಕ್ಕಳ ಹಾಕಿ ತಿನ್ನೊಕ್ಕೆ ಶುರುಮಾಡಿದ್ರೆನ್ನುವ ಆರೋಪಕ್ಕೆ ತುತ್ತಾದ್ರು.ಬಿಡಿಎ ಕೋಟ್ಯಾಂತರ  ನಷ್ಟದಲ್ಲಿದೆ ಅಂಥ ಗೊತ್ತಿದ್ರೂ ಮುಳುಗೋ ಹಡಗನ್ನು ರಕ್ಷಿಸುವ ಬದ್ಲು ಅದನ್ನು ಮತ್ತಷ್ಟು ಮುಳುಗಿಸುವ ಕೆಲಸಕ್ಕೆ ತಾವೇ ಕ್ಯಾಪ್ಟನ್ ಆಗಿ ಮುಂದುವರೆದಿದ್ದಾರೆ.

ಕೆಲಸ ಮಾಡಿದ ಕಡೆ ಒಳ್ಳೆಯ ಹೆಸರಿಲ್ಲ: ಈ ಹಿಂದೆ ಕೆಲಸ ಮಾಡಿದ ಇಲಾಖೆಗಳಲ್ಲಿ ಈ ಅಧಿಕಾರಿಗೆ ಒಳ್ಳೆಯ ಹೆಸರಿಲ್ಲ.ಕೆಲಸ ಮಾಡಿದ ಜಾಗದಲ್ಲೆಲ್ಲಾ ಬರೀ ಉಣ್ಣೊಕ್ಕೆ ಕೂತಿದ್ದೇ ಹೆಚ್ಚು.ಹಿಂದೆ ಬೆಂಗಳೂರು ಜಿಲ್ಲಾಧಿ ಕಾರಿಯಾಗಿದ್ದಾಗಲೂ ಅನೇಕ ಹಗರಣ ಹಾಗೂ ಭ್ರಷ್ಟಾಚಾರಗಳಲ್ಲಿ ತೊಡಗಿಕೊಂಡ ಆರೋಪ ಇವರ ಮೇಲಿದೆ.ಅಲ್ಲೆಲ್ಲಾ ಕಿಕ್ ಬ್ಯಾಕ್ ಆಸೆಗಾಗಿ ಕೋಟಿಗಳಲ್ಲಿ ಹಣ ಮಾಡಿದ ಕುಖ್ಯಾತಿ ಇವರ ಮೇಲಿದೆ.ಇಂಥಾ ಅಧಿಕಾರಿ ಸರ್ಕಾರದ ಮಟ್ಟದಲ್ಲಿ ದೊಡ್ಡ ಲಾಭಿ ನಡೆಸಿ ಕೋಟ್ಯಾಂತರ ಹಣವನ್ನು ಕೊಟ್ಟು  ಬಿಡಿಎಗೆವಕ್ಕರಿಸಿದರೆನ್ನುವ ಆರೋಪಗಳಿವೆ.

ದಲ್ಲಾಳಿಗಳನ್ನು ಹೊರಗಿಟ್ಟಂತೆ ಮಾಡಿ ಅವರೊಂದಿಗೇನೆ ವ್ಯವಹಾರ:  ಬಿಡಿಎಗೆ ಬಂದ್ಮೇಲೆ ನಷ್ಟದಲ್ಲಿರುವ ಬಿಡಿಎ ಯನ್ನು ಉದ್ದಾರ ಹೇಗೆ ಮಾಡಬೇಕೆನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳೋದನ್ನು ಬಿಟ್ಟು ಮೊದಲು ಮಾಡಿದ್ದು ದಲ್ಲಾಳಿಗಳನ್ನು.ಎಲ್ಲರೂ  ಪ್ರಕಾಶ್ ಸಾಹೇಬನ ಕೆಲಸವನ್ನು ಹೊಗಳಿದ್ದೇ ಹೊಗಳಿದ್ದು.ಆದ್ರೆ ಅದರ ಹಿಂದೆ ಮತ್ತೊಂದ್ ರೀತಿಯ ಅಕ್ರಮ ಎಸಗುವ ಪ್ಲ್ಯಾನ್ ಇತ್ತೆನ್ನವುದು ನಂತ್ರ ಗೊತ್ತಾಯ್ತು. ದಲ್ಲಾಳಿಗಳನ್ನು ನಿಯಂತ್ರಿಸಿದಂಗೆ ಮಾಡಿದ ಪ್ರಕಾಶ್ ಅವರನ್ನು ತಮ್ಮ ಪಟಾಲಂ ಮೂಲಕ ಆಪರೇಟ್ ಮಾಡಿದರೆನ್ನುವ ಮಾತುಗಳಿವೆ.ಇವತ್ತು ಬಿಡಿಎ ಕ್ಯಾಂಪಸ್ ನೊಳಗೆ ದಲ್ಲಾಳಿಗಳು ಕಾಣಿಸಿಕೊಳ್ಳದಿದ್ರೂ ಹೊರಗೆ ತಮ್ಮ ದಂಧೆ ಕುದುರಿಸಿಕೊಂಡು ಅದರಲ್ಲಿ ಪರ್ಸಂಟೇಜನ್ನು ಪ್ರಕಾಶ್ ಸಾಹೇಬ್ರಿಗೆ ಕಪ್ಪವಾಗಿ ಒಪ್ಪಿಸ್ತಿದ್ದಾರೆನ್ನುವ ಮಾತುಗಳಿವೆ.

ಕಾರ್ನರ್ ಸೈಟ್ ಅಕ್ರಮ-1
ಕಾರ್ನರ್ ಸೈಟ್ ಅಕ್ರಮ-1
ಕಾರ್ನರ್ ಸೈಟ್ ಅಕ್ರಮ-2
ಕಾರ್ನರ್ ಸೈಟ್ ಅಕ್ರಮ-2
ಕಾರ್ನರ್ ಸೈಟ್ ಅಕ್ರಮ-3
ಕಾರ್ನರ್ ಸೈಟ್ ಅಕ್ರಮ-3

ಕಾರ್ನರ್ ಸೈಟ್ ದಂಧೆ ಗೊತ್ತಿಲ್ವೇ ನಿಮ್ಗೆ: ಕಾರ್ನರ್ ಸೈಟ್ ಗಳ ದಂಧೆ ಬಿಡಿಎ ನಲ್ಲಿ ಬಹುದೊಡ್ಡ ಅಕ್ರಮವಾಗಿ ಗುರುತಿಸಿಕೊಂಡಿದೆ.ಸಂಕಷ್ಟದಲ್ಲಿರುವ ಬಿಡಿಎ ಗೆ ಒಂದ್ ರೀತಿ ವರವಿದ್ದಂತೆ ಅವು.ಆದ್ರೆ ಅವುಗಳ ಮಾರಾಟವೇ ಇವತ್ತು ಬಹುದೊಡ್ಡ ದಂಧೆಯಾಗೋಗಿದೆ.ಉಪಕಾರ್ಯದರ್ಶಿಗಳಾಗಿರುವಂಥವ್ರು ಹಣದಾಸೆಗೆ ಕಾರ್ನರ್ ಸೈಟ್ ಗಳನ್ನು ಮಾರಾಟ ಮಾಡುವಂಥ ಕೆಲಸ ಶುರುವಿಟ್ಟುಕೊಂಡಿದ್ದಾರೆ.

ಇದು ಮೇಲ್ನೋಟಕ್ಕೆ ಸಣ್ಣದಾಗಿ ಕಂಡ್ರೂ HSR  ಲೇ ಔಟ್ ನಂಥ ದುಬಾರಿ ಏರಿಯಾದಲ್ಲಿ ಇವುಗಳ ಮಾರಾಟ ನಡೆಯುತ್ತಿರುವುದರಿಂದ ಉಪ ಕಾರ್ಯದರ್ಶಿಗಳಾದಂತವರಿಗೆ ಲಕ್ಷಗಳಲ್ಲಿ ಕಿಕ್ ಬ್ಯಾಕ್ ಸಿಗುತ್ತೆ.ಹಾಗಾಗಿ ಎಲ್ಲಾ ಡಿಎಸ್(ಉಪ ಕಾರ್ಯದರ್ಶಿ)ಗಳು ತಮ್ಮ ಗಮನವನ್ನು ಬಹುತೇಕ ಕಾರ್ನರ್ ಸೈಟ್ ಗಳು ಹಾಗೂ ಬದಲಿ ನಿವೇಶಗಳ ಮಾರಾಟದ ವಿಷಯಕ್ಕೇನೆ ಸೀಮಿತಗೊಳಿಸಿಕೊಂಡು ಕೆಲಸ ಮಾಡುತ್ತಿದ್ದಾರೆ.ಇವರೆಲ್ಲರ ದಂಧೆಗೆ ಪರೋಕ್ಷವಾಗಿ ಸಹಕಾರ ನೀಡುತ್ತಿರುವವರೇ ಕಮಿಷನರ್ ಡಾ.ಪ್ರಕಾಶ್ ಎನ್ನುವ ಆರೋಪವಿದೆ.

ಸಿಎ ಸೈಟ್ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು ನಿರ್ಭೀತವಾಗಿ ಕೆಲಸ ಮಾಡುತ್ತಲೇ ಇದ್ದಾರೆ.
ಕಾರ್ನರ್ ಸೈಟ್ ಅಕ್ರಮದಲ್ಲಿ ಶಾಮೀಲಾದ ಭ್ರಷ್ಟ ಅಧಿಕಾರಿಗಳು ಆಯಕಟ್ಟಿನ ಜಾಗದಲ್ಲಿಯೇ   ನಿರ್ಭೀತವಾಗಿ ಕೆಲಸ ಮಾಡುತ್ತಲೇ ಇದ್ದಾರೆ.
ಕಾರ್ನರ್ ಸೈಟ್ ಅಕ್ರಮದ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ವಿಜಯಭಾಸ್ಕರ್ ಅವರಿಗೆ ದೂರು ಸಲ್ಲಿಸಿದ ಮಾಹಿತಿ ಹಕ್ಕು ಕಾರ್ಯಕರ್ತ ರವಿಕುಮಾರ್
ಕಾರ್ನರ್ ಸೈಟ್ ಅಕ್ರಮದ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ವಿಜಯಭಾಸ್ಕರ್ ಅವರಿಗೆ ದೂರು ಸಲ್ಲಿಸಿದ ಮಾಹಿತಿ ಹಕ್ಕು ಕಾರ್ಯಕರ್ತ ರವಿಕುಮಾರ್

ಈ ಭ್ರಷ್ಟರು ಮಾಡಿದ ಅಕ್ರಮದ ಬಗ್ಗೆ ನಿಮಗೆ ಮಾಹಿತಿಯಿಲ್ವೇ:  ಎಚ್ ಎಸ್ ಆರ್ ಲೇ ಔಟ್ ಸೆಕ್ಟರ್ 7 ರ ಮೂಲೆ ನಿವೇಶನ ಸಂಖ್ಯೆ 66/1 ಹಾಗೂ ಮೂಲ ನಿವೇಶನ 290/ಬಿ ಗಳ ಅಕ್ರಮ ಮಾರಾಟದಲ್ಲಿ ಬಿಡಿಎನಲ್ಲಿ  ಉಪಕಾರ್ಯದರ್ಶಿ-4 ರಲ್ಲಿ  ಮೇಲ್ವಿಚಾರಕನಾಗಿರುವ  ಡಿ.ಅಶ್ವತ್ಥನಾರಾಯಣರಾವ್,ಪೂರ್ವ ವಿಭಾಗದಲ್ಲಿ ಎಂಜಿನಿಯರ್ ಆಗಿರುವ ಎಂ.ಪ್ರಭು,ಸಹಾಯಕ ಕಾರ್ಯಪಾಲಕ ಅಭಿಯಂತರನಾಗಿರುವ ಕೆ.ಎಚ್ ಲಕ್ಷ್ಮಿನಾರಾಯಣ್ ಹಾಗೂ ಉಪ ಕಾರ್ಯದರ್ಶಿ-1 ಅವರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿರುವ ಎಸ್ ಮಂಜುನಾಥ್ ಅವರು ಬೃಹತ್ ಗೋಲ್ಮಾಲ್ ನಡೆಸಿರುವುದು ಸಾಬೀತಾಗಿದ್ರೂ ಅವರ ವಿರುದ್ಧ ಕ್ರಮ ಕೈಗೊಳ್ಳದೆ ಅವರನ್ನು ರಕ್ಷಿಸುವ ಕೆಲಸ ಮಾಡುತ್ತಿರುವುದು ಎಷ್ಟು ಸರಿ.

ಮುಖ್ಯ ಕಾರ್ಯದರ್ಶಿಗಳು ನಿಮಗೆ ಆದೇಶಿಸಿದ್ದೇನು ? :ಮೂಲೆ ನಿವೇಶನಗಳ ಮಾರಾಟದಲ್ಲಿನ ಕೋಟ್ಯಾಂತರ ರೂ  ಗೋಲ್ಮಾಲ್ ನ್ನು ಬೆಳಕಿಗೆ ತಂದು  ಈ ಬಗ್ಗೆ ಹೋರಾಟ ಮಾಡುತ್ತಿರುವ ಮಾಹಿತಿ ಹಕ್ಕು ಕಾರ್ಯಕರ್ತ ರವಿಕುಮಾರ್, ಡಾ. ಪ್ರಕಾಶ್ ಅವರ ಅಸಹಾಯಕತೆ ಪರಿಗಣಿಸಿಯೇ ಈ ಅಕ್ರಮವನ್ನು ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಗಮನಕ್ಕೆ ತಂದಿದ್ದರು.ತಕ್ಷಣಕ್ಕೆ ಕಾರ್ಯಪ್ರವೃತ್ತರಾದ ಅವ್ರು ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾದವ್ರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚಿಸಿದ್ದರು.ಮುಖ್ಯ ಕಾರ್ಯದರ್ಶಿ ಅವರ ಆದೇಶ ಪಾಲನೆ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಕಮಿಷನರ್ ಸಾಹೇಬ್ರು ತಮ್ಮ ಕೆಳಹಂತದ ಉಪ ಕಾರ್ಯದರ್ಶಿಗಳ ಮೂಲಕ ತಪ್ಪಿತಸ್ಥರನ್ನು ಶಿಕ್ಷಿಸುವಂತೆ ಸೂಚಿಸಿದ್ದರು.

ಅಕ್ರಮದಲ್ಲಿ ಭಾಗಿಯಾಗಿ ವರ್ಗಾವಣೆಗೊಂಡಿರುವ ಡಿಎಸ್-1 ಎಂಎಸ್ ಎನ್ ಬಾಬು
ಅಕ್ರಮದಲ್ಲಿ ಭಾಗಿಯಾದ ಆರೋಪದಲ್ಲಿ ವರ್ಗಾವಣೆಗೊಂಡಿರುವ ಡಿಎಸ್-1 ಎಂಎಸ್ ಎನ್ ಬಾಬು

ಆ ಬಾಬು ಭ್ರಷ್ಟ..ಈ ಚಿದಾನಂದ ಮೂರ್ತಿ ಪರಮಭ್ರಷ್ಟ:   ಇದರ ಭಾಗವಾಗಿಯೇ ಮೂಲ ನಿವೇಶನ ಮಾರಾಟದ ಅಕ್ರಮದ ಹಿಂದಿದ್ದ ಉಪ ಕಾರ್ಯದರ್ಶಿ-1 ಆಗಿದ್ದ ಎಂ.ಎಸ್ ಎನ್ ಬಾಬು ಅವರನ್ನು ವರ್ಗಾವಣೆ ಮಾಡಲಾಯ್ತು.ಅವರ ಸ್ಥಾನಕ್ಕೆ ಚಿದಾನಂದ ಮೂರ್ತಿ ವಕ್ಕರಿಸಿದ್ದಾನೆ.ಈತನದೂ ಒಂದು ಕರ್ಮಕಾಂಡ.ಮೂಲನಿವೇಶನಗಳ ಅಕ್ರಮದಲ್ಲಿ ಬಾಬು ಕೋಟಿಗಳನ್ನು ತಿಂದು ತೇಗಿದ್ರೆ ಈ ವಿಚಾರದಲ್ಲಿ ಪಿಎಚ್ ಡಿಯನ್ನೇ ಮಾಡಿದ್ದಾನೆ ಚಿದಾನಂದ ಮೂರ್ತಿ.ಈತನ ಕರ್ಮಕಾಂಡವನ್ನು ಅರಸೀಕೆರೆಯ ಜೆಡಿಎಸ್  ಶಾಸಕ ಶಿವಲಿಂಗೇಗೌಡ ಕೇಳುದ್ರೆ ಚೆನ್ನಾಗಿಯೇ ಹೇಳ್ತಾರೆ.

ತಪ್ಪಿತಸ್ಥರ ವಿರುದ್ಧ ಕ್ರಮವೇಕಿಲ್ಲ?: ಮುಖ್ಯ ಕಾರ್ಯದರ್ಶಿಗಳ ಆದೇಶಕ್ಕೇನೆ ಬೆಲೆ ಕೊಡ್ತಿಲ್ಲ ಕಮಿಷನರ್ ಪ್ರಕಾಶ್: ಮೂಲನಿವೇಶನಗಳ ಮಾರಾಟದಲ್ಲಿ ವ್ಯಾಪಕ ಗೋಲ್ಮಾಲ್ ನಡೆದಿರುವ ಶಂಕೆ ವ್ಯಕ್ತಪಡಿಸಿ ತಪ್ಪಿತಸ್ಥರನ್ನು ಶಿಕ್ಷಿಸುವಂತೆ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಆದೇಶಿಸಿದ್ರೂ ಸಹ ಈವರೆಗೂ ಅವರ ವಿರುದ್ದ ಯಾವುದೇ ಕ್ರಮ ಜಾರಿಯಾಗಿಲ್ಲ. ಡಿ.ಅಶ್ವತ್ಥನಾರಾಯಣ, ಮಂಜುನಾಥ್,ಲಕ್ಷ್ಮಿನಾರಾಯಣ್ ಹಾಗೂ ಪ್ರಭು ಅದೇ ಆಯಕಟ್ಟಿನ ಜಾಗದಲ್ಲಿ ಭದ್ರವಾಗಿ ಕುಳಿತು,ಅಕ್ರಮಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಕೂತಿದ್ದಾರೆ. ಮತ್ತಷ್ಟು ಮೂಲೆ ನಿವೇಶನಗಳ ಮಾರಾಟಕ್ಕೆ ಹೊಂಚಾಕುತ್ತಿದ್ದಾರೆ.ಇವರ ವಿರುದ್ಧ ಕ್ರಮ ಜರುಗಿಸ್ಬೇಕೆಂದು ಸರ್ಕಾರದಿಂದ್ಲೇ ಆದೇಶವಾಗಿದ್ರೂ ಅದರ ಪಾಲನೆಯಾಗಿಲ್ಲ ಎಂದ್ರೆ ಕಮಿಷನರ್ ಪ್ರಕಾಶ್ ಎಷ್ಟರ ಮಟ್ಟಿಗೆ ತಮ್ಮ ಮೇಲಾಧಿಕಾರಿಗಳ ಆದೇಶ ಪಾಲಿಸ್ತಾರೆನ್ನುವುದು ಗೊತ್ತಾಗುತ್ತೆ.

ತಾಕತ್ತಿದ್ದರೆ ಕ್ರಮ ಜರುಗಿಸಿ: ಮೂಲೆ ನಿವೇಶನಗಳ ಅಕ್ರಮದಲ್ಲಿ ಭಾಗಿಯಾದವ್ರ ತಪ್ಪು ಮುಖಕ್ಕೆ ರಾಚುವಂತಿದ್ರೂ, ಡಾ.ಪ್ರಕಾಶ್ ಅವರಂಥ ಅಧಿಕಾರಿಗಳು ಭ್ರಷ್ಟರನ್ನು ರಕ್ಷಿಸುವಂಥ ಕೆಲಸ ಮಾಡ್ತಾರೆಂದ್ರೆ ಯಾರ ನೈತಿಕತೆ,ಪ್ರಾಮಾಣಿಕತೆಯನ್ನು ಪ್ರಶ್ನಿಸ್ಬೇಕು ನೀವೇ ಹೇಳಿ ಕಮಿಷನರ್ ಸಾಹೇಬ್ರೇ..ಇಷ್ಟಿದ್ದೂ ನಿಮ್ಮಿಂದ  ಬಿಡಿಎ ಉದ್ದಾರವಾಗುತ್ತೆಂದು ನಿರೀಕ್ಷಿಸೋನು ಮೂರ್ಖ ಅಲ್ದೇ ಇನ್ನೇನು..

ನಿಮಗೆ ತಾಕತ್ತಿದ್ದರೆ,,ಮೇಲಾಧಿಕಾರಿಗಳ ಆದೇಶದ ಬಗ್ಗೆ ಕಿಂಚಿತ್ತೂ ಗೌರವ ಇದ್ರೆ, ಎಲ್ಲಕ್ಕಿಂತ ಹೆಚ್ಚಾಗಿ  ಅನ್ನ ಕೊಡೋ ಕೆಲಸದ ಬಗ್ಗೆ ನಿಮ್ಗೆ ನೀಯತ್ತೆ ನ್ನೋದೇ ಇದ್ದರೆ ಮೊದ್ಲು ಭ್ರಷ್ಟರ ಹೆಡೆಮುರಿ ಕಟ್ಟೋ ಕೆಲಸ ಮಾಡಿ..ಆಗ್ಲಿಲ್ವಾ…ಹುದ್ದೆಗೆ ರಾಜೀನಾಮೆ ಕೊಟ್ಟು ಮನೆಗ್ಹೋಗಿ..ಇದು  ಕನ್ನಡ ಫ್ಲಾಶ್ ನ್ಯೂಸ್ ನಿಮಗೆ ಹಾಕ್ತಿರೋ ಸವಾಲ್..

 

 

 

Spread the love
Leave A Reply

Your email address will not be published.

Flash News