“ಮಾಜಿ”ಯನ್ನು ನಂಬಿ, ಬಿಬಿಎಂಪಿ “ಹಾಲಿ” ಕಾರ್ಪೊರೇಟರ್ ಕೆಟ್ರಾ..!

0
ಸಂಪಂಗಿರಾಮ ವಾರ್ಡ್ ನ ಕೈ ಕಾರ್ಪೊರೇಟರ್ ವಸಂತಕುಮಾರ್
ಸಂಪಂಗಿರಾಮ ವಾರ್ಡ್ ನ ಕೈ ಕಾರ್ಪೊರೇಟರ್ ವಸಂತಕುಮಾರ್
ಸಂಪಂಗಿರಾಮ ವಾರ್ಡ್ ನ ಬಿಜೆಪಿ ಮಾಜಿ ಕಾರ್ಪೊರೇಟರ್ ಎಂ.ಗೋಪಿ
ಸಂಪಂಗಿರಾಮ ವಾರ್ಡ್ ನ ಬಿಜೆಪಿ ಮಾಜಿ ಕಾರ್ಪೊರೇಟರ್ ಎಂ.ಗೋಪಿ

ಬೆಂಗಳೂರು: ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಬಿಬಿಎಂಪಿ ಕಾರ್ಪೊರೇಟರ್ ವಸಂತಕುಮಾರ್.ಸಂಪಂಗಿರಾಮನಗರ ವಾರ್ಡ್ ನ ಕಾಂಗ್ರೆಸ್ ಕಾರ್ಪೊರೇಟರ್ ಆಗಿರುವ ವಸಂತಕುಮಾರ್ ನಿರ್ದಾರಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲವಾದ್ರೂ ನಾಳೆ ಮತದಾನ ಇರುವುದರಿಂದ ಕೊನೇ ಕ್ಷಣದಲ್ಲಿ ವಾರ್ಡ್ ನ ಕೈ ಮತಗಳನ್ನು ಬಿಜೆಪಿಗೆ ಟರ್ನ್ ಮಾಡಿಬಿಡ್ತಾರೆನ್ನುವುದು ಬಿಜೆಪಿ ನಾಯಕರ ಲೆಕ್ಕಾಚಾರ ಎನ್ನುವುದು ಅನೇಕರ ವಾದ.

ಆದ್ರೆ ವಾಸ್ತವಾಂಶ ಹಾಗೆ ಇಲ್ಲವೇ ಇಲ್ಲ..ವಸಂತಕುಮಾರ್ ಕಾರ್ಪೊರೇಟರ್ ಆಗಿದ್ದೇ ವಿಚಿತ್ರ.ಅದೊಂದು ಅನಿರೀಕ್ಷಿತ ಬೆಳವಣಿಗೆ ಅಷ್ಟೇ.ವಾರ್ಡ್ ನ ಬಹುತೇಕ ಮಂದಿಗೆ ಇವತ್ತಿಗೂ ವಸಂತಕುಮಾರ್ ಯಾರು ಎನ್ನೋದೇ ಗೊತ್ತಿಲ್ಲ..ಅಲ್ಲದೇ ವಾರ್ಡ್ ನಲ್ಲಿ ಅಷ್ಟು ಸಕ್ರೀಯವಾಗಿ ಕೆಲಸ ಮಾಡಿರುವ ಬಗ್ಗೆಯೂ ಕೇಳಿಬಂದಿಲ್ಲ.ತನ್ನನ್ನು ಕಾಂಗ್ರೆಸ್ ನ ನಿಷ್ಠಾವಂಥ ಕಾರ್ಯಕರ್ತ ಎನ್ನುತ್ತಲೇ ಕೊನೇ ಕ್ಷಣದಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತಾರೆಂದ್ರೆ ಅದರಿಂದೆ ಆಮಿಷದ ವಾಸನೆ ಇರಲಾರದೇ ಎನ್ನುವುದು ವಸಂತಕುಮಾರ್ ನಂಬಿ ಕೆಟ್ಟ ಕೈ ಕಾರ್ಯಕರ್ತರ ಆಕ್ರೋಶ.

ಪಕ್ಷ ಬೇರೆಯಾದ್ರೂ ಮಾಜಿ ಕಾರ್ಪೊರೇಟರ್ ಗೋಪಿ ಮಾರ್ಗದರ್ಶನದಲ್ಲಿಯೇ ಚಾಚೂತಪ್ಪದೇ ನಡೆಯುವ ವಸಂತಕುಮಾರ್ ಗೆ ಹಣದ ಅವಶ್ಯಕತೆ ಇದೆ..ಹಾಗೆಯೇ ಕೊನೇ ಕ್ಷಣದ ಅವಧಿಯಲ್ಲಿ “ಸ್ಟ್ರಾಂಗ್?” ಸ್ಥಾಯಿ ಸಮಿತಿ ಕೊಡಿಸುವ ಭರವಸೆ ಮೇಲೆ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿದ್ದಾರೆ ಗೋಪಿ ಎನ್ನಲಾಗುತ್ತಿದೆ.ಆದ್ರೆ ಒಂದ್ವೇಳೆ ಫಲಿತಾಂಶ ಶಿವಾಜಿನಗರದಲ್ಲಿ ಬಿಜೆಪಿಗೆ ಉಲ್ಟಾ ಆದ್ರೆ ವಸಂತಕುಮಾರ್ ರಾಜಕೀಯ ಭವಿಷ್ಯ ಮುಗಿದಂತೆಯೇ..ಏಕೆಂದ್ರೆ ಮುಂದಿನ ವರ್ಷದ ಚುನಾವಣೆಯಲ್ಲಿ ಗೋಪಿ,ವಸಂತಕುಮಾರ್ ಗೆ ಅದೇ ವಾರ್ಡ್ ನಿಂದ ಸ್ಪರ್ಧಿಸೊಕ್ಕೆ ಅವಕಾಶ ಮಾಡಿಕೊಡುವುದು ತೀರಾ ಕಷ್ಟ..ಅದ್ಯಾವ ಭರವಸೆಯಲ್ಲಿ ಗೋಪಿಯನ್ನು ನಂಬಿಕೊಂಡು ವಸಂತಕುಮಾರ್ ಹಳ್ಳಕ್ಕೆ ಬಿದ್ದರೋ ಗೊತ್ತಾಗ್ತಿಲ್ಲ ಎನ್ನುವುದು ವಾರ್ಡ್ ನ ಹಿರಿಯ ಕಾಂಗ್ರೆಸ್ಸಿಗರ ಆಕ್ರೋಶದ ಪ್ರಶ್ನೆ.

ಕಾರ್ಪೊರೇಟರ್ ವಸಂತಕುಮಾರ್ ಕೈ ತೊರೆದು ಬಿಜೆಪಿ ಸೇರ್ಪಡೆಗೊಂಡ ಸಂದರ್ಭ
ಸಂಪಂಗಿರಾಮನಗರ ವಾರ್ಡ್ ನ ಹಾಲಿ ಕಾಂಗ್ರೆಸ್ ಕಾರ್ಪೊರೇಟರ್ ವಸಂತಕುಮಾರ್ ಕೈ ತೊರೆದು ಬಿಜೆಪಿ ಸೇರ್ಪಡೆಗೊಂಡ ಸಂದರ್ಭ
ಶಾಸಕ ಎಸ್.ಆರ್ ವಿಶ್ವನಾಥ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ವಸಂತಕುಮಾರ್ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಬರಮಾಡಿಕೊಂಡರು.
ಶಾಸಕ ಎಸ್.ಆರ್ ವಿಶ್ವನಾಥ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ವಸಂತಕುಮಾರ್ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಬರಮಾಡಿಕೊಂಡರು.

ಹಾಗೆ ನೋಡಿದ್ರೆ,ಶಿವಾಜಿನಗರ ಬೈ ಎಲೆಕ್ಷನ್ ದೃಷ್ಟಿಯಿಂದ ನೋಡಿದ್ರೂ  ವಸಂತಕುಮಾರ್ ಅವರ ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ದೊಡ್ಡ ಲಾಭವೇನೂ ಆಗೊಲ್ಲ.

ಏಕೆಂದ್ರೆ ವಸಂತಕುಮಾರ್ ಹೇಳಿದಾಕ್ಷಣ ವೋಟ್ ಹಾಕ್ತಾರೆನ್ನುವ ಪರಿಸ್ಥಿತಿ ಈಗಿಲ್ಲ.ನನ್ನನ್ನು ನಂಬಿಕೊಂಡಿರುವ ಜನ ನಾನು ಹೇಳಿದಾಕ್ಷಣ ಕೈ ಬಿಟ್ಟು ಕಮಲಕ್ಕೆ ವೋಟ್ ಹಾಕ್ತಾರೆಂದು ತಿಳ್ಕೊಂಡಿದ್ರೆ ಅದು ಅವರ ಮೂರ್ಖತನ ಅಷ್ಟೇ ಎಂದು ಕೈ ಪಕ್ಷದ ಹಿರಿಯ ಮುಖಂಡರೊಬ್ಬರು ಲೇವಡಿ ಮಾಡಿದ್ದಾರೆ.

ಅದಿಷ್ಟೇ ಅಲ್ಲ,ಬಿಬಿಎಂಪಿಯಲ್ಲಿ ಈಗಾಗ್ಲೇ ಬಿಜೆಪಿ ಆಡಳಿತ ಬಂದಾಗಿದೆ.ಅದಕ್ಕೆ ಮತ್ತ್ಯಾವ ಕೈ ಕಾರ್ಪೊರೇಟರ್ ಅವಶ್ಯಕತೆನೂ ಇಲ್ಲ..ಹೀಗಿರುವಾಗ ಯಾವ್ ಇಂಟೆನ್ಷನ್ ನಲ್ಲಿ ವಸಂತಕುಮಾರ್ ಕೈ ತೊರೆದು ಬಿಜೆಪಿಗೆ ಸೇರಿಕೊಂಡ್ರೋ ಗೊತ್ತಾಗ್ತಿಲ್ಲ. ಅದೇನೇ ಆಗಲಿ,ಶಿವಾಜಿನಗರದಲ್ಲಿ ಬಿಜೆಪಿ ಗೆಲ್ಲಲಿ ಅಥವಾ ಸೋಲಲಿ ವಸಂತಕುಮಾರ್ ಗೆ ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಅದೇ ವಾರ್ಡ್ ನಿಂದ ಟಿಕೆಟ್ ಸಿಗೋದಂತೂ ಡೌಟ್ ಎನ್ನಲಾಗ್ತಿದೆ..ಹಾಗಾಗಿ ತನ್ನ ನಿರ್ದಾರ ಸರಿನಾ..ಈ ಪ್ರಶ್ನೆಗೆ ವಸಂತಕುಮಾರ್ ಅವ್ರೇ ಉತ್ತರ ಹೇಳ್ಬೇಕು..

Spread the love
Leave A Reply

Your email address will not be published.

Flash News