ಯೆಡ್ಡಿ ಸರ್ಕಾರ ಸೇಫ್ ಆದ್ರೂ…. ಮತ್ತೆ ಆಪರೇಷನ್ ಕಮಲ:ಸುಳಿವು ನೀಡಿದ ಸೋಮಶೇಖರ್

0

ಬೆಂಗಳೂರು: ಯಶವಂತಪುರ ಬಿಜೆಪಿ ಅಭ್ಯರ್ಥಿ ಸೋಮಶೇಖರ್ ಕೈ ಹಾಗೂ ತೆನೆ ಮುಖಂಡರಿಗೆ ಶಾಕ್ ನೀಡೋ ಹೇಳಿಕೆ ಕೊಟ್ಟಿದ್ದಾರೆ.ಜೆ ಡಿ ಎಸ್ ನ 9 ಮತ್ತು ಕಾಂಗ್ರೆಸ್ ನ 3 ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ಎನ್ನುವ ಮೂಲಕ ಆಪರೇಷನ್ ಕಮಲದ ಮುನ್ಸೂಚನೆ ನೀಡಿದ್ದಾರೆ.

ಕೈ ಪಕ್ಷದ ಬಗ್ಗೆ ಇನ್ನೂ ಕೆಂಡಕಾರುವುದನ್ನು ಬಿಡದ ಸೋಮಶೇಖರ್,ಯಶವಂತಪುರ ಚುನಾವಣೆಯಲ್ಲಿ ಕೈ ಹಾಗೂ ಜೆಡಿಎಸ್ ನನ್ನನ್ನು ಸೋಲಿಸಲು ಸಾಕಷ್ಟು ಹರಸಾಹಸ ವನ್ನೇ ಮಾಡಿವೆ.ಆದ್ರೆ ಜನ ನನ್ನನ್ನು ಬೆಂಬಲಿಸಿದ್ದಾರೆ.ಹಾಗಾಗಿ ಗೆಲುವು ನನ್ನದೇ ಎಂದ್ರು.ಆದರೆ ಫಲಿತಾಂಶದ ನಂತ್ರ ಸಾಕಷ್ಟು ಕೈ ಹಾಗೂ ಜೆಡಿಎಸ್ ಶಾಸಕರು ಬಿಜೆಪಿಗೆ ಬರಲು ಸಿದ್ದವಾಗಿದ್ದಾರೆ.ನಾವೇನು ಆಪರೇಷನ್ ಕಮಲ ಮಾಡಬೇಕೆನಿಲ್ಲ.ಅವರೇ ಆ ಪಕ್ಷದಲ್ಲಿರುವ ಉಸಿರುಗಟ್ಟಿಸುವ ವಾತಾವರಣಕ್ಕೆ ಬೇಸತ್ತು ಬರಲಿದ್ದಾರೆ ಎಂದು ಭವಿಷ್ಯ ನುಡಿದ್ರು.

ಕೆಎಸ್ ಈಶ್ವರಪ್ಪ ಹೇಳಿಕೆಗೆ ಸಮರ್ಥನೆ: ಸೋತವರಿಗೆ ಸಚಿವ ಸ್ಥಾನ ಇಲ್ಲ ಎನ್ನುವ ಈಶ್ವರಪ್ಪ ಹೇಳಿಕೆಯನ್ನು ಸೋಮಶೇಖರ್ ಸಮರ್ಥಿಸಿಕೊಂಡ್ರು.ಈಶ್ವರಪ್ಪ ಹೇಳಿಕೆಗೂ ಸುಪ್ರಿಂ ಕೋರ್ಟ್ ನ ಆದೇಶಕ್ಕೂ ಸಾಕಷ್ಟು ಸಾಮ್ಯತೆಗಳಿವೆ.ಏಕೆಂದ್ರೆ ಸುಪ್ರಿಂ ಕೋರ್ಟ್ ಆರ್ಡರ್ರೇ  ಸೋತವರಿಗೆ ಸಚಿವ ಸ್ಥಾನ ನೀಡಬಾರದೆನ್ನುವ ಮಾತನ್ನೇಳಿದೆ ಅಲ್ವೇ..ಹಾಗಾಗಿ ನಮ್ಮ ನಾಯಕರು ಸರಿಯಾಗೇ ಹೇಳಿದ್ದಾರೆ ಎಂದ್ರು.

ಬಿಜೆಪಿ ಯಾವ ಅನರ್ಹರಿಗೂ ಮೋಸ ಮಾಡಿಲ್ಲ.ಎಲ್ಲರಿಗೂ ಚುನಾವಣೆಗೆ  ನಿಲ್ಲುವ ಬಗ್ಗೆ  ನಿರ್ದಾರ ತೆಗೆದುಕೊಳ್ಳುವ ಅಧಿಕಾರ ಕೊಟ್ಟಿತ್ತು. ನಾವು ಬಹತೇಕ ಸ್ಪರ್ಧಿಸಿದ್ದೆವು. ವಿಶ್ವನಾಥ್ ಗೆ ಚುನಾವಣೆ ಬೇಡ ನಿಲ್ಲಬೇಡಿ ಎಮ್ಮೆಲ್ಸಿ ಮಾಡಿ ಸಚಿವರನ್ನಾಗಿಸ್ತೇವೆ  ಅಂದಿದ್ರು.ಆದ್ರೆ ಅವರು ಚುನಾವಣಾ ಸ್ಪರ್ಧೆ ಮಾಡ್ತೇನೆ ಅಂದ್ರು.ಅದಕ್ಕೆ ಅವಕಾಶ ಕೊಟ್ಟಿತು.ರೋಶನ್ ಬೇಗ್ ಚುನಾವಣೆಗೆ ನಿಲ್ಲಲೇ ಇಲ್ಲ ಎಂದ್ರು.

ಅನರ್ಹರೆಲ್ಲಾ ಒಟ್ಟಿಗೆ ಇದ್ದೇವೆ:ಅನರ್ಹರೆಲ್ಲಾ ಒಟ್ಟಾಗಿದ್ದೇವೆ. ನಾಡಿದ್ದು ನಾವು ೧೭ ಜನ ಒಟ್ಟಿಗೆ ಸೇರುತ್ತೇವೆ.ನಾವು ಕಾಂಗ್ರೆಸ್ ನಲ್ಲಿಯೇ ಇದ್ದರೆ ಸಮಾಧಿ ಆಗುತ್ತಿದ್ದೆವೇನೋ ಎಂದು ನುಡಿದ ಸೋಮಶೇಖರ್ ಕಾಂಗ್ರೆಸ್ ನಿಂದ ಹೊರ ಬಂದು ಸಮಾಧಿ ಆಗೋದರಿಂದ ತಪ್ಪಿಸಿಕೊಂಡಿದ್ದೇವೆ. ಕಾಂಗ್ರೆಸ್ ನಾಯಕರಿಗೆ ಪಕ್ಷವನ್ನು ಬೆಳೆಸೋ ಉದ್ದೇಶ ಇರಲೇ ಇಲ್ಲ. ಕಾಂಗ್ರೆಸ್ ನಾಯಕರೇ ಪಕ್ಷವನ್ನು ಹಾಳು ಮಾಡಿದರು.ನಾನು ಕಾಂಗ್ರೆಸ್ ನಲ್ಲಿದ್ದಾಗಲೂ ನಾನು ನಾಯಕತ್ವಕ್ಕಾಗಿ ಸ್ಪರ್ಧೆ ಮಾಡಲಿಲ್ಲ ನಾನೇನೂ ಒಕ್ಕಲಿಗ ನಾಯಕತ್ವಕ್ಕಾಗಿ ಅಶೋಕ್ ಅವರಿಗೆ ಕಾಂಪಿಟಿಷನ್ ಮಾಡಲಿಲ್ಲ ಎಂದರು.

ಇನ್ನು  ನನ್ನ ಆಧ್ಯತೆ  ಕ್ಷೇತ್ರದ ಅಭಿವೃದ್ಧಿಯಷ್ಟೇ.: ನನ್ನ ಗಮ‌ನ ಇರುವುದು ಅದರ ಬಗ್ಗೇನೆ.. ನಾವೇನೂ ಮಂತ್ರಿಯಾಗೋ ಆಸೆಯಿಂದ ಬಿಜೆಪಿ ಸೇರಲಿಲ್ಲ.ಮಂತ್ರಿ ಮಾಡದೇ ಇದ್ದರೂ ಕೂಡ ನಾನು ಕ್ಷೇತ್ರದ ಕೆಲಸ ಮಾಡುತ್ತೇನೆ.ಅಲ್ಲದೇ  ಮಂತ್ರಿಗಿರಿ ಕೊಡಿ ಅಂತ ಸಿಎಂ ಬಳಿ ಕೇಳಲೂ ಇಲ್ಲ,ಕೇಳೋದೂ ಇಲ್ಲ..ಅವರು ನನ್ನ ಮೇಲೆ ನಂಬಿಕೆ ಇಟ್ಟುಕೊಟ್ಟರೆ ಖಂಡಿತಾ ಪಕ್ಷ  ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಕೆಲಸ ಮಾಡ್ತೇನೆ ಎಂದ್ರು.

ಕೈ ಮುಖಂಡರ ಬಗ್ಗೆ ಆಕ್ರೋಶ: ಕೈ ಮುಖಂಡರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸೋಮಶೇಖರ್, ಕಾಂಗ್ರೆಸ್ ನವರಿಗೆ ವೋಟ್ ಇಂಪ್ರೂ ಮಾಡ್ಕೊಬೇಕು ಎನ್ನೋ ಉದ್ದೇಶವಿದ್ದಂತಿಲ್ಲ. ಜೆಡಿಎಸ್ ನವರಿಗೆ ಸಪೋರ್ಟ್ ಮಾಡೋದಷ್ಟೇ ಅವರ ಉದ್ದೇಶವಾಗಿತ್ತೆನಿಸುತ್ತೆ.ಹಾಗಾಗಿ ಯಶವಂತಪುರದಲ್ಲಿ ಅವರ ಪಕ್ಷದ ಅಭ್ಯರ್ಥಿಯ ಪರ ಕೆಲಸ ಮಾಡದೆ,ಜೆಡಿಎಸ್ ಜತೆ ಒಳ ಒಪ್ಪಂದ ಮಾಡಿಕೊಂಡ್ರು. ಕಾಂಗ್ರೆಸ್ ಗೆ ಬೈ ಎಲೆಕ್ಷನ್ ಬಗ್ಗೆ  ಮಾತಾಡುವ ನೈತಿಕತೆ ಇಲ್ಲ ಎಂದರು.

ಡಿಕೆಶಿಗೆ ಸೋಮಶೇಖರ್ ಟಾಂಗ್:.. ವಿಧಾನಸಭೆಯಲ್ಲಿ ಎಲ್ಲರೂ ಸಮಾಧಿ ಆಗಿ ಹೋಗ್ತೀರಿ ಅಂದಿದ್ದ ಡಿಕೆಶಿ ಗೆ ಟಾಂಗ್ ಕೊಟ್ಟ ಸೋಮಶೇಖರ್,ನಾವು ಕಾಂಗ್ರೆಸ್ ನಲ್ಲೇ ಇದ್ದಿದ್ದರೆ ಸಮಾಧಿ ಆಗ್ತಾ ಇದ್ದೆವು ಅಷ್ಟೇ. ಡಿಕೆಶಿವಕುಮಾರ್ ರಾಜ್ಯ ಮಟ್ಟದ ನಾಯಕರು ಅವರ ಹೇಳಿಕೆಗೆ ಪ್ರತಿಕ್ರಿಯಿಸುವಷ್ಟು ದೊಡ್ಡವನು ನಾನಲ್ಲ.ಆದ್ರೆ ಅವರು ನನ್ನ ಕ್ಷೇತ್ರದಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ರೀತಿಯಲ್ಲಿ ಅಪಪ್ರಚಾರ ಮಾಡಿದ್ದು ಬೇಸರ ತರಿಸಿದೆ.ಆದರೆ ಎಲ್ಲವನ್ನೂ ಯಶವಂತಪುರ ಕ್ಷೇತ್ರದ ಜನ ಸಹಿಸಿಕೊಂಡು ಯಾವುದೇ ಗಲಾಟೆ ಇಲ್ಲದೆ ಮತದಾನದಲ್ಲಿ ಪಾಲ್ಗೊಂಡಿದ್ದಾರೆ.ಜನ ನನ್ನ ಕೈಹಿಡಿದು ಎರಡು ಪಕ್ಷಗಳಿಗೂ ಬುದ್ಧಿ ಕಲಿಸಲಿದ್ದಾರೆ ನೋಡ್ತಿರಿ ಎಂದ್ರು…

Spread the love
Leave A Reply

Your email address will not be published.

Flash News