ಶಾಸಕ ಗೋಪಾಲಯ್ಯಏರಿಯಾದ ಭೀಕರ ಕೊಲೆಯಿಂದ ಬೆಚ್ಚಿಬಿದ್ದ ಬೆಂಗಳೂರು

0

ಬೆಂಗಳೂರು: ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ ನ ಬಸವೇಶ್ವರ ನಗರ ಭೀಕರ ಮರ್ಡರ್ ಗೆ ಸಾಕ್ಷಿಯಾಗಿದೆ. ರಾತ್ರಿ ಕಣ್ ಮುಚ್ಚುವ ಮೊದ್ಲೇ ಜನ ಕೊಲೆಯ ಸುದ್ದಿಯೊಂದಕ್ಕೆ ಕಿವಿಯಾಗುವಂತೆ ಮಾಡಿದೆ.ಮರ್ಡರ್ ಆದವನೇನು ನಟೋರಿಯಸ್ ಹಿನ್ನಲೆಯವನೇನೂ ಅಲ್ಲ..ಮರ್ಡರ್ ಮಾಡಿದನೆನ್ನಲಾಗ್ತಿರುವ ಪಾತಕಿಯೂ ರೌಡಿಯಿಸಂ ಅಥವಾ ಅಪರಾಧ ಚಟುವಟಿಕೆಯ ಬ್ಯಾಂಕ್ ಗ್ರೌಂಡ್ ಹೊಂದಿದವನೇನೂ ಅಲ್ಲ..

ಕೊಲೆಯೂ ಸೀರಿಯಸ್ ರೀಸನ್ಗೂ ನಡೆದೋಗಿಲ್ಲ..ಒಂದು ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ನಡೆದೋಗಿಬಿಟ್ಟಿದೆ.ಆದ್ರೆ ಮರ್ಡರ್ ಆಗಿರೋ ರೀತಿ ನೋಡುದ್ರೆ ಮಾತ್ರ ಮೇಲ್ನೋಟಕ್ಕೆ ದ್ವೇಷ ಸಾಮಾನ್ಯ ಎಂದು ಕಂಡ್ ಬಂದ್ರೂ ಬೇರೆಯದೇ ಕಾರಣಕ್ಕೆ ಈ ಮರ್ಡರ್ ನಡೆದಿದೆ ಎನ್ನೋದು ಪಕ್ಕಾ ಎನಿಸುತ್ತೆ.

ಮರ್ಡರ್ ಆದ ಕಮಲಾನಗರ ನಿವಾಸಿ ಸದಾನಂದ ಸಣ್ಣಪುಟ್ಟ ವ್ಯವಹಾರ ಮಾಡಿಕೊಂಡಿದ್ದಾತ. ಜೀವನೋಪಾಯಕ್ಕೆ ಕ್ಯಾಬ್ ಓಡಿಸಿಕೊಂಡಿದ್ದಾತ. ನೋಡೋದಕ್ಕೆ ಸ್ವಲ್ಪ ಭಯಂಕರವಾಗಿ ಕಾಣ್ತಿದ್ದರಿಂದ ಆತನನ್ನು ತಮಾಷೆಗೆ ಮುಳ್ಳಂದಿ ಸದಾನಂದ ಎನ್ನುತ್ತಿದ್ದರಷ್ಟೇ.ಇನ್ನು ಮರ್ಡರ್ ಮಾಡಿ ತಲೆ ತಪ್ಪಿಸಿಕೊಂಡಿದ್ದಾನೆನ್ನಲಾಗುತ್ತಿರುವ ಹಂದಿ ಯೋಗೇಶ್ ಕೂಡ ಆತನೊಂದಿಗೆ ತುಂಬಾ ಸಲಿಗೆಯಲ್ಲಿದ್ದ ಆತ್ಮೀಯ ಸ್ನೇಹಿತ.ಇನ್ ಫ್ಯಾಕ್ಟ್ ಇಬ್ಬರ ನಡುವೆಯೂ ಒಳ್ಳೇಯ ಸ್ನೇಹವೇ ಇತ್ತು.

ಆದ್ರೆ ಇತ್ತೀಚೆಗೆ ಸದಾನಂದನನ್ನು, ಹಂದಿ ಯೋಗೇಶ್ ಸೇರಿದಂತೆ ಅನೇಕ ಸ್ನೇಹಿತರು ಸಿಕ್ಕಾಪಟ್ಟೆ ಕಿಂಡಲ್ ಮಾಡುತ್ತಿದ್ದರು.ಆತನಿಗೆ ಬೈಯ್ಯೋದು..ಹೊಡೆಯೋದ್ ಮಾಡ್ತಿದ್ರು.ಆರಂಭದಲ್ಲಿ ಸ್ನೇಹ ಎಂದೇ ಸಹಿಸಿಕೊಂಡಿದ್ದ ಸದಾನಂದನಿಗೆ ,ಅದು ಅತಿರೇಕ ಎಂದೆನಿಸಿದೆ.ಆಗ ಅವರೊಂದಿಗೆ ಗಲಾಟೆ ಮಾಡಿಕೊಂಡಿದ್ದಾನೆ.ಶರಂಪರ ಹೊಡೆದಾಡಿದ್ದಾನೆ.ಒಂದ್ ದಿನ ಇದೇ ಕಾರಣಕ್ಕೆ ಅವರಿಬ್ಬರ ನಡುವೆ ಗಲಾಟೆಗಳಾದಾಗ ಸದಾನಂದ,ನಾಗೇಶ ಹಾಗೂ ಆತನ ಸ್ನೇಹಿತರಿಗೆ ಚೆನ್ನಾಗೇ ತದುಕಿದ್ದಾನೆ.

ಇದರಿಂದ ಕೊತ ಕೊತ ಕುದಿಯುತ್ತಿದ್ದ ಹಂದಿ ಯೋಗೇಶ್ ನಿನ್ನೆ ರಾತ್ರಿ ಬಾ ಮಗಾ ಎಣ್ಣೆ ಹೊಡೆಯೋಣ ಎಂದು ಆತ್ಮೀಯವಾಗಿ ಕರೆದಿದ್ದಾನೆ.ಸ್ನೇಹಿತನಲ್ವಾ ಅಂದುಕೊಂಡು ಸದಾನಂದ, ಮಂಜುನಾಥನಗರದ ಬಾಲಾಜಿ ಬಾರ್ ನಲ್ಲಿ ಕುಳಿತು ಚೆನ್ನಾಗಿ ಎಣ್ಣೆ ಹೊಡೆದಿದ್ದಾರೆ.ಆ ವೇಳೆ ನಾಗೇಶ ನಾರ್ಮಲ್ ಆಗೇ ಇದ್ದಾನೆ.ಬುಲೆಟ್ ನಲ್ಲಿ ನಿಂತ್ಕೊಂಡು ಮಾತನಾಡುವಾಗ ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ.ಎಣ್ಣೆ ಹೊಡೆತದಲ್ಲೇ ಆತನ ಮೇಲೆರಗಲು ಸದಾನಂದ ಯತ್ನಿಸಿದ್ದಾನೆ.ಅದೇ ಲಾಸ್ಟ್ ಹಿಂದಿನಿಂದ ಬಂದ ಪಾತಕಿಗಳು ಅವನನ್ನು ಮಚ್ಚು ಲಾಂಗ್ ಗಳಿಂದ ಚೆನ್ನಾಗಿ ಥಳಿಸಿ ಅಲ್ಲೇ ಮರ್ಡರ್ ಮಾಡಿದ್ದಾರೆ.

ನಂತರ ಹಂದಿ ಯೋಗೇಶ್ ಅವರೊಂದಿಗೆ ಪರಾರಿಯಾಗಿದ್ದಾನೆ.,ಈ ಎಲ್ಲಾ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಬಸವೇಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಂದಿ ಯೋಗೇಶ್ ನ ಪತ್ತೆ ಕಾರ್ಯದಲ್ಲಿ ನಿರತವಾಗಿದ್ದಾರೆ. ನೂತನ ಶಾಸಕರಾಗಿ ಆಯ್ಕೆಯಾಗಿರುವ ಕೆ.ಗೋಪಾಲಯ್ಯ ಅವರ ಹಿಂಬಾಲಕನಾಗಿದ್ದ ಸದಾನಂದ ಈ ಬಾರಿ ಎಲೆಕ್ಷನ್ ನಲ್ಲಿ ಅವರ ಪರವಾಗಿದ್ದುಕೊಂಡು ಕೆಲಸ ಮಾಡಿದ್ದ.ತನ್ನ ಹಿಂಬಾಲಕನನ್ನು ಕಳಕೊಂಡಿರುವ ಗೋಪಾಲಯ್ಯ ಆತನ ಸಾವಿಗೆ ಕಂಬನಿ ಮಿಡಿದಿದ್ದಾರೆ.ಅಷ್ಟೇ ಅಲ್ಲ,ಸಾವಿಗೆ ಕಾರಣನಾದವರನ್ನು ತಕ್ಷಣವೇ ಬಂಧಿಸುವಂತೆ ಆದೇಶಿಸಿದ್ದಾರೆ.ಅದೇನೇ ಆಗಲಿ,ಗೋಪಾಲಯ್ಯ ಅವರು ಶಾಸಕರಾಗುತ್ತಿದ್ದಂತೆ ನಡೆದೋಗಿರುವ ಈ ಮರ್ಡರ್ ಅವರ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗಟ್ಟಿರುವುದನ್ನು ಎತ್ತಿ ತೋರಿಸುತ್ತೆ.

 

Spread the love
Leave A Reply

Your email address will not be published.

Flash News