ಸ್ವಂತದವರಿಗೆ ವಂಚಿಸಿ ಎಸ್ಕೇಪ್ ಆದ್ರಾ ಸ್ಯಾಂಡಲ್ ವುಡ್ ಬ್ರದರ್ಸ್

0

ಬೆಂಗಳೂರು: ಸ್ಯಾಂಡಲ್ ವುಡ್ ನ ನಿರ್ದೇಶಕ-ನಿರ್ಮಾಪಕ ಸಹೋದರರ ಮೇಲೆ ವಂಚನೆ ಆರೋಪ ಕೇಳಿಬಂದಿದೆ.ಝೂಮ್ ನಂತ ಯಶಸ್ಚಿ ಚಿತ್ರದ ನಿರ್ದೇಶಕ ಪ್ರಶಾಂತ್ ರಾಜ್ ಹಾಗೂ ನಿರ್ಮಾಪಕ ನವೀನ್ ರಾಜ್ ಅವರ ವಿರುದ್ಧವೇ ವೃದ್ಧೆಗೆ ವಂಚಿಸಿದ ಆರೋಪ ಕೇಳಿಬಂದಿದೆ.

ನಿರ್ಮಾಪಕ ಹರೀಶ್ ರಾಜ್
ನಿರ್ಮಾಪಕ ಹರೀಶ್ ರಾಜ್
ಹರೀಶ್ ರಾಜ್ ಮಾನ ನಾಗರಾಜ್
             ಹರೀಶ್ ರಾಜ್ ಮಾನ ನಾಗರಾಜ್
ಹರೀಶ್ ರಾಜ್ ತಮ್ಮ ನವೀನ್ ರಾಜ್
    ಹರೀಶ್ ರಾಜ್ ತಮ್ಮ ನವೀನ್ ರಾಜ್

ವಿಜಲ್, ಜೂಮ್, ಆರೆಂಜ್ ಸಿನಿಮಾಗಳ ನಿರ್ದೇಶಕರಾಗಿರುವ ಪ್ರಶಾಂತ್ ರಾಜ್ ತನ್ನ ಸಹೋದರ ಹಾಗೂ ಮಾವನೊಂದಿಗೆ ಸೇರಿಕೊಂಡು ತನ್ನ ಸಂಬಂಧಿಯೊಬ್ಬರಿಗೆ ವಂಚನೆ ಮಾಡಿದ್ದಾರೆನ್ನಲಾಗಿದ್ದು,ಇದನ್ನು ಕೇಳಿ ಇಡೀ ಚಂದನವನ ನಾಚಿಕೆಯಿಂದ ತಲೆತಗ್ಗಿಸಿದೆ.
ಆದದ್ದೇನು ಗೊತ್ತಾ: ಕಳೆದ ತಿಂಗಳ 22 ರಂದು ಪ್ರಕರಣವೊಂದರಲ್ಲಿ ಸಿಸಿಬಿ ಪೊಲೀಸರಿಂದ ತಮ್ಮ ಸಂಬಂಧಿಯೇ ಆಗಿದ್ದ ಗಿರಿಜಮ್ಮ ಎನ್ನುವವರ ಮಗ ಬಂಧಿತನಾಗಿದ್ದ,ಸಮಾಜದಲ್ಲಿ ಒಂದಷ್ಟು ಹೆಸರು ಮಾಡಿರುವ ಈ ಸಹೋದರರ ಬಳಿ ಹೇಳಿಕೊಂಡ್ರೆ ಏನಾದರೊಂದು ಸೆಲ್ಯೂಷನ್ ಸಿಗಬಹುದೆನ್ನುವ ನಂಬಿಕೆಯಲ್ಲಿ ಗಿರಿಜಮ್ಮ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ಆ ಕ್ಷಣ ಇವರಿಬ್ಬರಿಗೆ ಏನಾಯ್ತೋ ಗೊತ್ತಿಲ್ಲ.ಅವರಿಬ್ಬರ ಮನಸಿನಲ್ಲಿ ವಂಚನೆಯ ಕೆಟ್ಟ ಆಲೋಚನೆ ಹುಟ್ಟಿದೆ.ತಕ್ಷಣ ಪ್ಲ್ಯಾನ್ ಮಾಡಿ ಮಗನನ್ನು ಬಿಡಿಸಲು ಚಿನ್ನಾಭರಣ ಹಾಗೂ ಹಣವನ್ನು ಪಡೆದಿದ್ದಾರೆ.

ಅದೇ ದಿನ ರಾತ್ರಿ ಗಿರಿಜಮ್ಮ ಮನೆಗೆ ಬಂದಿದ್ದ ಪ್ರಶಾಂತ್ ರಾಜ್, ನವೀನ್ ರಾಜ್ ಹಾಗೂ ಅವರ ಮಾವ ನಾಗರಾಜ್ ಅವರು ನಿಮ್ಮ ಮಗನನ್ನ ಬಿಡುಗಡೆ ಮಾಡಿಸ್ತೀವಿ ಆದ್ರೆ ಅದಕ್ಕಾಗಿ ಪೊಲೀಸರು 20 ಲಕ್ಷ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದಿದ್ದಾರೆ.20 ಲಕ್ಷ ಕೊಡಲಿಕ್ಕಾಗೊಲ್ಲ 10 ಲಕ್ಷ ಕೊಡ್ತೀನಿ..ಆಮೇಲೆ ಉಳಿದಿದ್ದು ಕೊಡ್ತೀನಿ ಎಂದು ತನ್ನ ಬಳಿ ಇದ್ದ ಹಣವನ್ನು ನೀಡಿದ್ದಾರೆ.ಜತೆಗೆ 542ಗ್ರಾಂ ಚಿನ್ನಾಭರಣ ಕೂಡ ನೀಡಿದ್ದಾರೆ.ಆ ವೇಳೆ ಕಾನೂನು ಪ್ರಕಾರ ಜಾಮೀನು ಪಡೆದು ಹೊರಬಂದ ಮಗನನ್ನು ತಾವೇ ಸಿಸಿಬಿಯಿಂದ ಬಿಡುಗಡೆ ಮಾಡಿಸಿದ್ದೀವಿ ಎಂದು ಸುಳ್ಳು ಹೇಳಿ ವಂಚಿಸಿದ್ದರು.ಆದರೆ ನಂತರ ಗೊತ್ತಾಗಿದೆ ಗಿರಿಜಮ್ಮಗೆ ಈ ಮೂವರು ಸೇರಿಕೊಂಡು ಮೋಸ ಮಾಡಿದ್ದಾರೆಂದು.ತಕ್ಷಣಕ್ಕೆ ಎಚ್ಎಎಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

Spread the love
Leave A Reply

Your email address will not be published.

Flash News