ಮಾನಸಿಕ ಅಸ್ವಸ್ಥನ ಸಿಟ್ಟಿಗೆ ಮುಗ್ಧ ಕಂದಮ್ಮ ಬಲಿ…

0

ಶಿವಮೊಗ್ಗ: ಇವತ್ತು ಬೆಳಗ್ಗೆ ನಡೆದ ಆ ಅಮಾನವೀಯ  ಘಟನೆಗೆ  ಶಿವಮೊಗ್ಗ ನಗರವೇ ಕ್ಷೋಭೆಗೊಳಗಾಗಿತ್ತು.ಅಲ್ಲಿ ಸತ್ತು ಮಲಗಿದ್ದ ಅ ಪುಟ್ಟ ಜೀವವನ್ನು ನೆನೆದು ಕಣ್ಣೀರಾಗಿತ್ತು.ಏನೂ ತಪ್ಪು ಮಾಡದ ಆ ನಿಷ್ಪಾಪಿ ಮುಗ್ಧ ಜೀವವನ್ನು ಬಲಿ ಪಡೆದ ಆ ಮಾನಸಿಕ ಅಸ್ವಸ್ಥನನ್ನು ಕೊಂದಾಕಿ ಬಿಡುವ ಆಕ್ರೋಶವೇ ಅಲ್ಲಿ ನೆರೆದಿದ್ದವರಲ್ಲಿ ಮಡುಗಟ್ಟಿತ್ತು.

ಶಿವಮೊಗ್ಗ ಹೊರವಲಯದ ಗಾಡಿಕೊಪ್ಪದಲ್ಲಿ ಮಾನಸಿಕ ಅಸ್ವಸ್ಥನಾದ ಸಂತೋಷ್ ಎಂಬಾತ ತನ್ನ ತಂದೆ ಜಯಣ್ಣನೊಂದಿಗೆ ಜಗಳ ಶುರುವಿಟ್ಟುಕೊಂಡಿದ್ದಾನೆ.ಜಗಳ ತಾರಕಕ್ಕೇರಿದೆ.ಆ ವೇಳೆ  ಆತನ ಕೈಗೆ ಚಾಕು ಸಿಕ್ಕಿಬಿಟ್ಟಿದೆ.ಆ ರೋಶಾವೇಶವನ್ನು ಕಡಿಮೆ ಮಾಡ್ಬೇಕಿದ್ದ ಮನೆಯ ಸದಸ್ಯರು ಆತನೊಂದಿಗೆ ಜಗಳವನ್ನು ಮುಂದುವರೆಸಿ ಆತನ ಕೋಪವನ್ನು ಹೆಚ್ಚಿಸಿದ್ದಾರೆ.ಈ ವೇಳೆ ಸಂತೋಷ್ ಮನೆಯಲ್ಲಿದ್ದ  ತಂಗಿಯ ಮಗಳಾದ 5 ವರ್ಷದ  ರಜನಿಗೆ ಚಾಕು ಇರಿದುಬಿಟ್ಟಿದ್ದಾನೆ.

ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆ ಮಗುವನ್ನು ತಕ್ಷಣ ನಂಜಪ್ಪ ಆಸ್ಪತ್ರೆಗೆ ಸೇರಿಸಲಾಯ್ತು.ಆದ್ರೆ ರಕ್ತಸ್ರಾವ ಅತಿಯಾಗಿದ್ರಿಂದ ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.ಸಂತೋಷ್ ನನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ.ಆದ್ರೆ ಯಾರದೋ ದ್ವೇಷಕ್ಕೆ ನಿಷ್ಪಾಪಿ ಕಂದಮ್ಮ ಸಾವನ್ನಪ್ಪಿದ್ದರ ಬಗ್ಗೆ ಇಡೀ ಶಿವಮೊಗ್ಗ ಕಂಬನಿಗೆರೆದಿದೆ.ಮಗುವನ್ನು ಕಳಕೊಂಡವ್ರ ದುಃಖ ಮುಗಿಲು ಮುಟ್ಟಿತ್ತು.

ಅಂದ್ಹಾಗೆ ಮಾನಸಿಕ ಅಸ್ವಸ್ಥ ಎನ್ನಲಾಗಿರುವ  ಸಂತೋಷ್ ಗಾಡಿಕೊಪ್ಪದ ಬಸವೇಶ್ವರ ದೇವಸ್ಥಾನದ ಬಳಿ ಎಳನೀರು ಮಾರುತ್ತಿದ್ದ.,ಮಾನಸಿಕವಾಗಿ ತುಂಬಾ ಡಿಸ್ಟರ್ಬ್ ಆಗಿದ್ದ ಆತನನ್ನು  ವರ್ಷದ ಹಿಂದೆ ಖ್ಯಾತ ಮಾನಸಿಕ ತಜ್ಞರಾಗಿದ್ದ ದಿವಂಗತ ಡಾ. ಅಶೋಕ್ ಪೈ ಅವರ ಮಾನಸ  ಆಸ್ಪತ್ರೆಗೆ ಸೇರಿಸಲಾಗಿತ್ತು.ಚಿಕಿತ್ಸೆ ಹೊರತಾಗ್ಯೂ ಸಂತೋಷ್ ಗುಣಮುಖನಾಗಿರಲಿಲ್ಲ.ಆದ್ರೆ ಆತನ ಹುಚ್ಚು ತಪ್ಪೇ ಮಾಡದ ಮುಗ್ಧ ಜೀವವನ್ನು ಬಲಿ ಪಡೆದದ್ದು ಮಾತ್ರ ವಿಪರ್ಯಾಸ.

Spread the love
Leave A Reply

Your email address will not be published.

Flash News