ಮಾಲಿನ್ಯ ನಿಯಂತ್ರಣ ಮಂಡಳಿಗೆ “ಅನರ್ಹ”ಅಧ್ಯಕ್ಷರಾಗ್ತಾರಾ..ಇಕ್ಕಟ್ಟಿಗೆ ಸಿಲುಕ್ತಾರಾ ಯಡಿಯೂರಪ್ಪ!

0

ಬೆಂಗಳೂರು:ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದ ಆಡಳಿತದ ಮಟ್ಟಿಗೆ ಬಹುದೊಡ್ಡ “ಬ್ಲಂಡರ್”(ದುರಂತ)ವನ್ನೇ ಸೃಷ್ಟಿಸಲಿಕ್ಕೆ ಹೊರಟಿದೆ.ಎನ್ ಜಿಟಿ ಆದೇಶವನ್ನು ಧಿಕ್ಕರಿಸಿ ಭಾರೀ ತಪ್ಪಿಗೆ ಕಾರಣವಾಗಬಹುದಾದ..ಪ್ರಮಾದಕಾರಿ ಎನಿಸುವಂತ…ವ್ಯಾಪಕ ಆಕ್ರೋಶ-ಟೀಕೆಗೆ ಗುರಿಯಾಗುವಂಥ ಎಲ್ಲಕ್ಕಿಂತ ಹೆಚ್ಚಾಗಿ ಕಾನೂನಾತ್ಮಕವಾಗಿ ತೀವ್ರ ಮುಖಭಂಗಕ್ಕೆ ಕಾರಣವಾಗಬಲ್ಲಂಥ ನೇಮಕಾತಿಯೊಂದಕ್ಕೆ ಕೈ ಹಾಕಲು ಮುಂದಾಗಿದೆಯಂತೆ..ಅಂದ್ಹಂಗೆ ಅದೇನಾದ್ರೂ ಆಗಿದ್ದೇ ಆದಲ್ಲಿ ಸರ್ಕಾರ ಅಪರಾಧಿ ಸ್ಥಾನದಲ್ಲಿ ನಿಂತು ಛೀಮಾರಿ ಹಾಕಿಸಿಕೊಳ್ಳೋದು ಬಹುತೇಕ ಕನ್ಫರ್ಮ್ ಎಂದೇ ಹೇಳಲಾಗ್ತಿದೆ.

ಸರ್ಕಾರದ ಬಹುತೇಕ ನೇಮಕಾತಿಗಳು,ಕಾನೂನು,ನಿಯಮಗಳ ಪಾರದರ್ಶಕತೆಯಿಂದ ರಿಲ್ಯಾಕ್ಸೇಷನ್ ಪಡೆದೇ ಆಗಿರ್ತವೆ.ಅಂತದ್ದು ದೊಡ್ಡ ವಿವಾದವಾಗೋದು ಕಡ್ಮೆ.ಆದ್ರೆ ಒಂದು ನೇಮಕಾತಿ ವಿಚಾರದಲ್ಲಿಯಂತೂ ಕಾನೂನು-ನಿಯಮಗಳ ಪಾಲನೆ ಕಡ್ಡಾಯವಾಗಿ ಹಾಗೆ ಪಾರದರ್ಶಕವಾಗಿ ನಡೆಯಲೇಬೇಕೆನ್ನುವ ನಿಯಮವಿದೆ.ಅದನ್ನು ಉಲ್ಲಂಘಿಸಿ ನಡೆದ ನೇಮಕಾತಿಗಳು ಕೋರ್ಟ್ ಕಟಕಟೆಯಲ್ಲೇ ರದ್ದಾಗುವ ಮೂಲಕ ಸರ್ಕಾರಕ್ಕೆ ಛೀಮಾರಿಯೂ ಬಿದ್ದಿದೆ.(ಡಾ.ಕೆ ಸುಧಾಕರ್ ಅವರ ನೇಮಕಾತಿ ಪ್ರಕರಣಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ).ಈಗ ಯಡಿಯೂರಪ್ಪ ಸರ್ಕಾರ ಅಂತದ್ದೇ ಒಂದು ಕಾನೂನಾತ್ಮಕ ಸಂಘರ್ಷಕ್ಕೆ ಕಾರಣವಾಗಬಲ್ಲ ಪರಿಸ್ತಿತಿಯನ್ನು ತಂದುಕೊಳ್ಳುತ್ತೇನೋ ಎನ್ನುವ ಶಂಕೆ ಕಾಡುತ್ತಿದೆ.

ಏನದು ಪ್ರಕರಣ:ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಸಿಕ್ಕ ಪಕ್ಕಾ ಮಾಹಿತಿ ಪ್ರಕಾರ,ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಎನ್ ಜಿಟಿ ಉಲ್ಲೇಖಿಸಿರುವ ಅರ್ಹತೆ ಹಾಗೂ ಮಾನದಂಡಗಳಿಲ್ಲದ ವ್ಯಕ್ತಿಯೋರ್ವನನ್ನು ನೇಮಕ ಮಾಡಲು ಯಡಿಯೂರಪ್ಪ ಸರ್ಕಾರ ಹೊರಟಿದೆಯಂತೆ.ಸಂಘ ಪರಿವಾರಕ್ಕೆ ಸೇರಿದ ವ್ಯಕ್ತಿ ಎನ್ನೋದನ್ನು ಬಿಟ್ಟರೆ ಇನ್ನ್ಯಾವ ಅರ್ಹತೆನೂ ಅವರಿಗಿಲ್ಲ ಎನ್ನವುದು ಸರ್ಕಾರದ ಮಟ್ಟದಲ್ಲೇ ಕೇಳಿ ಬಂದಿರುವ ಮಾತು.ಒಂದ್ವೇಳೆ ಆ ವ್ಯಕ್ತಿಯ ಆಯ್ಕೆ ಆಗಿದ್ದೇ ಆದಲ್ಲಿ,ಕಾನೂನು-ನಿಯಮಗಳಿಲ್ಲದಿದ್ದರೂ  ಸಂಘ ಪರಿವಾರದ ಹಿನ್ನಲೆ ಇದ್ದರೆ ಯಡಿಯೂರಪ್ಪ ಸರ್ಕಾರದಲ್ಲಿ ಏನ್ ಬೇಕಾದ್ರೂ ಆಗೋಗುತ್ತೆ ಎನ್ನುವುದು ಪ್ರೂವ್ ಆದಂತಾಗುತ್ತೆ. 

ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ವಿಶ್ವಸನೀಯ ಮೂಲಗಳು ನೀಡಿರುವ ಮಾಹಿತಿ ಪ್ರಕಾರ  ಸಂಘ ಪರಿವಾರದ ಹಿನ್ನೆಲೆ ಹೊಂದಿರುವ  ಡಾ ಎಂ ಸುಧೀಂದ್ರರಾವ್‌ ಅವರನ್ನು ಪ್ರತಿಷ್ಟಿತ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹುದ್ದೆಗೆ ನೇಮಿಸುವ ಪ್ರಯತ್ನ ಗಂಭೀರವಾಗಿ ನಡೆದಿದೆಯಂತೆ.ಸಂಘಪರಿವಾರದ ಹಿನ್ನಲೆ ಜತೆಗೆ ಅವರಿಗಿರುವ ಮತ್ತೊಂದು ಅನುಭವ ಜ್ಯೋತಿಷ್ಯದಲ್ಲಿ ಪಡೆದಿರುವ  ಗೌರವ ಡಾಕ್ಟರೇಟ್‌ ಅಷ್ಟೇ.ನಿಯಮಗಳ ಪ್ರಕಾರ ನೋಡೋದಾದ್ರೆ ಸುಧೀಂದ್ರರಾವ್‌ ಅವರನ್ನು ನೇಮಿಸಲು ಬರೋದೇ ಇಲ್ಲ,ಆದ್ರೂ ನೇಮಕಾತಿ ಸಂಬಂಧಿ ನಿಯಮಾವಳಿಗಳ ಕರಡು ಪ್ರತಿಯನ್ನು ಸಿದ್ಧಪಡಿಸಿರುವ ಸರ್ಕಾರ,ತರಾತುರಿಯಲ್ಲಿ ನೇಮಕಾತಿಯ ಟಿಪ್ಪಣಿಯನ್ನು  ಪರಿಸರ ಇಲಾಖೆಗೆ ಕಳುಹಿಸಲಾಗಿದೆಯಂತೆ.

ಹೇಗೆ ಆಯ್ಕೆಯಾಗಬೇಕು..ಆಯ್ಕೆ ಹೇಗೆ ನಡೆಯಬೇಕು..:ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳ ಹುದ್ದೆ  ಭರ್ತಿಗೆ ಅದರದೇ ಆದ ಪ್ರಕ್ರಿಯೆಗಳಿವೆ,ಹೀಗೆಯೇ ಆಯ್ಕೆ ಮಾಡಬೇಕೆನ್ನುವ ನಿಯಮವೂ ಇದೆ.ಆಯ್ಕೆಗೆ ಸಂಬಂಧಿಸಿದಂತೆ ಆಸಕ್ತರು ಹಾಗೂ ಅರ್ಹರು ಅರ್ಜಿ ಹಾಕಲಿಕ್ಕೆ ಅನುಕೂಲವಾಗುವಂತೆ ಪತ್ರಿಕೆಗಳಲ್ಲಿ  ಜಾಹೀರಾತು ನೀಡಬೇಕು.ಸರ್ಕಾರಿ, ಖಾಸಗಿ ಅಥವಾ ಶಿಕ್ಷಣ ಕ್ಷೇತ್ರದಲ್ಲಿರುವ ಅಭ್ಯರ್ಥಿಗಳಿಗೂ ಸಹ ಅವಕಾಶ ಕಲ್ಪಿಸಬೇಕು. ಅಂತಿಮವಾಗಿ ಪ್ರತಿಭಾವಂತರೇ ಆಯ್ಕೆಯಾಗಬೇಕೆನ್ನುವ  ಸುಪ್ರೀಂ ಕೋರ್ಟ್‌ ಆದೇಶ ಪಾಲನೆಯಾಗಲೇಬೇಕು.ಆದರೆ ಬಿಜೆಪಿ ಸರ್ಕಾರ ಮಂಡಳಿ ಅಧ್ಯಕ್ಷ ಹುದ್ದೆಗೆ ಭರ್ತಿ ಮಾಡಲು ಜಾಹೀರಾತು ನೀಡದೆ ತರಾತುರಿಯಲ್ಲಿ ಆರ್ ಎಸ್ ಎಸ್ ಋಣ ತೀರಿಸುವ ಗೋಜಿಗೆ ಬಿದ್ದು ನ್ಯಾಯಾಂಗ ನಿಂದನೆಯಂಥ ಮಹಾನ್ ಪ್ರಮಾದ ಮಾಡಲಿಕ್ಕೆ ಹೊರಟಿದೆ ಅನ್ಸುತ್ತೆ.

ಮಾನದಂಡವೇನು:ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹುದ್ದೆಗೆ ಅಧ್ಯಕ್ಷರು ಅಥವಾ ಸದಸ್ಯ ಕಾರ್ಯದರ್ಶಿಗಳು ಪರಿಸರ ವಿಜ್ಞಾನ ಪದವಿ ಪಡೆದಿರಬೇಕಾದದ್ದು ಕಡ್ಡಾ ಯ. ಪರಿಸರ ಸಂಬಂಧಿ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿರಬೇಕೆನ್ನುತ್ವೆ ಎನ್ ಜಿಟಿ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ .ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಕಟ್ಟುನಿಟ್ಟಿನ ನಿರ್ದೇಶನವೇ ಇದೆ.

ಯಾರೀ ಸುಧೀಂದ್ರರಾವ್..ಅವರ ಅರ್ಹತೆ ಏನು:

ಕೆಲವು ಮೂಲಗಳ ಪ್ರಕಾರ ಸುಧೀಂದ್ರರಾವ್ ಇಲ್ಲಿನವರೇ ಇಲ್ಲ (ಹಾಗೆಂದು ಇಲ್ಲಿನವರೇ ಆಗಬೇಕೆನ್ನುವ ನಿಯಮವೇನೂ ಇಲ್ಲ).ಅವರು ಮೂಲತಃ ಕೋಲ್ಕತ್ತಾದವ್ರು.ಆದರೆ ಸಿವಿಲ್‌ ಇಂಜಿನಿಯರ್‌ ಪದವೀಧರರು.ಆದ್ರೆ ಪರಿಸರಕ್ಕೆ ಸಂಬಂಧಿಸಿದಂತೆ ಯಾವುದೇ ಕ್ಷೇತ್ರದಲ್ಲಿಯೂ ಕೆಲಸ ಮಾಡಿರುವ ಅನುಭವವೇ ಅವರಿಗಿಲ್ಲ ಎನ್ನಲಾಗಿದೆ.ಅವರಿಗೆ ಸಿಕ್ಕಿರುವ ಡಾಕ್ಟರೇಟೂ ಇದಕ್ಕೆ ಸಂಬಂಧಿಸಿದ್ದಲ್ಲ.ಕೊಲ್ಕತ್ತಾದ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಓರಿಯಂಟಲ್‌ ಹೆರಿಟೇಜ್‌ ಆಯೋಜಿಸಿದ್ದ ಸಮ್ಮೇಳನದಲ್ಲಿ  ದೊರೆತ ಡಾಕ್ಟರೇಟ್ ಅದು.

ಅಂದ್ಹಾಗೆ ಆ ಸಂಸ್ಥೆ  ಸ್ಮೃತಿ ರತ್ನ, ಸ್ಮೃತಿ ಶಾಸ್ತ್ರಿ, ಸ್ಮೃತ್ರಿ ವಿದ್ಯಾ ವಾರಿಧಿ, ಪೌರೋಹಿತ್ಯ ಶಾಸ್ತ್ರಿ, ವೇದ ರತ್ನ, ವೇದ ವಿದ್ಯಾ ವಾರಿಧಿ, ಜ್ಯೋತಿಷ್ಯ ವಿದ್ಯಾವಾರಿಧಿ, ಉಪನಿಷದ್‌ ರತ್ನ, ಪ್ರಯಾಗ, ಸಂಸ್ಕೃತ, ಯೋಗ ಶಾಸ್ತ್ರ ಸೇರಿದಂತೆ ವೇದಕ್ಕೆ ಸಂಬಂಧಿಸಿದಂತೆ ಶಿಕ್ಷಣ ನೀಡುವ ಸಂಸ್ಥೆ ಅಷ್ಟೇ.ಸುಧೀಂದ್ರರಾವ್ ಅವರು ಇದೇ ಪ್ರಮಾಣ ಪತ್ರವನ್ನು ತಮ್ಮ ಸ್ವ ವಿವರದೊಂದಿಗೆ ಸರ್ಕಾರಕ್ಕೆ ಸಲ್ಲಿಸಿದ್ದಾರೆನ್ನಲಾಗಿದ್ದು ಇದನ್ನೇ ಕ್ರೈಟೇರಿಯಾವಾಗಿ ಬಳಸಿಕೊಂಡು ಯಡಿಯೂರಪ್ಪ ಸರ್ಕಾರ ಸುಧೀಂದ್ರರಾವ್ ಅವರನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ಮಾಡಲಿಕ್ಕೆ ಹೊರಟಿದೆ ಎಂದ್ರೆ ಇದಕ್ಕಿಂತ ದೊಡ್ಡ ಅಭಾಸಕಾರಿ ಮತ್ತೊಂದಿದೆಯೇ?

ಪರಿಸರಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಲೇಖನ ಪ್ರತಿಯೂ ಕೃತಿ ಚೌರ್ಯದ್ದಾ… ಹೀಗೂ ಒಂದು ಅನುಮಾನವಿದೆ. ಡಾ ಸುಧೀಂದ್ರರಾವ್‌ ಮಾಲಿನ್ಯ  ಕುರಿತು ಲಗತ್ತಿಸಿರುವ ಲೇಖನ ಪ್ರತಿ ಗೂಗಲ್‌ ನಲ್ಲಿ ಈಗಾಗಲೇ ಪ್ರಕಟವಾಗಿರುವ ಲೇಖನವನ್ನು ಭಟ್ಟಿ ಇಳಿಸಿ ಸಿದ್ಧಪಡಿಸಿದ್ದಾ..ಅದು ಕೃತಿ ಚೌರ್ಯನಾ ಎನ್ನುವ ಅನುಮಾನ ಕಾಡುತ್ತಿದೆ.

ಈಗಾಗಲೇ ಇಂಥ ಅಸಮರ್ಪಕ ನೇಮಕಗಳಾದ ಸಂದರ್ಭದಲ್ಲಿ ಕಾನೂನಾತ್ಮಕ ಹೋರಾಟಗಳಾಗಿವೆ.ಮಹತ್ವ ಹಾಗೂ ಐತಿಹಾಸಿಕ ಎನಿಸುವಂಥ ತೀರ್ಪುಗಳು ಹೊರಬಿದ್ದಿವೆ.ಅವುಗಳ ಪೈಕಿ  ರಾಜೇಂದ್ರಸಿಂಗ್ ಭಂಡಾರಿ ಮತ್ತು ಉತ್ತರಾಖಂಡ ರಾಜ್ಯ ಸರ್ಕಾರದ ಮಧ್ಯೆ ನಡೆಯುತ್ತಿರುವ ಪ್ರಕರಣವನ್ನು ಉದಾಹರಣೆಯಾಗಿ ಉಲ್ಲೇಖಿಸಬಹುದು.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸ್ವತಂತ್ರಕುಮಾರ್ ಅಧ್ಯಕ್ಷತೆಯ ರಾಷ್ಟ್ರೀಯ ಹಸಿರು ಪೀಠ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಸಂದರ್ಭದಲ್ಲಿ ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ ಕಾಯ್ದೆ 1974ರ ಸೆಕ್ಷನ್‌ 4(2)(ಎ) ಅನ್ವಯ ಅರ್ಹತೆಯನ್ನು ಹೊಂದಿರದ ವ್ಯಕ್ತಿಗಳನ್ನು ನೇಮಿಸುತ್ತಿರುವುದಕ್ಕೆ ಆಕ್ಷೇಪ ಎತ್ತಿತ್ತು.ಇದು ಭಾರೀ ದೊಡ್ಡದ ಸಂಚಲನ ಮೂಡಿಸಿತ್ತು.ಅಷ್ಟೇ  ಅಲ್ಲದೆ ಈ ಸಂಬಂಧ  ಹೊರಡಿಸಿದ್ದ ಐತಿಹಾಸಿಕ  ಆದೇಶ ಇವತ್ತಿಗೂ ಯಾವುದೇ ಅಕ್ರಮಕ್ಕೂ ಅವಕಾಶ ಮಾಡಿಕೊಡುತ್ತಿಲ್ಲ ಎನ್ನುವುದು ಗಮನಾರ್ಹ.ಆದ್ರೆ ಯಡಿಯೂರಪ್ಪ ಅವರ ಆತುರದ ನಿರ್ದಾರ ನ್ಯಾಯಾಂಗ ನಿಂದನೆ ಜತೆಗೆ ಕ್ಯೂ ನಲ್ಲಿ ಇರುವ ಅರ್ಹರಿಗೆ ಮೋಸ ಮಾಡಿದಂತಾಗುತ್ತಿದೆ. 

ಏನನ್ನುತ್ತೆ ಗೊತ್ತಾ  NGT..

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗುವವರಿಗೆ ಪರಿಸರ ಸಂರಕ್ಷಣೆಯಲ್ಲಿ ವಿಶೇಷ ಪರಿಜ್ಞಾನ, ಪ್ರಾಯೋಗಿಕ ಅನುಭವ ಮತ್ತು ಪರಿಸರ ಸಂಬಂಧಿ ಸಂಸ್ಥೆಗಳ ಆಡಳಿತದಲ್ಲಿ ಅನುಭವ ಇರಲೇಬೇಕು. ಜಲ ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ ತಡೆ ಕಾಯ್ದೆ 1974ರ ಸೆಕ್ಷನ್ 4ರ ಪ್ರಕಾರ ತಾಂತ್ರಿಕೇತರ ವ್ಯಕ್ತಿಗಳ ನೇಮಕ ಮಾಡಲೇಬಾರದು. ವಾಯು ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ 1981ರ ಸೆಕ್ಷನ್ 5 ಕೂಡ ಇದನ್ನೆ ಪುಷ್ಟೀಕರಿಸಿದೆ.ಸುಪ್ರೀಂ ಕೋರ್ಟ್ನಲ್ಲಿನ ರಿಟ್ ಪಿಟಿಷನ್ ಸಿವಿಲ್ ನಂ 657/1995ರ ಆದೇಶವೂ ತಾಂತ್ರಿಕೇತರ ವ್ಯಕ್ತಿಯನ್ನ ನೇಮಕಕ್ಕೆ ಬ್ರೇಕ್ ಹಾಕಿದೆ.ಡಾ.ಸುಧಾಕರ್ ಅವರ ನೇಮಕಕ್ಕೆ ವಿರೋಧ ಹಾಗೂ ನೇಮಕವನ್ನು ಅಸಿಂಧುಗೊಳಿಸಲು ಕಾರಣವಾದದ್ದು ಇದೇ ಅಂಶಗಳು ಎನ್ನೋದು ಗಮನಿಸತಕ್ಕದ್ದು.

Spread the love
Leave A Reply

Your email address will not be published.

Flash News