“ಅವಧೂತ”ನ ಕೆಪಾಸಿಟಿ ಮುಂದೆ ಮಂಡಿಯೂರಿದ ಸರ್ಕಾರ-ಬಿಬಿಎಂಪಿ

0
ಮೊದಲು ಹಾಕಲಾಗಿದ್ದ ನಾಮಫಲಕ ಹೀಗಿತ್ತು..
    ಮೊದಲು ಹಾಕಲಾಗಿದ್ದ ನಾಮಫಲಕ ಹೀಗಿತ್ತು..
ವಿವಾದ ಆದಮೇಲೆ ನಾಮಫಲಕ ಹೀಗಾಯ್ತು,.,..
                ವಿವಾದ ಆದಮೇಲೆ ನಾಮಫಲಕ ಹೀಗಾಯ್ತು,.,..

ಬೆಂಗಳೂರು:ಅವಧೂತ ವಿನಯ್ ಗುರೂಜಿ  ಎಂದ್ರೆ ಏನು..ಅವರ ಕೆಪಾಸಿಟಿ ಅಂದ್ರೇನು..ಅವರನ್ನು ಟಚ್ ಮಾಡೋದಿರಲಿ,ಅವರ ಕೂದಲಿನ ಮೊನೆಯನ್ನು ಅಲುಗಾಡಿಸೊಕ್ಕೆ ಆಗೊಲ್ಲ..ಹಾಗೊಮ್ಮೆ ಮಾಡಿದ್ರೆ ಏನಾಗುತ್ತೆ ಗೊತ್ತಲ್ಲ..ಇದೆಲ್ಲ ಏಕೆ ಹೇಳ್ತಿದ್ದೇವೆ ಎನ್ನೋದನ್ನು ನೀವ್ ಅರ್ಥ ಮಾಡಿಕೊಂಡಿರ್ಬೋದು…ಯೆಸ್..ಅದೇ ಕಾರಣಕ್ಕೆ.ರಸ್ತೆಗೆ ಹೆಸರಿಟ್ಟು ನಾಮಫಲಕ ತೆಗೆಸೊಕ್ಕೆ ಮುಂದಾದ ಬಿಬಿಎಂಪಿಗೆ ಎಂಥಾ ಮುಖಭಂಗ ಆಗಿದೆ ಎನ್ನೋದನ್ನು ರಾಜ್ಯದ ಜನತೆ ನೋಡಿದೆ.ಆದ್ರೆ ವಿನಯ್ ಗುರೂಜಿ ತುಂಬಾ ಪ್ರಭಾವಿ ಇರಬಹುದು ಹಾಗಂಥ ಕಾನೂನನ್ನು ಗೌರವಿಸುವ ಸೌಜನ್ಯ ತೋರದೆ,ಸರ್ಕಾರದ ಮೇಲೆ ಒತ್ತಡ ತಂದು ನಾಮಫಲಕ ತೆರವು ವಿಚಾರದಲ್ಲಿ ರಾಜಕೀಯ ಮಾಡ್ಲಿಕ್ಕೋಗಿ ತುಂಬಾ ಸಣ್ಣವರಾಗಿದ್ದಂತೂ ಸತ್ಯ.

ಬದುಕಿರುವ ವ್ಯಕ್ತಿಯ ಹೆಸರಿನಲ್ಲಿ  ರಸ್ತೆಗೆ ನಾಮಕರಣ ಮಾಡಬಾರದೆಂದು ರಾಜ್ಯ ಸರ್ಕಾರ ಮಾಡಿದ ಆದೇಶವನ್ನು ಖುದ್ದು ರಾಜ್ಯ ಸರ್ಕಾರವೇ ಗಾಳಿಗೆ ತೂರಿದಂತದ್ದು ವಿಪರ್ಯಾಸ.ವಿನಯ್ ಗುರೂಜಿ ಮೇಲಿನ ಗೌರವ ಹಾಗೂ ಆತಂಕದ ಕಾರಣಕ್ಕೆ ರಸ್ತೆಗೆ ಹಾಕಲಾಗಿದ್ದ ನಾಮಫಲಕ ತೆಗೆಸುವ ಧೈರ್ಯ ಮಾಡದೆ ಹೆಸರನ್ನು ಹಾಗೆ ಉಳಿಸಿಕೊಂಡು ಏನಾದ್ರೊಂದು ಗಿಮಿಕ್ ಮಾಡುವಂತೆ ಸರ್ಕಾರವೇ ಬಿಬಿಎಂಪಿ ಆಡಳಿತ ವ್ಯವಸ್ಥೆ ಮೇಲೆ ಒತ್ತಡ ತಂದಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆ ಮೂಡುತ್ತೆ.

ಸಾಮಾಜಿಕ ನ್ಯಾಯದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ವಿನಯ್ ಗುರೂಜಿ ಅವ್ರಂಥವ್ರೇ ವೈಯುಕ್ತಿಕ ಹಿತಾಸಕ್ತಿಗಾಗಿ ತನಗಾಗಬಹುದಾದ ಅವಮಾನ ತಪ್ಪಿಸ್ಲಿಕ್ಕೆ ದೊಡ್ಡ ಮಟ್ಟದ ಷಡ್ಯಂತ್ರ ರೂಪಿಸಿರುವುದನ್ನು ಅರ್ಥ ಮಾಡಿಕೊಳ್ಳದಷ್ಟು ಮಂಕು ಎರಚಿಕೊಂಡು ಕೂತಿಲ್ಲ ರಾಜ್ಯದ ಜನತೆ.ವಿನಯ್ ಗುರೂಜಿ ಬಗ್ಗೆ ಸಾರ್ವಜನಿಕವಾಗಿ ಇದ್ದ ಗೌರವ ಈ ಪ್ರಕರಣದಲ್ಲಿ ಕಡಿಮೆಯಾಗಿದ್ದಂತೂ ಸತ್ಯ.ಇದನ್ನು ಕಾಲಜ್ಞಾನಿ ವಿನಯ್ ಗುರೂಜಿ ಕೂಡ ಒಪ್ಪಬೋದು.

ಕನ್ನಡ ಫ್ಲ್ಯಾಶ್ ನ್ಯೂಸ್ ವರದಿ ಮೂಡಿಸಿದ ಸಂಚಲನದ ಹಿನ್ನಲೆಯಲ್ಲಿ ಬಿಬಿಎಂಪಿ ತನಗಾದ ಮುಜುಗರ ತಪ್ಪಿಸ್ಲಿಕ್ಕೆ “ವಿನಯ್ ಗುರೂಜಿ ರಸ್ತೆ”ಯ ನಾಮಫಲಕವನ್ನೇ ತೆಗೆಯುವುದಾಗಿ ಹೇಳಿತ್ತು(ಖುದ್ದು ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಅವರೇ ಈ ಬಗ್ಗೆ ಭರವಸೆ ಕೊಟ್ಟಿದ್ರು).

ಆದ್ರೆ ರಾತ್ರೋರಾತ್ರಿ ಅದೇನ್ ನಡೀತೋ ಗೊತ್ತಿಲ್ಲ,ಬೆಳಗ್ಗೆ ತೆರವಾಗಬೇಕಿದ್ದ ನಾಮಫಲಕದ ಬದ್ಲು ಅದೇ ಹೆಸರಿನ ಮುಂದೆ ಆಶ್ರಮಕ್ಕೆ ಹೋಗುವ ಮಾರ್ಗ(ವಿನಯ್ ಗುರೂಜಿ ಆಶ್ರಮಕ್ಕೆ ಹೋಗುವ ಮಾರ್ಗ)ಎಂದು ಬರೆಸಲಾಗಿತ್ತು.

ವಿನಯ್ ಗುರೂಜಿ ಹೆಸರನ್ನೂ ಉಳಿಸಿಕೊಳ್ಳಬೇಕು ಹಾಗೆಯೇ ನಿಯಮಗಳನ್ನೂ ಪಾಲಿಸ್ಬೇಕೆನ್ನುವ ಎರಡು ವಿಚಾರಗಳನ್ನು ಒಂದೇ ಪ್ರಯತ್ನದಲ್ಲಿ ಈಡೇರಿಸುವ ಮೂಲಕ ಬಿಬಿಎಂಪಿ ಮಾಡಿದ ಹೊಸ ತಂತ್ರಗಾರಿಕೆ ಇದೆಯೆಲ್ಲಾ ಅದಕ್ಕೆ ಭೇಷ್ ಎನ್ನಲೇಬೇಕು.

ಆದ್ರೆ ತನ್ನ ಹೆಸರಿನ ನಾಮಫಲಕ ತೆಗೆಸಿದ್ರೆ ತನಗೆ ಅವಮಾನ,ಅದನ್ನು ನಾನು ಸಹಿಸೊಲ್ಲ.ತೆಗೆಸಿದ್ರೆ ಅದರ ಪರಿಣಾಮ ನೆಟ್ಟಗಿರೊಲ್ಲ,ನೀವ್ಯಾರು ನನ್ನ ಆಶ್ರಮದ ಬಳಿ ಬರುವಂಗಿಲ್ಲ ಎನ್ನುವ ರೀತಿಯಲ್ಲಿ ಮಾತ್ನಾಡುವ ಮೂಲಕ ಸರ್ಕಾರದ ಮೇಲೆ ವಿನಯ್ ಗುರೂಜಿ ಪ್ರೆಷರ್ ತಂದಿದ್ದರ ಪರಿಣಾಮವೇ ಇಷ್ಡೆಲ್ಲಾ ನಡೆದಿದೆ ಎನ್ನಲಾಗಿದೆ.ತೆರೆಯ ಹಿಂದೆ ಅದೇನೇನ್ ನಡೆದಿದೆಯೋ ಗೊತ್ತಿಲ್ಲ.ಆದ್ರೆ ಹೀಗೆಲ್ಲಾ ಆಗಬಾರದಿತ್ತು ಎನ್ನುವ ಮಾತು ಸಾರ್ವಜನಿಕವಾಗಿ ಕೇಳಿಬಂದಿದೆ.ವಿನಯ್ ಗುರೂಜಿ ಅವರ ವ್ಯಕ್ತಿತ್ವ-ವಿಚಾರಧಾರೆ-ಜೀವನಶೈಲಿಗೆ ನಿಜಕ್ಕೂ ಶೋಭೆ ತರುವಂತದ್ದಲ್ಲ ಎಂದೆಲ್ಲಾ ರಾಜ್ಯದ ಜನ ಮಾತನಾಡಿಕೊಳ್ಳುವಂತಾಗಿರುವುದಂತೂ ಸತ್ಯ.

 

 

 

Spread the love
Leave A Reply

Your email address will not be published.

Flash News