ಹವಾ ಮೆಂಟೇನ್ ವಿಚಾರಕ್ಕೆ ಬೀದಿ ಹೆಣವಾದ ರೌಡಿಶೀಟರ್ ಭರತ್..

0
ಬರ್ಭರವಾಗಿ ಕೊಲೆಯಾಗಿದ್ದ ರೌಡಿ ಶೀಟರ್ ಭರತ್
ಬರ್ಭರವಾಗಿ ಕೊಲೆಯಾಗಿದ್ದ ರೌಡಿ ಶೀಟರ್ ಭರತ್
ಹೇಳಿದಂತೆಯೇ ಕೊಲೆ ಮಾಡಿ ಮುಗಿಸಿ ಎಸ್ಕೇಪ್ ಆಗಿರುವ ಚಿರಾಗ್ ಅಲಿಯಾಸ್ ಚೈನಿ
ಹೇಳಿದಂತೆಯೇ ಕೊಲೆ ಮಾಡಿ ಮುಗಿಸಿ ಎಸ್ಕೇಪ್ ಆಗಿರುವ ಚಿರಾಗ್ ಅಲಿಯಾಸ್ ಚೈನಿ

ಬೆಂಗಳೂರು:ಬೆಂಗಳೂರಲ್ಲಿ ಆಗುತ್ತಿರುವ ಮರ್ಡರ್ ಗಳಿಗೆ ಲೆಕ್ಕವೇ ಇಲ್ಲ.ಇದನ್ನೆಲ್ಲಾ ನೋಡಿದ್ರೆ ಪೊಲೀಸರೇ ಒಂದ್ ಹಂತದಲ್ಲಿ ರೌಡಿಗಳನ್ನು ಪರಸ್ಪರ ಬಡಿದಾಡಿಕೊಳ್ಳಲು ಬಿಟ್ಟುಬಿಟ್ಟಿದ್ದಾರಾ ಅನಿಸುತ್ತೆ.ಮೊನ್ನೆ ಮೊನ್ನೆ ತಾನೇ ಬರ್ಭರವಾಗಿ ನಡೆದೋಗಿದ್ದ ಮರ್ಡರ್ ಗೆ ರಾಜಧಾನಿ ಬೆಂಗಳೂರು ಅಕ್ಷರಶಃ ಬೆಚ್ಚಿಬಿದ್ದಿತ್ತು.ಬಾರ್ ಮುಂದೆಯೇ ಕೊಲೆಯಾಗಿ ಹೋಗಿದ್ದವನ ಹೆಸರು ರೌಡಿ ಶೀಟರ್ ಭರತ್.ಆತನನ್ನು ಅಷ್ಟು ರಾಜಾರೋಷವಾಗಿ ಮರ್ಡರ್ ಮಾಡಿದವನು ಯಾರು ಎನ್ನುವ ಪೊಲೀಸರ ಪ್ರಶ್ನೆಗೆ ಉತ್ತರವೂ ಸಿಕ್ಕಿದೆ.

ಮೊನ್ನೆ  ಯಲಹಂಕದ ಅಗ್ರಹಾರ ಲೇ ಔಟ್ ನಲ್ಲಿ ನಡೆದ ಭರತನ ಕೊಲೆಗೆ ಕಾರಣವೇ ಹವಾ ಮೆಂಟೇನ್ ವಿವಾದ.ಏರಿಯಾದಲ್ಲಿ ಒಂದಾ ನೀನ್ ಇರ್ಬೇಕು…ಅಥ್ವಾ ನಾನ್ ಇರಬೇಕು.ಕಾಡಿನಲ್ಲಿ ಎರಡು ಹುಲಿಗಳು ಹೇಗೆ ಇರೊಕ್ಕೆ ಆಗೊಲ್ವೋ ಹಾಗೆಯೇ ನಾವು ಇಬ್ಬರು ಇರಲಿಕ್ಕೆ ಸಾಧ್ಯವಿಲ್ಲ ಎಂದು ಹವಾ ಮೆಂಟೇನ್ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಜೋರ್ ಗಲಾಟೆಯಾಗಿತ್ತು.

ಈ ವಿಷಯದ ಮೇಲೆಯೇ ಬಾರ್ ಮುಂದೆಯೇ ಹತ್ಯೆ ಮಾಡೊದಾಗಿ ಭರತ್ ನ ರೈವಲ್ರಿ ಚಿರಾಗ್ ಅಲಿಯಾಸ್ ಚೈನಿ ಎಂಬಾತ  ಸವಾಲ್ ಹಾಕಿದ್ದ.ಭರತ ಕೂಡ ಆತನಿಗೆ ಅದೇನ್ ಕಿತ್ಕೊಳ್ತಿಯೋ ಕಿತ್ಕೊ ಹೋಗು ಎಂದು ಅವಾಜ್ ಬಿಟ್ಟಿದ್ದ.ಇದರಿಂದ ರೋಸಿ ಹೋಗಿದ್ದ ಚಿರಾಗ್ ಗ್ಯಾಂಗ್ ಅಗ್ರಹಾರ ಲೇ ಔಟ್ ನ ಬಾರ್ ಗೆ ಕುಡಿಯೊಕ್ಕೆ ಬರ್ತಿದ್ದ ಭರತನ ಚಲನವಲನಗಳನ್ನು ಗಮನಿಸಿ ಎಲ್ಲಿ ಹೊಡೆಯಬೇಕೆನ್ನುವ ಸ್ಕೆಚ್ ರೆಡಿ ಮಾಡಿದೆ.ಅದಕ್ಕೆ ಪೂರಕವಾಗಿಯೇ ಚಿರಾಗ್ ನ ಟೀಮ್ ಭರತ್ ನ ಮೇಲೆ ಅಗ್ರಹಾರ ಲೇ ಔಟ್ ನಲ್ಲೇ ಕೊಲ್ಲೋ ಉದ್ದೇಶದಲ್ಲೇ ಅಟ್ಯಾಕ್ ಮಾಡಿತ್ತು.ಆದ್ರೆ ಭರತ ಕೂದಲೆಳೆಯಲ್ಲಿ ಎಸ್ಕೇಪ್ ಆಗಿದ್ದ.

ಕೋಗಿಲು ನಿವಾಸಿಯಾದ ಭರತ ಮೊನ್ನೆ ಕೂಡ ತನ್ನ ವಿರೋಧಿ ಗ್ಯಾಂಗ್  ನೀಡಿದ್ದ ಎಚ್ಚರಿಕೆ ಹಾಗೂ ಅಟೆಂಪ್ಟ್ ನ ಕೇರ್ ಮಾಡದೆ ಅಗ್ರಹಾರದ ಬಾರ್ ಗೆ ಕುಡಿಯಲು ಬಂದಿದ್ದಾನೆ.ಆತ ಬರೋದನ್ನೇ ಹೊಂಚಾಕಿ ಕಾಯುತ್ತಿದ್ದ ಚಿರಾಗ್ ನ ಟೀಮ್ ಭರತ್ ನನ್ನು ಹೇಳಿದ ರೀತಿಯಲ್ಲಿಯೇ ಬರ್ಭರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದೆ.ಹಳೇ ದ್ವೇಷಕ್ಕೆ ನಡೆದ ಕೊಲೆ ಎಂದು ಅಂದೇ ಅನುಮಾನಿಸಿದ್ದ ಸಂಪಿಗೆಹಳ್ಳಿ ಠಾಣೆ ಪೊಲೀಸರಿಗೆ ಈಗ ಕ್ಲ್ಯೂ ಸಿಕ್ಕಿದ್ದು ಚಿರಾಗ್ ಅಲಿಯಾಸ್ ಚೈನಿ ಗ್ಯಾಂಗ್ ನ್ನು ಎತ್ತಾಕೊಂಡು ಬಂದು ವರ್ಕೌಟ್ ಮಾಡುವ ಉದ್ದೇಶದಲ್ಲಿ ಆ ಗ್ಯಾಂಗ್ ನ್ನು ಸರ್ಚ್ ಮಾಡ್ತಿದೆ.

 

 

 

Spread the love
Leave A Reply

Your email address will not be published.

Flash News