ಕಸಮುಕ್ತ ಬೆಂಗಳೂರನ್ನಾಗಿಸುತ್ತೇನೆನ್ನುವ ಮೇಯರ್ ಚಾಲೆಂಜ್ ಗೆ ಸ್ಪೂರ್ತಿನೇ “ಇವ್ರು”

0
ಕಸಮುಕ್ತ ಇಂದೋರ್ ನ ಸೃಷ್ಟಿಕರ್ತ ಸೈಯದ್ ಅಸದ್ ಅಲಿ ವಾರ್ಸಿ
ಕಸಮುಕ್ತ ಇಂದೋರ್ ನ ಸೃಷ್ಟಿಕರ್ತ ಸೈಯದ್ ಅಸದ್ ಅಲಿ ವಾರ್ಸಿ

ಬೆಂಗಳೂರು: ಬೆಂಗಳೂರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತೆ ಮಾಡಿದ ರಕ್ಕಸ ಸಮಸ್ಯೆಗಳಲ್ಲಿ   ಕಸವೇ ಪ್ರಮುಖವಾದಂತದ್ದು.10 ಸಾವಿರ ಕೋಟಿಯಷ್ಟು ಬಿಗ್ ಬಜೆಟ್ ಖರ್ಚು ಮಾಡುವ ಬಿಬಿಎಂಪಿ ಆಡಳಿತ ವ್ಯವಸ್ಥೆಗೆ ಕಸದ ಸಮಸ್ಯೆ ಸವಾಲಾಗಿ ಪರಿಣಮಿಸಿದ್ದು ಅಂತರಾಷ್ಟ್ರೀಯ ಮಾದ್ಯಮಗಳಲ್ಲಿ ಚರ್ಚೆನೂ ಆಯ್ತು,ಚರ್ಚೆಯಾದಷ್ಟೇ ವೇಗದಲ್ಲಿ ಕಸಮುಕ್ತ ಬೆಂಗಳೂರಿಗೆ ಆಗ್ಬೇಕಿರುವ ಆಧ್ಯತೆಗಳ ಬಗ್ಗೆ ಆಲೋಚಿಸುವುದನ್ನು ಮರೆತ್ ಬಿಡ್ತು ಬಿಬಿಎಂಪಿ ಹಾಗೂ ಅದಕ್ಕೆ ಚುರುಕು ಮುಟ್ಟಿಸ್ಬೇಕಾದ ಸರ್ಕಾರ.

ಜಾಗತಿಕ ಮಟ್ಟದಲ್ಲಿ ಅದೆಲ್ಲೋ ಬೆಳೆದೋಗಿರುವ ರಾಜಧಾನಿ ಬೆಂಗಳೂರು ಎಷ್ಟೇ ತಂತ್ರಜ್ಞಾನ ಬಂದ್ರೂ,ಯಾರೇ ಮೇಯರ್-ಕಮಿಷನರ್ ಬಂದ್ರೂ ಕಸದ ಸಮಸ್ಯೆಯಲ್ಲಿ ದಿನೇ ದಿನ ಹಾಳಾಗಿ ಹೋಗ್ತಿದೆಯೇ ಹೊರತು ಸುಧಾರಣೆಯನ್ನಂತೂ ಕಾಣ್ತಿಲ್ಲ.ಕಸದಲ್ಲಿ ಹಣ ಲೂಟ್ ಮಾಡಲು ಆಕ್ಟೀವ್ ಆಗಿರುವಷ್ಟು ಇಲ್ಲಿನ ಆಡಳಿತ ವ್ಯವಸ್ಥೆ ಅಟ್ಲೀಸ್ಟ್ ಬೆಂಗಳೂರಿಗರಿಗೆ ವಾಸಯೋಗ್ಯವಾದ ವಾತಾವರಣವನ್ನಾದ್ರೂ ನಿರ್ಮಿಸಿಕೊಡುವತ್ತ ಗಮನ ಹರಿಸ್ಬೇಕಿತ್ತು.ಅದು ಕೂಡ ಆಗಿಲ್ಲ.ಅಧಿಕಾರಕ್ಕೆ ಬರೋ ಮೇಯರ್ ಗಳೆಲ್ಲಾ ಹಣ ಮಾಡ್ಬೇಕೆನ್ನುವ ಮೇಜರ್ ಹಾಗೂ ಸಿಂಗಲ್ ಪಾಯಿಂಟ್ ಅಜೆಂಡಾ ಇಟ್ಕೊಂಡೇ ಕೆಲಸ ಮಾಡ್ತಾ ಬಂದಿದ್ದೇ ಕಸ….ಇನ್ನೂ ರಾಜಧಾನಿಯ ಸೌಂದರ್ಯ ಹಾಗೂ ಆರೋಗ್ಯವನ್ನು ಹಾಳು ಮಾಡುವ ಸಮಸ್ಯೆಯಾಗೇ ಉಳಿದೋಗಲು ಕಾರಣ.

ಕಸದಿಂದ ಹೀಗಿದ್ದ ಇಂದೋರ್ ನ್ನು ಈ ರೀತಿ ರೂಪಿಸಿದವ್ರೇ ವಾರ್ಸಿ..
ಕಸದಿಂದ ಹೀಗಿದ್ದ ಇಂದೋರ್ ನ್ನು ಈ ರೀತಿ ರೂಪಿಸಿದವ್ರೇ ವಾರ್ಸಿ..

ಕಸಕ್ಕೆ ಮೀಸಲಿಟ್ಟಿರುವ ಹಣದಲ್ಲಿ ಒಂದಷ್ಟು ಪ್ರಮಾಣದಲ್ಲಿ ನ್ಯಾಯ ಹಾಗೂ ನೀಯತ್ತಾಗಿ ಸದ್ಭಳಕೆಯಾಗಿದ್ದಿದ್ರೆ ಇವತ್ತು ರಾಜಧಾನಿ ಹೇಗೋ ಇರ್ಬೇಕಿತ್ತು.ಆದ್ರೆ ಹಾಗಾಗಿಲ್ವೆ..ದಿನೇ ದಿನ ಕಸದ ಸಮಸ್ಯೆ ರಾಜಧಾನಿ ಜನರ ಆರೋಗ್ಯ ಹಾಗೂ ಬೆಂಗಳೂರಿನ ಪರಿಸರವನ್ನು ಇಡಿ ಇಡಿಯಾಗಿ ಕೊಲ್ಲಲಾರಂಭಿಸಿದೆ.ಇದನ್ನೆಲ್ಲಾ ಪರಿಗಣಿಸಿಯೇ ಮೇಯರ್ ಗೌತಮ್ ಕುಮಾರ್ ತನ್ನ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಕಸಮುಕ್ತ ಬೆಂಗಳೂರನ್ನೇ ಆಧ್ಯತೆಯನ್ನಾಗಿಸಿಕೊಂಡು ಇದಕ್ಕಾಗಿ ಪ್ಲ್ಯಾನ್ ಆಫ್ ಆಕ್ಷನೊಂದನ್ನು ರೆಡಿ ಮಾಡಿದ್ದಾರೆ.ಬೆಂಗಳೂರನ್ನು ತನ್ನ ಅವಧಿಯೊಳಗೆ ಕಸಮುಕ್ತ ಬೆಂಗಳೂರನ್ನಾಗಿಸದಿದ್ರೆ ನೋಡಿ ಎಂದು ಆತ್ಮವಿಶ್ವಾಸದಿಂದ ಹೇಳುವಬಂತದ್ದನ್ನು ನೋಡುದ್ರೆ ಮೇಯರ್ ಕೈಯಲ್ಲಿ ಇರುವ ಆ ಮಂತ್ರ ದಂಡ ಯಾವುದೆನ್ನುವ ಆಶ್ಚರ್ಯಕರ ಪ್ರಶ್ನೆ ಮೂಡುತ್ತೆ.

ಇಡೀ ಇಂದೋರ್ ನ ಕಸ ನಿರ್ವಹಣಾ ವ್ಯವಸ್ಥೆಯನ್ನು ನಿಯಂತ್ರಿಸುವ ಸೆಂಟ್ರಲೈಸ್ಡ್ ಕಂಟ್ರೋಲ್ ರೂಂ ನೋಡಿ ಮೇಯರ್ ಗೌತಮ್ ಅವ್ರೇ ತಬ್ಬಿಬ್ಬಾಗುತ್ತಿರುವುದು
ಇಡೀ ಇಂದೋರ್ ನ ಕಸ ನಿರ್ವಹಣಾ ವ್ಯವಸ್ಥೆಯನ್ನು ನಿಯಂತ್ರಿಸುವ ಸೆಂಟ್ರಲೈಸ್ಡ್ ಕಂಟ್ರೋಲ್ ರೂಂ ನೋಡಿ ಮೇಯರ್ ಗೌತಮ್ ಅವ್ರೇ ತಬ್ಬಿಬ್ಬಾಗುತ್ತಿರುವುದು

ಯೆಸ್..ಮೇಯರ್ ಗೌತಮ್ ಕುಮಾರ್ ಬೆಂಗಳೂರು ತನ್ನ ಅವಧಿಯಲ್ಲಿ  ಕಸಮುಕ್ತ ಬೆಂಗಳೂರಾಗುವ ಎಲ್ಲಾ ಲಕ್ಷಣ ನಿಮ್ಗೆ ಕಂಡೇ ಕಾಣಿಸುತ್ತೆ ಎಂದು ಅಷ್ಟು ಕಾನ್ಫಿಡೆಂಟಾಗಿ ಹೇಳೊಕ್ಕೆ ಕಾರಣವೇ ಆ ವ್ಯಕ್ತಿ..ಅದೇ ಮೇಯರ್ ಕೈಯಲ್ಲಿರುವ ವೆಪನ್..ಅಸ್ತ್ರ ಎಲ್ಲವೂ.ಮೇಯರ್ ಆತ್ಮವಿಶ್ವಾಸಕ್ಕೆ ಕಾರಣವೂ ಕೂಡ ಅವ್ರೇ..ಆ ವ್ಯಕ್ತಿ ಇನ್ನ್ಯಾರು ಅಲ್ಲ,ಸೈಯ್ಯದ್ ಅಸಾದ್ ಅಲಿ ವಾರ್ಸಿ..ಕಸಮುಕ್ತ ಇಂದೋರ್ ನ ಸೃಷ್ಟಿಕರ್ತ.ತನ್ನ ಕಾರ್ಯವೈಖರಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಂದ್ಲೇ ಪ್ರಶಂಸೆಗೀಡಾಗಿರುವ ಜಾವೇದ್ ವಾರ್ಸಿ ಅವರನ್ನು ಬೆಂಗಳೂರಿಗೆ ಕರೆತಂದಿದ್ದಾರೆ ಮೇಯರ್ ಗೌತಮ್ ಕುಮಾರ್.ವಾರ್ಸಿ ಅವರನ್ನು ಅಸ್ತ್ರವನ್ನಾಗಿಸಿಕೊಂಡು ಬೆಂಗಳೂರನ್ನು ಇಂದೋರ್ ಮಾದರಿಯಲ್ಲಿ ಕಸಮುಕ್ತ ನಗರವನ್ನಾಗಿಸುವ ಸಂಕಲ್ಪ ತೊಟ್ಟಿದ್ದಾರೆ ಅಷ್ಟೇ ಅಲ್ಲ,ಆ ಪ್ರಯತ್ನದಲ್ಲಿ ಯಶಸ್ವಿಯೂ ಆಗ್ತೇನೆನ್ನುವ ಆತ್ಮವಿಶ್ವಾಸದಲ್ಲಿ ತೇಲುತ್ತಿದ್ದಾರೆ.

ಇಂದೋರ್ ಗೆ ದೇಶದ ನಂಬರ್ ಒನ್ ಕ್ಲೀನೆಸ್ಟ್ ಸಿಟಿ ಎನ್ನುವ ಹೆಗ್ಗಳಿಕೆ ಬರೊಕ್ಕೆ ಕಾರಣವೇ ವಾರ್ಸಿ
ಇಂದೋರ್ ಗೆ ದೇಶದ ನಂಬರ್ ಒನ್ ಕ್ಲೀನೆಸ್ಟ್ ಸಿಟಿ ಎನ್ನುವ ಹೆಗ್ಗಳಿಕೆ ಬರೊಕ್ಕೆ ಕಾರಣವೇ ವಾರ್ಸಿ.ಇದಕ್ಕೆ ಇಲ್ಲಿದೆ ಸಾಕ್ಷಿ ನೋಡಿ

ನಿಮ್ಗೆ ಆಶ್ಚರ್ಯವಾಗ್ಬೋದು ಇಂದೋರ್ ನ ಕಸಮುಕ್ತಗೊಳಿಸಿ ಇಡೀ ದೇಶಕ್ಕೆ ಮಾದರಿಯಾದ ಸೈಯ್ಯದ್ ಅಸಾದ್ ಅಲಿ ವಾರ್ಸಿ.,ಈಗಾಗ್ಲೇ ಬೆಂಗಳೂರಿನ ಮೂಲೆ ಮೂಲೆಯನ್ನು ತಪಾಸಣೆ ಮಾಡಿ ನೀಲನಕ್ಷೆಯೊಂದನ್ನು ಸಿದ್ಧಪಡಿಸಿಯೂ ಬಿಟ್ಟಿದ್ದಾರೆ.ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಕಸದ ಪರಿಸ್ಥಿತಿ ಬಗೆಹರಿಸಲಾಗದಷ್ಟು ಬೆಂಗಳೂರಿನಲ್ಲಿ ಸಮಸ್ಯೆಯಿಲ್ಲ ಎಂದ್ಹೇಳುವ ವಾರ್ಸಿ,ಬದ್ಧತೆ-ಪ್ರಾಮಾಣಿಕತೆಯ ಕೊರತೆಯೇ ಸಮಸ್ಯೆಗೆ ಮೂಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಆದ್ರೆ ಇದೆಲ್ಲವನ್ನು ಬದಿಗೊತ್ತಿ ಕೆಲಸ ಮಾಡಬೇಕಾದ ಅನಿವಾರ್ಯ ಪರಿಸ್ತಿತಿ ಇಂದಿನದಾಗಿರುವುದರಿಂದ ಕಸಮುಕ್ತ ಬೆಂಗಳೂರಿಗೆ ಪ್ಲ್ಯಾನ್ ಆಫ್ ಆಕ್ಷನ್ ಆಗಲೇಬೇಕಿದೆ.ಅದನ್ನು ಮುಗಿಸಿದ ಮೇಲೇನೆ ನಾನು ನೆಮ್ಮದಿಯಿಂದ ನಿದ್ದೆ ಮಾಡೋದು ಎಂಬ ಹಠದ ಮಾತುಗಳನ್ನಾಡಿದ್ದಾರೆ.

ಇಂದೋರ್ ನ ಕಸದಿಂದ ಹೀಗೆ ಉತ್ಪತ್ತಿಯಾಗುತ್ತೆ ಬಯೋಗ್ಯಾಸ್
ಇಂದೋರ್ ನ ಕಸದಿಂದ ಹೀಗೆ ಉತ್ಪತ್ತಿಯಾಗುತ್ತೆ ಬಯೋಗ್ಯಾಸ್
ಇಲ್ಲಿನ ಕಸ ನಿರ್ವಹಣಾ ಘಟಕಗಳು ಕುಳಿತು ಊಟ ಮಾಡುವಷ್ಟು ಸ್ವಚ್ಛವಾಗಿವೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ..
ಇಲ್ಲಿನ ಕಸ ನಿರ್ವಹಣಾ ಘಟಕಗಳು ಕುಳಿತು ಊಟ ಮಾಡುವಷ್ಟು ಸ್ವಚ್ಛವಾಗಿವೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ..

ದಶಕಗಳಿಂದ್ಲೂ ಬೆಂಗಳೂರನ್ನ ಕಾಡಿದ್ದ ಕಸರಾಕ್ಷಸನ ಸಂಹಾರ ನಡೆಸಲು ಇಂದೋರ್ ನಿಂದ ಆಗಮಿಸಿರುವ ಜಾವೇದ್ ವಾರ್ಸಿ ಈಗಾಗ್ಲೇ ಶೇಕಡಾ 25 ರಷ್ಟು ಬೆಂಗಳೂರನ್ನು ಸುತ್ತಾಕಿದ್ದಾರೆ.ಕಸದ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ.ಘಟಕಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.ತನ್ನ ಟೀಮನ್ನು ಬೆಂಗಳೂರಿನಾದ್ಯಂತ ಬಿಟ್ಟು ವರದಿ ಕಲೆ ಹಾಕಿದ್ದಾರೆ.ಇದೆಲ್ಲವನ್ನು ಕ್ರೋಢೀಕರಿಸಿ ಬ್ಲ್ಯೂ ಪ್ರಿಂಟ್ ರೆಡಿ ಮಾಡಿದ್ದಾರೆ.ಅದರ ಮೇಲೆಯೇ ಪ್ಲ್ಯಾ ನ್ ಆಫ್ ಆಕ್ಷನ್ ಗೆ ಸಿದ್ದತೆ ಮಾಡಿಕೊಂಡಿದ್ದಾರೆ.

ಅಂದ್ಹಾಗೆ ಬಿಬಿಎಂಪಿ ನಂಬ್ಕೊಂಡಿರೋ ಆ ವ್ಯಕ್ತಿಯಿಂದ  ನಿಜಕ್ಕೂ ಬೆಂಗಳೂರನ್ನು ಕಸಮುಕ್ತಗೊಳಿಸೊಕ್ಕೆ ಸಾಧ್ಯವಿದೆಯಾ.. ಆ ಶಕ್ತಿ ಹಾಗೂ ಸಾಮರ್ಥ್ಯ ಅವರಲ್ಲಿ ಇದೆಯಾ.. ಯಾವ್ ಟೆಕ್ನಾಲಜಿ ಬಗ್ಗೆನೂ ಇಲ್ಲದ ನಂಬಿಕೆ ಆ ವ್ಯಕ್ತಿ ಮೇಲೇಕೆ ಮೇಯರ್ ಗೆ, ಅವ್ರು ಬಂದ್ರೆ ಮಾತ್ರ ಕಸದ ಸಮಸ್ಯೆಗೆ ಮುಕ್ತಿ ಎಂದು ಮೇಯರ್ ಹೇಳ್ತಿರೋದೇಕೆ ಎಂಬೆಲ್ಲಾ ಪ್ರಶ್ನೆಗಳು ಮೂಡೋದು ಸಹಜ.ಆದ್ರೆ ಕಣ್ಣಾರೆ ನೋಡಿರುವ ಸನ್ನಿವೇಶದ ನಂತ್ರವೇ ಮೇಯರ್ ಗೌತಮ್ ,ವಾರ್ಸಿ  ಅವರ ಬಗ್ಗೆ ಇಷ್ಟೊಂದು ಕಾನ್ಫಿಡೆಂಟಾಗಿ ಮಾತನಾಡುತ್ತಿದ್ದಾರೆ.ಏಕೆಂದ್ರೆ ಇದರ ಸತ್ಯ ದರ್ಶನವಾಗಿದ್ದು ಇಂದೋರ್ ಗೆ ಭೇಟಿ ನೀಡಿದ ವೇಳೆ.

ವಾರ್ಸಿ ನಿರ್ವಹಿಸುತ್ತಿರುವ ಘಟಕಗಳಿಗೆ ಭೇಟಿ ಕೊಟ್ಟ ಮೇಯರ್ ಟಂಡ್ ಟೀಮ್..
ವಾರ್ಸಿ ನಿರ್ವಹಿಸುತ್ತಿರುವ ಘಟಕಗಳಿಗೆ ಭೇಟಿ ಕೊಟ್ಟ ಮೇಯರ್ ಟಂಡ್ ಟೀಮ್..
ವಾರ್ಸಿ ನಿರ್ವಹಿಸುತ್ತಿರುವ ಘಟಕಗಳಿಗೆ ಭೇಟಿ ಕೊಟ್ಟ ಮೇಯರ್ ಟಂಡ್ ಟೀಮ್ ಅಲ್ಲಿನ ಸಂಪೂರ್ಣ ಮಾಹಿತಿ ಪಡೆಯಿತು
ಕಸದ  ಘಟಕಗಳಿಗೆ ಭೇಟಿ ಕೊಟ್ಟ ಮೇಯರ್ ಟಂಡ್ ಟೀಮ್ ಅಲ್ಲಿನ ಸಂಪೂರ್ಣ ಮಾಹಿತಿ ಪಡೆಯಿತು

ಬಹಳ ಜನಕ್ಕೆ ಗೊತ್ತಿದೆಯೋ ಇಲ್ವೋ..ಬೆಂಗಳೂರಿಗಂಥ ಗಂಭೀರ ಹಾಗೂ ಕೆಟ್ಟದಾಗಿತ್ತು ಇಂದೋರ್ ನ ಕಸದ ಸಮಸ್ಯೆ.ಇದಕ್ಕೆ ಸೆಲ್ಯೂಷನ್ ಏನಪ್ಪಾ ಎಂದು ಅಲ್ಲಿನ ಆಡಳಿತ ತಲೆಕೆಡಿಸಿಕೊಂಡು ಕೂತಾಗ ಖುದ್ದು ಪ್ರಧಾನಿ ಮೋದಿ ಅವರೇ ಪ್ರಸ್ತಾಪಿಸಿದ ಹೆಸರು ಜಾವೇದ್ ವಾರ್ಸಿ.ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ಇಂದೋರ್ ಸ್ವಚ್ಚತೆಯನ್ನು  ಅವರ ಕೈಗೆ ಇತ್ತವರೇ ಮೋದಿ.

ಮೇಯರ್ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಇರಾದೆಯೊಂದಿಗೆ  ಬೆಂಗಳೂರಿಗೆ ಭೇಟಿ ನೀಡಿ ಕಸ ಸಮಸ್ಯೆ ಅಧ್ಯಯನ ನಡೆಸುತ್ತಿರುವ ಸೈಯ್ಯದ್ ಅಸಾದ್ ಅಲಿ ವಾರ್ಸಿ..ಎಕೋ ಪ್ರೊ ಎನ್ವಿರ್ನಮೆಂಟಲ್ ಸರ್ವಿಸಸ್ ಸಂಸ್ಥಾಪಕರು.  ಹಾಗಂಥ ಇದರಲ್ಲಿ ಯಾವುದೇ ಹಿತಾಸಕ್ತಿಗಳು ಇರಲಿಲ್ಲ.ವಾರ್ಸಿ ಬಗ್ಗೆ ಮೋದಿ ಅವ್ರೇ ಅಷ್ಟು ಕಾನ್ಫಿಡೆಂಟಾಗಿ ಇರೊಕ್ಕೆ ಕಾರಣ  ಮಾಜಿ ಪ್ರಧಾನಿ ವಾಜಪೇಯಿ ಅವರ ಜೊತೆಗಿದ್ದು ಅನೇಕ ಉತ್ತಮ ಕಾರ್ಯಗಳಲ್ಲಿ ಕೈ ಜೋಡಿಸಿದ್ದ ಜಾವೇದ್ ಅವರ ತಂದೆ ಮೇಲಿನ ನಂಬಿಕೆ.ಅದನ್ನು ವಾರ್ಸಿ ಕೂಡ ಕಾರ್ಗಗತ ಮಾಡಬಲ್ಲರು ಎನ್ನುವ ನಂಬಿಕೆಯಿಂದ ಜಾವೇದ್ ಕೈಗೆ ಕೊಟ್ಟ ಈ ಜವಾಬ್ದಾರಿಯನ್ನು ಅಷ್ಟೇ ಬದ್ಧತೆಯಿಂದ ಕೊಟ್ಟ ಡೆಡ್ ಲೈನ್ ನೊಳಗೆ ಪೂರ್ಣಗೊಳಿಸಿ ಮೋದಿ ಅವರೇ ತಬ್ಬಿಬ್ಬಾಗುವಂತೆ ಮಾಡಿದ್ದು ಜಾವೇದ್ ಹೆಗ್ಗಳಿಕೆ.ಇವತ್ತು ಇಂದೋರ್ ಸಂಪೂರ್ಣ ಕಸಮುಕ್ತವಾಗಿದೆ ಎನ್ನೋದ್ಕೆ ಕಾರಣವೇ  ವಾರ್ಸಿ.

ಕಸ ನಿರ್ವಹಣೆ ಇಲ್ಲಿಗಿಂತ ಇಂದೋರ್ ನಲ್ಲಿ ಸಂಪೂರ್ಣ ಭಿನ್ನ
ಕಸ ನಿರ್ವಹಣೆ ಬೆಂಗಳೂರಿಗಿಂತ ಇಂದೋರ್ ನಲ್ಲಿ ಸಂಪೂರ್ಣ ಭಿನ್ನ..ಅವರ ಹೋಲಿಕೆಯಲ್ಲಿ ನಾವು 50 ವರ್ಷ ಹಿಂದೆ ಬಿದ್ದಿದ್ದೇವೆ..
ಕಸದ ಘಟಕಗಳಿಗೆ ಭೇಟಿ ಕೊಟ್ಟ ಮೇಯರ್ ತಂಡ ಸ್ಪೂರ್ತಿ ಪಡೆದು ವಾಪಸ್ಸಾಗಿದೆ.
ಕಸದ ಘಟಕಗಳಿಗೆ ಭೇಟಿ ಕೊಟ್ಟ ಮೇಯರ್ ತಂಡ ಸ್ಪೂರ್ತಿ ಪಡೆದು ವಾಪಸ್ಸಾಗಿದೆ.

ಜಿಲ್ಲಾಡಳಿತದ ಜತೆ ಕೈ ಜೋಡಿಸಿ ಮೋದಿ ಕನಸನ್ನು ನನಸು ಮಾಡಿದ ವಾರ್ಸಿ, ಮೋದಿಯಿಂದ ಬೆನ್ ತಟ್ಟಿಸಿಕೊಂಡುವರು.ಇಂದೋರ್ ನ ಕಸದ ಸಮಸ್ಯೆಗೆ ಶಾಶ್ವತ ಮುಕ್ತಿ ಕೊಟ್ಟಿದ್ದಷ್ಟೇ ಅಲ್ಲ ವಾರ್ಸಿ ಹೆಗ್ಗಳಿಕೆ,ಕಸವನ್ನು ಸಂಪನ್ಮೂಲವಾಗಿಸಿ ಸದ್ಭಳಕೆಗೆ ಹೊಸ ದಿಕ್ಕು ತೋರಿಸಿದವರು ಕೂಡ.ಕಸದಿಂದ ಗೊಬ್ಬರ,ವಿದ್ಯುತ್,ಬಯೋ ಫ್ಯೂಯೆಲ್, ಡೀಸೆಲ್ ಸೃಷ್ಟಿಗೆ ಕಾರಣರಾದವ್ರು.

ಸ್ವಯಂಪ್ರೇರಣೆಯಿಂದ ಕಸಮುಕ್ತ ಅಭಿಯಾನಕ್ಕೆ ಕೈ ಜೋಡಿಸುವಂತೆ ಜನರನ್ನು ಪ್ರೇರೇಪಿಸಿದವರು. ಕಟ್ಟಡ ತ್ಯಾಜ್ಯವನ್ನು ಉಪಯುಕ್ತ ಮರಳನ್ನಾಗಿಸಿ,ಕಸದಿಂದ ಆದಾಯ ಸೃಷ್ಟಿಸಿದವರು. ವಿಲೇವಾರಿ ಘಟಕಗಳನ್ನು ಕುಳಿತು ಊಟ ಮಾಡುವ-ಹಾಯಾಗಿ ನಿದ್ದೆ ಮಾಡುವಷ್ಟು ಶುಚಿ ತಾಣಗಳನ್ನಾಗಿಸಿದವ್ರು ಈ ಎಲ್ಲಾ ಕಾರಣಗಳಿಂದ್ಲೇ ಗೌತಮ್ ಕುಮಾರ್ ಕಸ ಎನ್ನುವ ಬೃಹತ್ ಸಮಸ್ಯೆಯನ್ನು ಜಾವೇದ್ ವಾರ್ಸಿ ಕೈಗೆ ಒಪ್ಪಿಸುತ್ತಿದ್ದಾರೆ.

ಇಂದೋರ್ ಮಾದರಿಯಲ್ಲೇ ಬೆಂಗಳೂರನ್ನು ಸೈಯ್ಯದ್ ಅಸಾದ್ ಅಲಿ ವಾರ್ಸಿ, ಕಸಮುಕ್ತಗೊಳಿಸಿಬಿಟ್ಟರೆ ಇಡೀ ಬೆಂಗಳೂರು ಶಾಶ್ವತವಾಗಿ ವಾರ್ಸಿಗೆ ಅಭಾರಿಯಾಗಿರುತ್ತೆ.ಮೇಯರ್ ಗೌತಮ್ ಕುಮಾರ್ ಜೈನ್ ಅವರ ಬಗೆಗಿನ ಗೌರವ ಬೆಂಗಳೂರಿಗರಲ್ಲಿ ಹೆಚ್ಚಾಗೋದ್ರಲ್ಲಿ ಅನುಮಾನವೇ ಇಲ್ಲ.ಎಲ್ಲಕ್ಕಿಂತ ಹೆಚ್ಚಾಗಿ ಕಸದಿಂದ ಶಾಶ್ವತ ಮುಕ್ತಿಕೊಟ್ಟ ಮೊದಲ ಮೇಯರ್ ಎನ್ನುವ ಹೆಗ್ಗಳಿಕೆನೂ ಗೌತಮ್ ಅವರದ್ದಾಗುವುದರಲ್ಲಿ ಅನುಮಾನವೇ ಬೇಡ.

 

 

Spread the love
Leave A Reply

Your email address will not be published.

Flash News