ಸುದ್ದಿಯಾಗಲೇ ಇಲ್ಲ ಬಿಎಂಟಿಸಿ ಲೇಡಿ ಕಂಡಕ್ಟರ್ ಮೇಲಿನ ಆ ಅಮಾನವೀಯ ಕೃತ್ಯ..

0

ಬೆಂಗಳೂರು:ಇಡೀ ದೇಶ ಪೌರತ್ವ ಕಾಯ್ದೆ ತಿದ್ದುಪಡಿ ಹೋರಾಟದ ಕಿಚ್ಚಿನಲ್ಲಿದ್ದರೆ ಬೆಂಗಳೂರಿನಲ್ಲಿ ನಡೆದ ಆ ಅಮಾನವೀಯ ಹಾಗೂ ಅಘಾತಕಾರಿ ಘಟನೆ ಸುದ್ದಿಯಾಗಲೇ ಇಲ್ಲ.ಮಹಿಳಾ ಸುರಕ್ಷತೆಯ ಪ್ರಶ್ನೆ ಸೃಷ್ಟಿಯಾಗಿರುವ ಸಂದರ್ಭದಲ್ಲಿಯೇ ಮಹಿಳೆಯರು ಬೆಚ್ಚಿಬೀಳುವ ಘಟನೆಯೊಂದು ನಡೆದೋಗಿದೆ.ಬಿಎಂಟಿಸಿ ಮಹಿಳಾ ಕಂಡಕ್ಟರ್ ಮೇಲೆ ಕಿಡಿಗೇಡಿಗಳು ಆಸಿಡ್ ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದಾರೆ.
ಡ್ಯೂಟಿಗೆ ತೆರಳೊಕ್ಕಂಥ ಮನೆಯಿಂದ ಹೊರಟ ಇಂದಿರಾಬಾಯಿ ಎನ್ನುವ 35 ವರ್ಷದ ಮಹಿಳೆಯನ್ನು ಬೈಕ್ ನಲ್ಲಿ ಫಾಲೋ ಮಾಡಿದ ದುಷ್ಕರ್ಮಿಗಳು ಆಕೆಯನ್ನು ತಡೆದು ನಿಲ್ಲಿಸಿ ಆಸಿಡ್ ಸುರಿದು ಹೋಗಿದ್ದಾರೆ.ಮುಖದ ಬಲಭಾಗ ಸುಟ್ಟು ಹೋಗಿದ್ದಲ್ಲದೇ ದೇಹದ ಅನೇಕ ಕಡೆ ಸುಟ್ಟ ಗಾಯಗಳಾಗಿವೆ.ಆಕೆಯನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾವನೂರು ಬಡಾವಣೆಯಲ್ಲಿ ವಾಸವಾಗಿದ್ದ ಇಂದಿರಾಬಾಯಿ ಪೀಣ್ಯಾದ 9ನೇ ಡಿಪೋದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ.ಆಸಿಡ್ ಎರಚುವಂಥದ್ದಕ್ಕೆ ಕಾರಣವಾದ ದ್ವೇಷ ಆ ಇಬ್ಬರು ಯುವಕರು ಹಾಗೂ ಇಂದಿರಾ ಬಾಯಿ ನಡುವೆ ಅದೇನಿತ್ತೋ ಗೊತ್ತಾಗ್ತಿಲ್ಲ.ವೈಯುಕ್ತಿಕ ಕಾರಣಕ್ಕೆ ಈ ಘಟನೆ ನಡೆದಿದೆಯೋ ಅಥ್ವಾ ವೃತ್ತಿ ವೈಷಮ್ಯಕ್ಕೆ ಆಸಿಡ್ ದಾಳಿ ನಡೆದಿದೆ ಎನ್ನುವುದು ಸ್ಪಷ್ಟವಾಗಿಲ್ಲ.ಆದ್ರೆ ಬಿಎಂಟಿಸಿ ಇತಿಹಾಸದಲ್ಲಿ ಮಹಿಳಾ ಕಂಡಕ್ಟರ್ ಮೇಲೆ ನಡೆದ ಮೊದಲ ಆಸಿಡ್ ದಾಳಿ ಇದೆನ್ನಲಾಗಿದೆ.ಪ್ರಕರಣವನ್ನು ಬಾಗಲಗುಂಟೆ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.ಆಸಿಡ್ ದಾಳಿ ನಡೆಸಿ ಪರಾರಿಯಾದವರ ಪತ್ತೆ ಕಾರ್ಯದಲ್ಲಿ ತೊಡಗಿರುವ ಪೊಲೀಸರು ಘಟನೆಗೆ ನೈಜ ಕಾರಣವನ್ನು ಹುಡುಕುವ ಪ್ರಯತ್ನದಲ್ಲಿದ್ದಾರೆ.ಮಹಿಳಾ ಕಂಡಕ್ಟರ್ ಮೇಲೆ ನಡೆದಿರುವ ಈ ಅಮಾನವೀಯ ಕೃತ್ಯಕ್ಕೆ ಮಹಿಳಾ ನೌಕರರು ಅಘಾತ ವ್ಯಕ್ತಪಡಿಸಿದ್ದಾರೆ.ತಪ್ಪಿತಸ್ಥರನ್ನು ಬಂಧಿಸುವಂತೆಯೂ ಆಗ್ರಹಿಸಿದ್ದಾರೆ.
#KANNADAFLASHNEWS #KANNADANEWS #BMTC #ACID #ATTACK #PEENYA #DEPO #INDIRABAI #CONDUCTOR #MISCRENTS #SAPTHAGIRI #HOSPITAL #HAAVANURLAYOUT

Spread the love
Leave A Reply

Your email address will not be published.

Flash News