ಡಿಸ್ಕವರಿ ಚಾನೆಲ್ ರೇಂಜ್ನಲ್ಲಿ ಹಾವಿಗೆ ಮುತ್ತಿಕ್ಕಲು ಮುಂದಾದವನಿಗೆ ಏನಾಯ್ತು ನೋಡಿ..

0

ಶಿವಮೊಗ್ಗ: ಸುಮ್ನಿರಲಿಕ್ಕಾಗದವನು ಇರುವೆ ಬಿಟ್ಕೊಂಡ್ನಂತೆ… ಈ ಕುಡುಕ ಉರಗತಜ್ಞನಿಗೆ ಸರಿಯಾಗಿ ಒಪ್ಪುತ್ತೆ ಈ ಮಾತು..ಹಾವ್ ಹಿಡಿಯಕ್ಕೆ ಕರೆಸಿದ್ರೆ ಅದನ್ನು ಮಾತ್ರ ಮಾಡ್ಬೇಕಲ್ವೇ..ಅದನ್ನು ಬಿಟ್ಟು ಕೆರಳಿ ಹೆಡೆ ಎತ್ತಿರೋ ನಾಗರಾಜನಿಗೆ ಅದ್ಯಾವ್ದೋ ಡಿಸ್ಕವರಿ ಚಾನೆಲ್ ನಲ್ಲಿ ಬರೋ ಸ್ನೇಕ್ ಕ್ಯಾಚರ್ ಗಳ ರೇಂಜ್ನಲ್ಲಿ ಮುತ್ತಿಕ್ಲಿಕ್ಕೆ ಹೋಗ್ತಾನೆಂದ್ರೆ ಇದನ್ನು ಆತನ ಸಾಹಸ ಎನ್ನಬೇಕೋ..ದುಸ್ಸಾಹಸ ಎನ್ನಬೇಕೋ ಗೊತ್ತಾಗ್ತಿಲ್ಲ ನೋಡಿ..

ಅಂದ್ಹಾಗೆ ಇಂತದ್ದೊಂದು ಘಟನೆ ನಡೆದಿರೋದು ಶಿವಮೊಗ್ಗದಲ್ಲಿ.ಇಲ್ಲಿನ ಭದ್ರಾವತಿಯ ಓಲ್ಡ್ ಟೌನ್ ನಲ್ಲಿ ನಾಗರ ಹಾವು ಕಾಣಿಸಿಕೊಂಡಿದೆ.ಭಯಗೊಂಡ ಜನ ಹಾವು ಹಿಡಿಯೋರನ್ನು ಹುಡುಕುತ್ತಿದ್ದಾಗ ಸೋನು ಎಂಬಾತನ ಅಡ್ರಸ್ ಸಿಕ್ಕಿದೆ.ಬಾರಪ್ಪ ಮಹಾನುಭಾವ ಹಾವು ಹಿಡಿದು,ಭಯ ದೂರ ಮಾಡು ಎಂದು ಕರುದ್ರೆ ಓ.ಕೆ ಸಾರ್ ಎಂದವ್ನೇ..ವೇಟ್ ಎ ಮಿನಿಟ್ ಎಂದ್ಕಂಡು ಹೋದವ ಹತ್ತು ನಿಮಿಷ ಬಿಟ್ಟು ಬಂದಾಗ ಫುಲ್ ಟೈಟ್.

ಅಲ್ಲಪ್ಪಾ…ಕರೆಕ್ಟಾಗಿರುವಾಗ್ಲೇ ಹಾವು ಹಿಡಿಯೊಕ್ಕೆ ಹೆದರುತ್ತಾರೆ.ಅಂಥದ್ರಲ್ಲಿ ಕುಡಿದ್ ಬಂದಿದ್ಯಲ್ಲೋ..ಹೋಗ್ಲಿ ಹಾವ್ ಹಿಡಿತಿಯಾ ಎಂದು ಜನ ಪ್ರಶ್ನಿಸಿಸ್ರೆ ಆತ ತನ್ನ ಬಯೋಡೇಟಾವನ್ನು ಜನರ ಎದುರು ಬಿಚ್ಚಿಟ್ಟು ಬಡಾಯಿ ಕೊಚ್ಚಿಕೊಂಡಿದ್ದಾನೆ.ಬಾ..ನಿನ್ ಕರ್ಮ ಎಂದ್ಕೊಂಡು ತೂರಾಡ್ತಿದ್ದ ಆತನನ್ನು ಹಾವಿಡಿಯುವ ಸ್ಪಾಟ್ ಗೆ ತಂದ್ ಬಿಟ್ಟಿದ್ದಾರೆ.ತಡವರಿಸುತ್ತಲೇ ಹಾವು ಹುಡುಕಲಾರಂಭಿಸಿದ ಆತನನ್ನು ಕಂಡು ಜನರಿಗೆ ಏನಾದ್ರೂ ಮಿಸ್ ಆದ್ರೆ ಏನ್ ಮಾಡದಪ್ಪ ಎಂಬ ಭಯ ಹುಡ್ಕೊಂಡಿದೆ.ಆದ್ರೂ ಅಂಥಾ ಸ್ಥಿತಿಯಲ್ಲೂ ಅವರಿಗೆ ಧೈರ್ಯ ತುಂಬಿದ್ದಾನೆ ಸೋನು.

ಹಾವನ್ನೇಗೋ ಐಡೆಂಟಿ ಫೈ ಮಾಡಿದ ಆತ ಆ ಕ್ಷಣ ಏನ್ ಮಾಡ್ಬೇಕು ಹೇಳಿ..ಹಾವನ್ನು ಹಿಡಿಯೋದು ಬಿಟ್ಟು ಡಿಸ್ಕವರಿ ಚಾನೆಲ್ ನಲ್ಲಿ ಸ್ನೇಕ್ ಕ್ಯಾಚರ್ಸ್ ತಾವು ಹಿಡಿಯುವ ಹಾವಿನ ಹೆಡೆಗೆ ಮುತ್ತು ಕೊಡೋದನ್ನು ಎಲ್ಲೋ ನೋಡ್ಕಂಡಿದ್ದನೆನ್ನಿಸುತ್ತೆ.ಆ ರೇಂಜ್ನಲ್ಲಿ ಬಿಲ್ಡಪ್ ಕೊಡ್ಲಿಕ್ಕೆ ಹೋಗಿದ್ದಾನೆ.ಮೊದ್ಲೇ ಜನರನ್ನು ನೋಡಿ ಗಾಬರಿಯಾಗಿದ್ದ ನಾಗರಹಾವು,ಕುಡಿದ ಮತ್ತಿನಲ್ಲಿ ತನಗೆ ಮುತ್ತು ಕೊಡ್ಲಿಕ್ಕೆ ಮುಂದಾಗ್ತಿದ್ದ ಸೋನು ಕಂಡು ಮತ್ತಷ್ಟು ಗಾಬರಿಗೆ ಬಿದ್ದಿದೆ.ಆತ ಹೆಡೆಗೆ ಮುತ್ತು ಕೊಡುವವರೆಗೂ ಏನೂ ಮಾಡದಿದ್ದ ನಾಗರಹಾವು,ಹೆಡೆ ಮೇಲೆ ತುಟಿಯಿಟ್ಟು ಚುಂಬಿಸಲಾರಂಭಿಸಿದನೋ ಹೆದರಿಕೆಯಿಂದ ಆತನ ಬಾಯಿಗೆ ಕಚ್ಚಿ ಬಿಟ್ಟಿದೆ.ವಿಷ ಅಮಲೇರಿದ್ದರಿಂದ ತಕ್ಷಣಕ್ಕೆ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹಾವು ಕಡಿದ ವೇಳೆ ಪಾನಮತ್ತನಾಗಿದ್ದರಿಂದ ಶೀಘ್ರ ಸೋನು ಮೈಗೆ ವಿಷ ಆವರಿಸಿದೆ.ಜೀವನ್ಮರಣಗಳ ನಡುವೆ ಹೋರಾಡ್ತಿರುವ ಆತ ಬದುಕುಳಿಯುವ ಸಾಧ್ಯತೆಗಳು ಕಡ್ಮೆ ಎನ್ನಲಾಗಿದೆ.ಅದೇನೇ ಆಗಲಿ,ಸಾವಿನೊಂದಿಗೆ ಸರಸ ಸರಿಯಲ್ಲ ಎಂದು ನಮ್ಮ ಹಿರಿಯರು ಎಷ್ಟೇ ರೀತಿಯಲ್ಲಿ ತಿಳಿ ಹೇಳಿದ್ರು ಸೋನು ನಂಥ ಮತಿಗೇಡಿಗಳು ಸಾವನ್ನು ಮೈಮೇಲೆ ಎಳೆದುಕೊಳ್ತಾರೆಂದ್ರೆ ಇದಕ್ಕೆ ಏನನ್ನಬೇಕೋ ಗೊತ್ತಾಗ್ತಿಲ್ಲ. 

Spread the love
Leave A Reply

Your email address will not be published.

Flash News