ಹೊಸ ವರ್ಷಾಚರಣೆ ಜೋಶ್ ಗೆ “ಮೆಟ್ರೋ “ಗುಡ್ ನ್ಯೂಸ್

0

ಬೆಂಗಳೂರು:ನ್ಯೂ ಇಯರ್ ರಾತ್ರಿಯ
ಪಾರ್ಟಿಗೆ ಜೋಶ್ ನಲ್ಲಿ ಬಂದು,ಕುಣಿದು ಕುಪ್ಪಳಿಸಿ,ಸಂಭ್ರಮ ಆಚರಿಸಿ ಎನರ್ಜಿ ಲಾಸ್ ಆದ್ಮೇಲೆ ಮನೆಗೆ ಹೇಗೆ ಹೋಗೋದಪ್ಪ ಎಂದು ಆಲೋಚಿಸುವ ಬೆಂಗಳೂರಿಗರಿಗೆ ನಮ್ಮ ಹೆಮ್ಮೆಯ ಮೆಟ್ರೋ ಸಿಹಿ ಸುದ್ದಿ ನೀಡ್ತಿದೆ.
ಮನೆಗೆ ತೆರಳಲು ಯಾವುದೇ ಸಾರಿಗೆ ವ್ಯವಸ್ಥೆಯಿಲ್ಲ ಎಂದು ಬೆಂಗಳೂರಿಗರು ಹೆದರುವ ಪ್ರಮೇಯವೇ ಇಲ್ಲ,ಏಕೆಂದರೆ ಮೆಟ್ರೋ,
ಹೊಸ ವರ್ಷಾಚರಣೆಯಲ್ಲಿ ತೊಡಗುವವರಿಗೆ ಹೆಚ್ಚುವರಿ ಸಮಯದ ಸೇವೆ ನೀಡಲು ನಿರ್ಧರಿಸಿದೆ.
ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಹೊಸ ವರ್ಷಕ್ಕೆ ಭರ್ಜರಿ ತಯಾರಿಗಳು ನಡೆಯುತ್ತಿವೆ..ಅದರ ಬೆನ್ನಲ್ಲೇ ಸೆಲಬ್ರೇಷನ್ ಮೂಡ್ನಲ್ಲಿರುವವರಿಗೆ ಭ್ರಮ ನಿರಸವಾಗದಂತೆ ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕೆ ಸಮಯ ವಿಸ್ತರಣೆ ಮಾಡಿದೆ.
ಡಿಸೆಂಬರ್ 31 ರಿಂದ ಜನವರಿ 1 ಮುಂಜಾನೆ 2 ಗಂಟೆಯವರೆಗೆ ಮೆಟ್ರೋ ರೈಲುಗಳು ಸಂಚರಿಸಲಿವೆ.ಇದರ ಪ್ರಯೋಜನವನ್ನು ಪ್ರಯಾಣಿಕರು ಭರ್ಪೂರ್ ಆಗಿ ಪಡೆದುಕೊಳ್ಳಬಹುದಾಗಿದೆ.
ಇನ್ನು ವರ್ಷಾಚರಣೆ ಹಿನ್ನಲೆಯಲ್ಲಿ ಮೂರು ಮೆಟ್ರೋ ಸ್ಟೇಷನ್ ಗಳಲ್ಲಿ ಹೈ ಸೆಕ್ಯೂರಿಟಿ ಕಲ್ಪಿಸಲಾಗಿದ್ದು,ಟ್ರಿನಿಟಿ, ಎಂ ಜಿ ರೋಡ್, ಕಬ್ಬನ್ ಪಾರ್ಕ್ ಮೆಟ್ರೋ ಸ್ಟೇಷನ್ ನಲ್ಲಿ ಹೆಚ್ಚು ಭದ್ರತೆ ಕಲ್ಪಿಸಿದೆ.
ಮಹಿಳೆಯರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿರುವ ಮೆಟ್ರೋ,ಇದಕ್ಕಾಗಿ ಪೊಲೀಸ್ ಸಹಕಾರ ಕೋರಿದೆ.ಇನ್ನು ಕುಡಿದು ಮೆಟ್ರೊನಲ್ಲಿ ಬರೋರು ರಂಪಾಟ ಮಾಡಿದ್ರೆ ಅಂಥವರು ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗ್ತದೆ.

#Kannadaflashnews #Kannadanews #Bengaluru #BMRCL #Newyear #Celebration #NightService #December31 #January1

Spread the love
Leave A Reply

Your email address will not be published.

Flash News