ತನ್ನದೇ ನಿರ್ಲಕ್ಷ್ಯಕ್ಕೆ ಹಿರಿಯ ಕೆಎಎಸ್ ಅಧಿಕಾರಿ ರಂಗಪ್ಪ ಸಸ್ಪೆಂಡ್

0
ಅಮಾನತ್ತುಗೊಂಡಿರುವ ಹಿರಿಯ ಕೆಎಎಸ್ ಅಧಿಕಾರಿ ಬಿ.ಆರ್ ರಂಗಪ್ಪ
ಅಮಾನತ್ತುಗೊಂಡಿರುವ ಹಿರಿಯ ಕೆಎಎಸ್ ಅಧಿಕಾರಿ ಬಿ.ಆರ್ ರಂಗಪ್ಪ
ಬಿ.ಆರ್ ರಂಗಪ್ಪ ಅಮಾನತು ಆದೇಶ ಪ್ರತಿ
ರಂಗಪ್ಪ ಅಮಾನತು ಆದೇಶ ಪ್ರತಿ

ಬೆಂಗಳೂರು: ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಹಾಯಕ  ಬಿ.ಆರ್. ರಂಗಪ್ಪ ಅವರನ್ನು ಗುರುತರ ಆರೋಪದಲ್ಲಿ ಸರ್ಕಾರ ಅಮಾನತುಗೊಳಿಸಿ ಆದೇಶಿಸಿದೆ.ಸರ್ಕಾರಿ ಅಧಿಕಾರಿಯಾಗಿ ವಹಿಸಲಾದ ಜವಾಬ್ದಾರಿಯನ್ನುಸರಿಯಾಗಿ ನಿರ್ವಹಿಸದೆ ಕರ್ತವ್ಯಲೋಪ ಎಸಗಿದ ಗುರುತರ ಆರೋಪದ ಹಿನ್ನಲೆಯಲ್ಲಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ಬಿಡಿಎ ನಿಂದ ವಿವಿಧೆಡೆ ಹೂಡಲಾಗಿದ್ದ  ಮ್ಯೂಚುವಲ್ ಫಂಡ್ ಹಗರಣದ ಬಗ್ಗೆ ಚರ್ಚಿಸಲು ಸಾರ್ವಜನಿಕ ಲೆಕ್ಕಪತ್ರ ಸ್ಥಾಯಿ ಸಮಿತಿ 17-12-2019 ರಂದು ಸಭೆ ಸೇರಲು ನಿರ್ಧರಿಸಿ ಇದರ ನಡಾವಳಿ ಅಥ್ವಾ ಆದೇಶವನ್ನು ಸ್ವೀಕೃತಿಯನ್ನು ಸಂಬಂಧಪಟ್ಟವರಿಗೆ ರವಾನಿಸುವ ಕೆಲಸವನ್ನು ಸಹಾಯಕರಾಗಿ ರಂಗಪ್ಪ ಮಾಡಬೇಕಿತ್ತು.ಆದ್ರೆ ಉಡಾಫೆತನಿಂದ ನಿರ್ಲಕ್ಷ್ಯ ವಹಿಸಿದಂತದ್ದೇ ಇವತ್ತು ಅವರ ಹುದ್ದೆಗೆ ಕುತ್ತು ತಂದಿದೆ.

ರಂಗಪ್ಪ ಅಮಾನತು ಆದೇಶ ಪ್ರತಿ-1
ರಂಗಪ್ಪ ಅಮಾನತು ಆದೇಶ ಪ್ರತಿ-1

ಹಗರಣಕ್ಕೆ ಸಂಬಂಧಿಸಿದಂತೆ ಚರ್ಚಿಸಲು ನಿಗಧಿಯಾಗಿದ್ದ ಸಭೆಯಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿ ಖುದ್ದು ಹಾಜರಾಗಬೇಕೆನ್ನುವ ಆದೇಶ ಹೊರಡಿಸಿ ಅದನ್ನು ಸೂಕ್ತ ಸಮಯದಲ್ಲಿ  ಸ್ವಿಕೃತಿಯನ್ನು ತಲುಪಿಸಬೇಕಿತ್ತು.ಆದ್ರೆ ರಂಗಪ್ಪ,ಕಾರ್ಯದರ್ಶಿಗೆ ವರ್ಗಾಯಿಸಿರಲೇ ಇಲ್ಲ.24-12-2019 ರಂದು ಸಮಿತಿ ಸಭೆ ಸೇರಿದಾಗ ಸ್ವೀಕೃತಿಯನ್ನು ರಂಗಪ್ಪ ತಲುಪಿಸಲಿದ್ದಾರೆಯೇ ಎಂದು ಕೇಳಲಾದ ಪ್ರಶ್ನೆಗೆ ಕಾರ್ಯದರ್ಶಿ ನನಗೆ ಈವರೆಗೂ ಯಾವುದೇ ಸ್ವೀಕೃತಿ ಬಂದಿಲ್ಲ ಎಂದು ಉತ್ತರಿಸಿದ್ದಾರೆ.

ಸಮಿತಿಯ ಆದೇಶಗಳೆಂದ್ರೆ ಕಾಲು ಕಸಕ್ಕೆ ಸಮ ಎನ್ನುವ ರೀತಿಯಲ್ಲಿ ವ್ಯವಹರಿಸಿದ ರಂಗಪ್ಪ ಅವರ ಕರ್ತವ್ಯಲೋಪಕ್ಕೆ ಗರಂ ಆದ ಸಮಿತಿ ರಂಗಪ್ಪ ಮಾಡಿದ್ದು ಓರ್ವ ಜವಾಬ್ದಾರಿಯುತ ಅಧಿಕಾರಿಯಾಗಿ ಶೋಭೆ ತರುವಂಥ ವಿಷಯವಲ್ಲ.ಹಾಗಾಗಿ ಅವರನ್ನು ಕರ್ನಾಟಕ ನಾಗರಿಕ ಸೇವಾ ನಿಯಾಮವಳಿ 1957ರ ನಿಯಮ 10(1)(ಡಿ) ಅನ್ವಯ ಅಮಾನತ್ತುಗೊಳಿಸಿ ಇಲಾಖಾ ವಿಚಾರಣೆಗೆ ಆದೇಶಿಸಿದೆ.

ಅಂದ್ಹಾಗೆ ರಂಗಪ್ಪ ವಿರುದ್ದ ಈ ರೀತಿಯ ಆರೋಪ ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ.ಹಣದ ಆಸೆಗೆ ಸರ್ಕಾರದ ನಿಯಾಮವಳಿಗಳನ್ನು ಉಲ್ಲಂಘಿಸಿ ಅನೇಕ ಅಕ್ರಮ ನಡೆಸಿರುವ ಆರೋಪ ಅವರ ಮೇಲಿದೆ.ಸಾರಿಗೆ ಇಲಾಖೆ,ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸೇರಿದಂತೆ ವಿಶೇಷ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದ ಸಂದರ್ಭದಲ್ಲೂ  ನಿಯಮ ಮೀರಿ ವ್ಯಾಪಕ ಅಕ್ರಮ ಎಸಗಿದ್ದರೆನ್ನುವ ಮಾತುಗಳಿವೆ.ಅದೇನೇ ಇರ್ಲಿ,ಒಂದು ಬೇಜವಾಬ್ದಾರಿ ಅಧಿಕಾರಿಯ ಅಮಾನತ್ತಿಗೆ ಕಾರಣವಾದದ್ದು  ಇದೇ ಮನಸ್ತಿತಿಯಲ್ಲಿರುವ ಅದೆಷ್ಟೋ ಇತರೆ ಅಧಿಕಾರಿಗಳಿಗೆ ಎಚ್ಚರಿಕೆಯ ಪಾಠ ಆಗ್ಬೇಕು. 

Spread the love
Leave A Reply

Your email address will not be published.

Flash News