ಜ.5ಕ್ಕೆ ಟಗರು ಶಿವಣ್ಣನಿಂದ ಸಲಗ ಆಡಿಯೋ ಲಾಂಚ್..!!

0

ಸೆಂಚುರಿ ಸ್ಟಾರ್ ರಿಂದ ಜನವರಿ 5ಕ್ಕೆ ಸಲಗ ಫಸ್ಟ್ ಸಾಂಗ್ ರಿಲೀಸ್ ಆಗ್ತಿದೆ. ಹೌದು ಶಿವಣ್ಣ ಸಲಗ ಆಡಿಯೋ ಲಾಂಚ್ ಮಾಡಲಿರೋ ವಿಚಾರ ಈಗಾಗಲೆ ಸಾಕಷ್ಟು ಸುದ್ದಿ ಮಾಡಿದೆ.
ಸಿನಿಮಾವೊಂದರ ಮೇಕಿಂಗ್ ವಿಡಿಯೋ ಸೆನ್ಸೇಷನ್ ಕ್ರಿಯೇಟ್ ಮಾಡುವುದು ಹೊಸತೇನಲ್ಲ ಬಿಡಿ. ಆದರೆ ಆ ವಿಡಿಯೋ ಯಾರಿಗೆ ಟಚ್ ಆಗುತ್ತೆ ಅನ್ನೋದು ಮುಖ್ಯ. ಇಗಾಗಲೆ ಸಲಗ ಸಿನಿಮಾದ ಭರ್ಜರಿ ಪೈಟ್ ಬಗ್ಗೆ ಜನರು ಮಾತನಾಡಿಕೊಂಡಿದ್ದರು. ತಮಿಳು-ತೆಲುಗು ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿದ ರಾಮ್ ಲಕ್ಷಣ್ ಸಹೋದದರರ ಕೈ ಚಳಕ ದುನಿಯಾ ವಿಜಿ ನಿರ್ದೇಶನದ ಸನಿಮಾದಲ್ಲಿ ಕಂಡುಬಂದಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ರು.
ಇದನ್ನೆಲ್ಲಾ ಮಾಡ್ತಿರೋ ಸಲಗ ತಂಡದ ಪರಿಶ್ರಮ ನೋಡಿ ಟಗರು ಡಾ ಶಿವರಾಜ್ಕುಮಾರ್ ಮೆಚ್ಚುಕೊಂಡಿದ್ದಾರೆ. ವಿಜಿ ಬೆನ್ನೆಗೆ ನಿಂತಿದ್ದಾರೆ.
ಮತ್ತೊಂದೆಡೆ ಪ್ರೇಕ್ಷಕರಿಗೆ ಸಾಹಸದ ನೈಪುಣ್ಯತೆಯನ್ನು ಪರಿಚಯಿಸಿಕೊಡುತ್ತಿರುವ ಸಲಗ ಮಸ್ತ್ ನ್ಯೂಸ್ ಕೊಟ್ಟಿದ್ದಾರೆ. ಜನವರಿ 5ನೇ ತಾರೀಖು ಚಿತ್ರದ ಮೊದಲ ಲಿರಿಕಲ್ ವಿಡಿಯೋನ ರಿಲೀಸ್ ಮಾಡ್ತಿದೆ ಎಂದಿದ್ದಾರೆ.
ಅಂದ್ರೆ, ಸಲಗ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಹಾಡನ್ನ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ರಿಲೀಸ್ ಮಾಡುವುದಾಗಿ ತಿಳಿಸಿದದ್ದಾರೆ. ಈ ಮೂಲಕ ಸಲಗ ಸಿನಿಮಾದ ಯಶಸ್ಸಿಗೆ ಹರಸಿದ್ದಾರೆ.
ಎ2 ಯೂಟ್ಯೂಬ್ ಚಾನೆಲ್ ನಲ್ಲಿ ಮೊದಲ ಹಾಡನ್ನ ಶಿವಣ್ಣ ಲೋಕಾರ್ಪಣೆ ಮಾಡಲಿದ್ದಾರೆ. ಅವ್ರದ್ದೇ ಟಗರು ಟೀಮ್ ಮಾಡ್ತಿರೋ ಸಲಗ ಚಿತ್ರಕ್ಕೆ ಶಿವಣ್ಣ ಮುಕ್ತ ಕಂಠದಿಂದ ಶುಭಹಾರೈಸಿರುವುದು ಸಲಗ ತಂಡಕ್ಕೆ ಮತ್ತಷ್ಟು ಬಲ ತಂದಿರುವುದಂತು ಹೌದು.
ಮುಂಬರುವ ದಿನಗಳಲ್ಲಿ ಸಲಗದ ರೇಂಜ್ ಉದ್ಯಮದಲ್ಲಿ ದಿನೇ ದಿನೇ ದೊಡ್ಡದಾಗೋದ್ರಲ್ಲಿ ಎರಡು ಮಾತಿಲ್ಲ ಬಿಡಿ.

Spread the love
Leave A Reply

Your email address will not be published.

Flash News