ದ್ರೋಣ ಲಿರಿಕಲ್ ವಿಡಿಯೋ ರಿಲೀಸ್..!!! ರಿಲೀಸ್ ಆಯ್ತು ಎನರ್ಜಿ ಭರಿತ ಹಾಡು..!!!

0

ದ್ರೋಣನಾಗಿ ರಾಮನ ಜಪದಿ ಬಂದ ಶಿವಣ್ಣ..!!! ದ್ರೋಣ ಲಿರಿಕಲ್ ವಿಡಿಯೋ ರಿಲೀಸ್..!!!
ದ್ರೋಣನಾಗಿ ರಾಮನಾಮ ಪಠಿಸಿದ ಸೆಂಚುರಿ ಸ್ಟಾರ್..!!! ರಿಲೀಸ್ ಆಯ್ತು ಎನರ್ಜಿ ಭರಿತ ಹಾಡು..!!!
ಡಾ. ಶಿವರಾಜ್ ಕುಮಾರ್ ದ್ರೋಣ ಫಸ್ಟ್ ಸಾಂಗ್ ರಿಲೀಸ್..!!!
ಹಾಡಿನ ಮೂಲಕ ದ್ರೋಣನಾಗಿ ಘರ್ಜಿಸೋ ಸೂಚನೆ ಕೊಟ್ಟ ಕರುನಾಡ ಚಕ್ರವರ್ತಿ ..!!!
ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಹೊಸ ವರ್ಷಕ್ಕೆ ದ್ರೋಣನಾಗಿ ಕನ್ನಡ ಸಿನಿಪ್ರಿಯರೆದುರಿಗೆ ಬರೋದಕ್ಕೆ ಸಜ್ಜಾಗಿದ್ದಾರೆ. ನೂರಾರೂ ಸಿನಿಮಾಗಳ ಸರದಾರ ಸೆಂಚುರಿ ಸ್ಟಾರ್ ವೆರೈಟಿ ಸಿನಿಮಾಗಳಿಗೆ ಫೇಮಸ್, ಸಿನಿಮಾದಿಂದ ಸಿನಿಮಾ ಕ್ಯಾರೆಕ್ಟರ್ ಗಳಿಂದ ಕ್ಯಾರೆಕ್ಟರ್ ಗೆ ಆಡು ಮುಟ್ಟದ ಸೊಪ್ಪಿಲ್ಲ, ಶಿವಣ್ಣ ಮಾಡದ ಪಾತ್ರವಿಲ್ಲ ಅನ್ನೋ ಹಾಗೇ, ಎಲ್ಲಾ ಬಗೆಯ ಪಾತ್ರಗಳನ್ನ ನಿಭಾಯಿಸಿದ್ದಾರೆ. ಇದೀಗ ಮತ್ತೊಮ್ಮೆ ಮೇಷ್ಟ್ರ ಪಾತ್ರದಲ್ಲಿ, ಗುರುವಾಗಿ ದ್ರೋಣ ಹೆಸರಲ್ಲಿ, ಪ್ರೇಕ್ಷಕರೆದುರಿಗೆ ಬರ್ತಿದ್ದಾರೆ. ಈಗಾಗ್ಲೇ ದ್ರೋಣ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಶಿವಣ್ಣ ಮತ್ತೊಂದು ಸಂದೇಶ ಸಾರೋ ಕೌಟುಂಬಿಕ ಸಿನಿಮಾ ಕೊಡೋ ಭರವಸೆ ಕೊಟ್ಟಿದ್ದಾರೆ. ಈ ನಡುವೆ ಇದೀಗ ದ್ರೋಣ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ಚಿತ್ರತಂಡ ಚಿತ್ರದ ಮೊದಲ ಹಾಡಿನ ಲಿರಿಕಲ್ ವಿಡಿಯೋನ ಲಾಂಚ್ ಮಾಡಿದೆ.
ಕರುನಾಡ ಚಕ್ರವರ್ತಿ ದ್ರೋಣನಾಗಿ ರಾಮನಾಮ ಪಠಿಸಿದ್ದಾರೆ. ಹೌದು, ದ್ರೋಣ ಚಿತ್ರದ ಮೊದಲ ಹಾಡು ಶ್ರೀರಾಮನ ಮೇಲೆ ಚಿತ್ರಿತವಾಗಿದೆ. ಸಿನಿಮಾದಲ್ಲಿ ಶಿವಣ್ಣನ ಇಂಟ್ರುಡಕ್ಷನ್ ಹಾಡಿನಂತೆ ಕಾಣ್ತಿರೋ ಶ್ರೀರಾಮನೇ ಹಾಡು, ಕೇಳೋದಕ್ಕೆ ಹಿತವಾಗಿದ್ದು, ನೋಡೋದಕ್ಕೂ ಕಲರ್ ಫುಲ್ಲಾಗಿರುವಂತೆ ಕಾಣ್ತಿದೆ. ವಿ. ನಾಗೇಂದ್ರ ಪ್ರಸಾದ್, ಪಣೀಶ್, ಅರಸು ಅಂತಾರೆ ಅವ್ರ ಸಾಹಿತ್ಯ ಹಾಗೂ ರಾಮ್ ಕ್ರಿಶ್ ಅವ್ರ ಸಂಗೀತ ಸಂಯೋಜನೆ ಇರೋ ಈ ಹಾಡು ಇಂಪ್ರೆಸೀವ್ ಆಗಿ ಕಾಣ್ತಿದೆ. ಅಂದ್ಹಾಗೆ ಶೈಕ್ಷಿಣ ವಿಚಾರವನ್ನಿಟ್ಟುಕೊಂಡು ತುಂಬಾ ಸೂಕ್ಷ್ಮಾವಿಚಾರಗಳನ್ನ ಎಳೆಯನ್ನಾಗಿಸಿಕೊಂಡು ಮಾಡಿರೋ ಈ ಚಿತ್ರವನ್ನ ಪ್ರಮೋದ್ ಚಕ್ರವರ್ತಿ ನಿರ್ದೇಶಿಸಿದ್ದು, ಡಾಲ್ಫಿನ್ ಮಿಡಿಯಾ ಹೌಸ್ ಬ್ಯಾನರ್ ನಲ್ಲಿ ಮಹದೇವಪ್ಪ ಹಲಗಟ್ಟಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಡಾ. ಶಿವರಾಜ್ ಕುಮಾರ್ ಜೊತೆಗೆ ತಮಿಳಿನ ಇನಿಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ನೊಂದಿಗೆ ಭರವಸೆ ಹುಟ್ಟಿಸಿ. ಇದೀಗ ಹಾಡಿನೊಂದಿಗೆ ಸುದ್ದಿ ಮಾಡ್ತಿರೋ ದ್ರೋಣನನ್ನ ಸದ್ಯದಲ್ಲೇ ಪ್ರೇಕ್ಷಕರೆದುರಿಗೆ ತರೋ ಸನ್ನಾಹದಲ್ಲಿದೆ ಚಿತ್ರತಂಡ.

Spread the love
Leave A Reply

Your email address will not be published.

Flash News