ಆಶಾ ಕಾರ್ಯಕರ್ತೆಯರ ರ್ಯಾಲಿಯಿಂದಾಗಿ “ಪಿಂಕ್” ಮಯವಾಯ್ತು ಬೆಂಗಳೂರು

0
ಆಶಾ ಕಾರ್ಯಕರ್ತೆಯರ ಪ್ರರಿಭಟನಾ ರ್ಯಾಲಿಯ ವಿಹಂಗಮ ದೃಶ್ಯ
ಬೆಂಗಳೂರಿನಲ್ಲಿ ನಡೆದ ಆಶಾ ಕಾರ್ಯಕರ್ತೆಯರ ಪ್ರತಿಭಟನಾ ರ್ಯಾಲಿಯ  ದೃಶ್ಯ

ಬೆಂಗಳೂರು:ರಾಜಧಾನಿ ಬೆಂಗಳೂರಿನ ಇತಿಹಾಸದಲ್ಲಿ ಇತ್ತೀಚೆಗೆ ಇಷ್ಟೊಂದು ದೊಡ್ಡ ಮಟ್ಟದ ಹೋರಾಟ ನಡೆದಿರಲಿಲ್ಲವೇನೋ..ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಹಾಗೂ ಆ ಜನಸಮೂಹ ನೋಡೇ ಬೆಚ್ಚಿಬೀಳುತ್ತಿದ್ದ ಬೆಂಗಳೂರು ಇವತ್ತು ಅಂಗನವಾಡಿ ಕಾರ್ಯಕರ್ತೆಯರನ್ನೇ ಮೀರಿಸುವ ಪ್ರಮಾಣದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರು.

ನಾಡಿನ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಆಶಾ ಕಾರ್ಯಕರ್ತೆಯರ ಒಗ್ಗೂಡುವಿಕೆಯಿಂದಾಗಿ ಬೆಂಗಳೂರು ಇಂದು ಸಂಪೂರ್ಣ “ಪಿಂಕ್ “ಮಯವಾಗಿತ್ತು. ಅಂಗನವಾಡಿ ಕಾರ್ಯಕರ್ತೆಯರ ಒಗ್ಗಟ್ಟಿಗೆ ಸವಾಲೆಸೆಯುವ ರೀತಿಯಲ್ಲಿ ಇಂದು ಸಾವಿರಾರು ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ಜಮಾವಣೆ ಗೊಂಡಿದ್ರು.ಸರ್ಕಾರದಿಂದ ದೊರೆಯುತ್ತಿರುವ ಪುಡಿಗಾಸಿನ ಗೌರವಧನದಿಂದ ಜೀವನ ನಿರ್ವಹಣೆ ಸಾಧ್ಯವಾಗ್ತಿಲ್ಲ.ಜೀತದಾಳುಗಳಂತೆ ದುಡಿಸಿಕೊಳ್ತಿರುವ ಸರ್ಕಾರದಿಂದ ಸೂಕ್ತ ನ್ಯಾಯ ಸಿಗ್ಬೇಕೆನ್ನೋದು ಆಶಾ ಕಾರ್ಯಕರ್ತೆಯರ ಒಕ್ಕೊರಲಿನ ಬೇಡಿಕೆಯಾಗಿತ್ತು.

ಆಶಾ ಕಾರ್ಯಕರ್ತೆಯರ ರ್ಯಾಲಿಯಿಂದಾಗಿ ಬೆಂಗಳೂರು ಗುಲಾಬಿಮಯವಾಗಿತ್ತು
ಆಶಾ ಕಾರ್ಯಕರ್ತೆಯರ ರ್ಯಾಲಿಯಿಂದ ಬೆಂಗಳೂರು”ಗುಲಾಬಿ”ಮಯವಾಗಿತ್ತು

ಸರ್ಕಾರದ ಗಮನ ಸೆಳೆಯುವುದರ ಜೊತೆಗೆ ತಮಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕೆನ್ನೋದು ಆಶಾ ಕಾರ್ಯಕರ್ತೆಯರ ಒತ್ತಾಯ.ಅಂದ್ಹಾಗೆ ಇವರ ಪ್ರತಿಭಟನೆ ಹಾಗೂ ರ್ಯಾಲಿಯಿಂದಾಗಿ ಬಹುತೇಕ ಬೆಂಗಳೂರು ಸ್ಥಬ್ಧಗೊಂಡಿತ್ತು.ಫ್ರೀಡಂ ಪಾರ್ಕ್ ಗೆ ರ್ಯಾಲಿ ಬಂದ ನಂತ್ರ ಆಶಾ ಕಾರ್ಯಕರ್ತೆಯರ ಒಗ್ಗಟ್ಟಿನ ಮುಂದೆ ಅಕ್ಷರಶಃ ಮಂಡಿಯೂರಿದ ಆರೋಗ್ಯ  ಇಲಾಖೆ ಅಧಿಕಾರಿಗಳನ್ನು ಸಂಧಾನಕ್ಕೆ ಕಳುಹಿಸಿಕೊಡ್ತು.

ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್
ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್

ಡೆಲ್ಲಿಯಲ್ಲಿ ಡಿಸಿಎಂ ಹುದ್ದೆಗೆ ಲಾಭಿ ಮಾಡುತ್ತಿರುವ ಸಚಿವ ಶ್ರೀರಾಮುಲು ಆಶಾಕಾರ್ಯಕರ್ತೆಯರ ಹೋರಾಟಕ್ಕೆ ಪತರುಗುಟ್ಟಿ ಹೋದ್ರು.ಅಲ್ಲಿಂದ್ಲೇ ಟ್ವೀಟ್ ಮಾಡಿ ಅಮ್ಮ-ಅಕ್ಕಂದಿರಾ ನಿಮ್ ಹೋರಾಟ ಕೈಬಿಡಿ..ನಾನಿದ್ದೇನೆ.ಅಧಿಕಾರದಿಂದ ಕೆಳಗಿಳಿಯುವುದರೊಳಗೆ ನಿಮ್ಮ ಬೇಡಿಕೆಯನ್ನು ಸಂಪೂರ್ಣ ಈಡೇರಿಸಿಕೊಡ್ತೇನೆ ಎಂದು ಭರವಸೆ ಕೊಟ್ಟಿದ್ದನ್ನೇ ಅಧಿಕಾರಿಗಳು ಪುನರು ಚ್ಚರಿಸಿದ್ರು.ಇದಕ್ಕೆ ಆರಂಭದಲ್ಲಿ ಒಪ್ಪದ ಕಾರ್ಯಕರ್ತೆಯರು ನಂತರ ಒಂದು ಷರತ್ತಿನ ಮೇಲೆ ಬೆಂಗಳೂರಿನಿಂದ ತೆರಳುತ್ತಿರುವ ನಿರ್ಧಾರ ಪ್ರಕಟಿಸಿದ್ರು.ನಾವು ಊರುಗಳಿಗೆ ತೆರಳಿದ್ರೂ ಅಲ್ಲಿ ಕೆಲಸ ಮಾಡೊಲ್ಲ.ಮನೆಯಲ್ಲೇ ಇರುತ್ತೇವೆ.ಸರ್ಕಾರ ಕೊಟ್ಟಂತೆ ಭರವಸೆ ಈಡೇರಿಸುವವರೆಗೂ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ರು.ಈ ಷರತ್ತಿನ ಮೇಲೆಯೇ ಆಶಾ ಕಾರ್ಯಕರ್ತೆಯರು ತಮ್ತಮ್ಮ  ಊರುಗಳತ್ತ ಹೆಜ್ಜೆ ಹಾಕಿದ್ರು.

 

ಆಶಾ ಕಾರ್ಯಕರ್ತೆಯರು ರೈಲ್ವೆ ನಿಲ್ದಾಣದ ಬಳಿ ನಡೆಸಿದ ಪ್ರತಿಭಟನೆ
ಆಶಾ ಕಾರ್ಯಕರ್ತೆಯರು ರೈಲ್ವೆ ನಿಲ್ದಾಣ ಬಳಿ ನಡೆಸಿದ ಪ್ರತಿಭಟನೆ
ರ್ಯಾಲಿಗೂ ಮುನ್ನ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ರ್ಯಾಲಿಗೂ ಮುನ್ನ ಆಶಾ ಕಾರ್ಯಕರ್ತೆಯರು ನಡೆಸಿದಪ್ರತಿಭಟನೆ  

 

 

 

 

 

 

ಅಂದ್ಹಾಗೆ ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳು ಇಂತಿದ್ವು..

1-ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟು ಸೇರಿ ಮಾಸಿಕ 12 ಸಾವಿರ ಗೌರವಧನ ನೀಡಬೇಕು(ಈಗ ಸಿಗುತ್ತಿರುವುದು ಕೇವಲ 4 ಸಾವಿರ…ಆದ್ರೆ ಪಕ್ಕದ ಆಂದ್ರದಲ್ಲಿ 10-12 ಸಾವಿರ).

2-.ಸಾಫ್ಟ್ ವೇರ್ ಮೂಲಕವೇ ಗೌರವಧನ ನೀಡುವ ವ್ಯವಸ್ಥೆ ಕೈ ಬಿಡಬೇಕು(ಏಕೆಂದ್ರೆ ಈ‌ ಸಾಫ್ಟ್ ವೇರ್ ಗೆ ಗೌರವಧನದ ಮಾಹಿತಿ ಲಿಂಕ್ ಆಗಿರೋದ್ರಿಂದ ಸಾಕಷ್ಟು ವೇಳೆ ತಾಂತ್ರಿಕ ತೊಂದರೆಯಿಂದ ಗೌರವಧನ ಸಿಗುತ್ತಿಲ್ಲ)/

3-.ಕಳೆದ 15 ತಿಂಗಳಿಂದ ಬಾಕಿಯಿರುವ MCTS ಸೇವೆಗಳ ಪ್ರೋತ್ಸಾಹಧನ ಮಂಜೂರು ಮಾಡಬೇಕು.ಜನಸಂಖ್ಯೆಗೆ ಅನುಗುಣವಾಗಿ ಗೌರವಧನ ನೀಡಬೇಕು.

4-.ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು.ಆಶಾ ಕಾರ್ಯಕರ್ತೆಯರು ಕಾಯಿಲೆಗೆ ಒಳಗಾದಲ್ಲಿ,ಮರಣ ಹೊಂದಿದ್ದಲ್ಲಿ‌ ಪರಿಹಾರ ನೀಡುವ ವ್ಯವಸ್ಥೆ ಆಗಬೇಕು.

5-.ಪ್ರತಿ ತಿಂಗಳು ನಡೆಸುವ ಲಾರ್ವಾ ಪರೀಕ್ಷೆ ಹಾಗೂ ಸರ್ವೆಗೆ ಕೊಡದೆ ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು.

6-.ಆಶಾ ಕಾರ್ಯಕರ್ತೆಯರಿಗೆ ಆಗುತ್ತಿರುವ ಕೆಲಸದ ಒತ್ತಡ ಕಡಿಮೆ ಮಾಡಲು ಆಶಾ ಸುಗಮಗಾರರನ್ನು ಬೇರ್ಪಡಿಸಬೇಕು.  

Spread the love
Leave A Reply

Your email address will not be published.

Flash News