ಡ್ರೈವರ್ಸ್ ಗಾದ್ರೆ ಒಂದ್ ರೂಲ್ಸ್….ಹೊಣೆಗೇಡಿ ಎಮ್ಮೆಲ್ಲೆ ರೇಣುಕಾಚಾರ್ಯನಿಗೆ ಇನ್ನೊಂದು ರೂಲ್ಸ್.?

0

ಬೆಂಗಳೂರು/ಹೊನ್ನಾಳಿ: ಇದೆಂಥಾ ನ್ಯಾಯನೋ ಕೆಎಸ್ ಆರ್ ಟಿಸಿನೇ ಹೇಳ್ಬೇಕು…ಡ್ರೈವರ್ಸ್ ತಪ್ ಮಾಡಿದ್ರೆ ಪ್ರಯಾಣಿಕರ ಪ್ರಾಣಕ್ಕೆ ಸಂಚಕಾರ ತಂದ್ರೆನ್ನೋ ಕಾರಣದಲ್ಲಿ ಅವ್ರನ್ನು ಟಾರ್ಗೆಟ್ ಮಾಡ್ಲಾಗುತ್ತೆ..ಅದೇ ರೇಣುಕಾಚಾರ್ಯನಂಥ ಹೊಣೆಗೇಡಿ ಶಾಸಕ ಬಸ್ ನ್ನು ರಾಜಾರೋಷವಾಗಿ ಚಲಾಯಿಸಿದ್ರೆ ಅದನ್ನು ಮಾದರಿ ಕೆಲಸ ಎಂದ್ಕೊಂಡು ಮಾಫಿ ಮಾಡ್ಲಾಗುತ್ತೆ.ಅಧಿಕಾರದಲ್ಲಿರೋರ್ ಏನ್ ಬೇಕಾದ್ರೂ ಮಾಡ್ಬೋದಾ..ಹೇಳಿ ಸಚಿವ ಸವದಿ ಸಾಹೇಬ್ರೇ..ಕ್ರಮ ಕೈಗೊಳ್ಳಿ ಶಿವಯೋಗಿ ಕಳಸದ್ ಸಾಹೇಬ್ರೇ…

ರೇಣುಕಾಚಾರ್ಯ ಮಾಡಿದ್ದು ಎಂಥಾ ಗಂಭೀರ ಅಪರಾಧ ಎನ್ನೋದು ಸರ್ಕಾರ ಅಥವಾ ಕೆಎಸ್ ಆರ್ ಟಿಸಿಗೆ ಗೊತ್ತಾಗ್ತಿಲ್ವೇನೋ ಎನ್ನೋದೇ ಬೇಸರದ ವಿಚಾರ.ಓರ್ವ ಶಾಸಕ ಎನಿಸಿಕೊಂಡಾಕ್ಷಣ ಮನಸಿಗೆ ತೋಚಿದಾಕ್ಷಣ ಕೆಎಸ್ ಆರ್ ಟಿಸಿ ಬಸ್ಸನ್ನು ಹತ್ತಿ,ಡ್ರೈವರನ್ನು ಕೆಳಗಿಳಿಸಿ ಅವನ ಸ್ಥಾನದಲ್ಲಿ ತಾನ್ ಕುತ್ಕೊಂಡು ಶೋ ಅಪ್ ಕೊಡ್ಲಿಕ್ಕೆ ಇದೇನ್ ಅವರಪ್ಪನ ಮನೆಯ ಸ್ವತ್ತ..ಅಥ್ವಾ ಅವರ ಸ್ವಂತದ ಕಾರಾ..ಈ ಪ್ರಶ್ನೆಯನ್ನು ಇಂತದ್ದೇ ತಪ್ಪು ಮಾಡಿದಾಗ ಅನೇಕರು ಕೇಳಿದ್ರು.ಆದ್ರೆ ಅಧಿಕಾರ ನಡೆಸೋದಕ್ಕಿಂತ ತನ್ನ ಸಂಪುಟ ಸಹದ್ಯೋಗಿಗಳ ತಪ್ಪನ್ನು ಮುಚ್ಚಾಕೊಳ್ಳುವುದರಲ್ಲೇ ತಲ್ಲೀನರಾಗಿರುವ ಸಿಎಂ ಸಾಹೇಬರು ಇದೇನ್ ಮಹಾ ತಪ್ ಬಿಟ್ಟಾಕ್ರಿ ಎಂದು ಉಡಾಫೆ ಉತ್ತರ ಕೊಟ್ಟಿದ್ದರು.

ಇದೇ ಗರ್ವ-ಅಹಂಕಾರದಿಂದ ಅದೇ ಹೊನ್ನಾಳಿ ಹೋರಿ ರೇಣುಕಾಚಾರ್ಯ ಭಾನುವಾರ ಮತ್ತೊಂದು ಯಡವಟ್ಟು ಮಾಡ್ಕೊಂಡಿದೆ.ಕೆಎಸ್ ಆರ್ ಟಿಸಿ ಬಸ್ ಸೇವೆಗೆ ಡಿಫ ರೆಂಟಾಗಿ ಚಾಲನೆ ಕೊಡುವ ಅತ್ಯುತ್ಸಾಹದಲ್ಲಿ ತಾನೇ ಬಸ್ಸನ್ನೇರಿ ಕುಳಿತು ಬಸ್ ಚಾಲನೆ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.ಕೆಎಸ್ ಆರ್ ಟಿಸಿ ಬಸ್ ಸೇವೆ ಚಾಲನೆ ಕೊಡುವ ಎಲ್ಲರೂ ಹೀಗ್ ಮಾಡ್ತಾರಾ..ಸಭ್ಯತೆಯ ಚೌಕಟ್ಟಿನೊಳಗೆ ಬಸ್ ಸೇವೆಗೆ ಚಾಲನೆ ಕೊಡ್ಲಿಕ್ಕಾಗೊಲ್ವೆ..ಈಗಿನವರೆಗೂ ಎಲ್ಲರು ಅದನ್ನೇ ಮಾಡ್ತಾ ಬಂದಿರೋದಲ್ವೇ..ರೇಣುಕಾಚಾರ್ಯನಿಗೇನ್ ಸಪರೇಟ್ ಸಿಸ್ಟಮ್ಮಾ..ಈ ರೀತಿಯ ಪ್ರಶ್ನೆಗಳು ಕೂಡ ಕೇಳಿಬರುತ್ತಿವೆ.

ಚಾಲಕನಲ್ಲದವನು ಹೀಗೆ ಕೆಎಸ್ ಆರ್ ಟಿಸಿ ಬಸ್ ನ್ನು ದಿಢೀರ್ ಚಾಲನೆ ಮಾಡಲು ಇಲಾಖೆ ವ್ಯಾಪ್ತಿಯೊಳಗೆ ಅವಕಾಶವಿದೆಯೇ ಎನ್ನುವ ಪ್ರಶ್ನೆ ಸೃಷ್ಟಿಯಾಗುತ್ತೆ.ಕೆಎಸ್ ಆರ್ ಟಿಸಿ ಮೂಲಗಳು ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಕೊಟ್ಟ ಮಾಹಿತಿ ಪ್ರಕಾರ,ಇಲಾಖೆ ವ್ಯಾಪ್ತಿಯೊಳಗೆ ಚಾಲಕನಲ್ಲದವನು ಬಸ್ಸನ್ನೇರಿ ಚಾಲನೆ ಮಾಡುವುದಕ್ಕೆ ಅವಕಾಶವೇ ಇಲ್ಲ.ಅದಕ್ಕೆ ಪರ್ಮಿಷನ್ ಪಡೆಯಬೇಕಾಗುತ್ತೆ.ಹಾಗೂ ಒಂದೊಮ್ಮೆ ಕೂತ್ರು ಆತನೊಂದಿಗೆ ಡಿಎಲ್ ಇರಲೇಬೇಕಾಗುತ್ತೆ.ಖಾಕಿ ಬಟ್ಟೆ ಹಾಕಿರಲೇಬೇಕು ಎನ್ನುತ್ತೆ.ಆದ್ರೆ ಮೊದಲ ಬಾರಿ ರೇಣುಕಾಚಾರ್ಯ ಹೀಗೆ ಮಾಡಿದಾಗ ಯಾವುದೇ ರೀತಿಯಲ್ಲೂ ನಿಯಮ ಪಾಲನೆ ಮಾಡಿರಲಿಲ್ಲ.ಭಾನುವಾರದಂದು ಮಾಡ್ಕೊಂಡ ಯಡವಟ್ಟಿನ ದಿನ ತನ್ನ ಶರ್ಟ್ ಮೇಲೆ ಖಾಕಿ ಗೌನ್ ಹಾಕ್ಕೊಂಡಿದ್ದರಷ್ಟೇ..ಅವರ  ಡಿಎಲ್ ಚೆಕ್ ಮಾಡುವ ಧೈರ್ಯವನ್ನೇ ಯಾರೂ ಮಾಡಲಿಲ್ಲ.

ಕೇಸ್ ಹಾಕ್ಬೋದಿತ್ತು.ಆದ್ರೆ ಧೈರ್ಯ ಯಾರಿಗಿದೆ..ಕೆಎಸ್ ಆರ್ ಟಿಸಿ ನಿಯಮಗಳನ್ನು ಉಲ್ಲಂಘಿಸಿದ ತಪ್ಪಿಗೆ ಈ ಹಿಂದೆನೇ ರೇಣುಕಾಚಾರ್ಯನ ವಿರುದ್ಧ ದೂರು ದಾಖಲಿಸ್ಬೋದಿತ್ತು.ಸ್ಟ್ರಾಂಗ್ ಸೆಕ್ಷನ್ಸ್ ಹಾಕಿ ಜೈಲಿಗೂ ಕಳುಹಿಸ್ಬೋದಿತ್ತು.ಆದ್ರೆ  ಸಣ್ಣಪುಟ್ಟವರ ಎದುರಷ್ಟೇ ಪುರುಷತ್ವ ತೋರುವ ಕೆಎಸ್ ಆರ್ ಟಿಸಿ ಆಡಳಿತ ಮಂಡಳಿಗೆಲ್ಲಿದೆ ಆ ಧೈರ್ಯ ಹೇಳಿ..ಹಾಗಾಗಿನೇ ಅದನ್ನೊಂದು ಕ್ಷುಲ್ಲಕ ಎಂದು ಪರಿಗಣಿಸಿ ಸುಮ್ಮನಾದ್ರು.ಅಂತದ್ದೇ ತಪ್ಪನ್ನು ಮತ್ತೆ ಇವತ್ತು ರಿಪೀಟ್ ಮಾಡಿದ್ರೂ ಅದರ ವಿರುದ್ದ ಸಣ್ಣ ಸೊಲ್ಲನ್ನೂ ಎತ್ತಲಿಲ್ಲ ಇದೇ ಅಧಿಕಾರಿಗಳು.ನಿಜಕ್ಕೂ ಧೈರ್ಯ ಎನ್ನೋದು ಇದ್ರೆ ಈ ಕ್ಷಣಕ್ಕೂ ರೇಣುಕಾಚಾರ್ಯನ ವಿರುದ್ಧ ದೂರು ದಾಖಲಿಸ್ಬೋದು. 

ಚಾಲಕರು ಸಣ್ಣ ತಪ್ಪು ಮಾಡಿದ್ರೂ ಅವರನ್ನು ಸಸ್ಪೆಂಡ್ ಅಥ್ವಾ ಡಿಸ್ಮಿಸ್ ಮಾಡಲಿಕ್ಕೆ ಸಣ್ಣ ನೆವ ಹುಡುಕುತ್ತಾರೆ..ಅದು ಇನ್ನ್ಯಾರು ಅಲ್ಲ,ಅದೇ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುವವರೇ.ಆತನ ಬದುಕನ್ನು ಹೇಗ್ ಬರ್ಬಾದ್ ಮಾಡ್ಬೇಕು.ಸಸ್ಪೆಂಡ್ ಗಿಂತ ಡಿಸ್ಮಿಸ್ ಮಾಡಿಸಿ ಮನೆಗೆ ಕಳುಹಿಸ್ಲಿ ಕ್ಕಂತನೇ ಕಾಯ್ತಾ ಇರ್ತಾರೆ.ಇವರಿಗಾದ್ರೆ ಒಂದ್ ನ್ಯಾಯ..ಇಂಥಾ ಬಣ್ಣಗೇಡಿ ಎಮ್ಮೆಲ್ಲೆ ರೇಣುಕಾಚಾರ್ಯನಿಗೆ ಇನ್ನೊಂದ್ ನ್ಯಾಯನಾ..ನಾವೇನ್ ಕರ್ನಾಟಕದಲ್ಲಿ ಇದ್ದೇವೋ ಅಥ್ವಾ ಬಿಹಾರದಲ್ಲಿ ಇದ್ದೇವೋ..ಇಲ್ಲಿ ನಡೆಯುತ್ತಿರುವುದು ಪ್ರಜಾಪ್ರಭುತ್ವವೋ..ಜಂಗಲ್ ರಾಜೋ ಗೊತ್ತಾಗ್ತಿಲ್ಲ..

Spread the love
Leave A Reply

Your email address will not be published.

Flash News