ಯಮನ ಏಜೆಂಟ್ ಗಳಾದ್ರೆ, ವಿಕ್ಟೋರಿಯಾ ಆಸ್ಪತ್ರೆ ವೈದ್ಯಸಿಬ್ಬಂದಿ

0

ಬೆಂಗಳೂರು:ಯಾವ್ದೇ ಸರ್ಕಾರ ಬರಲಿ..ಯಾರೇ ಆರೋಗ್ಯ ಮಂತ್ರಿಯಾಗಲಿ..ಸರ್ಕಾರಿ ಆಸ್ಪತ್ರೆಗಳಿಗೆ ತಟ್ಟಿರುವ ಕಳಂಕ ಮಾತ್ರ ದೂರವಾಗ್ತಿಲ್ಲ.ಇದಕ್ಕೆ ವಿಕ್ಟೋರಿಯಾ ಆಸ್ಪತ್ರೆ ಕೂಡ ಹೊರತಾಗಿಲ್ಲ.ಅಪಘಾತದಲ್ಲಿ ತೀವ್ರ ರಕ್ತಸ್ರಾವವಾಗಿದ್ದ ವ್ಯಕ್ತಿಯೋರ್ವನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದ್ರೆ ಇಲ್ಲಿರೋ ನಾಲಾಯಕ್ ವೈದ್ಯ ಸಿಬ್ಬಂದಿ ಬೆಡ್ ಇಲ್ಲ ಎನ್ನುವ ನೆಪ ಮುಂದೊಡ್ಡಿ ಸತತ 2 ಗಂಟೆ ಆತ ಅಂಬುಲೆನ್ಸ್ ನಲ್ಲೇ ನರಳುವಂತೆ ಮಾಡಿದ್ದಾರೆ.

ಅಪಘಾತವೊಂದರಲ್ಲಿ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಶ್ರೀನಿವಾಸ್ ಗಂಭೀರ ಗಾಯಾಳುವಾಗಿದ್ದಾರೆ.ತಕ್ಷಣ ಹೇಗೋ ಅಂಬುಲೆನ್ಸ್ ನಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.ಅಲ್ಲಿ ಫಸ್ಟ್ ಏಡ್ ಮಾಡಿದ್ಮೇಲೆ ಪರಿಸ್ಥಿತಿ ಕೊಂಚ ಸೂಕ್ಷ್ಮವಾಗಿದ್ದರಿಂದ ಅವರನ್ನು ವಿಕ್ಟೋರಿಯಾಗೆ ರೆಫರ್ ಮಾಡಿದ್ದಾರೆ ವೈದ್ಯರು.ತಡಮಾಡದೆ ಅಂಬುಲೆನ್ಸ್ ನಲ್ಲಿ ಕರೆತರಲಾಗಿದೆ.ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ಮನುಷ್ಯತ್ವ ಇರುವವರಾಗಿದ್ರೆ ತಕ್ಷಣಕ್ಕೆ ಸ್ಟ್ರೆಚರ್ ನಲ್ಲಿ ಕರ್ಕೊಂಡೋಗಿ ಚಿಕಿತ್ಸೆ ಕೊಡ್ಬೇಕಿತ್ತು.

ಆದ್ರೆ ಎಲ್ಲಾ ಯಮನ ಎಜೆಂಟ್ ಗಳಂತೆ ವರ್ತಿಸುವ  ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಸಿಬ್ಬಂದಿ ಹಾಸಿಗೆಗಳಿಲ್ಲ ಎನ್ನುವ ನೆಪವೊಡ್ಡಿ ಪ್ರವೇಶದ್ವಾರದಲ್ಲೇ ನಿಲ್ಲಿಸಿದ್ದಾರೆ.ನೋವು ಹೆಚ್ಚಾಗ್ತಿದ್ದುದನ್ನು ನೋಡಿಕೊಂಡೂ ಹಲ್ಲು ಕಿಸೀತಾ ನಿಂತಿದ್ದಾರೆ.ಸತತ ಎರಡು ಗಂಟೆವರೆಗೂ ಅಂಬುಲೆನ್ಸ್ ನಲ್ಲೇ ನರಳುತ್ತಿದ್ದ ಶ್ರೀನಿವಾಸ್ ಅವರನ್ನು ಆಮೇಲೆಯೂ ಆಸ್ಪತ್ರೆ ಒಳ ಕರ್ಕೊಂಡು ಹೋಗಲು ನಿರಾಕರಿಸಿದ್ದಾರೆ.

ಅಕ್ಷರಶಃ ಮಾನವೀಯತೆ ಮರೆತಂತೆ ವರ್ತಿಸಿದ ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಸಿಬ್ಬಂದಿ ಶ್ರೀನಿವಾಸ್ ಕುಟುಂಬಸ್ಥರು ಬಗ್ಗೆ ಗಲಾಟೆ ಮಾಡ್ಲಿಕ್ಕೆ ಶುರುಮಾಡಿದಾಗ ಹೆದರಿ ನಂತರ ಒಲ್ಲದ ಮನಸಿನಿಂದ್ಲೇ ಅಡ್ಮಿಟ್ ಮಾಡಿಕೊಂಡಿದ್ದಾರೆ.ವೈದ್ಯರ ಜೀವದ ಜತೆ ಚೆಲ್ಲಾಟವಾಡುವ ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಾಗೂ ಅಮಾನವೀಯತೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ನಾಚಿಕೆಯಾಗ್ಬೇಕು ಆರೋಗ್ಯ ಮಂತ್ರಿ ಶ್ರೀರಾಮುಲುಗೆ:ಇವರನ್ನು ಅದ್ಯಾವ  ಘಳಿಗೆಯಲ್ಲಿ ಬಳ್ಳಾರಿ ಜನ ಎಮ್ಮೆಲ್ಲೆ ಮಾಡಿದ್ರೋ ಗೊತ್ತಿಲ್ಲ.ಅವರು ಅನುಭವಿಸಿದ್ದು ಸಾಕಲ್ದೆ ಆ ಹೊರೆಯನ್ನು ಕರ್ನಾಟಕದ ಮಂದಿಯೂ ಹೊರುವಂತೆ ಮಾಡಿದ್ದಾರೆ.ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ್ಮೇಲೆ ಶ್ರೀರಾಮುಲು ಎನ್ನುವ ಸಚಿವ ಆ ಇಲಾಖೆಯಲ್ಲಿ ಏನಾಗ್ತಿದೆ ಎಂದು ಆಲೋಚಿಸಿಲ್ಲ.ಅದರ ಬಗ್ಗೆ ಮಾಹಿತಿ ಪಡೆದಿಲ್ಲ.

ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸಾಹೇಬರಿಗೆ ಅದನ್ನು ತಪ್ಪಿಸಿದ್ದೇ ದೊಡ್ಡ ಪ್ರಮಾದವಾಗ್ಹೋಗಿದೆ ಎನ್ನುವಂತೆ ಆಡ್ತಿದ್ದಾರೆ.ತಾನು ದೊಡ್ಡ ಲೀಡರ್ ಎನ್ನುವ ಭ್ರಮೆಯಲ್ಲಿದ್ದಂತೆ ಕಾಣುವ ಶ್ರೀರಾಮುಲು ರಾಜ್ಯದಲ್ಲಿ ಏನೆಲ್ಲಾ ಬೆಳವಣಿಗೆ ನಡೆಯುತ್ತಿದ್ದರೂ ನನಗೆ ಡಿಸಿಎಂ ಹುದ್ದೆ ಕೊಡ್ಲೇಬೇಕು..ಅಲ್ಲಿವರೆಗೆ ವಾಪಸ್ ಹೋಗೊಲ್ಲ ಎಂದು ರಚ್ಚೆ ಹಿಡಿದು ಕೂತಿದ್ದಾರಂತೆ.ಆರೋಗ್ಯ ಸಚಿವರಾಗೇ ಇಲಾಖೆಯನ್ನು ಸರಿಯಾಗಿ ನಡೆಸೊಕ್ಕೆ ಬಾರದ ಶ್ರೀರಾಮಲು ಅಂಥವ್ರಿಗೆ ಡಿಸಿಎಂ ಸ್ಥಾನ ಸಿಕ್ಕರೆ ಕರ್ನಾಟಕ ಏನಾಗ್ಬೋದು ನೀವೇ ಊಹಿಸಿ,ವಿಶ್ವದ  ಅತ್ಯಂತ ಬುದ್ಧಿವಂಥರಿರುವ ರಾಜ್ಯ ಎನಿಸಿಕೊಳ್ಳುತ್ತೆ ಕರ್ನಾಟಕ.ಆದ್ರೆ ರಾಜಕೀಯವಾಗಿ ನಮ್ಮ ದುರಂತ ನೋಡಿ,ಎಂಥವ್ರ ಕೈಗೆ ರಾಜ್ಯವಾಳಿ ಎಂದು ಕೊಟ್ಟು ಕೈ ತೊಳೆದುಕೊಂಡಿದ್ದೇವೆಂದು.

 

Spread the love
Leave A Reply

Your email address will not be published.

Flash News