“ಹತ್ಯಾ”ಚಾರಿಗಳಿಗೆ ನೇಣಿನ ಕುಣಿಕೆ: ನೆಮ್ಮದಿಯ ಮಗ್ಗಲು ಬದಲಿಸಿದ ನಿರ್ಭಯಾ ಆತ್ಮ

0
ನಿರ್ಭಯಾ ಹತ್ಯಾಚಾರಿಗಳು ಅಕ್ಷಯ್ ಸಿಂಗ್, ಮುಕೇಶ್ ಸಿಂಗ್, ಪವನ್ ಗುಪ್ತಾ,ವಿನಯ್ ಶರ್ಮಾ
ನೇಣಿಗೆ ಕುಣಿಕೆಗೆ ಏರಲ್ಪಡಲಿರುವ ನಿರ್ಭಯಾ ಹತ್ಯಾಚಾರಿಗಳು ಅಕ್ಷಯ್ ಸಿಂಗ್, ಮುಕೇಶ್ ಸಿಂಗ್, ಪವನ್ ಗುಪ್ತಾ,ವಿನಯ್ ಶರ್ಮಾ
ನ್ಯಾಯಾಂಗದ ಬಗೆಗಿನ ನಂಬಿಕೆ ಉಳಿಸಿದ ನಿರ್ಭಯಾ ತೀರ್ಪು
ನ್ಯಾಯಾಂಗದ ಬಗೆಗಿನ ನಂಬಿಕೆ ಉಳಿಸಿದ ನಿರ್ಭಯಾ ತೀರ್ಪು

ನವದೆಹಲಿ: ಶಾಂತಿ ಸಿಗದೆ ಅಲೆದಾಡುತ್ತಿದ್ದ ನಿರ್ಭಯಾ ಆತ್ಮ ಇಂದು ನೆಮ್ಮದಿಯಿಂದ ಮಗ್ಗಲು ಬದಲಿಸಿದೆ.ದೇಶಾದ್ಯಂದ ಜನಾಂದೋಲನವಾಗಿ ರೂಪುಗೊಂಡಿದ್ದ ಜಸ್ಟೀಸ್ ಫಾರ್ ನಿರ್ಭಯಾ  ಅಭಿಯಾನಕ್ಕೆ ಜಯ ದೊರತಿದೆ.ನನ್ನ ಮಗಳ ಆತ್ಮಕ್ಕೆ ಇಂದು ಶಾಂತಿ ಸಿಕ್ಕಿದೆ.ಮಗಳು ಮತ್ತೆ ಬರೊಲ್ಲ,ಆದ್ರೆ ನ್ಯಾಯಾಲಯ ತಡವಾಗಿಯಾದ್ರೂ ಪರ್ವಾಗಿಲ್ಲ ನ್ಯಾಯವನ್ನೇ ಎತ್ತಿಹಿಡಿಯುವ ಮೂಲಕ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಜನ ನಂಬಿಕೆ ಕಳೆದುಕೊಳ್ಳದಂತೆ ಮಾಡುವ ಐತಿಹಾಸಿಕ ತೀರ್ಪು ನೀಡಿದೆ ಎಂದು ಭಾವೋದ್ವೇಗಕ್ಕೊಳಗಾಗಿ ನುಡಿದಿದ್ದಾರೆ ನಿರ್ಭಯಾ ಪೋಷಕರು.

ಕಳೆದ ಡಿಸೆಂಬರ್ 16 ಕ್ಕೆ ನಿರ್ಭಯಾ ಸಾವನ್ನಪ್ಪಿ 7 ವರ್ಷ.ನ್ಯಾಯದಾನಕ್ಕೆ ದೇಶವ್ಯಾಪಿ ನಡೆದ ತೀವ್ರತರದ ಹೋರಾಟವನ್ನು ಪುರಸ್ಕರಿಸಿ,ಜನರ ಭಾವನೆಗಳಿಗೆ ಬೆಲೆ ಕೊಟ್ಟು ಐತಿಹಾಸಿಕ ಅಷ್ಟೇ ಅಲ್ಲ ಸ್ಮರಣೀಯವಾದ ತೀರ್ಪೊಂದನ್ನು   ಸುಪ್ರಿಂಕೋರ್ಟ್ ನೀಡುವ ಮೂಲಕ ಕೀಚಕ ಸಮುದಾಯಕ್ಕೆ ಎಚ್ಚರಿಕೆಯ ಕರೆಗಂಟೆಯನ್ನೇ ಬಾರಿಸಿದೆ.

ಐತಿಹಾಸಿಕ ತೀರ್ಪು ನೀಡಿದ  ಜಸ್ಟೀಸ್ ಭಾನುಮತಿ, ಜಸ್ಟೀಸ್ ಅಶೋಕ್ ಭೂಷಣ, ಜಸ್ಟೀಸ್ ಎ.ಎಸ್ ಬೋಪಣ್ಣ
ಐತಿಹಾಸಿಕ ತೀರ್ಪು ನೀಡಿದ  ಜಸ್ಟೀಸ್ ಭಾನುಮತಿ, ಜಸ್ಟೀಸ್ ಅಶೋಕ್ ಭೂಷಣ, ಜಸ್ಟೀಸ್ ಎ.ಎಸ್ ಬೋಪಣ್ಣ
ಐತಿಹಾಸಿಕ ತೀರ್ಪಿಗೆ ಕಣ್ಣೀರಿಟ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟ ನಿರ್ಭಯಾ ಪೋಷಕರು
ತೀರ್ಪಿಗೆ  ಕೋರ್ಟ್ ಹಾಲ್ ನಲ್ಲೇ ಕಣ್ಣೀರಿಟ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟ ನಿರ್ಭಯಾ ಪೋಷಕರು

ಕೋರ್ಟ್ ಒಳಗೆ ಹಾಜರಿದ್ದ ನಿರ್ಭಯಾ ಪೋಷಕರು ತೀರ್ಪು ಹೊರಬೀಳ್ತಿದ್ದಂಗೆ ಕಣ್ಣೀರಾದ್ರು. ತೀರ್ಪಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ ನಿರ್ಭಯಾ ತಾಯಿ ಆಶಾ ದೇವಿ, ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಿರುವುದರಿಂದ ತನ್ನ ಮಗಳಿಗೆ ನ್ಯಾಯ ಸಿಕ್ಕಂತಾಗಿದೆ ಎಂದರು.ಇದು ದೇಶದ ಮಹಿಳೆಯರಿಗೆ ಅಧಿಕಾರ ನೀಡಿದಂತಾಗಿದೆ. ಈ ನಿರ್ಧಾರದಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ಜನರ ನಂಬಿಕೆಯನ್ನು ಬಲಪಡಿಸುತ್ತದೆ ಎಂದ್ರು.

ಆದರೆ ಕೋರ್ಟ್ ತೀರ್ಪಿನ ಬಗ್ಗೆ ಅಪರಾಧಿಗಳ ಪರ ವಕೀಲ ಎ.ಪಿ. ಸಿಂಗ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮ, ಸಾರ್ವಜನಿಕರು ಹಾಗೂ ರಾಜಕೀಯ ಒತ್ತಡಗಳಿಂದಾಗಿ ಆರಂಭದಿಂದಲೂ ಸರಿಯಾದ ವಿಚಾರಣೆ ನಡೆದಿಲ್ಲ.ಒಂದೆರಡು ದಿನಗಳಲ್ಲಿ ಕ್ಯುರೇಟಿವ್‌ ಅರ್ಜಿ ದಾಖಲಿಸುವುದಾಗಿ ಹೇಳಿಕೊಂಡಿದ್ದಾರೆ. ಐವರು ಸುಪ್ರೀಂಕೋರ್ಟ್‌ ಹಿರಿಯ ನ್ಯಾಯಮೂರ್ತಿಗಳ ಪೀಠ ಈ  ಬಗ್ಗೆ  ವಿಚಾರಣೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

ನಿರ್ಭಯಾ ಹತ್ಯಾಚಾರಿಗಳನ್ನು ಬಂಧಿಸುವಂತೆ ನಡೆದ ಪ್ರತಿಭಟನೆ ಜನಾಂದೋಲನ ಸ್ವರೂಪ ಪಡೆದಿತ್ತು.
ನಿರ್ಭಯಾ ಹತ್ಯಾಚಾರಿಗಳನ್ನು ಬಂಧಿಸುವಂತೆ ನಡೆದ ವ್ಯಾಪಕ ಪ್ರತಿಭಟನೆ ಜನಾಂದೋಲನ ಸ್ವರೂಪ ಪಡೆದಿತ್ತು.

ನಿರ್ಭಯಾ ಮೇಲೆ ನಡೆದ ಪೈಶಾಚಿಕ ಅ(ಹ)ತ್ಯಾಚಾರದಿಂದ ಹಿಡಿದು ಕೀಚಕರು ನೇಣಿನ ಕುಣಿಕೆಗೇರುವವರೆಗಿನ  ಘಟನಾವಳಿಗಳ ಅವಲೋಕನ ಇಲ್ಲಿದೆ ನೋಡಿ:

2012: ಡಿಸೆಂಬರ್-16: ನಲ್ಲಿ ನಡೆದಿದ್ದ ಈ ಹೀನ, ಕುಕೃತ್ಯಕ್ಕೆ ಮೇ 5, 2014ರಂದು ಅಂತಿಮ ತೀರ್ಪು ಬಂದಿದೆ. ಸುಮಾರು ನಾಲ್ಕೂವರೆ ವರ್ಷಗಳವರೆಗೆ ನ್ಯಾಯಾಲಯದ ವಿಚಾರಣೆಗೆ ಒಳಪಟ್ಟಿದ್ದ ಈ ಪ್ರಕರಣದ ನಡೆದು ಬಂದ ಹಾದಿಯನ್ನು ಇಲ್ಲಿ ನೀಡಲಾಗಿದೆ.

ಡಿ. 16, 2012 – ತನ್ನ ಭಾವಿ ಪತಿಯೊಂದಿಗೆ ಸಿನಿಮಾಕ್ಕೆ ತೆರಳಿದ್ದ 23 ವರ್ಷ ವಯಸ್ಸಿನ  ನಿರ್ಭಯಾ(ಹೆಸರು ಬದಲಿಸಲಾಗಿದೆ)  ಸಂಜೆ ವೇಳೆ  ಬಸ್ ನಲ್ಲಿ ಮರಳುವಾಗ ಆಕೆಯ ಮೇಲೆ ಅತ್ಯಾಚಾರ.ಅಷ್ಟೇ ಅಲ್ಲ,ಮನುಷ್ಯತ್ವವಿಲ್ಲದ ಕೀಚಕರು ಆಕೆಯನ್ನು ಬಸ್ ನಿಂದ ಹೊರಗೆಸೆದು ಪೈಶಾಚಿಕತೆ ಮೆರೆದಿದ್ದರು.ಇದರಿಂದ ದೇಶಾದ್ಯಂತ ತೀವ್ರ ಕೋಲಾಹಲ ಸೃಷ್ಟಿ.ವ್ಯಾಪಕ ಹೋರಾಟ,ನಾಗರಿಕ ಕ್ರಾಂತಿಯ ಸ್ವರೂಪ ಪಡೆದ ದೇಶವ್ಯಾಪಿ ಹೋರಾಟ.

ಡಿ. 18, 2012 -ತೀವ್ರ ಪ್ರತಿಭಟನೆ ಹಿನ್ನಲೆಯಲ್ಲಿ 17 ವರ್ಷದ ಅಪ್ರಾಪ್ತ ಸೇರಿದಂತೆ ಆರು ಆರೋಪಿಗಳ ಬಂಧನ. ಅಕ್ಷಯ್, ರಾಮ್ ಸಿಂಗ್, ಮುಖೇಶ್, ವಿನಯ್ ಶರ್ಮಾ ಹಾಗೂ ಪವನ್ ಗುಪ್ತಾ ಬಂಧನ.

ನಿರ್ಭಯಾ ಹತ್ಯಾಚಾರಕ್ಕೆ ದೇಶ ಹೀಗೆ ಕಂಬನಿ ಮಿಡಿದಿತ್ತು.
ನಿರ್ಭಯಾ ಹತ್ಯಾಚಾರಕ್ಕೆ ಇಡೀ ದೇಶವೇ ಒಂದಾಗಿ ಹೀಗೆ ಕಂಬನಿ ಮಿಡಿದಿತ್ತು.

ಡಿ.27-2012:ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆಕೆಯನ್ನು ಸಿಂಗಾಪುರದ ಆಸ್ಪತ್ರೆಗೆ ದಾಖಲಿಸಲಾಯ್ತು.ಆಕೆಯ ಉಳಿವಿಗೆ ಇಡೀ ದೇಶಾದ್ಯಂತ ಪ್ರಾರ್ಥನೆ-ಅರಿಕೆ.

ಡಿ.29-2012:ಜೀವನ್ಮರಣಗಳ ನಡುವಿನ ಹೋರಾಟದಲ್ಲಿ ಕೊನೆಯುಸಿರೆಳೆದ ನಿರ್ಭಯಾ.ಆಕೆಯ ಸಾವಿಗೆ ಕಂಬನಿ ಮಿಡಿದ ದೇಶ.

ಜನವರಿ 28,2013:ಪ್ರಕರಣದ 6ನೇ ಆರೋಪಿ ಬಾಲಾಪರಾಧಿ ಎಂದು ಬಾಲ ನ್ಯಾಯಮಂಡಳಿಯಿಂದ ಘೋಷಣೆ.

ಫೆ.2,2013:ಐವರು ಆರೋಪಿಗಳ ವಿರುದ್ಧ 13 ಅಪರಾಧ ಪ್ರಕರಣ ದಾಖಲು.

ಮಾ. 11, 2013 – ಪ್ರಕರಣದ ಪ್ರಮುಖ ಆರೋಪಿ ರಾಮ್ ಸಿಂಗ್, ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಶರಣು.

ತೀರ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಹತ್ಯಾಚಾರಿಗಳ ಪರ ವಕೀಲ ಎ.ಪಿ ಸಿಂಗ್
ತೀರ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಹತ್ಯಾಚಾರಿಗಳ ಪರ ವಕೀಲ ಎ.ಪಿ ಸಿಂಗ್.-ಮತ್ತೊಂದು ಸುತ್ತಿನ ಹೋರಾಟಕ್ಕೆ ನಿರ್ಧಾರ 

ಆ. 31, 2013 – ಬಾಲಾಪರಾಧಿ ಮೊಹಮ್ಮದ್ ಅಫ್ರೋಜ್ ಗೆ ಬಾಲಾಪರಾಧಿ ನ್ಯಾಯಾಧೀಕರಣ (ಜೆಜೆಬಿ) ಮೂರು ವರ್ಷ ಶಿಕ್ಷೆ ವಿಧಿಸಿ  ಬಾಲ ಮಂದಿರಕ್ಕೆ ರವಾನೆ.

ಸೆ. 13, 2013 -ನಾಲ್ವರಿಗೆ ಮರಣ ದಂಡನೆ ಶಿಕ್ಷೆ ನೀಡಿದ ದೆಹಲಿಯ ಸಾಕೇತ್ ನ್ಯಾಯಾಲಯ.ನ್ಯಾಯಮೂರ್ತಿಗಳಾದ ರೇವಾ ಖೇತ್ರಪಾಲ್ ಹಾಗೂ ಪ್ರತಿಭಾ ರಾಣಿ ಅವರಿಂದ ಐತಿಹಾಸಿಕ  ತೀರ್ಪು.ನ್ಯಾಯಾಂಗದ ತೀರ್ಪಿಗೆ ತಲೆಬಾಗಿ ಕೊಂಡಾಡಿದ ದೇಶದ ಜನತೆ.

ಮಾ. 15, 2014: ಕೆಳ ನ್ಯಾಯಾಲಯ ನೀಡಿದ್ದ ಮರಣದಂಡನೆ ತೀರ್ಪಿಗೆ  ಸುಪ್ರೀಂ ಕೋರ್ಟ್ ತಡೆಯಾಜ್ಞೆ. ಸಾಕ್ಷಿಗಳ ಮರು ವಿಚಾರಣೆಗೆ ಇಂಗಿತ.

ಡಿ. 18, 2015 – ಬಾಲಾಪರಾಧಿಯನ್ನು ಬಿಡುಗಡೆ ಮಾಡಕೂಡದೆಂದು ಸಲ್ಲಿಸಲಾಗಿದ್ದ ಅರ್ಜಿ ವಜಾ.ದೆಹಲಿ ಹೈಕೋರ್ಟ್ ತೀರ್ಪಿನಿಂದ ಬಾಲಾಪರಾಧಿ ಬಿಡುಗಡೆ.

ಏ. 3, 2016 – ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ಆರಂಭ. ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ವಿ. ಗೋಪಾಲ ಗೌಡ ಹಾಗೂ ಕುರಿಯನ್ ಜೋಸೆಫ್ ಅವರನ್ನು ಒಳಗೊಂಡ ಪೀಠದಿಂದ ವಿಚಾರಣೆ.

ಏ. 8, 2016 – ಹಿರಿಯ ವಕೀಲರಾದ ರಾಜು ರಾಮಚಂದ್ರನ್, ಸಂಜಯ್ ಹೆಗ್ಡೆ ಅವರು ಅಮಿಕಸ್ ಕ್ಯೂರಿಯಾಗಿ ನೇಮಕ.

ಜು. 11, 2016 – ನಿರ್ಭಯಾ ಪ್ರಕರಣದ ನ್ಯಾಯಪೀಠ ಬದಲಾವಣೆ. ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಆರ್. ಬಾನುಮತಿ, ಅಶೋಕ್ ಭೂಷಣ್ ಅವರುಳ್ಳ ಹೊಸ ಸಮಿತಿ ನೇಮಕ.

ಸೆ. 2, 2016 – ಡಿಫೆನ್ಸ್ ಅಡ್ವೊಕೇಟ್ ಎಂ.ಎಲ್. ಶರ್ಮಾ ಅವರಿಂದ ಅಹವಾಲು ಸಲ್ಲಿಕೆ.

ಮಾ. 6, 2017 – ಆರೋಪಿಗಳಿಂದ ಹೆಚ್ಚುವರಿ ಅಫಿಡವಿಟ್ ಸಲ್ಲಿಕೆ.

ಮಾ. 27, 2017 – ವಿಚಾರಣೆ ಮುಕ್ತಾಯ. ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್.

ಏ. 5, 2017 – ಅಪರಾಧಿಗಳಿಗೆ ಮರಣ ದಂಡನೆ ಕಾಯಂಗೊಳಿಸಿದ ಸರ್ವೋಚ್ಛ ನ್ಯಾಯಾಲಯ. ನಿರ್ಭಯಾ ಕೇಸ್ : 3 ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಾಯಂ, ಸುಪ್ರೀಂ ಆದೇಶ

ಜುಲೈ 09, 2018: ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಮೂವರು ಅಪರಾಧಿಗಳು ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟಿನ ತ್ರಿಸದಸ್ಯಪೀಠ. ಎಲ್ಲಾ ಅಪರಾಧಿಗಳಿಗೂ ಗಲ್ಲುಶಿಕ್ಷೆ ಖಾಯಂ.

ಡಿಸೆಂಬರ್ 18, 2019: ಅಕ್ಷಯ್ ಕುಮಾರ್ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿ  ಸುಪ್ರೀಂಕೋರ್ಟ್ ನಿಂದ ತಿರಸ್ಕ್ರತ.ನಾಲ್ವರಿಗೆ ಖಾಯಂ ಆದ ಗಲ್ಲುಶಿಕ್ಷೆ.

ಜನವರಿ 7,2020:ಎಲ್ಲಾ ನಾಲ್ಕು ಕೀಚಕರು(ಅಕ್ಷಯ್ ಸಿಂಗ್,ಮುಕೇಶ್ ಸಿಂಗ್,ಪವನ್ ಗುಪ್ತಾ,ವಿನಯ್ ಶರ್ಮಾ ಅವರಿಗೆ ಖಾಯಂಗೊಂಡ ಗಲ್ಲು.ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಗಲ್ಲುಶಿಕ್ಷೆ ಫಿಕ್ಸ್ ಮಾಡಿ ದಿಲ್ಲಿಯ ಪಟಿಯಾಲ ಹೌಸ್‌ ಕೋರ್ಟ್‌ ತೀರ್ಪು.ಹಾಗೆಯೇ ಅಪರಾಧಿಗಳು  ತೀರ್ಪಿನ ವಿರುದ್ಧ 14 ದಿನಗಳೊಳಗೆ ಕಾನೂನಿನ ಮೊರೆ ಹೋಗಬಹುದು ಎಂದೂ ದಿಲ್ಲಿಯ ಪಟಿಯಾಲಾ ಹೌಸ್‌ ಕೋರ್ಟ್ ತಿಳಿಸಿದೆ.

Spread the love
Leave A Reply

Your email address will not be published.

Flash News