ಚಲನಚಿತ್ರ‌ ಪ್ರಶಸ್ತಿ ಪ್ರಕಟ:ರಾಘಣ್ಣಗೆ ಅತ್ಯುತ್ತಮ‌ನಟ,ಮೇಘನಾರಾಜ್ ಗೆ ಅತ್ಯುತ್ತಮ ನಟಿ ಪ್ರಶಸ್ತಿ

0

ಬೆಂಗಳೂರು:2018 ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿವೆ. ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಆ ಕರಾಳ‌ರಾತ್ರಿ ಚಿತ್ರ ಆಯ್ಕೆಯಾಗಿದೆ.
ಇನ್ನು ಅತ್ಯುತ್ತಮ‌ನಟ ಪ್ರಶಸ್ತಿ‌‌ಅಮ್ಮನ ಮನೆ ಚಿತ್ರದ ನಟನೆಗೆ ರಾಘವೇಂದ್ರ ರಾಜ್ ಕುಮಾರ್ ಗೆ ಲಭಿಸಿದೆ.ಹಾಗೆಯೇ ಅತ್ಯುತ್ತಮ ನಟಿ ಪ್ರಶಸ್ತಿ ಇರುವುದೆಲ್ಲವ ಬಿಟ್ಟು..ಚಿತ್ರದ ನಟನೆಗೆ ಮೇಘನಾರಾಜ್ ಗೆ ಲಭಿಸಿದೆ. ಜೀವಮಾನ ಸಾಧನೆಗೆ ನೀಡುವ ಡಾ.ರಾಜ್ ಕುಮಾರ್ ಪ್ರಶಸ್ತಿ ಖ್ಯಾತ ಪೋಷಕ ನಟ ಶ್ರೀನಿವಾಸ್ ಮೂರ್ತಿಗೆ ದೊರೆತಿದೆ.ಇನ್ನು
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಖ್ಯಾತ ಕಲಾತ್ಮಕ ಚಿತ್ರ‌ನಿರ್ದೇಶಕ ಪಿ.ಶೇಷಾದ್ರಿ ಅವರಿಗೆ ಸಂದಾಯವಾಗಿದೆ. ಡಾ.ವಿಷ್ಣುವರ್ಧನ್ ಪ್ರಶಸ್ತಿ ಬಿ.ಎಸ್.ಬಸವರಾಜ್ ಅವರಿಗೆ ಲಭಿಸಿದೆ.ಇನ್ನುಳಿದಂತೆ ಬೇರೆ ವಿಭಾಗಗಳಲ್ಲಿ ಪ್ರಶಸ್ತಿ ಪಡೆದವರ ಪಟ್ಟಿಯನ್ನು ಪ್ರಕಟಿಸಲಾಗಿದೆ.

Spread the love
Leave A Reply

Your email address will not be published.

Flash News