ಸಂಶೋಧಕ-ಚಿಂತಕ ಚಿದಾನಂದಮೂರ್ತಿ ಇನ್ನಿಲ್ಲ.

0

ಬೆಂಗಳೂರು:ಕನ್ನಡ ಸಾರಸ್ವತ ಲೋಕ ಕಂಡ ಹಿರಿಯ ಸಂಶೋಧಕ,ಚಿಂತಕ,ವಾಗ್ಮಿ ಎಂ.ಚಿದಾನಂದಮೂರ್ತಿ ಇನ್ನಿಲ್ಲ.88 ವಯಸ್ಸಿನ ಚಿದಾನಂದಮೂರ್ತಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದರು.ಹಲವು ದಿನಗಳಿಂದ ಅನಾರೋಗ್ಯ ಹಾಗೂ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಹಿರಿಯ ಚೇತನ ಸಾರಸ್ವತ ಲೋಕದಲ್ಲಿ ಬಹುದೊಡ್ಡ ಶೂನ್ಯವೊಂದನ್ನು ಮೂಡಿಸಿ ಅಸ್ತಂಗತವಾಗಿದೆ.

ಮಗ ವಿನಯಕುಮಾರ್, ಮಗಳು ಶೋಭಾ, ಪತ್ನಿ ವಿಶಾಲಾಕ್ಷಿ ಅವರನ್ನು ಚಿದಾನಂದಮೂರ್ತಿ ಅಗಲಿದ್ದಾರೆ. ವಿಜಯನಗರದ ಆರ್ ಪಿಸಿ ಲೇ ಔಟ್ ನ ಅವರ “ಮಿಂಚು”ಮನೆಯಲ್ಲಿ ಚಿದಾನಂದಮೂರ್ತಿ ಅವರ ಪಾರ್ಥಿವ ಶರೀರವನ್ನು ಇಡಲಾಗಿದ್ದು ಅನೇಕ ಗಣ್ಯರು ಆಗಮಿಸಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ.ಅನಾರೋಗ್ಯದ ನಡುವೆಯೂ ಸದಾ ಚೈತನ್ಯದ ಚಿಲುಮೆಯಾಗಿದ್ದ ಚಿದಾನಂದಮೂರ್ತಿ ಅವರು ಇತ್ತೀಚೆಗೆ ಮಹತ್ವದ ಸಂಶೋಧನಾ ಕಾರ್ಯಕ್ಕೆ ಕೈ ಹಾಕಿದ್ರು.ಪ್ರಖರ ಹಿಂದುತ್ವವಾದಿಯೂ ಆಗಿದ್ದ ಚಿ.ಮೂ,ಟಿಪ್ಪು ವಿಷಯದಲ್ಲಿ ಸೃಷ್ಟಿಯಾದ ವಿವಾದ-ಗೊಂದಲದ ಸಂದರ್ಭದಲ್ಲಿ ತಾವು ನಡೆಸಿದ ಸಂಶೋಧನೆಯ ಅಂಶಗಳನ್ನೇ ಮುಂದಿಟ್ಟು ಎಲ್ಲರನ್ನು ನಿಬ್ಬೆರಗೊಳಿಸಿದ್ರು.

ಚಿದಾನಂದಮೂರ್ತಿ ಅವರ ನಿಧನಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ,ಮಾಜಿ ಸಿಎಂ ಸಿದ್ಧರಾಮಯ್ಯ,ಎಚ್ ಡಿ ಕುಮಾರಸ್ವಾಮಿ,ವಿವಿಧ ಮಠಾಧೀಶರು ತಮ್ಮ ಶೋಕ ವ್ಯಕ್ತಪಡಿಸಿದ್ದಾರೆ.ಅವರ ಅಂತ್ಯಸಂಸ್ಕಾರ ಬೆಂಗಳೂರಿನಲ್ಲಿಯೇ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಚಿ.ಮೂ ನಿಧನಕ್ಕೆ ಕನ್ನಡ ಫ್ಲ್ಯಾಶ್ ನ್ಯೂಸ್ ಸಂತಾಪ ಸೂಚಿಸುತ್ತದೆ.

Spread the love
Leave A Reply

Your email address will not be published.

Flash News