ಇತಿಹಾಸದ ಪುಟ ಸೇರಲಿರೋ ಜಯದೇವ ಫ್ಲೈ ಓವರ್ ಡೆಮಾಲಿಷನ್ ಮುಹೂರ್ತ ಫಿಕ್ಸ್

0

ಬೆಂಗಳೂರು:ರಾಜಧಾನಿ ಬೆಂಗಳೂರಿನ ಜನಪ್ರಿಯ ಹಾಗೂ ಪ್ರಮುಖ ಮೈಲಿಗಲ್ಲೊಂದು ಇತಿಹಾಸದ ಪುಟ ಸೇರ್ಲಿಕ್ಕೆ ದಿನಗಣನೆ ಆರಂಭವಾಗಿದೆ.ಯೆಸ್..ಜಯದೇವ ಆಸ್ಪತ್ರೆ ವ್ಯಾಪ್ತಿಯಲ್ಲಿರುವ ಹಳೆಯ ಫ್ಲೈ ಓವರ್ ಗಳಲ್ಲೊಂದಾದ ಜಯದೇವ ಫ್ಲೈ ಓವರ್ ಧರಾಶಹಿಯಾಗ್ಲಿಕ್ಕೆ ಸನ್ನದ್ಧವಾಗಿ ನಿಂತಿದೆ.ಎಲ್ಲವೂ ನಿರೀಕ್ಷೆಯಂತಾದ್ರೆ ಈ ಮಾಸಾಂತ್ಯದೊಳಗೆ ಹಲವು ಬೆಳವಣಿಗೆಗಳ ಸಾಕ್ಷಿಯಾಗಿದ್ದ ಇತಿಹಾಸವೊಂದು ಶಾಶ್ವತವಾಗಿ ಕಣ್ಮರೆಯಾಗಲಿದೆ.

ಹೀಗಿದ್ದ ಫ್ಲೈ ಓವರ್ ಇನ್ನು ಕೇವಲ ನೆನಪಷ್ಟೆ..
ಹೀಗಿದ್ದ ಜಯದೇವ ಫ್ಲೈ ಓವರ್ ಇನ್ನು ಕೇವಲ ನೆನಪಷ್ಟೆ..

ಜಯದೇವ ಫ್ಲೈ ಓವರ್ ಬಗ್ಗೆ ತಿಳಿಯದವ್ರೇ ಇಲ್ಲ,ವಾಹನದಟ್ಟಣೆ ಉಸಿರುಗಟ್ಟಿಸುವ ಮಟ್ಟಕ್ಕೆ ಬೆಳೆಯುವ ಹಂತದಲ್ಲಿ ಅದಕ್ಕೊಂದು ಸೆಲ್ಯೂಷನ್ ರೀತಿಯಲ್ಲಿ 2004ರಲ್ಲಿ ಲೋಕಾರ್ಪಣೆಯಾದ ಫ್ಲೈ ಓವರ್ ಇದು.ಸಿಲ್ಕ್ ಬೋರ್ಡ್-ಬನಶಂಕರಿ ಮಾರ್ಗದ ನಡುವೆ ನಿರ್ಮಾಣಗೊಂಡು ವಾಹನದಟ್ಟಣೆಯನ್ನು ಬಹುಪಾಲು ನುಂಗಿ ಹಾಕಿದ ಹೆಗ್ಗಳಿಕೆಯೂ ಜಯದೇವ ಫ್ಲೈ ಓವರ್ ಗೆ ಇದೆ.ಆದ್ರೆ ಭವಿಷ್ಯದ ದೃಷ್ಟಿಯಿಂದ ಮೆಟ್ರೋ ಮಾರ್ಗದ ನಿರ್ಮಾಣಕ್ಕಾಗಿ ತನ್ನನ್ನೇ ಬಲಿ ಹಾಕಿಕೊಳ್ತಿದೆ ಜಯದೇವ ಫ್ಲೈ ಓವರ್.

500 ಮೀಟರ್ ಉದ್ದದ ಫ್ಲೈ ಓವರ್ ನ ಮೇಲೆ ದಿನನಿತ್ಯ 25 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸ್ತಿದ್ವು.ಆದರೀಗ ಮೆಟ್ರೋಗಾಗಿ ಅನಿವಾರ್ಯವಾಗೇ ಫ್ಲೈ ಓವರನ್ನು ಹೊಡೆದಾಕ್ಲೇಬೇಕಾಗಿದೆ.ಏಕೆಂದ್ರೆ ಇದು ನೆಲಸಮವಾಗದ ಹೊರತು,ಈ ವ್ಯಾಪ್ತಿಯಲ್ಲಿ ನಡೆಯಬೇಕಾದ ಮೆಟ್ರೋ ಅನಾಯಾಸವಾಗಿ ನಡೆಯೊಕ್ಕೆ ಸಾಧ್ಯವಿಲ್ಲ.ಹಾಗಾಗಿನೇ ಫ್ಲೈ ಓವರನ್ನು ಧರಾಶಹಿಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ.ಇದಕ್ಕಾಗಿ ನಡೆಯುತ್ತಿದ್ದ ಸಿದ್ಧತೆಗಳು ಕೂಡ ನಿರ್ಣಾಯಕ ಹಂತ ತಲುಪಿವೆ.

ಭರದಿಂದ ಸಾಗಿಗೆ ಅಂತಿಮ ಹಂತದ ಸಿದ್ಧತೆ ಕಾರ್ಯ
  ಭರದಿಂದ ಸಾಗಿಗೆ ಅಂತಿಮ ಹಂತದ ಸಿದ್ಧತೆ ಕಾರ್ಯ
ಜಯದೇವ ಆಸ್ಪತ್ರೆಗೆ ಧಕ್ಕೆಯಾಗದಂತೆ ಕಾಮಗಾರಿ
      ಜಯದೇವ ಆಸ್ಪತ್ರೆಗೆ ಧಕ್ಕೆಯಾಗದಂತೆ ಕಾಮಗಾರಿ

ಏಕೆ ಜಯದೇವ ಫ್ಲೈ ಓವರ್ ನ ಡೆಮಾಲಿಷನ್..ಮೊದಲಿದ್ದ ಸ್ಕೆಚ್ ಹೇಗಿತ್ತು,ಬದ್ಲಾಗಿದ್ದಾದ್ರೂ ಏಕೆ? :ಹಾಗೆ ನೋಡಿದ್ರೆ ಬಿಎಂಆರ್ ಸಿಎಲ್ ನ ಮೊದಲ ಸ್ಕೆಚ್ ನೋಡಿದ್ರೆ ಈ ಫ್ಲೈ ಓವರ್ ಗೆ ಯಾವ್ದೇ ಆತಂಕ ಇರ್ಲಿಲ್ಲ.ಇದರ ಅಲೈನ್ ಮೆಂಟ್ ಸ್ಕೆಚ್ ನ ಪ್ರಕಾರವೇ ಆಗಿದಿದ್ರೆ,ಬಹುದೊಡ್ಡ ಆತಂಕ ಇದ್ದುದು ಸಾವಿರಾರು ಜನರ ಪಾಲಿಗೆ “ಆರೋಗ್ಯ ಸಂಜೀವಿನಿ”ಯಾಗಿದ್ದ ಜಯದೇವ ಆಸ್ಪತ್ರೆಯ ಅಸ್ಥಿತ್ವಕ್ಕೆ.ಜಯದೇವ ಆಸ್ಪತ್ರೆಯ ಕ್ಯಾಂಪಸನ್ನು ಬಳಸಿಕೊಂಡು ಮೆಟ್ರೋ ಮಾರ್ಗ ಹಾದು ಹೋಗ್ಬೇಕಿತ್ತು.ಇದರಿಂದ ಆಸ್ಪತ್ರೆಯ ಕಟ್ಟಡಕ್ಕೆ ತೊಡಕಾಗ್ತಿತ್ತು.ಆಗ ಸಿಡಿದೆದ್ದ ಸ್ಥಳೀಯರು ಹೋರಾಟಕ್ಕೆ ಮುಂದಾಗ್ತಾರೆ.ಆ ಹೋರಾಟದ ಮಂಚೂಣಿಯಲ್ಲಿದ್ದು ಯಶಸ್ವಿಯಾಗಿದ್ದು ಬಿಲ್ಡರ್ ರಮೇಶ್.ಇವರಿಲ್ಲದಿದ್ದರೆ ಇವತ್ತು ಜಯದೇವ ಆಸ್ಪತ್ರೆನೂ ಇರ್ತಿರಲಿಲ್ಲ.ಧರಾಶಹಿ ಆತಂಕಕ್ಕೆ ಸಿಲುಕಿದ್ದ 90ಕ್ಕೂ ಹೆಚ್ಚು ಕಟ್ಟಡಗಳು ಉಳಿಯುತ್ತಿರಲಿಲ್ಲ.ಎಲ್ಲಕ್ಕಿಂತ ಹೆಚ್ಚಾಗಿ ಯೋಜಿತ ಉದ್ದೇಶಕ್ಕಿಂತ 450 ಕೋಟಿ ಬಿಎಂಆರ್ ಸಿಎಲ್ ಗೂ ಉಳಿಯುತ್ತಿರಲಿಲ್ಲ.ಹಾಗಾಗಿ ರಮೇಶ್ ಆ ಭಾಗದ ಜನರ ಪಾಲಿನ ಹೀರೋ.

ದಿನಂಪ್ರತಿ ಸಾವಿರಾರು ರೋಗಿಗಳ ಆರೋಗ್ಯ ರಕ್ಷಣೆ ಮಾಡುತ್ತಿರುವ ಜಯದೇವ ಆಸ್ಪತ್ರೆಯನ್ನು ಉಳಿಸ್ಲೇಬೇಕೆನ್ನುವ ಉದ್ದೇಶದಲ್ಲಿ ಹೋರಾಟಕ್ಕೆ ಧುಮುಕಿದ ರಮೇಶ್ ತಮ್ಮನ್ನು ಇದಕ್ಕಾಗಿಯಷ್ಟೇ ಸೀಮಿತಗೊಳಿಸಿಕೊಳ್ಳಲಿಲ್ಲ.ಬದ್ಲಿಗೆ ಜಯದೇವ ಆಸ್ಪತ್ರೆಯನ್ನು ಉಳಿಸಿಕೊಂಡೇ ಹೇಗೆ ಮೆಟ್ರೋ ಮಾರ್ಗ ಸಲೀಸಾಗಿ ಹಾದು ಹೋಗಬಹುದೆನ್ನುವುದಕ್ಕೆ ನೀಲನಕ್ಷೆಯನ್ನೂ ರೆಡಿಮಾಡಿಕೊಟ್ಟರು.

ಇನ್ನು ಫ್ಲೈ ಓವರ್ ಕೆಡವಿದ್ರೆ ಅಲ್ಲಿ ಯಾವ್ ಸ್ವರೂಪದ ಅದ್ಭುತವಾದ ಕಾನ್ಸೆಪ್ಟನ್ನು ಅನುಷ್ಠಾನಕ್ಕೆ ತರಬಹುದೆನ್ನುವುದಕ್ಕೆ ಒಂದು ಡ್ರಾಫ್ಟ್ ರೆಡಿ ಮಾಡಿಕೊಟ್ಟ ಹಿರಿಮೆ ರಮೇಶ್ ಹಾಗೂ ಸ್ಥಳೀಯರದು.ಈ ಡ್ರಾಫ್ಟನ್ನು ನೋಡಿ ಅಚ್ಚರಿಗೊಂಡಿತ್ತು ಮೆಟ್ರೊ ಆಡಳಿತ ಮಂಡಳಿ.ತಮ್ಮಲ್ಲಿರುವ ಎಂಜಿನಿಯರ್ಸ್ ಕೂಡ ಮಾಡ್ಲಿಕ್ಕೆ ಸಾಧ್ಯವಾಗದಂಥ ಸ್ಕೆಚ್ ರೆಡಿ ಮಾಡಿಕೊಟ್ಟಿದ್ದಕ್ಕೆ ರಮೇಶ್ ಅಂಡ್ ಟೀಮನ್ನು ಅಭಿನಂದಿಸಿದ ಬಿಎಂಆರ್ ಸಿಎಲ್ ಒಂದ್ ಕ್ಷಣವೂ ಆಲೋಚಿಸದೆ ಇದೇ ಅಲ್ಟಿಮೇಟ್ ಎಂದು ಅಪ್ರೂವಲ್ ಮಾಡಿಯೇ ಬಿಡ್ತು.ಬಹುಷಃ ಇಂತದ್ದೊಂದು ಬೆಳವಣಿಗೆ ಇದೂವರೆಗೂ ಭಾರತದ ಇತಿಹಾಸದಲ್ಲೇ ನಡೆದಿರಲಿಕ್ಕಿಲ್ಲವೇನೋ..

ಈ ಸ್ಕೆಚ್ಚನ್ನು ಒಪ್ಪಿಕೊಂಡ ನಂತ್ರವೇ ಬಿಎಂಆರ್ ಸಿಎಲ್ ಜಯದೇವ ಆಸ್ಪತ್ರೆ ಉಳಿಸುವ,ಫ್ಲೈ ಓವರ್ ಉರುಳಿಸುವ ನಿರ್ದಾರಕ್ಕೆ ಬಂತು.ಆರಂಭದಲ್ಲಿ ಒಂದಷ್ಟು ಅಪಸ್ವರ ಕೇಳಿಬಂದ್ರೂ ಎಲ್ಲರೂ ಇದರ ಹಿಂದೆ ಇರುವ ಉದ್ದೇಶವನ್ನು ಅರಿತು ಒಪ್ಪಿಕೊಂಡ್ರು.ಇದಕ್ಕಾಗಿ ಸಿದ್ಧತೆ ಮಾಡಿಕೊಂಡ ಬಿಎಂಆರ್ ಸಿಎಲ್ ಫ್ಲೈ ಓವರ್ ಡೆಮಾಲಿಷನ್ ಗೆ 80 ಲಕ್ಷದ ಟೆಂಡರ್ ಕರೆದು ಅಂತಿಮಗೊಳಿಸಿದೆ.ಎಲ್ಲವೂ ಅಂದುಕೊಂಡಂತೆ ನಡುದ್ರೆ ಈ ತಿಂಗಳ ಕೊನೆಗೆ ಕಾಮಗಾರಿ ಆರಂಭವಾಗುತ್ತೆ.ಒಟ್ಟು 2 ತಿಂಗಳವರೆಗೆ ಡೆಮಾಲಿಷನ್ ನಡೆಯಬಹುದೆಂದು ಅಂದಾಜಿಸಲಾಗಿದ್ದು ಈ ಹಂತದಲ್ಲಿ ವಾಹನಗಳ ಸಂಚಾರ ಮಾರ್ಗ ಬದಲಿಸುವ ಚಿಂತನೆಯನ್ನೂ ಮಾಡಲಾಗಿದೆ.

ಜಯದೇವ ಮೇಲ್ಸೇತುವೆ ನೆಲಸಮದಿಂದ ಮೆಟ್ರೋಗೆ 500 ಕೋಟಿ ಉಳಿಸಿರುವ ರಮೇಶ್ ಹಾಗೂ ತಂಡ
ಜಯದೇವ ಮೇಲ್ಸೇತುವೆ ನೆಲಸಮದಿಂದ ಮೆಟ್ರೋಗೆ 500ಕೋಟಿ ಉಳಿಸಿರುವ ರಮೇಶ್  

ಮೆಟ್ರೋ ಎರಡನೇ ಹಂತದ ಬೊಮ್ಮಸಂದ್ರ-RV ಕಾಲೇಜ್ ಮಾರ್ಗದ ಈ ಮೆಟ್ರೋ ಕಾಮಗಾರಿಯಿಂದಾಗಿ ಜಯದೇವ ಆಸ್ಪತ್ರೆ ಉಳಿಯುತ್ತದೆ ಎನ್ನುವುದಷ್ಟೇ ಗಮನಿಸತಕ್ಕ ವಿಷಯವಲ್ಲ,ಹೆಚ್ಚುವರಿಯಾಗಿ ಆಗುತ್ತಿದ್ದ 500 ಕೋಟಿ ಖರ್ಚು ಉಳಿತಾಯವಾಗಲಿದೆ.ಎಲ್ಲಕ್ಕಿಂತ ಹೆಚ್ಚಾಗಿ ಟ್ರಾಫಿಕ್ ಜಾಮ್ ಸಮಸ್ಯೆಗೂ ಶಾಶ್ವತವಾಗಿ ಬ್ರೇಕ್ ಬೀಳಲಿದೆ.

ಜಯದೇವ ಫ್ಲೈ ಓವರ್ ಬಗ್ಗೆ ಒಂದಿಷ್ಟು ಹೇಳೋದಾದ್ರೆ,:1998 ರಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ ಕಾರ್ಯಯೋಜನೆ ಸಿದ್ಧವಾಗಿ, 2000ರಲ್ಲಿ ಮೇಲ್ಸೇತುವೆ ಕಾಮಗಾರಿ ಆರಂಭವಾಗುತ್ತೆ. 2003 ರಲ್ಲಿ ಜಯದೇವ ಫ್ಲೈ ಓವರ್ ಕಾಮಗಾರಿ ಪೂರ್ಣವಾಗಿ 2004ರಲ್ಲಿ ಲೋಕಾರ್ಪಣೆ ಆಗುತ್ತೆ.500 ಮೀಟರ್ ಉದ್ದವಿರುವ ಫ್ಲೈ ಓವರ್ ನಿರ್ಮಾಣಕ್ಕೆ ತಗುಲಿದ ವೆಚ್ಚ ಆ ಕಾಲಕ್ಕೇನೆ 13 ವರೆ ಕೋಟಿ.ಡೆಮಾಲಿಷನ್ ನಿಂದಾಗಿ ಧರಾಶಹಿಯಾಗಲಿದ್ದ 94 ಮನೆಗಳು ಸೇಫ್ ಆಗಿವೆ. ಈ ಮಾರ್ಗದಲ್ಲಿ ಸಿಲ್ಕ್ ಬೋರ್ಡ್ ಟು ವಾಜಪೇಯಿ ಬಸ್ ಸ್ಟ್ಯಾಂಡ್ ವರೆಗೆ 2.8 ಕಿಲೋಮೀಟರ್ ಉದ್ದದ ಅದ್ಭುತವಾದ ಎಲಿವೆಟೆಡ್ ರಸ್ತೆ ನಿರ್ಮಾಣವಾಗಲಿದೆ. ದೇಶದಲ್ಲೇ ಮೊದಲ ಬಾರಿಗೆ 5 ಟೈರ್ ಸ್ಟೇಷನ್ ಕಾನ್ಸೆಪ್ಟ್ ಸೃಷ್ಟಿ ಪಡೆಯಲಿದೆ.

ಅಂಡರ್ ಪಾಸ್,ಅದರ ಮೇಲೆ ಝಿರೋ ಗ್ರೇಡಿಯೆಂಟ್ ರಸ್ತೆ, ಅದರ ಮೇಲೆ ಎಲಿವೆಟೆಡ್ ರಸ್ತೆ,ಅದರ ಮೇಲೆ ಗೊಟ್ಟಿಗೆರೆ ಟು ನಾಗವಾರ ಮೆಟ್ರೋ ನಿಲ್ದಾಣ ಅದರ ಮೇಲೆ ಬೊಮ್ಮಸಂದ್ರ ಟು RV ಕಾಲೇಜ್ ಮಾರ್ಗದ ನಿಲ್ದಾಣ ನಿರ್ಮಾಣವಾಗಲಿದೆ. ಈ ರೀತಿಯ ಕಾನ್ಸೆಪ್ಟ್ ನಿರ್ಮಾಣವಾಗುತ್ತಿರುವುದು ಭಾರತದಲ್ಲೇ ಇದು ಮೊದಲು.ಇದು ನಾಗರಿಕರೇ ರೂಪಿಸಿದ ಡಿಸೈನ್ ಎನ್ನುವ ಹೆಗ್ಗಳಿಕೆ ಬೇರೆ.ಎಲ್ಲಾ ಮುಗಿದ್ಮೇಲೆ ಈ ಫೈವ್ ಟೈರ್ ಸ್ಟೇಷನ್ ಟೂರಿಸ್ಟ್ ಸ್ಪಾಟ್ ಆಗೋದ್ರಲ್ಲಿ ಡೌಟೇ ಇಲ್ಲ ಎಂದು ಭವಿಷ್ಯ ನುಡಿಯಲಾಗ್ತಿದೆ.

ಅದೇನೇ ಆಗಲಿ,ಹೊಸತನವೊಂದರ ಸೃಷ್ಟಿಗೆ ತನ್ನ ಇತಿಹಾಸವನ್ನೇ ಬಲಿ ಕೊಟ್ಟುಕೊಳ್ತಿರುವ ಜಯದೇವ ಫ್ಲೈ ಓವರ್ ನ ನೆನಪುಗಳು ಮಾತ್ರ ಇತಿಹಾಸದ ಪುಟದಲ್ಲಿ ಚಿರಸ್ಥಾಯಿ ಆಗಿರ್ತದೆನ್ನೋದು ಮಾತ್ರ ಸತ್ಯ.

Spread the love
Leave A Reply

Your email address will not be published.

Flash News