ಇನ್ಮುಂದೆ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಸಂಚಾರ ಭಾಗ್ಯ

0

ಬೆಂಗಳೂರು: ಹತ್ತು ಯಡವಟ್ಟಿನ ಕೆಲಸಗಳ ನಡುವೆ ಒಂದೊಳ್ಳೆ ಕೆಲಸ ಮಾಡುತ್ತೆ ನಮ್ಮ ಹೆಮ್ಮೆಯ ಬೆಂಗಳೂರು ಮಹಾನಗರ ಸಾರಿಗೆ.ಇದಕ್ಕೆ ಅಂತದ್ದೊಂದು ಉದಾಹರಣೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಉಚಿತ ಬಸ್ ಪ್ರಯಾಣ…ಯೆಸ್..ಬಿಎಂಟಿಸಿ ಬಸ್ ಗಳಲ್ಲಿ ದುಡ್ಡು ಕೊಟ್ಟು ಪ್ರಯಾಣಿಸುವ ತಾಪತ್ರೆಯ ಇನ್ಮುಂದೆ ಕಟ್ಟಡ ಕಾರ್ಮಿಕರಿಗೆ ಇರೊಲ್ಲ..ಯಾಕಂದ್ರೆ ಅವರ ಉಚಿತ ಬಸ್ ಪ್ರಯಾಣಕ್ಕೆ ಬಸ್ ಪಾಸ್ ಸೌಲಭ್ಯವನ್ನು ನೀಡ್ತಿದೆ.

ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು(ಅವರು ನಿಜವಾಗ್ಲೂ ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದಲ್ಲಿ ಮಾತ್ರ) ವರ್ಷಪೂರ್ತಿ ಪಾಸ್ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.ಹಲವು ವರ್ಷಗಳ ಬೇಡಿಕೆಯನ್ನು ಇದೀಗ ಈಡೇರಿಸುವ ನಿರ್ದಾರಕ್ಕೆ ಬಂದಿರುವ ಬಿಎಂಟಿಸಿ ಈ ಸೌಲಭ್ಯವನ್ನು -ಉಚಿತ ಸಹಾಯಹಸ್ತ ಬಸ್ ಪಾಸ್ ಹೆಸರಲ್ಲಿ ನೀಡಲು ಮುಂದಾಗಿದೆ.

ಈ ಸೌಲಭ್ಯ ಶೀಘ್ರವೇ ಲಭ್ಯವಾಗ್ತಿದ್ದು ಉಚಿತ ಬಸ್ ಪಾಸ್ ಗಳನ್ನು ಯಲಹಂಕ ಬಸ್ ನಿಲ್ದಾಣ,ಮೆಜೆಸ್ಟಿಕ್,ಶಾಂತಿನಗರ,ಬನಶಂಕರಿ,ವೈಟ್ ಫೀಲ್ಡ್,ದೊಮ್ಮಲೂರು ಶಿವಾಜಿನಗರ,ಯಶವಂತಪುರ, ಜಯನಗರ,ಕೋರಮಂಗಲ, ಕೆಂಗೇರಿ,ವಿಜಯನಗರ ಬಸ್ ನಿಲ್ದಾಣ/ಟಿಟಿಎಂಸಿಗಳಲ್ಲಿ ನಿಗಧಿತ ದಾಖಲೆ ಸಲ್ಲಿಸಿ ಪಡೆಯಬಹುದಾಗಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಅವರ ಹೆಸರುಗಳನ್ನು ಕಡ್ಡಾಯವಾಗಿ ನೊಂದಾಯಿಸಿರಬೇಕು.ಮಂಡಳಿಯಲ್ಲಿ ಪಡೆದಿರುವ ಸದಸ್ಯತ್ವ ಪತ್ರ,ಗುರುತಿನ ಚೀಟಿ ನೀಡಬೇಕು.ಜತೆಗೆ ಮಂಡಳಿಯ ಅಧಿಕಾರಿಗಳಿಂದ ಬಸ್ ಪಾಸ್ ನೀಡಲು ಮಂಜೂರಾತಿ ಪಡೆದ ಪತ್ರವನ್ನು ಎರಡು ಸ್ಟ್ಯಾಂಪ್ ಸೈಜ್ ಫೋಟೋಗಳೊಂದಿಗೆ ಲಗತ್ತಿಸಬೇಕು.

ಬಿಎಂಟಿಸಿಗೆ ಇದರಿಂದ ಆರ್ಥಿಕವಾಗಿ ಒಂದಷ್ಟು ಹೊರೆಯಾಗುವ ಸಾಧ್ಯತೆಗಳಿವೆ.ಇದನ್ನು ಬೇರೆ ಮೂಲಗಳಿಂದ ಪ್ಯಾಚಪ್ ಮಾಡುವ ನಿರ್ದಾರಕ್ಕೆ ಬರಲಾಗಿದ್ದು,ಈ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.ಒಟ್ಟಿನಲ್ಲಿ ಕಟ್ಟಡ ಕಾರ್ಮಿಕರು ಬಿಎಂಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸ್ಬೇಕೆನ್ನುವ ಆಸೆ ಕೊನೆಗೂ ಈಡೇರಿದಂತಾಗಿದೆ.

Spread the love
Leave A Reply

Your email address will not be published.

Flash News