ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಕೊಟ್ರೂ ನೆಮ್ಮದಿಯಿಂದ ದಾವೋಸ್ ಪ್ರವಾಸ ಮಾಡುವ ಸ್ಥಿತಿಯಲ್ಲಿಲ್ಲ ಸಿಎಂ ಯಡಿಯೂರಪ್ಪ?!

0

KANNADAFLASHNEWS.COM

ಬೆಂಗಳೂರು:ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಇದ್ದ ದೊಡ್ಡ ಮಟ್ಟದ ತೊಡಕೊಂದು ದೂರವಾಗಿದೆ. ಬಂಡೆಯಂತೆ ಎದುರಾಗಿದ್ದ ಸವಾಲು ಮಂಜಿನಂತೆ ಕರಗಿದೆ.ತನ್ನನ್ನು ನಂಬಿಕೊಂಡು ಸಚಿವ ಸ್ಥಾನವನ್ನು ತೊರೆದು ಸರ್ಕಾರಕ್ಕೆ ಬೆಂಬಲ ನೀಡಿದ ಅನರ್ಹರಿಗೆ   ಸಚಿವ ಸ್ಥಾನ ಕೊಡಿಸಲಿಕ್ಕೆ ಆಗುತ್ತೋ ಇಲ್ವೋ..ತನ್ನ ಮಾತನ್ನು ಅಮಿತ್ ಶಾ ಕೇಳುತ್ತಾರೋ ಇಲ್ಲವೋ.ಇಲ್ಲವಾದಲ್ಲಿ ತನಗೆ ಆಗುವ ಅವಮಾನವನ್ನು ಹೇಗೆ ಸಹಿಸಿಕೊಳ್ಳಲಿ,ಹೊರಗೆ ಹೇಗೆ ಮುಖ ತೋರಿಸಲಿ ಎನ್ನುವ ಅಳಕು ದೂರವಾಗಿದೆ.

ಬೆಂಗಳೂರಿಗೆ ಆಗಮಿಸಿದ್ದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಯಡಿಯೂರಪ್ಪಅವರಿಗೆ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆನ್ನುವ ಸಂಗತಿ ಬಯಲಾಗಿದೆ. ಬೆಂಗಳೂರಿ ನಿಂದ ಹುಬ್ಬಳ್ಳಿಗೆ ತೆರಳುವ ವೇಳೆ ಹೆಲಿಕ್ಯಾಪ್ಟರ್ ನಲ್ಲೇ ಅಮಿತ್ ಶಾ ಕೂತು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿದ  ಬಳಿಕ ಯಡಿಯೂರಪ್ಪಬಳಿ ಇದ್ದ ಲೀಸ್ಟ್ ನ್ನು ಶಾ ಒಪ್ಪಿದ್ದಾರೆನ್ನುವ ಸಂಗತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ತಿಳಿದುಬಂದಿದೆ.

ಯಡಿಯೂರಪ್ಪ ಅವರ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿರುವ ಅಮಿತ್ ಶಾ,ಸಂಪುಟ ವಿಸ್ತರಣೆಯನ್ನು ಆರಾಮಾಗಿ ಮಾಡಿ,ಇದಕ್ಕೆ ನನ್ನ ಅಭ್ಯಂತವೇನೂ ಇಲ್ಲ.ದಾವೋಸ್ ಗೆ ಹೋಗಿ ಬನ್ನಿ ಆಮೇಲೆ ಸಂಪುಟ ವಿಸ್ತರಣೆಗೆ ಕೈ ಹಾಕಿ,ಯಾರನ್ನು ಮಾಡ್ಬೇಕು ಬಿಡ್ಬೇಕು ಎನ್ನುವುದರ ಸಂಪೂರ್ಣ ಸ್ವಾತಂತ್ರ್ಯವನ್ನು ನಿಮಗೆ ನೀಡಿದ್ದೇನೆ ಎಂದು ಅಭಯ ನೀಡಿದ್ದಾರೆ ಎನ್ನಲಾಗಿದೆ.

ಗೆದ್ದ ಎಲ್ಲ ಶಾಸಕರಿಗೂ ಮಂತ್ರಿ ಮಾಡಿ ಅಭ್ಯಂತರವೇನೂ ಇಲ್ಲ.ಆದ್ರೆ ಸಂಪುಟ ವಿಸ್ತರಣೆ ಅಥವಾ ಖಾತೆ ಹಂಚಿಕೆಯೇ ನಿಮ್ಮ ಕಾಯಕವಾಗಬಾರದು ಗೊತ್ತಾಯ್ತಾ ,ಸರ್ಕಾರವಾಗಿ ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಹರಿಸಿ ಎಂದು ಸೂಚನೆ ನೀಡಿದ್ದಾರೆ.ಸಂಪುಟ ವಿಸ್ತರಣೆ ವಿಚಾರವನ್ನು ನೂತನ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಹಾಗೂ ಬಿ ಎಲ್ ಸಂತೋಷ್ ಜೊತೆ ಮಾತಾಡುತ್ತೇನೆ ನೀವು ನಿಶ್ಚಿಂತೆಯಿಂದ ಹೋಗಿಬನ್ನಿ,ಆಲ್ ದಿ ಬೆಸ್ಟ್ ಎಂದು ಶುಭ ಹಾರೈಸಿದ್ದಾರೆ.

ಇದೇ ವೇಳೆ ಗೆದ್ದವರ ಪೈಕಿ 11 ಜನರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗುವುದು.ಯಾರನ್ನು ಮಂತ್ರಿ ಮಾಡ್ಬೇಕು,ಬಿಡ್ಬೇಕು ಅದು ನಿಮಗೆ ಬಿಟ್ಟ ವಿಚಾರ.ಡಿಸಿಎಂ ಸ್ಥಾನಗಳ ಬಗ್ಗೆ ಸೃಷ್ಟಿಯಾಗಿರುವ ಗೊಂದಲದ ಬಗ್ಗೆಯೂ ಚರ್ಚೆ ಮಾಡಿದ ಅವರು ನಾಲ್ವರು ಡಿಸಿಎಂಗಳನ್ನು ಮಾಡಿ ಅಭಿವೃದ್ಧಿ ಕಡೆ ಗಮನ ಹರಿಸುವುದರ ಜೊತೆಗೇನೆ, ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸುವ ಬಗ್ಗೆಯೂ ಗಮನ ಹರಿಸಲು ಸೂಚನೆ ನೀಡಿದ್ದಾರೆ.

ಆದ್ರೆ ಈಗ ಪ್ರಶ್ನೆ ಇರುವುದು,ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಕೊಟ್ಟಾಕ್ಷಣ ಎಲ್ಲಾ ಮುಗಿದಂತೆ ಆಗೊಲ್ಲ,ಹಾಗಂತ ದಾವೋಸ್ ಪ್ರವಾಸವನ್ನು ಕೂಡ ನಿಶ್ಚಿಂತೆಯಿಂದ ಮಾಡಿಕೊಂಡು ಬರ್ತಾರೆ ಎಂದೂ ಹೇಳಲಾಗೊಲ್ಲ.ಏಕಂದ್ರೆ 11 ಜನರಿಗೆ ಮಾತ್ರ ಸಚಿವರನ್ನಾಗಿ ಮಾಡಲು ಅವಕಾಶ ಕೊಟ್ಟಿರುವುದರಿಂದ ಯಾರಿಗೆ ಮಣೆ ಹಾಕ್ಬೇಕು..ಯಾರನ್ನು ದೂರ ಇಡಬೇಕೆನ್ನುವ ವಿಚಾರವೂ ಇದೀಗ ಯಡಿಯೂರಪ್ಪರ ತಲೆನೋವನ್ನು ಮತ್ತಷ್ಟು ಹೆಚ್ಚಿಸಿದೆ.

Spread the love
Leave A Reply

Your email address will not be published.

Flash News