ಬಿಬಿಎಂಪಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೆ,ಮಾನದಂಡವೇ ಇಲ್ವಾ!?

0

ಬೆಂಗಳೂರು:ಯಾವುದೇ ಆಯ್ಕೆಯಾಗಲಿ,ಅದಕ್ಕೊಂದು ಮಾನದಂಡ ಇರಬೇಕು.ಆಯ್ಕೆ ಆಗುವಂಥವ್ರಿಗೂ ಆ ಸ್ಥಾನದ ಜವಾಬ್ದಾರಿ ನಿಭಾಯಿಸುವಂಥ ಸಾಮರ್ಥೈ ಹಾಗೂ ಅರ್ಹತೆ ಎರಡೂ ಕೊಂಚವಾದ್ರೂ ಇರ್ಬೇಕು..ಆದ್ರೆ ಬಿಬಿಎಂಪಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಮಾನದಂಡವನ್ನೇ ಧಿಕ್ಕರಿಸಿದಂತಿದೆ ಬಿಜೆಪಿ ನಾಯಕರು.ಇಂತದ್ದೊಂದು ಮಾತು ಕೇವಲ ಸಾರ್ವಜನಿಕರಿಂದ ಅಷ್ಟೇ ಅಲ್ಲ ಸ್ವಪಕ್ಷದ ಹಿರಿಯ ಕಾರ್ಪೊರೇಟರ್ಸ್ ಗಳಿಂದ್ಲೇ ಕೇಳಿಬಂದಿದೆ.ಆದ್ರೆ ವಿರೋಧಿಸುವ ಧೈರ್ಯವನ್ನು ಮಾತ್ರ ಯಾರೂ ತೋರುತ್ತಿಲ್ಲ ಅಷ್ಟೇ?ಏಕೆಂದ್ರೆ ಕೆಲವೇ ತಿಂಗಳಲ್ಲಿ ನಡೆಯಲಿರುವ ಬಿಬಿಎಂಪಿ ಚುನಾವಣೆ.

ನಿನ್ನೆ ಅಂದ್ರೆ ಶನಿವಾರ ನಡೆದ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದಲ್ಲಿ ಕಾರ್ಪೊರೇಟರ್ಸ್ ಹಾಗೂ ಮುಖಂಡರಿಗೆ ಇಲ್ಲದ ಸಮನ್ವಯ ಹಾಗೂ ಹೊಂದಾಣಿಕೆ ಸಮಸ್ಯೆ ಎದ್ದು ಕಾಣ್ತಿತ್ತು.ಯಲಹಂಕ ಎಮ್ಮೆಲ್ಲೆ ವಿಶ್ವನಾಥ್, ಸಿವಿ ರಾಮನ್ ನಗರ ಕ್ಷೇತ್ರದ ಶಾಸಕ ರಘು,ಬೊಮ್ಮನಹಳ್ಳಿ ಎಮ್ಮೆಲ್ಲೆ ಸತೀಶ್ ರೆಡ್ಡಿ,ಬೆಂಗಳೂರು ದಕ್ಷಿಣ ಎಮ್ಮೆಲ್ಲೆ ಕೃಷ್ಣಪ್ಪ,ಮಹಾದೇವಪುರ ಎಮ್ಮಲ್ಲೆ ಅರವಿಂದ ಲಿಂಬಾವಳಿ ಒಂದ್ ಕಡೆಯಾದ್ರೆ ಸಚಿವ ಅಶೋಕ್ ಅವರೇ ಮತ್ತೊಂದು ಕಡೆ ಇದ್ದರು.ಅಶೋಕ್ ಹೇಳಿದ ಮಾತನ್ನು ಅನೇಕ ಎಮ್ಮೆಲ್ಲೆಗಳು ಕೇಳುತ್ತಲೇ ಇರಲಿಲ್ಲ.

ಎಲ್ಲಾ ಸ್ಥಾನಮಾನಗಳನ್ನು ಬಹುತೇಕ ಸಾಮ್ರಾಟ್ ಅವ್ರೇ ತಮ್ಮ ಬೆಂಬಲಿಗರಿಗೆ ಕೊಡಿಸಿದರೆನ್ನುವ ಆರೋಪ ಖುದ್ದು ಅನೇಕ ಶಾಸಕರಿಂದ್ಲೇ ಕೇಳಿಬಂತು.ಅನೇಕರು ಸ್ಥಳದಲ್ಲೇ ಈ ಬಗ್ಗೆ ಬೇಸರ ವ್ಯಕ್ತಪಡಿಸಿದರು.ಎಲ್ಲಾ ಸ್ಥಾನಗಳನ್ನು ನೀವೆ ಇಟ್ಕೊಂಡ್ರೆ ನಾವೇನ್ ಮಾಡ್ಬೇಕೆನ್ನುವ ತಗಾದೆ ಕೂಡ ತೆಗುದ್ರು.ಬುದ್ಧಿವಂತಿಕೆ ಪ್ರದರ್ಶಿಸಿದ  ಅಶೋಕ್,ತಮಗೆ ಬೇಕಾದಂತೆ ಸಿಚುವೇಷನ್ ಕ್ರಿಯೇಟ್ ಮಾಡಿ ಅಮಿತ್ ಶಾ ಕಾರ್ಯಕ್ರಮದ ನೆವದಲ್ಲಿ ಝೂಟ ಹೇಳ್ಬಿಟ್ರು.ಇದರ ಎಫೆಕ್ಟ್ ಚುನಾವಣೆ ಪ್ರಕ್ರಿಯೆ ಉದ್ದಕ್ಕೂ ಕಾಣಿಸಿಕೊಂಡಿದ್ದು ಸುಳ್ಳಲ್ಲ.

ಸ್ಥಾಯಿ ಸಮಿತಿಗಳಿಗೆ ಆಯ್ಕೆ ನಡೆದಿರುವ ಬಗ್ಗೆ ಸಾಕಷ್ಟು ಬೇಸರ-ಭಿನ್ನಾಭಿಪ್ರಾಯ ಕೇಳಿಬಂದಿದೆ.ಬಹುಪರಾಖ್ ಹಾಕುವವರಿಗೇನೆ ಬಹುತೇಕ ಆಯಕಟ್ಟಿನ ಸ್ಥಾನಮಾನ ನೀಡಲಾಗಿದೆ ಎನ್ನುವುದು ನಿಜಕ್ಕೂ ಆ ಸ್ಥಾನಗಳಿಗೆ ಅರ್ಹರಾಗಿದ್ದುಕೊಂಡು ಅವಕಾಶ ವಂಚಿತರಾದವ್ರ ಆರೋಪ.

ಅನೇಕ ಹಿರಿಯ ಕಾರ್ಪೊರೇಟರ್ಸ್ ಸೇರಿದಂತೆ ನಿಜಕ್ಕೂ ಅರ್ಹರೆನಿಸಿಕೊಂಡವರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವೇ ಸಿಕ್ಕಿಲ್ಲ.ಆ ಸ್ಥಾನ ಸಿಗೋ ಮನೆ ಹಾಳಾಗಿ ಹೋಗ್ಲಿ ಕೆಲವು ಕಮಿಟಿಗಳಿಗೆ ಸದಸ್ಯತ್ವವೂ  ಸಿಕ್ಕಿಲ್ಲ.ಆ ಮಟ್ಟಿಗೆ ಸಾಕಷ್ಟು ಅರ್ಹರನ್ನು ಮೂಲೆ ಗುಂಪು ಮಾಡಲಾಗಿದೆ.ಮುಖಂಡರ ಈ ವರ್ತನೆಯನ್ನು ಬಹಿರಂಗವಾಗಿಯೇ ಸಾಕಷ್ಟು ಕಾರ್ಪೊರೇಟರ್ಸ್ ಖಂಡಿಸಿದ್ರು( ಅಟ್ಟೂರು ವಾರ್ಡ್ ಕಾರ್ಪೊರೇಟರ್ ನೇತ್ರ ಪಲ್ಲವಿ ನಾಮಪತ್ರ ವಾಪಸ್ ಪಡೆಯಲು ನಿರಾಕರಿಸಿದ್ದು,ಕೊನೆಗೆ ನಾಯಕರ ಒತ್ತಡಕ್ಕೆ ಮಣಿದು ನಾಮಪತ್ರ ಹಿಂಪಡೆದು ಕಣ್ಣೀರಿಟ್ಟರು.ಹಾಗೆಯೇ ಹೊಸಳ್ಳಿ ವಾರ್ಡ್ ಕಾರ್ಪೊರೇಟರ್ ಮಹಾಲಕ್ಷ್ಮಿ ರವೀಂದ್ರ ಕಣ್ಣಿರಿಟ್ಟು ಸುದ್ದಿಯಾದ್ರು.ಬಾಗಲಗುಂಟೆ ವಾರ್ಡ್ ಕಾರ್ಪೊರೇಟರ್ ನರಸಿಂಹ ನಾಯಕ್ ಕೂಡ ಅರ್ಹತೆ ಪರಿಗಣಿಸದೆ ಮೋಸ ಮಾಡಿದ್ದರ ಬಗ್ಗೆ ಕಣ್ಣೀರಿಟ್ಟಿದ್ದು ಇದಕ್ಕೆಲ್ಲಾ ಉದಾಹರಣೆಯಂತಿತ್ತು).

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಎಲ್.ಶ್ರೀನಿವಾಸ್( ಅಶೋಕ್ ಬೆಂಬಲಿಗ) ,ಸಾರ್ವಜನಿಕ ಆರೋಗ್ಯ ಸಮಿತಿಗೆ ಮಂಜುನಾಥ ರಾಜು(ಡಿಸಿಎಂ ಡಾ.ಅಶ್ವತ್ಥ ನಾರಾಯಣ ಬೆಂಬಲಿಗ),ಬೃಹತ್ ಸಾರ್ವಿಜನಿಕ ಕಾಮಗಾರಿ ಸಮಿತಿಗೆ ಮೋಹನ್ ಕುಮಾರ್( ಸೋಮಣ್ಣ ಬೆಂಬಲಿಗ),ಇವರು ಇರೋದ್ರಲ್ಲಿ ಅರ್ಹರು ಎಂದು ಒಪ್ಪಿಕೊಳ್ಳಬಹುದು.ಅದನ್ನು ಬಿಟ್ಟರೆ, ನಗರ ಯೋಜನೆ ಸ್ಥಾಯಿ ಸಮಿತಿಗೆ ಅಧ್ಯಕ್ಷೆಯಾಗಿರುವ ಅರವಿಂದ್ ಲಿಂಬಾವಳಿ ಹಿಂಬಾಲಕಿ ಆಶಾ ಸುರೇಶ್(ಬೆಳ್ಳಂದೂರು ವಾರ್ಡ್),ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿರುವ ಮುನಿರತ್ನ ಬೆಂಬಲಿಗ ವೆಂಕಟೇಶ್(ಎನ್ ಟಿಆರ್-ಯಶವಂತಪುರ ವಾರ್ಡ್) ಅವರಿಗೆ ಸ್ಥಾನ ಸಿಕ್ಕಿರೋದೇ ಅರ್ಹರಲ್ಲಿ ಆಕ್ರೋಶ ಮೂಡಿಸಿದೆ.

ಇವರಷ್ಟೇ ಅಲ್ಲ,ಮಹಾನ್ ಅವಕಾಶವಾದಿ ರಾಜಕಾರಣಿ ಎಂದೇ ಕರೆಯಿಸಿಕೊಳ್ಳುವ ಲಗ್ಗೆರೆಯ ನಾರಾಯಣಸ್ವಾಮಿ ತಮ್ಮ ಕಾರ್ಪೊರೇಟರ್ ಪತ್ನಿ ಮಂಜುಳಾ ಅವರಿಗೆ ಅಧಿಕಾರ ಕೊಡಿಸಲು ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆನ್ನುವ ಆರೋಪ ಮೊದ್ಲಿಂದ್ಲೂ ಕೇಳಿಬಂದಿತ್ತು.ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸ್ಥಾನವೂ ಸಿಕ್ಕಿರೋದು ಒನ್ಸ್ ಎಗೈನ್ ಬ್ಲ್ಯಾಕ್ ಮೇಲ್ ರಾಜಕಾರಣದಿಂದ ಎನ್ನೋದು ಹಿರಿಯ ಕಾರ್ಪೊರೇಟರ್ಸ್ ಆರೋಪ.

ಇನ್ನು ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಹಲಸೂರು ವಾರ್ಡ್ ನ ಮಮತಾ ಸರವಣ,ಸಾಮಾಜಿಕ ನ್ಯಾಯ ಸಮಿತಿಗೆ ಉತ್ತರಹಳ್ಳಿಯ ಹನುಮಂತಯ್ಯ,ಅಪೀಲು ಕಮಿಟಿಗೆ ದೊಮ್ಮಲೂರು ವಾರ್ಡ್ ನ ಲಕ್ಷ್ಮಿನಾರಾಯಣ(ಗುಂಡಣ್ಣ), ತೋಟಗಾರಿಕೆ ಸ್ಥಾಯಿ ಸಮಿತಿಗೆ ಉಮಾದೇವಿ, ಮಾರುಕಟ್ಟೆ ಸ್ಥಾಯಿ ಸಮಿತಿಗೆ ಪದ್ಮಾವತಿ ಶ್ರೀನಿವಾಸ್ ಹಾಗೂ ಸಿಬ್ಬಂದಿ ಸುಧಾರಣಾ ಸಮಿತಿಗೆ ಅರುಣಾ ರವಿ ಆಯ್ಕೆಯಾಗಿರುವುದು ಆಶ್ಚರ್ಯದೊಂದಿಗೆ ಆಕ್ರೋಶವನ್ನು ಮೂಡಿಸಿದೆ.ಅದೆಷ್ಟೋ ಅರ್ಹರನ್ನು ಮುಖಂಡರು ಕೈ ಬಿಟ್ಟು ತಮಗೆ ಬಹು ಪರಾಖ್ ಹಾಕೋರಿಗೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ ಎನ್ನುವ ಪ್ರಶ್ನೆ ಪಾಲಿಕೆ ಕ್ಯಾಂಪಸ್ ನಲ್ಲಿ ಕೇಳಿಬರುತ್ತಿದೆ.

ಸಚಿವ ಅಶೋಕ್ ಗೆ ಅಷ್ಟೊಂದು ಉಡಾಫೆ ಏಕೆ?ಬೆಂಗಳೂರಿನ ಮಟ್ಟಿಗೆ ಅತ್ಯಂತ ಪ್ರಭಾವಿ ಅಂತನೇ ಕರೆಯಿಸಿಕೊಂಡಿರುವ ಸಚಿವ ಆರ್.ಅಶೋಕ್ ಒಟ್ಟಾರೆ ಚುನಾವಣೆ ವೇಳೆ ನಡೆದುಕೊಂಡ ರೀತಿ ಕೇವಲ ಹಿರಿಯ ಕಾರ್ಪೊರೇಟರ್ಸ್ ಗೆ ಮಾತ್ರ ಅಲ್ಲ,ಕಿರಿಯ ಕಾರ್ಪೊರೇಟರ್ಸ್ ಗೂ ಬೇಸರ ತಂದಿದ್ದು ನಿಜ.ಕಾರ್ಪೊರೇಟರ್ಸ್ ಸ್ಥಾನ ಸಿಗದ್ದಕ್ಕೆ ಬಂದು ಅಶೋಕ್ ಮುಂದೆ ನೋವು ತೋಡಿಕೊಳ್ತಿದ್ರೆ ತಮಗೆ ಬೇಕಾದವ್ರನ್ನು ಮೊದ್ಲು ಆಯ್ಕೆ ಮಾಡಿಕೊಂಡು ಆರಾಮಾಗಿದ್ದ ಅವ್ರು,ಓರ್ವ ಜವಾಬ್ದಾರಿ ಸಚಿವನಾಗಿ,.ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಮಾದರಿ ಮುಖಂಡನಾಗಿ ಏನ್ ಮಾಡ್ಬೇಕಿತ್ತೋ ಅದನ್ನು ಮಾಡ್ದೆ ಉಡಾಫೆ ಪ್ರದರ್ಶಿಸಿದ್ದು ನಿಜಕ್ಕೂ ಶೋಭೆ ತರುವಂತದ್ದಲ್ಲ.

ಸ್ಥಾನ ಸಿಗದಿದ್ರೆ ಮುಂದೆ ನೋಡಿದರಾಯ್ತು ಬಿಡು ಎಂದೋ ಅಥ್ವಾ ಅವಕಾಶ ಸಿಕ್ಕಾಗ ಮತ್ತೊಮ್ಮೆ ನೋಡೋಣ ಎಂದೇನೋ ಹೇಳಿ ಅವರನ್ನು ಸಮಾಧಾನಪಡಿಸಿದಿದ್ದರೆ ನಿಜಕ್ಕೂ ಅವ್ರು ಗ್ರೇಟ್ ಆಗ್ತಿದ್ದರೇನೋ,ಅದನ್ನು ಬಿಟ್ಟು ನೋವು ತೋಡಿಕೊಳ್ಳೊಕ್ಕೆ ಬಂದವ್ರನ್ನು ಗದರಿಸಿದ್ದು ಸ್ಥಳದಲ್ಲೇ ಇದ್ದ ಸಾಕಷ್ಟು ಕಾರ್ಪೊರೇಟರ್ಸ್ ಗಳ ಕೆಂಗಣ್ಣಿಗೆ ಗುರಿಯಾಯ್ತು.ಕಾರ್ಪೊರೇಟರ್ಸ್ ಸ್ಥಾನ ಸಿಗಲಿಲ್ಲವಲ್ಲ ಎಂದು ಚಡಪಡಿಸುತ್ತಿದ್ದರೆ,ಈ ಮಹಾನುಭಾವ ಕರ್ಣ ಚಿತ್ರದ ಆ ಕರ್ಣನಂತೆ ನೀ ದಾನಿಯಾದೆ ಎಂದು ಹಾಡು ಗುನುಗಿದ್ದು ಅವರ ಸಣ್ಣತನ ಪ್ರದರ್ಶಿಸಿದಂತಿದ್ದೇ ವಿನಃ ನಗು ತರಿಸಲಿಲ್ಲ.ಏಕಂದ್ರೆ ಅವ್ರ ಮುಂದೆ ನಕ್ಕಂತೆ ಮಾಡಿ ಹೊರಗೆ ಬಂದ ಕಿರಿಯ ಕಾರ್ಪೊರೇಟರ್ಸ್ ಕೂಡ,ಇವರೇನ್ ಮನುಷ್ಯರಾ..ನಾವಿಲ್ಲಿ ನೋವಿನಿಂದ ಒದ್ದಾಡುತ್ತಿದ್ದರೆ,ಈ ವ್ಯಕ್ತಿ ಏನೋ ಮರಾಯ ಉಡಾಫೆಯಿಂದ ಹಾಡುತ್ತಿದ್ದಾರೆ.ಯಾರಪ್ಪ ಇವರನ್ನೆಲ್ಲಾ ಮಿನಿಸ್ಟರ್ ಮಾಡಿದ್ದೋ..ಛೇ..ಎಂದು ಬೈಯ್ದುಕೊಳ್ಳುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿ ಕಾಣುತ್ತಿತ್ತು.ಇದು ತಮಾಷೆಯಲ್ಲ,ನಿನ್ನೆ ಅಶೋಕ್ ನಡೆದುಕೊಂಡ ರೀತಿಯೂ ನಿಒಕ್ಕೂ ಸರಿಯಿರಲಿಲ್ಲ.

Spread the love
Leave A Reply

Your email address will not be published.

Flash News